(ಎ) ಗುರುನಮನ
ಶಿರಿವರನೆ ಕರುಣಾಂಬುನಿಧಿಯಮಲ
ಚರಣಕಮಲವ ಬೇಡುತಿಪ್ಪರ ಪಾದಪಿಡಿವೆನು ನಾನು ಪ
ಶಿರಿಲಕುಮಿ ಸರಸಿಜಭವ ಸರಸ್ವತಿ
ಗುರುಪವಮಾನ ಭಾರತಿ ಮುಖ್ಯರ
ವರ ಪಾದಂಗಳಿಗೆ ನಮಿಸುವೆ ಹರಿಯ ತೋರ್ಪದಕೆ 1
ಪನ್ನಗಾಶನ ಪನ್ನಗೇಂದ್ರರ
ಪನ್ನಗ ವಿಭೂಷಣ ಸತಿಸುತರ
ಸನ್ನುತಾಂಘ್ರಿಗಳ ಬಿಡದ್ವಿಡಿಪಿ ರಘುರನ್ನರರಪದಕೆ 2
ಗುರು ಶ್ರೀಪಾದರಾಯ ವ್ಯಾಸರ
ಪುರಂದರ ವಿಜಯಾದಿ ಗುರುಗಳಿಗೊಂದಿಪೆನು
ನರಸಿಂಹವಿಠಲನಂತುಪಾದ್ಯನು ದಾರಿತೋರ್ಪುದಕೆ 3