ಪರಿಣಯ ಮಹೋತ್ಸವವು ಪ
ಮಂಗಳ ಮಂಟಪವು ಚಪ್ಪರದಲ್ಲಿ .ಶೃಂಗಾರ ವರ ಪೀಠವು
ಕಂಗೊಳಿಪ ರುಚಿರಾಂಬರಾಳಿಯು
ಮಂಗಳ ಸುವಾದ್ಯಂಗಳಿಂದಲಿ 1
ಸುತ್ತ ದೀಪಾವಳಿಯು ಸುವರ್ಣದ ಮುತ್ತಿನ ತೋರಣವು
ವಜ್ರ ಪದ್ಮವು ಸುತ್ತು ವೀಳೆಯ ಪುಷ್ಪ ನಿಚಯವು
ಸುತ್ತೆ ಜವ್ವಾಜಿಗಳ ಪರಿಮಳ ಸುತ್ತಿ ಸುಳಿವ ಸುಗಂಧ ಲಹರಿಯು 2
ಬೀಗರು ಹಸೆಯೊಳಿರೆ ಆ ಮಧ್ಯದಿ ಬೀಗಿತ್ತಿಯರು ಕುಳ್ಳಿರೆ
ಆಗ ನಿಶ್ಚಿತ ಲಗ್ನದಲ್ಲಿ ವಧೂವರರ ಪೂಜಿಯನು ಗೈಯಲು
ತುಂಬಿರಲು ಸಭೆಯೊಳು 3
ದಾರಾ ಮಹೊತ್ಸವವು ಅಕ್ಷತೆಗಳ ಸೇರೆಯೊಳೆರೆಯುವುದು
ನಾರಿಯರ ವರದೇವತಾಸ್ತುತಿ ಸಾರೆ ಭೂಸುರರಾಶಿಷಂಗಳು
ಸೇರೆ ಸಂಗೀತಗಳ ವೈಖರಿ ಸಾರಿ ಸುರಗಣ ಜಯಜಯನ್ನಲು 4
ಮಾಡೆ ದಾನದಕ್ಷಿಣೆಯಾಗಲು
ಬಾನುರಾಗದೆ ಸರ್ವರನ್ನು ವಿನೋದದಿಂದುಪಚರಿಸುತಿರಲು
ಹರಸೆ ಸಂತೋಷದಿ 5