ಪರದೇಶಿ ನೀನು ಸ್ವದೇಶಿ ನಾನು ಪ
ಪರಮ ಭಾಗವತರ ಬಾ ಹೋಗಿ ಕೇಳೋಣಅ
ಎನಗೆ ಜನಕನು ನೀನು ನಿನಗಾವ ಜನಕನೊ
ಜನನಿ ಇಂದಿರೆದೇವಿ ನಿನಗಾವಳೊ
ವನಜಪೀಠನು ಭ್ರಾತ ನಿನಗಾವ ಭ್ರಾತನೊ
ಇನ ಸೋಮ ಮಾತುಳರು ನಿನಗಾವ ಮಾತುಳನೊ 1
ಸುರನದೀ ಅಗ್ರಜಳು ನಿನಗೆ ಅಗ್ರಜಳಾರು
ಶರನಿಧಿ ಭಾವ ನಿನಗಾರು ಭಾವ
ಸ್ಮರನು ಕಿರಿ ಸಹಭವನು ನಿನಗೆ ಸಹಭವನಾರೊ
ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ 2
ವರ ಇಳಾ ಸಾಮಾತೆ ನಿನಗೆ ಸಾಮಾತೆ ಯಾರೊ
ಮರುತ ದೇವರು ಗುರು ನಿನಗಾರು ಗುರುವೊ
ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ
ಚರಣ ಸೇವಕ ನಾನು ನೀನಾರ ಸೇವಕನೊ 3