ಕಂಡ ಕಂಡದ್ದು ಅದು ಔಷಧವಲ್ಲವೋ
ಗಿಂಡಿ ಗಿಂಡೀದು ಅದು ತೀರ್ಥವಲ್ಲವೋ ಪ
ಮೂರು ವರ್ಗಂಗಳಿಗೆ ಆರು ವೈರಿಗಳು
ತೋರುತ್ತಿರುವÀರೆಂತೋ ಬೇರೆಯಾಗಿ 1
ಈ ರೀತಿಯಿಲ್ಲದೆ ಬೇರೊಂದು ತಿಳಿವರೆ
ಮೂರು ವಿಧ ಬೇವÀರಿಗಾರು ಫಲಪ್ರದರು 2
ಮಾರಜನಕ ಹರಿ ಪಾರ್ವತೀಧವರಿವರು
ಬೇರೆ ಎಂಬರಿತೆವೊ ಬಾರದೆ ಸರಿಯಾಗಿ 3
ಇಳೆಯ ಮೇಲಿರುತಿಹ ಜಲಾಶಯಗಳು
ಬಳಿಕೆಗೋಸುಗ ತಾವಿಳದಿಹವಲ್ಲದೆ 4
ನಳಿನನಾಭನ ಪೂಜಾಗಳಿಗೆ ಬಾಂಬೊಳೆಯ
ಮೈಲೆನಿಪದಲ್ಲದೆ ಮಿಕ್ಕಿಸಲು ಉಂಟೆ 5
ಚಿತ್ತಶುದ್ಧಿಯನೈದಿ ಉತ್ತಮ ಜಲದಿ ಮಿಂದು
ಚಿತ್ತಜÀ್ಹನೈಯನ ಮಜ್ಜನಗೈಯಲು
ಹತ್ತಾವತಾರನ ಮತ್ತೆ ಪೂಜೆಯ ಗೈದು
ಉತ್ತಮ ಪದ ಸೇವಿಪುದೇ ತೀರ್ಥಾ 6
ಶಿರಿವರ ಪದಜಲ ವರ ತುಲಸೀದಲ
ಬೆರೆÀಸಿ ಪಾವÀನ ಗೈಯೆ ಇರುವುದೆ ರೋಗವು
ಉರಗಶಯನ ಶ್ರೀ ನರಸಿಂಹ ವಿಠಲನು
ಪರಮ ವೈದ್ಯನು ತನ್ನ ಶರಣರಿಗೇ 7