ಗೌರೀಶ ಮೃತ್ಯುಂಜಯನುತ ಪಾಲಯ
ಗೌರೀಶ ಮೃತ್ಯುಂಜಯ ಪ
ಸುಮಶರನಾಶ ಸುಮನರಪೋಷ
ಶಮೆಶಾಂತಿದಯಭೂತೇಶ 1
ಶಂಕರ ಶಶಿಧರ ಕಿಂಕರ ಪ್ರಿಯಕರ
ಶಂಕರಿಮನೋಹರ 2
ಉಮೆ ಪ್ರಿಯನಾಥ ಅಮಿತವರದಾತ
ಅಮರಾದಿಸುರಾರ್ಚಿತ 3
ವರಮಹಲಿಂಗ ಪರಿಭವಭಂಗ
ಪರತರ ಪಾವನಾಂಗ 4
ಗಜಚರ್ಮಾಂಬರ ಭುಜಗಾಲಂಕಾರ
ಸುಜನಾತ್ಮ ಸುಖಂಕರ 5
ಪುರತ್ರಯ ಸಂಹರ ಪರಿಪಕ್ವರಾಧಾರ
ನಿರಂಜನ ನಿರಾಕಾರ 6
ಕೆಂಡನಯನ ರುಂಡಮಾಲನೆ
ಹರಣ 7
ಬೇಡುವೆನಭವ ಕಾಡದೆ ಪರಶಿವ
ನೀಡು ಎನ್ನಗೆ ವರವ 8
ಭೂಮಿತ್ರಯಕೆ ಘನಸ್ವಾಮಿ ಶ್ರೀರಾಮನ
ನಾಮ ಪಾಲಿಸು ಪಾವನ 9