ದೊಲ್ಲಭ ಗುರು ಮಹಿಪತಿಯ ತೋರಮ್ಮ ಪ
ಭಂಜನ ಗೆರಗುವ ಅವಸರವಿಲ್ಲಾ |
ಕಂಜ ಮೊಗವ ತೊಳಿಯಲುದುಕ ಕಲಶಕಾ |
ಲಂಜಿಯೂಳಿಗದವರೆಡೆಯಾಟವಿಲ್ಲ 1
ಗುರುಪೂಜೆಯಲಿ ರೂಪ ಗೋಚರವಿಲ್ಲಾ |
ಇದುರಿಗೆ ಎದುರಲಿ ಕುಳಿತು ಕೀರ್ತನೆಯಲಿ |
ಬೋಧ ನುಡಿಧ್ವನಿಯಲ್ಲಾ2
ಇಂತು ಹಂಬಲಿಸುವ ಮನವೆಂಬ ಪ್ರಕೃತಿಗೆ |
ಅಂತರಂಗದಿ ತನ್ನ ಸುಳುಹನೆ ದೋರಿ |
ನಿಂತನು ಎತ್ತ ನೋಡಲು ತಾನೇ ತಾನಾಗಿ |
ಭ್ರಾಂತಿ ಬಿಡಿಸಿದನು ನಂದನ ಸ್ವಾಮಿ3