ಯಾವಲ್ಲಿ ಅಡಗಿರುವಿ ಯಾವಲ್ಲಿ ಹುಡುಕಲಿಭಾವದ ಮೂಲೆಯ ರಾವನು ಬಿಟ್ಟು ಅ.ಪ.
ಕಣ್ಣುಮುಚ್ಚಾಲೆಯಾಟ ಬೇಡಯ್ಯ ಈಬಣ್ಣದ ನುಡಿಯ ಬೇಟಕಣ್ಣು ಮುಚ್ಚಲು ಕೊಟ್ಟಿ ಟಣ್ಣನೆ ಜಿಗಿದೋಟಅಣ್ಣಾ ಹುಡುಕಿ ಹುಡುಕಿ ಹಣ್ಣಾಗಿ ಹೋದೆನೋ 1
ಎಲ್ಲೆಲ್ಲೂ ತುಂಬಿರುವೆ ಹುಡುಕಲು ನೀನೆಲ್ಲೆಲ್ಲ್ಯೂ ಸಿಗದಿರುವೆಕ್ಷುಲ್ಲಕನೆನ್ನನ್ನು ಚಲ್ಲದೆ ನನ್ನೆದುರುಚೆಲ್ವರೂಪದೆ ಬಂದು ನಿಲ್ವುದನ್ನು ಬಿಟ್ಟು 2
ಕಡುಕಷ್ಟ ಹುಡುಕುವದು ಹಿಡಿದು ಹಿಡಿದು ತಂದುಒಡಲಲ್ಲಿಡಲು ಮತ್ತೇಒಡನೆ ನುಸುಳಿಕೊಂಡುಬಿಡವಲೋಡೋಡಿ 3
ಇದೀಗ ನಡೆದು ತಂದು ನೆನೆಯಲು ನಿನ್ನಸದಾವಕಾಲಕೆಂದು ಹೃದಯದ ಗವಿಯೊಳುಮುದದಿ ಕೂಡಿಸಿ ಮೇಲೆಬದಿಗೆ ಕಾವಲವಿಟ್ಟು ಮನವ ಟೊಣೆದು ನೀ 4
ಬದರಿ ಕಾಶಿ ಕಂಚಿಯೋ ನೀನಿರುವುದುಮಥುರೆ ಪಂಢರಪುರವೊಪದುಮಾವತಿ ಗಿರಿಯೋ ಉಡುಪಿ ದ್ವಾರಕೆಯೊಗದುಗೋ ನೀ ಹೇಳಯ್ಯ ವೀರನಾರಾಯಣ 5