ತಾಮರಸ ಇನ್ನು ಕಾಂಬುವದೆಂದುಪನ್ನಗಾತನ ವಾಹನಾ ಪ
ಕಣ್ಣು ಕಾಣದ ಹೀನ ಮಾನವನು ನಾನಾದೆಉನ್ನಂತ ಗುಣ ಪೂರ್ಣ ಕಾಯೋ ಯೆನ್ನ ಅ.ಪ.
ಕರಿ ಮಕರಿ ಸೆಣಸ್ಯಾಡಿಹರುಷ ಕುಗ್ಗುತ ಮರುಕದೀ |ಹರಿ ಹರಿ ಹರಿ ಎಂದು | ಕರಿರಾಜ ಮೊರೆಯಿಡಲುತ್ವರದಿಂದ ನೀಯವನ | ಎಡರ ಹರಿಸಿದೆ ದೇವ 1
ಕುರುರಾಜ ಸಭೆಯಲಿ | ತರುಳೆ ದ್ರೌಪದಿ ಸೀರೆಕೌರವಾನುಜ ಸೆಳೆಯಲೂ |ನಾರಿಮಣಿ ನಿಜಪತಿಗಳೈ | ವರಲಿ ಮನ ತಿಳಿದುಹಿರಿಯ ಸಭಿಕರಿಗರುಹಲೂ | ವರ ವೃದ್ಧ ಭೀಷ್ಮಾದಿ |ಬಹುಮಂದಿ ಇರುತ ಕಾಲವ ಕಳೆಯಲು |ಆರಾದರೂ ಬಂದು ಪಾರು ಮಾಡಿದರೇನೊಶೌರಿ ನಿನ್ನನು ಕರೆಯೆ | ಪಾರು ಮಾಡಿದ ದೇವ 2
ಪಾರುಗಾಣಿಸೊ ಎನ್ನ | ಮೂರು ವಿಧ ತಾಪಗಳಮಾರ ಜನಕನೆ ಪ್ರಾರ್ಥಿಪೇ ದೂರ ಮಾಡಿಸೊ ಹರಿಯೆ | ಮೂರು ಗುಣದಿಂದೆನ್ನಬಾರಿ ಬಾರಿಗು ಬೇಡುವೆ |ದುರುಳ ತತ್ವರ ಕಾರ್ಯ | ಕಡೆಗೈಸಿ ಶ್ರೀ ಹರಿಯೆಸುರರ ಸಹಕಾರ ನೀಡೊ |ಗುರುಗಳಂತರ್ಯಾಮಿ | ಗುರು ಗೋವಿಂದ ವಿಠಲನೆಕರುಣದಲಿ ತವ ಚರಣ | ಸರಸಿಜವ ತೋರೋ 3