ಒಟ್ಟು 148 ಕಡೆಗಳಲ್ಲಿ , 39 ದಾಸರು , 141 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸಂಪ್ರದಾಯದ ಹಾಡುಗಳು ಕೋಲು ಹಾಡು ಆಕಾಶಕಭಿಮಾನಿ ಶ್ರೀಕಂಠ ವರಪುತ್ರಏಕದಂತನೆ ವಿಘ್ನೇಶ ಕೋಲೆಏಕದಂತನೆ ವಿಘ್ನೇಶ ನಿನ್ನ ಪದಏಕ ಚಿತ್ತದಲಿ ಬಲಗೊಂಬೆ ಕೋಲೆ 1 ನೆನೆಯಕ್ಕಿ ನೆನೆಗಡಲೆ ಗೊನೆಯ ಬಾಳೆಯ ಹಣ್ಣುಘನವಾದ ಚಿಗುಳಿ ತಂಬಿಟ್ಟು ಕೋಲೆಘನವಾದ ಚಿಗುಳಿ ತಂಬಿಟ್ಟು ತಂದೀವೆಗಣಪತಿ ಮತಿಯ ಕರುಣಿಸು ಕೋಲೆ 2 ಜಾಹ್ನವಿ ಜಾಹ್ನವಿ ಜನಕ ನಾರಾಯಣನಗಧರನ ಮುನ್ನ ಬಲಗೊಂಬೆ ಕೋಲೆ 3 ಮಚ್ಛ ಕೂರುಮ ವರಹ ನರಸಿಂಹ ವಾಮನಸ್ವಚ್ಛ ಭೃಗುರಾಮ ರಘುರಾಮ ಕೋಲೆಸ್ವಚ್ಛ ಭೃಗುರಾಮ ರಘುರಾಮ ಕೃಷ್ಣ ಬೌದ್ಧಅಚ್ಛ ಕಲ್ಕಿಯ ಬಲಗೊಂಬೆ ಕೋಲೆ 4 ಈಶ ಬ್ರಹ್ಮರಿಗೆ ನಿಯಾಮಕನಾಗಿದ್ದುಪೋಷಿಸುತಿಪ್ಪ ಪರಮಾತ್ಮ ಕೋಲೆಪೋಷಿಸುತಿಪ್ಪ ಪರಮಾತ್ಮನಾದ ಶ್ರೀಕೇಶವನ ಮೊದಲೆ ಬಲಗೊಂಬೆ ಕೋಲೆ 5 ನೀರಿಗಾಶ್ರಯನಾಗಿ ನೀರೊಳು ಮಲಗಿಪ್ಪನೀರಜ ನೇತ್ರ ನಿಗಮಾತ್ಮ ಕೋಲೆನೀರಜ ನೇತ್ರ ನಿಗಮಾತ್ಮನಾದ ಶ್ರೀನಾರಾಯಣನ್ನ ಬಲಗೊಂಬೆ ಕೋಲೆ 6 ಯಾದವ ಕುಲಜನೆ ಸಾಧುಗಳರಸನೆಮಾದೇವಿಗಾಶ್ರಯನಾಗಿಪ್ಪ ಕೋಲೆಮಾದೇವಿಗಾಶ್ರಯನಾಗಿ ಪಾಲಿಸುವಮಾಧವನ್ನ ಮೊದಲೆ ಬಲಗೊಂಬೆ ಕೋಲೆ 7 ಚಂದದಿಂದ ವೇದ ವೃಂದ ಪ್ರತಿಪಾದ್ಯನೆಇಂದಿರಾದೇವಿ ರಮಣನೆ ಕೋಲೆಇಂದಿರಾದೇವಿ ರಮಣನಾದ ಗೋ-ವಿಂದನ್ನ ಮೊದಲೆ ಬಲಗೊಂಬೆ ಕೋಲೆ 8 ಸೃಷ್ಟಿಯೊಳಗೆಲ್ಲ ವ್ಯಾಪ್ತನಾಗಿರುತಿಪ್ಪವೈಷ್ಣವಕುಲಕೆ ತಿಲಕನೆ ಕೋಲೆವೈಷ್ಣವ ಕುಲಕೆ ತಿಲಕನಾದ ಶ್ರೀವಿಷ್ಣುವಿನ ಮೊದಲೆ ಬಲಗೊಂಬೆ ಕೋಲೆ 9 ಅಧಮನಾಗಿದ್ದಂಥ ಅಸುರನ ಸಂಹರಿಸಿಮುದವ ಬೀರಿದನೆ ಸುರರಿಗೆ ಕೋಲೆಮುದವ ಬೀರುತ ಸುರರ ಪಾಲಿಸುವಂಥಮಧುಸೂದನನ್ನ ಬಲಗೊಂಬೆ ಕೋಲೆ 10 ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕವ ಕೋಲೆಆಕ್ರಮಿಸಿ ತ್ರಿಲೋಕವನಳೆದ ತ್ರಿ-ವಿಕ್ರಮನ್ನ ಮೊದಲೆ ಬಲಗೊಂಬೆ ಕೋಲೆ 11 ಭೂಮಿಯೊಳಗೆ ಅತಿ ಸಂಭ್ರಮನಾಗಿದ್ದಕಾಮಿತಾರ್ಥಂಗಳ ಕರೆವನೆ ಕೋಲೆಕಾಮಿತಾರ್ಥಂಗಳ ಕರೆದು ಭಕ್ತರ ಪೊರೆವವಾಮನನ್ನ ಮೊದಲೆ ಬಲಗೊಂಬೆ ಕೋಲೆ 12 ವೇದಾಭಿಮಾನಿಗೆ ಸಾದರವಾಗಿಪ್ಪಬೌದ್ಧ ಮೂರುತಿಯೇ ಭವದೂರ ಕೋಲೆಬೌದ್ಧ ಮೂರುತಿಯೇ ಭವದೂರನಾದ ಶ್ರೀಶ್ರೀಧರನ್ನ ಮೊದಲೆ ಬಲಗೊಂಬೆ ಕೋಲೆ 13 ಸಾಕಾರ ಮೂರುತಿ ಸರ್ವೇಂದ್ರಿ ನಿಯಾಮಕನಾಕೇಶ ವಂದ್ಯ ನಳಿನಾಕ್ಷ ಕೋಲೆನಾಕೇಶ ವಂದ್ಯ ನಳಿನಾಕ್ಷನಾದ ಹೃಷಿ-ಕೇಶ ಹರಿಯ ಬಲಗೊಂಬೆ ಕೋಲೆ 14 ಪದುಮ ಸಂಭವ ಪಿತ ಪದುಮಿನಿ ವಲ್ಲಭಪದುಮ ಪೊಕ್ಕುಳಲಿ ಪಡೆದನೆ ಕೋಲೆಪದುಮ ಪೊಕ್ಕುಳಲ್ಲಿ ಪಡೆದು ಪಾಲಿಸುವಂಥಪದುಮನಾಭನ ಮುನ್ನ ಬಲಗೊಂಬೆ ಕೋಲೆ 15 ಕಾಮಿನಿ ಯಶೋದೆ ಒರಳಿಗೆ ಕಟ್ಟಲುಶ್ರೀ ಮನೋಹರ ಶೆಳೆದೊಯ್ದ ಕೋಲೆಶ್ರೀ ಮನೋಹರ ಶೆಳೆದು ಪಾಪವ ಕಳೆದದಾಮೋದರನ್ನ ಬಲಗೊಂಬೆ ಕೋಲೆ 16 ಕಿಂಕರರ ಚಿತ್ತ ದುರ್ವಿಷಯಕ್ಕೆರಗಲುಪಂಕಜನಾಭ ಶಳೆದನೆ ಕೋಲೆಪಂಕಜನಾಭ ಶಳೆದು ತನ್ನಲ್ಲಿಡುವಸಂಕರುಷಣನ್ನ ಬಲಗೊಂಬೆ ಕೋಲೆ 17 ಏಸು ಬ್ರಹ್ಮಾಂಡದೊಳು ವಾಸವಾಗಿರುತಿಪ್ಪದಾಸವರ್ಗವನೆ ಪೊರೆವನೆ ಕೋಲೆದಾಸ ವರ್ಗವನೆ ಪೊರೆವನೆ ನಮ್ಮ ಶ್ರೀವಾಸುದೇವನ್ನ ಬಲಗೊಂಬೆ ಕೋಲೆ 18 ಅದ್ವೈತ ಮಹಿಮನೆಸದ್ವೈಷ್ಣವರ ಪೊರೆವನೆ ಕೋಲೆಸದ್ವೈಷ್ಣವರ ಪೊರೆವನೆ ಅಜನಯ್ಯಪ್ರದ್ಯುಮ್ನ ಹರಿಯ ಬಲಗೊಂಬೆ ಕೋಲೆ 19 ಅನಿಮಿಷ ದೈತ್ಯರ ಮನಕೆ ಸಿಲುಕದಿಪ್ಪಸನಕಾದಿ ವಂದ್ಯ ಸಕಲೇಶ ಕೋಲೆಸನಕಾದಿ ವಂದ್ಯ ಸಕಲೇಶನಾಗಿಪ್ಪಅನಿರುದ್ಧ ಹರಿಯ ಬಲಗೊಂಬೆ ಕೋಲೆ 20 ಕ್ಷರಾಕ್ಷರದೊಳು ಪರಮೋತ್ತಮನಾದಕರಿರಾಜ ವರದ ಕವಿಗೇಯ ಕೋಲೆಕರಿರಾಜ ವರದ ಕವಿಗೇಯನಾದ ಶ್ರೀಪುರುಷೋತ್ತಮನ್ನ ಬಲಗೊಂಬೆ ಕೋಲೆ 21 ಅಕ್ಷಯ ಮೂರುತಿ ಮೋಕ್ಷದಾಯಕ ಸ್ವಾಮಿಕುಕ್ಷಿಯೋಳ್ ಜಗವ ರಕ್ಷಿಪ ಕೋಲೆಕುಕ್ಷಿಯೋಳ್ ಜಗವ ಪಾಲಿಪ ನಮ್ಮ ಅ-ದೋಕ್ಷಜ ಹರಿಯ ಬಲಗೊಂಬೆ ಕೋಲೆ 22 ಕ್ರೂರ ಖಳನುದರ ಸೀಳಿ ಪ್ರಹ್ಲಾದನಕಾರುಣ್ಯದಿಂದ ಕಾಯ್ದನ ಕೋಲೆಕಾರುಣ್ಯದಿಂದ ಕಾಯ್ದನ ನಮ್ಮ ಶ್ರೀನಾರಸಿಂಹನ್ನ ಬಲಗೊಂಬೆ ಕೋಲೆ 23 ಸಚ್ಚಿದಾನಂದನೆ ಸಕಲಗುಣ ಪರಿಪೂರ್ಣಮುಚುಕುಂದ ವರದ ಮುನಿನುತ ಕೋಲೆಮುಚುಕುಂದ ವರದ ಮುನಿನುತನಾದ ಶ್ರೀಅಚ್ಯುತನ ಮೊದಲೆ ಬಲಗೊಂಬೆ ಕೋಲೆ 24 ದುರ್ಧರ್ಷರಾಗಿದ್ದ ಖಳರ ಸಮುದಾಯವಮರ್ದನ ಮಾಡಿದ ಮಹಮಹಿಮ ಕೋಲೆಮರ್ದನ ಮಾಡಿದ ಮಹಮಹಿಮನಾದ ಜ-ನಾರ್ದನ್ನ ಮೊದಲೆ ಬಲಗೊಂಬೆ ಕೋಲೆ 25 ಇಂದ್ರಾನುಜನಾಗಿ ಸ್ವರ್ಗದೊಳಿರುತಿದ್ದುಸಾಂದ್ರ ಸುಖವೀವೆ ಸುರರಿಗೆ ಕೋಲೆಸಾಂದ್ರ ಸುಖವಿತ್ತು ಸುರರ ಪಾಲಿಸುವ ಉ-ಪೇಂದ್ರನ ಮೊದಲೆ ಬಲಗೊಂಬೆ ಕೋಲೆ 26 ಪರಮ ಭಕ್ತರ ಪಾಪ ಪರಿಹಾರವನೆ ಮಾಡಿಪರಮ ಪದವಿಯ ಪಾಲಿಪ ಕೋಲೆಪರಮ ಪದವಿಯ ಪಾಲಿಪ ನಮ್ಮ ಶ್ರೀ-ಹರಿಯ ಮೊದಲೆ ಬಲಗೊಂಬೆ ಕೋಲೆ 27 ಶಿಷ್ಟ ಪಾಲಕ ಉತ್ಕøಷ್ಟ ಜ್ಞಾನಾನಂದಕೃಷ್ಣೆಯ ಕಷ್ಟ ಬಿಡಿಸಿದ ಕೋಲೆಕೃಷ್ಣೆಯ ಕಷ್ಟ ಬಿಡಿಸಿದ ನಮ್ಮ ಶ್ರೀ-ಕೃಷ್ಣನ್ನ ಮೊದಲೆ ಬಲಗೊಂಬೆ ಕೋಲೆ 28 ಅನಿರುದ್ಧಾದಿ ರೂಪ ವಿಶ್ವಾದಿ ಅಜಿತಾದಿಸನತ್ಕುಮಾರಾದಿ ಅಜಾದಿ ಕೋಲೆಸನತ್ಕುಮಾರಾದಿ ಅಜಾದಿ ರೂಪನಾದಘನ ಮಹಿಮನ್ನ ಬಲಗೊಂಬೆ ಕೋಲೆ 29 ಹಯಗ್ರೀವ ದತ್ತ ಋಷಭ ಸಂಕರ್ಷಣಭಯರಹಿತ ಬಾದರಾಯಣ ಕೋಲೆಭಯರಹಿತ ಬಾದರಾಯಣ ಮಹಿದಾಸವಯಿಕುಂಠ ಹರಿಯ ಬಲಗೊಂಬೆ ಕೋಲೆ 30 ಆತ್ಮಾದಿ ವಾಸುದೇವಾದಿ ಮೂರುತಿಶ್ರೀ ತರುಣೇಶ ವಿಶ್ವೇಶ ಕೋಲೆಶ್ರೀ ತರುಣೇಶ ವಿಶ್ವೇಶ ರೂಪನಾದಜ್ಯೋತಿರ್ಮಯನ ಬಲಗೊಂಬೆ ಕೋಲೆ 31 ಮುನಿ ವೇದವ್ಯಾಸ ಸನತ್ಕುಮಾರ ಮೂರ್ತಿಮಿನಗುವ ದತ್ತಾತ್ರೇಯನೆ ಕೋಲೆಮಿನಗುವ ದತ್ತಾತ್ರೇಯ ಹಯಗ್ರೀವದನುಜಾಂತಕನ್ನ ಬಲಗೊಂಬೆ ಕೋಲೆ 32 ಕಂಗಳಾಪಾಂಗದಿಂ ಕಮಲಾಸನಾದಿಗಳಸಂಗಾತ ಸೃಷ್ಟಿಪ ಮಹಲಕ್ಷ್ಮೀ ಕೋಲೆಸಂಗಾತ ಸೃಷ್ಟಿಪ ಮಹಲಕ್ಷ್ಮೀ ನಿನ್ನ ಪಾ-ದಂಗಳಿಗೆರಗಿ ಬಲಗೊಂಬೆ ಕೋಲೆ 33 ಮಾಯಾ ಜಯಾಕೃತಿ ಶಾಂತಿ ಇಂದಿರಾದೇವಿಕಾಮನ ಜನನಿ ಜಯಂತಿ ಕೋಲೆಕಾಮನ ಜನನಿ ಜಯಂತಿ ಜಾನಕಿ ಸತ್ಯ-ಭಾಮಾ ರುಕ್ಮಿಣಿಯ ಬಲಗೊಂಬೆ ಕೋಲೆ 34 ಪರಮೇಷ್ಠಿ ಪರಮೇಷ್ಠಿ ನಿನ್ನ ಪದಪದುಮವ ಮುನ್ನ ಬಲಗೊಂಬೆ ಕೋಲೆ 35 ಹನುಮ ಭೀಮ ಮಧ್ವ ಮುನಿರಾಯ ಮಾರುತಿದನುಜಾರಿ ಭಕ್ತ ವಿರಕ್ತ ಕೋಲೆದನುಜಾರಿ ಭಕ್ತ ವಿರಕ್ತ ನಿನ್ನ ಪಾದವನಜವ ಮುನ್ನ ಬಲಗೊಂಬೆ ಕೋಲೆ 36 ವಾಣಿ ಅಜನ ಮುದ್ದು ರಾಣಿ ಪಲ್ಲವ ಪಾಣಿಜಾಣೆ ಕೊಡೆಮಗೆ ಮತಿಗಳ ಕೋಲೆಜಾಣೆ ಕೊಡೆಮಗೆ ಮತಿಗಳ ನಿನ್ನ ಪಾದರೇಣುವಿನ ಮುನ್ನ ಬಲಗೊಂಬೆ ಕೋಲೆ 37 ಭಾರತಿದೇವಿ ನಿನ್ನ ವಾರಿಜ ಚರಣವಬಾರಿ ಬಾರಿಗೆ ಭಜಿಸುವೆ ಕೋಲೆಬಾರಿ ಬಾರಿಗೆ ಭಜಿಸುವೆ ಎಮಗೆ ಶ್ರೀನಾರಾಯಣನಲ್ಲಿ ರತಿ ಕೊಡು ಕೋಲೆ 38 ಇಂದ್ರನ ಗೆದ್ದು ಸುಧೆ ತಂದು ಮಾತೆಯಬಂಧನ ಕಡಿದ ಬಲುಧೀರ ಕೋಲೆಬಂಧನ ಕಡಿದ ಬಲುಧೀರನಾದ ಖ-ಗೇಂದ್ರನ್ನ ಮುನ್ನ ಬಲಗೊಂಬೆ ಕೋಲೆ 39 ಸಾಸಿರ ಮುಖದಿಂದ ಶ್ರೀಶನ್ನ ತುತಿಸಿ ಶ್ರೀವಾಸುದೇವಂಗೆ ಹಾಸಿಕೆ ಕೋಲೆವಾಸುದೇವಂಗೆ ಹಾಸಿಕೆಯಾದ ಮಹ-ಶೇಷನ್ನ ಮುನ್ನ ಬಲಗೊಂಬೆ ಕೋಲೆ 40 ಅಪರಿಮಿತ ಕಾರ್ಯ ತ್ರಿಪುರ ದಹನನೆಚಪಲ ಮೂರುತಿ ಚಂದ್ರಚೂಡ ಕೋಲೆಚಪಲ ಮೂರುತಿ ಚಂದ್ರಚೂಡ ಭಜಕರಅಪಮೃತ್ಯು ಹರನ ಬಲಗೊಂಬೆ ಕೋಲೆ 41 ಖಗ ಶೇಷಶಂಭು ರಾಣಿಯರ ಬಲಗೊಂಬೆ ಕೋಲೆ 42 ಶಕ್ರ ಕಾಮಾದಿ ದೇವರ್ಕಳ ಚರಣಕ್ಕೆಅಕ್ಕರದಿಂದ ಅಭಿನಮಿಪೆ ಕೋಲೆಅಕ್ಕರದಿಂದ ಅಭಿನಮಿಸಿ ಪೇಳ್ವೆ ದೇ-ವಕ್ಕಿ ನಂದನನ ಚರಿತೆಯ ಕೋಲೆ 43 ಪದ್ಮನಾಭ ನರಹರಿತೀರ್ಥಶ್ರೀ ಮಾಧವಾರ್ಯ ಅಕ್ಷೋಭ್ಯ ಕೋಲೆಶ್ರೀ ಮಾಧವಾರ್ಯ ಅಕ್ಷೋಭ್ಯ ಜಯತೀರ್ಥಸ್ವಾಮಿಗಳ ಮೊದಲೆ ಬಲಗೊಂಬೆ ಕೋಲೆ 44 ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆನ್ಯಾಯ ಗ್ರಂಥಗಳ ರಚಿಸಿದ ಕೋಲೆನ್ಯಾಯ ಗ್ರಂಥಗಳ ರಚಿಸಿದ ನಮ್ಮ ವ್ಯಾಸ-ರಾಯರ ಮುನ್ನ ಬಲಗೊಂಬೆ ಕೋಲೆ 45 ಜನನಿ ಗರ್ಭದಿಂದವನಿ ಸ್ಪರ್ಶಿಸದೆಜನಿಸಿ ಬ್ರಹ್ಮಣ್ಯ ಮುನಿಗಳ ಕೋಲೆಜನಿಸಿ ಬ್ರಹ್ಮಣ್ಯ ಮುನಿಗಳ ಮೃದು ಹಸ್ತವನಜ ಸಂಭವನ ಬಲಗೊಂಬೆ ಕೋಲೆ 46 ಶ್ರೀಪಾದರಾಯರಲಿ ಸಕಲ ವಿದ್ಯವನೋದಿಶ್ರೀಪತಿ ಪ್ರೀತಿ ಪಡಿಸಿದ ಕೋಲೆಶ್ರೀಪತಿ ಪ್ರೀತಿ ಪಡಿಸಿದ ವ್ಯಾಸಮುನಿಭೂಪನ ಮೊದಲೆ ಬಲಗೊಂಬೆ ಕೋಲೆ 47 ದೇಶಾಧಿಪತಿಗೆ ಬಂದ ಕುಯೋಗವನೆ ನೂಕಿತಾ ಸಿಂಹಾಸನವೇರಿ ಮೆರೆದನೆ ಕೋಲೆತಾ ಸಿಂಹಾಸನವೇರಿ ಮೆರೆದನೆ ವ್ಯಾಸ ಮು-ನೀಶನ್ನ ಮೊದಲೆ ಬಲಗೊಂಬೆ ಕೋಲೆ 48 ದಂಡ ಕಮಂಡಲು ಧರ ಪಂಡಿತಾರಾಧಾರಕುಂಡಲಿಶಯನನ ಭಜಕರ ಕೋಲೆಕುಂಡಲಿ ಶಯನನ ಭಜಕ ರಾಘವೇಂದ್ರರಕೊಂಡಾಡಿ ಪದನ ಗುಣಿಸುವೆ ಕೋಲೆ 49 ತಂತ್ರ ಸಾರಗಳಿಗೆ ಅರ್ಥವನ್ನು ಸ್ವ-ತಂತ್ರದಿಂದಲಿ ರಚಿಸಿದ ಕೋಲೆ ಸ್ವ-ತಂತ್ರದಿಂದಲಿ ರಚಿಸಿದ ರಾಘವೇಂದ್ರರಪಂಥವಿದ್ದಲ್ಲಿ ಬಲಗೊಂಬೆ ಕೋಲೆ 50 ವೇದಶಾಸ್ತ್ರಾಮೃತ ಸಾರಬಲ್ಲ ರಾಮವೇದವ್ಯಾಸರ ಭಜಕರ ಕೋಲೆವೇದವ್ಯಾಸ ಭಜಕ ರಾಘವೇಂದ್ರರಪಾದವಿದ್ದಲ್ಲಿ ಬಲಗೊಂಬೆ ಕೋಲೆ 51 ತುಂಗಭದ್ರಾ ತೀರ ಮಂತ್ರಾಲಯದಲ್ಲಿಮಂಗಳ ಮಹಿಮರೆನಿಪರೆ ಕೋಲೆಮಂಗಳ ಮಹಿಮರೆನಿಪ ರಾಘವೇಂದ್ರ-ರಂಘ್ರಿ ಕಮಲವ ಬಲಗೊಂಬೆ ಕೋಲೆ 52 ಗುರು ರಾಘವೇಂದ್ರರ ಚರಣ ಪಂಕಜವನ್ನುಸ್ಥಿರ ಬುದ್ಧಿಯಿಂದ ಸ್ಮರಿಸುವೆ ಕೋಲೆಸ್ಥಿರ ಬುದ್ಧಿಯಿಂದ ಸ್ಮರಿಸಿ ನಾ ಪೇಳ್ವೆನುಸರಸಿಜಾಕ್ಷನ್ನ ಚರಿತೆಯ ಕೋಲೆ 53 ರಾಜರಾಜೇಶ್ವರ ಸತ್ಯಾಭಿನವ ತೀರ್ಥರಾಜಕರಾಬ್ಜ ಸಂಭೂತ ಕೋಲೆರಾಜಕರಾಬ್ಜ ಸಂಭೂತ ಸತ್ಯಾಧಿ-ರಾಜರ ಮೊದಲೆ ಬಲಗೊಂಬೆ ಕೋಲೆ 54 ಕ್ಷೀರನದಿಯ ತೀರ ವೇಲೂರ ಪುರವಾಸಸಾರ ಸಜ್ಜನರ ಪೊರೆವನೆ ಕೋಲೆಸಾರ ಸಜ್ಜನರ ಪೊರೆವ ಸತ್ಯಾಧಿರಾಜಧೀರ ಯತಿಗಳ ಬಲಗೊಂಬೆ ಕೋಲೆ 55 ಸತ್ಯಬೋಧರೆಂಬ ಸದ್ಗುರು ಚರಣವಚಿತ್ತದೊಳಿಟ್ಟು ಚರಿಸುವೆ ಕೋಲೆಚಿತ್ತದೊಳಿಟ್ಟು ಸ್ಮರಿಸಿ ನಾ ಪೇಳ್ವೆನುಚಿತ್ತದೊಲ್ಲಭನ ಚರಿತೆಯ ಕೋಲೆ 56 ಪುರಂದರ ರಾಯರಪರಮ ಕೃಪಾಪಾತ್ರ ವಿಜಯರಾಯ ಕೋಲೆಪರಮ ಕೃಪಾಪಾತ್ರ ವಿಜಯರಾಯರ ಪಾದಪರಮ ಭಕ್ತಿಯಲಿ ಸ್ಮರಿಸುವೆ ಕೋಲೆ 57 ದೇವ ನಾರಾಯಣ ಭೂದೇವಿ ಮೊರೆ ಕೇಳಿದೇವಕಿಯಲ್ಲಿ ಜನಿಸಿದ ಕೋಲೆದೇವಕಿಯಲ್ಲಿ ಜನಿಸಿ ಧಾರುಣಿದೇವಿ ಭಾರವನೆಲ್ಲನಿಳುಹಿದ ಕೋಲೆ 58 ಶಕಟ ಪೂತನಿ ವತ್ಸ ಬಕಧೇನುಕ ಕಂಸಮುಖಾದ್ಯರನ್ನು ಮಡುಹಿದ ಕೋಲೆಮುಖಾದ್ಯರನ್ನು ಮಡುಹಿ ವಸುದೇವ ದೇ-ವಕಿಯರ ಬಂಧನ ಬಿಡಿಸಿದ ಕೋಲೆ 59 ಹೆತ್ತ ತಾಯಿಯ ಮೊಲೆಯರ್ತಿಲಿ ನಲಿದುಂಡುಮತ್ತೆ ಬಾಲಲೀಲೆ ತೋರಿದ ಕೋಲೆಮತ್ತೆ ಬಾಲಲೀಲೆ ತೋರಿ ತೋಷವ ಪಡಿಸಿಮುತ್ಯಾಗೆ ಪಟ್ಟವ ಕಟ್ಟಿದ ಕೋಲೆ 60 ಜರೆಯ ಸುತನು ತಾನು ಜಗಳಕ್ಕೆ ಬಹನೆಂದುಕರೆಸಿದ ವಿಶ್ವಕರ್ಮನ್ನ ಕೋಲೆಕರೆಸಿದ ವಿಶ್ವಕರ್ಮನ್ನ ದ್ವಾರಕಪುರವ ನಿರ್ಮಿಸೆಂದಾಕ್ಷಣ ಕೋಲೆ 61 ದ್ವಾರಕಪುರದ ಶೃಂಗಾರ ವರ್ಣಿಸಲುಮೂರು ಕಣ್ಣವಗೆ ವಶವಲ್ಲ ಕೋಲೆಮೂರು ಕಣ್ಣವಗೆ ವಶವಲ್ಲ ನಾಲ್ಕಾರುಮೋರೆಯವರಿಗೆ ವಶವಲ್ಲ ಕೋಲೆ 62 ತಳಿರು ತೋರಣಗಳುಮೇರುವಿಗೆ ಪೊನ್ನ ಕಲಶವು ಕೋಲೆಮೇರುವಿಗೆ ಕಲಶ ಕನ್ನಡಿ ಮನೋ-ಹಾರವಾಗಿರುವುದು ಸಟೆಯಲ್ಲಿ ಕೋಲೆ 63 ಹದಿನಾರು ಸಾವಿರ ಚದುರೇರ ಮಂದಿರವುಮದನನಯ್ಯನ ಮನೆ ಮಧ್ಯ ಕೋಲೆಮದನನಯ್ಯನ ಮನೆ ಮಧ್ಯ ಪ್ರದೇಶಅದುಭುತವಾಗಿ ಬೆಳಗೋದು ಕೋಲೆ 64 ನಾರಿ ರುಕ್ಮಿಣಿ ಸತ್ಯಭಾಮೆದೇವಿ ಮತ್ತೆವಾರಿಜಮುಖಿಯರ್ ನಾಲ್ಕೆರಡು ಕೋಲೆವಾರಿಜಮುಖಿಯರ್ ನಾಲ್ಕೆರಡು ಸಹಿತಾಗಿವಾರಿಜನಾಭ ಕುಳಿತಿದ್ದ ಕೋಲೆ 65 ಶ್ರೀ ಭೂರಮಣನಾದ ಶ್ರೀಕೃಷ್ಣನರಮನೆಗೆಸುಭದ್ರೆ ಮುಯ್ಯ ತರುತಾಳೆ ಕೋಲೆಸುಭದ್ರೆ ಮುಯ್ಯ ತರುತಾಳೆ ಗಜಪುರಭೂ ಭುಜರೆಲ್ಲ ಬರುತಾರೆ ಕೋಲೆ 66 ಧರ್ಮ ಭೀಮಾರ್ಜುನ ನಕುಲ ಸಹದೇವರುಪೆರ್ಮೆಯಿಂದಲಿ ಪೊರವಂಟು ಕೋಲೆಪೆರ್ಮೆಯಿಂದಲಿ ಪೊರವಂಟು ದಿಕ್ಪಾಲರುಕೂರ್ಮೆಯಿಂದಲಿ ಬರತಾರೆ ಕೋಲೆ 67 ವಜ್ರ ಧರಿಸಿ ಉ-ಪೇಂದ್ರನರಮನೆಗೆ ಬರುತಾರೆ ಕೋಲೆ 68 ಸತಿ ಸ್ವಾಹಾದೇವಿಯ ಕೂಡಿಅತಿಶಯದಿಂ ಮೇಷವೇರುತ್ತ ಕೋಲೆಅತಿಶಯದಿಂ ಮೇಷವೇರಿ ಶಕ್ತಿಯ ಪಿಡಿದುಕ್ರ್ರತುಪತಿ ಮನೆಗೆ ಬರುತಾನೆ ಕೋಲೆ 69 ಯಮನು ಮಹಿಷವೇರಿ ಗಮನದಿಂದಲಿ ಸತಿಶಾಮಲಾದೇವಿ ಸಹಿತಲಿ ಕೋಲೆಶಾಮಲೆ ಸಹಿತ ದಂಡಾಯುಧ ಧರಿಸಿರಾಮನ ಮನೆಗೆ ಬರುತಾನೆ ಕೋಲೆ 70 ನಿರರುತಿ ತಾನೊಂದು ನರನ ಪೆಗಲನೇರಿಪರಮಾಪ್ತ ಸ್ತ್ರೀಯನೊಡಗೂಡಿ ಕೋಲೆಪರಮಾಪ್ತ ಸ್ತ್ರೀಯನೊಡನೆ ಕುಂತವ ಧರಿಸಿಧರಾಧರನ ಮನೆಗೆ ಬರುತಾನೆ ಕೋಲೆ 71 ವರುಣ ತಾನೊಂದು ಮಕರಿಯನೇರಿಕೊಂಡುಸಿರಿ ಭಾಗೀರಥಿಯನೊಡಗೊಂಡು ಕೋಲೆಸಿರಿ ಭಾಗೀರಥಿಯನೊಡನೆ ಪಾಶಧರಿಸಿಸಿರಿವತ್ಸನರಮನೆಗೆ ಬರುತಾನೆ ಕೋಲೆ 72 ಮರುತದೇವನೊಂದು ಎರಳೆಯನೇರಿತರುಣಿ ಪ್ರಾವಹಿಯೊಡಗೂಡಿ ಕೋಲೆ ತರುಣಿ ಪ್ರಾವಹಿಗೂಡಿ ಧ್ವಜ ಧರಿಸಿ ಶ್ರೀ-ಧರನ ಮನೆಗೇ ಬರುತಾನೆ ಕೋಲೆ 73 ವಿತ್ತಪತಿಯೊಂದು ಉತ್ತಮ ಹಯವೇರಿಚಿತ್ತದೊಲ್ಲಭೆಯ ಒಡಗೂಡಿ ಕೋಲೆಚಿತ್ತದೊಲ್ಲಭೆಯ ಒಡನೆ ಖಡ್ಗ ಧರಿಸಿಕರ್ತನ್ನ ಮನೆಗೆ ಬರುತಾನೆ ಕೋಲೆ 74 ಈಶಾನ ತಾನೊಂದು ವೃಷಭವೇರಿಕೊಂಡುಶ್ರೀ ಸತಿದೇವಿಯೊಡಗೂಡಿ ಕೋಲೆಶ್ರೀ ಸತಿದೇವಿಯೊಡಗೂಡಿ ಶೂಲ ಧರಿಸಿ ನಾ-ರಸಿಂಹನ ಮನೆಗೆ ಬರುತಾನೆ ಕೋಲೆ 75 ಹರಿಯೇ ಸರ್ವೋತ್ತಮ ಹರಿಯೇ ಪರದೇವತೆಹರಿದಾಸರೆಂಬೋ ಬಿರುದಿನ ಕೋಲೆಹರಿದಾಸರೆಂಬೋ ಬಿರುದಿನ ಹೆಗ್ಗಾಳೆಹಿರಿ ಬಾಗಿಲೊಳು ಹಿಡಿಸಿಹರು ಕೋಲೆ 76 ಒಬ್ಬನೆ ವಿಷ್ಣುವಿನ್ನೊಬ್ಬ ದೈವಗಳಿಲ್ಲೆಂ-ದಬ್ಬರದಿಂದ ನಾಗಸ್ವರ ಕೋಲೆಅಬ್ಬರದಿಂದ ನಾಗಸ್ವರಂಗಳಹೆಬ್ಬಾಗಿಲೊಳಗೆ ನುಡಿಸೋರು ಕೋಲೆ 77 ಖಳನ ಬೆನ್ನ ಚರ್ಮ ಸುಲಿದು ಭೇರಿಗೆ ಹಾಕಿಅಲವ ಬೋಧರೆ ಜಗದ್ಗುರು ಕೋಲೆಅಲವ ಬೋಧರೆ ಜಗದ್ಗುರುಗಳೆಂತೆಂದುಛಲದಿಂದ ಭೇರಿಯ ಹೊಡಿಸೋರು ಕೋಲೆ 78 ವಿಷ್ಣು ಸರ್ವೋತ್ತಮ ವಿಷ್ಣು ಪರದೇವತೆವಿಷ್ಣುದಾಸರೆಂಬ ಬಿರುದಿನ ಕೋಲೆವಿಷ್ಣುದಾಸರೆಂಬ ಬಿರುದಿನ ಠೆಕ್ಕೆಯಘಟ್ಯಾಗಿ ಎತ್ತಿ ನಿಲಿಸೋರು ಕೋಲೆ 79 ಮತದೊಳು ಮಧ್ವಮತ ವ್ರತದೊಳು ಹರಿದಿನಕಥೆಯೊಳು ಭಾಗವತವೆನ್ನಿ ಕೋಲೆಕಥೆಯೊಳ್ ಭಾಗವತವೆನ್ನಿ ಇದರಂತೆಪ್ರತಿಮೆಯೊಳ್ ವಿಷ್ಣು ಪ್ರತಿಮೆನ್ನಿ ಕೋಲೆ 80 ಈಚಲ ಬನದೊಳು ಗೋ ಕ್ಷೀರ ಕುಡಿದಂತೆನೀಚರ ಸಂಗ ಸುಜನರು ಕೋಲೆನೀಚರ ಸಂಗ ಸುಜನರು ಮಾಡಲುಈಚೆ ನೋಡುವರಿಗೆ ಅನುಮಾನ ಕೋಲೆ 81 ಸೂರಿ ಜನರ ಸಂಗ ಸುಧೆಯ ಪ್ರಾಶನೆಯಂತೆಹೋರಣೆ ಗುಣವುಳ್ಳ ಅಧಮರ ಕೋಲೆಹೋರಣೆ ಗುಣವುಳ್ಳ ಅಧಮರ ಸಹವಾಸನೀರುಳ್ಳಿ ತಿಂದ ತೆರನಂತೆ ಕೋಲೆ 82 ಒಳ್ಳೆ ಮನುಜರ ಸಂಗ ಮಲ್ಲಿಗೆ ಮುಡಿದಂತೆಖುಲ್ಲ ಕುಮತಿಯ ಸಹವಾಸ ಕೋಲೆಖುಲ್ಲ ಕುಮತಿಯ ಸಹವಾಸ ಮಾಡಲುಮುಲ್ಲಂಗಿ ತಿಂದು ತೇಗಿದಂತೆ ಕೋಲೆ 83 ಭಾವಜ್ಞರ ಸಂಗ ಶ್ಯಾವಿಗಿ ಉಂಡಂತೆಭಾವವನರಿಯದ ಬಲುಹೀನ ಕೋಲೆಭಾವವನರಿಯದ ಬಲುಹೀನರ ಸಂಗಬೇವಿನಹಾಲ ಕುಡಿದಂತೆ ಕೋಲೆ 84 ಬಾಳುವರ ಸಂಗ ಹಾಲೋಗರುಂಡಂತೆಬಾಳುವೆಗೆಟ್ಟ ಅಧಮರ ಕೋಲೆಬಾಳುವೆಗೆಟ್ಟ ಅಧಮರ ಸಹವಾಸಹೇಳಬಾರದ್ದು ತಿಂದಂತೆ ಕೋಲೆ 85 ಹರಿಗುರು ದ್ರೋಹಿ ಮರಳಿ ಮಾತೃ ದ್ರೋಹಿವರ ವೈಷ್ಣವ ದ್ರೋಹಿ ಪಿತೃ ದ್ರೋಹಿ ಕೋಲೆವರ ವೈಷ್ಣವ ದ್ರೋಹಿ ಸ್ವಾಮಿ ದ್ರೋಹಿನೆರಳು ಬಿದ್ದವರ ನೆರೆಹೊಲ್ಲ ಕೋಲೆ 86 ಕತ್ತೆ ಕುದುರೆ ಒಂದೆ ಅತ್ತೆ ಸೊಸೆಯು ಒಂದೆಹೆತ್ತಮ್ಮ ಒಂದೆ ಹೆಂಡ್ತೊಂದೆ ಕೋಲೆಹೆತ್ತಮ್ಮ ಒಂದೆ ಹೆಂಡ್ತೊಂದಾದ ಮೇಲೆವ್ಯರ್ಥದ ಮದುವೆ ನಿನಗ್ಯಾಕೆ ಕೋಲೆ 87 ಅಕ್ಕ ತಂಗಿಯು ಒಂದೆ ಮಕ್ಕಳು ಸೊಸೆ ಒಂದೆಚಿಕ್ಕಮ್ಮ ಒಂದೆ ಹೆಂಡ್ತೊಂದೆ ಕೋಲೆಚಿಕ್ಕಮ್ಮ ಒಂದೆ ಹೆಂಡ್ತೊಂದಾದ ಮೇಲೆರೊಕ್ಕ ವೆಚ್ಚ ಮಾಡಿ ಮದುವ್ಯಾಕೆ ಕೋಲೆ 88 ಹಿಟ್ಟು ಬೂದಿ ಒಂದೆ ರೊಟ್ಟಿ ಮುಚ್ಚಳ ಒಂದೆಕಟ್ಟಿಗೆ ಒಂದೆ ಕಬ್ಬೊಂದೆ ಕೋಲೆಕಟ್ಟಿಗೆಯೊಂದೆ ಕಬ್ಬೊಂದಾದ ಮೇಲೆಕಟ್ಟಿಗೆ ಯಾಕೆ ಮೆಲುವೊಲ್ಲೆ ಕೋಲೆ 89 ಹಾಲು ಮಜ್ಜಿಗೆಯೊಂದೆ ಕೋಳಿ ಕೋಗಿಲೆಯೊಂದೆಮಾಳಿಗೆ ಒಂದೆ ಬಯಲೊಂದೆ ಕೋಲೆಮಾಳಿಗೆಯೊಂದೆ ಬಯಲು ಒಂದಾದರೆಹೇಳಬಾರದ್ದು ತಿನವಲ್ಯ ಕೋಲೆ 90 ಗಂಗೆಯ ತಡಿಯಲ್ಲಿ ಲಿಂಗವನರ್ಚಿಸಿಅಂಗೈಯಲಿಟ್ಟು ಪೂಜಿಸುವೆ ಕೋಲೆಅಂಗೈಯಲಿಟ್ಟು ಪೂಜಿಸುವೆ ಎಲೆ ಪಾಪಿಲಿಂಗನು ನೀನು ವಂದ್ಹ್ಯಾಗೆ ಕೋಲೆ 91 ಶಿವನು ನೀನಾದರೆ ಶಿವೆಯು ನಿನಗೇನುಅವಿವೇಕಿ ಮನುಜ ಈ ಮಾತು ಕೋಲೆಅವಿವೇಕಿ ಮನುಜ ಈ ಮಾತು ಕೇಳಿದರೆಕವಿಗಳು ನಗರೆ ಕೈ ಹೊಯ್ದು ಕೋಲೆ 92 ವೇದ ಪ್ರಾಮಾಣ್ಯಂದು ಸುಜನರಿಗೆಲ್ಲಬೋಧಿಸುತಿಪ್ಪ ಬೌದ್ಧನ ಕೋಲೆಬೋಧಿಸುತಿಪ್ಪ ಬೌದ್ಧನ ಎಳೆದೊಯ್ದುಕಾದೆಣ್ಣೆಯೊಳು ಕೆಡುಹೋರು ಕೋಲೆ 93 ಇಲ್ಲಿ ಮಾತ್ರ ಭೇದ ಅಲ್ಲಿಯೊಂದೆ ಎಂಬಕ್ಷುಲ್ಲಕರ ಹಿಡಿದು ಹಲ್ಮುರಿದು ಕೋಲೆಕ್ಷುಲ್ಲಕರ ಹಿಡಿದು ಹಲ್ಮುರಿದು ಯಮರಾಯಕಲ್ಲುಗಾಣಕ್ಕೆ ಹಾಕಿಸುವ ಕೋಲೆ 94 ಅಪ್ಪ ನಾರಾಯಣನಿಪ್ಪಂಥ ಅರಮನೆಅಪ್ರಾಕೃತದ ವೈಕುಂಠ ಕೋಲೆಅಪ್ರಾಕೃತದ ವೈಕುಂಠವೆಂಬೋದುಸ್ವ ಪ್ರಕಾಶದ ಪರಮಾತ್ಮ ಕೋಲೆ 95 ಸುತ್ತ ವಿರಜಾನದಿ ಮತ್ತೆ ಆನಂದ್ವನಚಿತ್ತಜನೈಯ್ಯನರಮನೆಗೆ ಕೋಲೆಚಿತ್ತಜನೈಯ್ಯನರಮನೆ ಎಂಬುದುಉತ್ತಮೋತ್ತಮ ವೈಕುಂಠ ಕೋಲೆ 96 ನೀಲ ವೈಢೂರ್ಯ ನಿಚ್ಚಳ ವಜ್ರಅಚ್ಚ ಮಾಣಿಕ್ಯದ ಅಳವಟ್ಟು ಕೋಲೆಅಚ್ಚ ಮಾಣಿಕ್ಯದ ಅಳವಟ್ಟು ಹರಿಪುರಅಚ್ಯುತನಿಪ್ಪ ಅರವನೆ ಕೋಲೆ 97 ಸಿರಿಯು ತಾ ಮುರಹರನ ಪಟ್ಟಣದಲ್ಲಿವಿರಜೆಯೆಂತೆಂದು ಕರೆಸೋಳು ಕೋಲೆವಿರಜೆಯೆಂತೆಂದು ಕರೆಸಿ ವೈಕುಂಠಕ್ಕೆಪರಿಖಾ ರೂಪದಲ್ಲಿ ಮೆರೆವಳು ಕೋಲೆ 98 ಉತ್ತರದಿ ನಾಲ್ಕು ತತ್ಥಳಿಸುವ ದ್ವಾರಮುತ್ತು ಮಾಣಿಕ್ಯ ನವರತ್ನ ಕೋಲೆಮುತ್ತು ಮಾಣಿಕ್ಯ ನವರತ್ನ ಝಲ್ಲಿಯಎತ್ತಿ ಮೇಲ್ಕಟ್ಟು ಬಿಗಿದಿದೆ ಕೋಲೆ 99 ಜಯ ವಿಜಯಾದ್ಯೆಂಟು ದ್ವಾರಪಾಲಕರುಜಯದೇವಿ ರಮಣನರಮನೆಗೆ ಕೋಲೆಜಯದೇವಿ ರಮಣನರಮನೆ ಬಾಗಿಲೊಳ್‍ಜಯ ಜಯವೆನುತ ನಿಂದಾರೆ ಕೋಲೆ 100 ಕಸವೆಲ್ಲ ಪರಿಮಳ ಕೆಸರೆಲ್ಲ ಶ್ರೀಗಂಧಬಿಸರುಹ ನೇತ್ರನ ಅರಮನೆ ಕೋಲೆಬಿಸರುಹ ನೇತ್ರನ ಅರಮನೆಯೊಳಗೆಲ್ಲಕುಸುಮದ ಮಳೆಯು ಗರೆವುದು ಕೋಲೆ 101 ಕಾಜಿನ ನೆಲೆಗಟ್ಟು ರಾಜ ಮಾಣಿಕ ಗೋಡೆಈ ಜಡ ದ್ರವ್ಯವಲ್ಲಿಲ್ಲ ಕೋಲೆಈ ಜಡ ದ್ರವ್ಯವಲ್ಲಿಲ್ಲ ಪುಸಿಯಲ್ಲಶ್ರೀ ಜನಾರ್ದನನರಮನೆಯೊಳ್ ಕೋಲೆ 102
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ ಹಳೆಯ ಜನರ ಅನುಭವಗಳ ಹಳಿಯಬೇಡಿರೊ ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ ಗೋವು ಕೊಂದು ಪಾದರಕ್ಷೆ ದಾನಬೇಡವೊ 10 ಅರಿಯದ ಜನರಲ್ಲಿ ಅಂತರಂಗಬೇಡವೊ ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ ಜಂಭ ಕೊಚ್ಚಬೇಡವೊ ರಗಳೆ ರಂಪದಿಂದ ಪರರ ಒಲಿಸಬೇಡವೊ ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ 20 ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ ನಾಕು ಜನರ ಮಾತ ಮೀರಿ ನಡೆಯಬೇಡÀಯ್ಯ ಪೋಕರಿ ಜನಗಳಲಿ ಮೂಕ ಬದಿರನಂತಿರೊ ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ ಸಂಕಟ ಬಂದಾಗ ವೆಂಕಟೇಶ ಬರುವನೆ ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ ಕೇಳದಿರಲು ನೀತಿ ಹೇಳ ಹೋಗಬೇಡಯ್ಯ 31 ಪರರು ನೋಯುವಂಥ ಮಾತನಾಡಬೇಡಯ್ಯ ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ ದುರುಳ ಜನಗಳಲ್ಲಿ ಸರಳನಾಗಬೇಡಯ್ಯ ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ40 ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ ಸಂಗದಿಂದ ದುಷ್ಟಭೋಗ ಕಾಮ ಬರುವುದೊ ಭಂಗವಾದ ಕಾಮದಿಂದ ಕೋಪ ಬರುವುದೊ ಕೋಪದಿಂದ ಮನದಲಿ ವ್ಯಾಮೋಹ ಬರುವುದೊ ಈ ಪರಿಮೋಹದಲಿ ಸ್ಮರಣೆ ನಾಶಪಡುವುದು ಸ್ಮøತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ 50 ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ ಮಿತಿಯ ಮೀರಿ ಭೋಜನವನು ಮಾಡಬೇಡವೊ ಕಾಲ ಕಳೆಯಬೇಡವೊ ಲೋಕವ ಭಯಪಡಿಸಬೇಡ ನಡೆನುಡಿಗಳಲಿ ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ 60 ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ ದೇಶಕಾಲ ಪಾತ್ರವರಿತು ದಾನ ಮಾಡೆಲೊ ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ ಪರರ ಮನವು ಕೆದರದಂತೆ ನಿಜಹಿತ ನುಡಿಯು ಗುರುತರ ವಾಚನಿಕ ತಪವ ಮರೆಯಬೇಡವೊ 70 ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು ಗರ್ವಮತ್ಸರಾದಿಗಳನು ಬಿಡುವುದೆ ಮತಿಯು ಶರಣು ಹೊಡೆಯೊ ಕರುಣಮಯನ ಚರಣಯುಗಳದಿ ಕರಗತವಾಗುವುದು ನಿನಗೆ ಇಹಪರ ಸುಖವು ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ ಕಮಲಪತ್ರಗಳಲಿ ಜಲದ ಕಣಗಳ ತೆರದಿ ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ 80 ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ ದಾರುಣ ಸಂಸಾರ ಜಲದಿ ಪಾರುಗಾಣಲು ಧೀರನಾಗಿ ಈಜುವವಗೆ ತಾರಣ ಸುಲಭ ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ ಬೆಳಸಿದಂತೆ ತರುಲತೆಗಳು ಫಲಕೊಡುವುದೊ ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ ಹುಳಿಯ ರಕ್ತವಿರುವತನಕ ತಲೆಯು ಬಾಗದು ಕಾಲ ಸಾಲದೊ 90 ಪರರ ನುಡಿಗಳನ್ನು ಕದ್ದು ಕೇಳಬೇಡವೊ ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ ಚಾಡಿಯಾಡ ಬೇಡ ಚಾಡಿ ಕೇಳಬೇಡವೊ ಸೇಡನು ತೀರಿಸುವ ಹೇಡಿಯಾಗಬೇಡವೊ ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ ಕರವ ಪಿಡಿಯೆಲೊ ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ 100 ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ ಇರುಳು ಕಂಡ ಬಾವಿಗೆ ನೀ ಉರುಳಬೇಡವೊ ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ 110 ಪಾಪಿಯಾಗಬೇಡ ಇತರ ಜನರ ವಂಚಿಸಿ ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು ಕೂಪ ಕೂರ್ಮದಂತೆ ಜಗವ ನೋಡಬೇಡವೊ ರೂಪುರಂಗುಗಳಿಗೆ ಮನವ ಸೋಲಬೇಡವೊ ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ ಕೊಡಲಿಯನ್ನು ಸೇರಿ ಮರದ ಕಾವಿನಂದದಿ ನಡತೆ ಕಲಿಸದಿದ್ದರವರು ಬುಡಕೆ ತರುವರೊ ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ 120 ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ ಗುಹ್ಯ ತತ್ವ ಪೇಳಬೇಡವೊ ನಾಯಿಗಳಿಗೆ ಹವ್ಯದಾನ ಮಾಡಬೇಡವೊ ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ ಕರ್ಮ ಸುಡುವುದೆ ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ ಜನನ ಮರಣ ನಿಯತ ಕಾಲಗಳಲಿ ಬರುವವೊ ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು 130 ತಾಳಿದವನು ಬಾಳುವನೆಂದರಿತು ನಡೆಯೆಲೊ ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ 140 ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ ಬಿಂದು ಬಿಂದು ಸೇರಿ ಸಿಂಧುವಾಯಿತೊ ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ ಅರಿಯದ ಅಜ್ಞಾನಿಯೊಡನೆ ಸರಸಬೇಡವೊ ತರುಗು ತಿನ್ನುವವನ ಕೇಳಬೇಡ ಹಪ್ಪಳ 150 ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ ಸಾಹಸವನು ಮಾಡದಿರೊ ಪ್ರಬಲ ಜನರಲಿ ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ ಭಾಗ್ಯಹೀನ ಬಡವನೆಂದು ಜರಿಯಬೇಡವೊ ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ 160 ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ ಅರಳು ಹುಡುಕಬೇಡವೊ ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ ಬೀದಿಯಲಿರುವ ಜನಗಳ ಬೇಸರಿಸಬೇಡವೊ ಬೆದೆಯಲಿರುವ ದುರುಳನನ್ನು ಕೆಣಕಬೇಡವೊ 170 ಊರು ಕುರಿಯ ಕಾದು ಗೌಡನೆನಿಸಬೇಡವೊ ದೂರು ತರುವ ಜನರ ಕ್ಷಣದಿ ನಂಬಬೇಡವೊ ನಾರಿಯ ಸಾಹಸವ ನಂಬಿ ದುಡುಕಬೇಡವೊ ಎರಡು ಕರವು ಸೇರದೆ ಚಪ್ಪಾಳೆಯಾಗದು ಕುರುಡನು ತೋರಿಸುವುದೆಲ್ಲ ಮಾರ್ಗವಾಗದು ಕರಡಿಯು ಮೈಯಪರಚಲದು ಸೌಖ್ಯವಾಗದು ಗುರುಗಳ ಬಿಟ್ಟೋದಲು ಉಪದೇಶವಾಗದು ಹರಿಯಭಕುತಿ ಹರಿಯದಿರಲು ಗಾನವಾಗದು ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು 180 ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು ಕಿರಿಯ ಜನರ ಗುಣಗಾನವು ಭಜನೆಯಾಗದು ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು ಕದ್ದು ಅವಿತುಕೊಂಬರೆಲ್ಲ ಗರತಿಯಾಗರು ಮದ್ದು ಮಾಟ ಮಾಡುವವರು ಸುದತಿಯಾಗರು ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು 190 ರೀತಿ ನೀತಿಗಳನು ಪರಗೆ ಹೇಳಲು ಸುಲಭ ಮಾತನಾಡಿದಂತೆ ಮಾಡಿ ತೋರುವರಿಹರೇ ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು ಹೋತನ ಗಳಸ್ತನವಿದಲ್ಲ ಕೂತು ಕೇಳರಿ ಗಾದೆಗಳನು ವೇದವೆಂದು ಪೇಳಲುಚಿತವು ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು ಪರಮ ಭಾಗವತರ ಚರಿತೆಯೋದಿ ನೋಡಿರಿ ಅರಿಯಬಹುದು ನುಡಿದ ನೀತಿಸಾರವೆಲ್ಲವ ನಾಡುನುಡಿಗಳೆಂದು ಮರೆಯಬೇಡವೆಂದಿಗು ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ 200
ಸೇವೆಮಾಡಿ ಹರಿಯ ನವವಿಧಪರಿಯ ಧ್ರುವ ಪಥ ಕೂಡಿ ಗೋವಿಂದನಾಮ ಪಾಡಿ ಅವಿದ್ಯುಪಾಧೀಡ್ಯಾಡಿ 1 ಯುಕ್ತಿಗೆ ವಿವೇಕ ಭಕ್ತ ಸಂರಕ್ಷಕ ಮುಕ್ತಿಗಿಂದಧಿಕ ಭಕ್ತಿನಿಜಸುಖ 2 ಸೇವೆಸುಖ ಹರಿಯ ಮಹಿಪತಿ ದೊರೆಯ ಸೇವಿಸಲೀಪರಿಯ ಭವನಾಶ ಖರಿಯ 3
ಹಗಲು ಸಮಯದಲಿ ಇರುಳು ನೋಡಿದ ಬಾವಿ ಗುರುಳಬಹುದೇ ನರರು ಈ ಜಗದೊಳು ಪ ಮರುಳು ಮಾಡುವ ಭವದುರುಳು ಬಂಧನದೊಳು ಸಿಗಲು ಬಯಸಬಹುದೇ ಅವಿವೇಕದಿ ಅ.ಪ ಅಡಿ ಐದು ಉದ್ದದ ಒಡಕು ಒಂಭತ್ತಿನ ಕಡು ದುಃಖ ದೇಹಕೆ ಸಿಡಿವುದು ತರವೆ ಪೊಡವೀಶನಾದರೂ ಮಡಿಯಲು ನಿನ್ನಯ ಸಡಗರವೆಲ್ಲವು ಹಿಡಿಯೊಳಗಲ್ಲವೇ 1 ಅನುದಿನದಲಿ ನೀನು ಹಣ ಹಣವೆನ್ನುತ ಕುಣಿಯುವುದನು ನೋಡಿ ಅಣಕಿಸುವರು ನಿನ್ನ ತನುಮನ ಕ್ಲೇಶವನನುಭವಿಸುತ ಸದಾ ಹಣವಗಳಿಸಲದನುಣುವರು ಬೇರಿಹರು 2 ಗೃಹಿಣಿ ಗೃಹಿಗಳೆಲ್ಲ ಕುಹಕವೆಂದರಿಯದೆ ಗೃಹವು ಎನ್ನದು ಎಂದು ಗೃಹಿಣಿ ಎನ್ನವಳೆಂದು ಬಹುವಿಧ ವೈಭವವೆನಗಿಹುದೆನ್ನುವ ಮಹದಾಗ್ರವನ್ನು ಸಹಿಸುವನೇ ಹರಿ 3 ಸಿರಿ ಸಂತತ ಗಳಿಸಲು ಅಂತಕ ತನುವನು ಸೆಳೆಯಲು ಗಳಿಸಿದ ಕಂತೆಗಳೆಲ್ಲವೂ ಎಂತು ನಿಲ್ಲಿಸುವುವು ಚಿಂತಿಸಿ ಮನದೊಳು ಹರಿಯನು ನಿಲಿಸೊ 4 ಊಹಿಸುತೆಲ್ಲವ ಈ ಮಹಿಯೊಳಗಿನ ಮೋಹವ ಜರಿಯುತ ಪಾಹಿ ಎಂದು ಆ ಮಹಾಮಹಿಮ ಪ್ರಸನ್ನ ಹರಿಯ ದಿವ್ಯ ಸ್ನೇಹಸುಜಲದ ಪ್ರವಾಹದೊಳಗೆ ನಲಿಯೊ 5
ಹರಿಹರಿ ಕೊಡು ನಿನ್ನಯಚ್ಚರನು ಶರಣವಾ ಧೃಡದಲಿ ಬಂದೆನಾನು ಪ ಅವಿದ್ಯೆಮಬ್ಬಿನಲಿ ಹರಿಬಂದ ಹಾವಿನ ಪರಿಯಾಗಿ ವಿವೇಕ ಯವಿಮುಚ್ಚಿಕಂಗಾಣದೆ ಸೇವೆಗೆ ಹೊರತಾದೆ 1 ನ್ಯೂನವ ನಾಲಿಸಲು ತಪ್ಪಿಗೆ ತಾನೆಣಿಕೆಗಳಿಲ್ಲಾ ಏನರಿಯದ ಮೂಢಾ ಇವನೆಂದು ನಿನುದ್ಧರಿಸೆನ್ನಾ 2 ಎಂದೆಂದು ಪ್ರೇಮದಲಿಂದಾ ಗೆಳೆತನಾ ಛೆಂದವೆನಗ ನಿನಗ | ಎಂದೇ ಮನೆಯೊಳಿದ್ದು ಮಾತಾಡದೇ ನಿಂದುದುಚಿತವಲ್ಲ 3 ಕಡೆಗಣ್ಣಿಲಿ ನೋಡೋ ಉದಾಸೀನ ನುಡಿಯ ಮಾಡಲಿಬೇಡ | ಒಡೆಯಾ ನಿನ್ನಂಘ್ರಿಮದಾ ದಾಸರಾ ಅಡಿಗಳಾಶ್ರಯದಲಿಡೋ 4 ಕಾಲಬಿದ್ದರವು ರಾಕುಡುವರು ಕೆಳೆಲೋ ಗಾದಿಯನು ಪಾಲಿಸೋಮಹಿಪತಿ ಸುತ ಪ್ರಭು ಒಲುಮೆಯಾ ಸುಖನೀಡೋ 5
(ಒರಳುಕಲ್ಲು ಪೂಜೆಯ ಪದ)ಜಯ ಹನುಮಂತ ಭೀಮ | ಜಯ ಸರ್ವಜ್ಞಾಚಾರ್ಯ |ಜಯ ಭಾರತೀಶಾ ನಿರ್ದೋಷಾ || ನಿರ್ದೋಷ ಶ್ರೀ ವ್ಯಾಸಲಯನೆ ನಿನ್ನಂಘ್ರೀಗೆರಗೂವೆ | ಸುವ್ವಿ ಸುವ್ವೀ ಸುವ್ವಾಲಾಲೆ ಪಮುದದಿಂದಾ ಶ್ರೀ ಹರಿಯಾ | ಮದಿವಿ ಹಮ್ಮೀಕೊಂಡು |ಪದುಮಾಕ್ಷಿಯರೆಲ್ಲಾ ಒರಳೀಗೇ || ಒರಳಿಗಕ್ಕಿ ಹಾಕಿಪದ ಪಾಡಿದದನೂ ಬಣ್ಣೀಪೇ1ದೇವಕಿ ಯಶೋದೆ ಶ್ರೀ | ದೇವಭೂತೇ ಕೌಸಲ್ಯ ಸ- |ತ್ಯವತಿ ನೀವೆಂಥ ಧನ್ಯರೇ || ಧನ್ಯಾರೆ ಪಡದು ಶ್ರೀ |ದೇವೇಶಗೆ ಮೊಲಿಯಾ ಕೊಡುವೀರಿ 2ಅಕ್ಷರಳೆ ಪರಮಾತ್ಮನ | ವಕ್ಷ ಸ್ಥಳ ಮಂದಿರೆ |ಲಕ್ಷೂಮಿದೇವಿ ಜಯಶೀಲೆ || ಜಯಶೀಲೆ ಎಮ್ಮನು |ಪೇಕ್ಷಿಸಿದೆ ಕಾಯೇ ವರವೀಯೇ 3ಅಚ್ಛಿನ್ನ ಭಕ್ತರು ನೀವಚ್ಯುತಗೆ ಮುಕ್ತಿಯಾ |ತುಚ್ಛವೆಂಬುವಿರೆ ಸರಸ್ವತೀ || ಸರಸ್ವತಿಭಾರತಿ|ನಿಶ್ಚೈಸಿ ಒರಳೀಗೊದಗೀರೆ 4ಅಕ್ಕಿ ಥಳಿಸಲಿ ಬಾರೆ | ಅಕ್ಕ ಸೌಪರಣಿ ಶ್ರೀ |ರಕ್ಕಸಾ ವೈರೀ ಮದುವೀಗೇ || ಮದುವೀಗೆವಾರುಣಿತಕ್ಕೊಳ್ಳೆ ಕೈಲಿ ಒನಕೀಯಾ 5ಕೂಸಾಗಿ ಇದ್ದಾಗ ಆ ಶಿವನೆ ಬರಲೆಂದು |ಪೋಷಿಸಿದೆ ದೇಹಾ ತಪಸೀದೆ || ತಪಸೀದೆ ಪಾರ್ವತಿನೀ ಶೀಘ್ರ ಬಾರೇ ಒರಳೀಗೆ6ಇಂದ್ರ ಕಾಮನಸತಿಯಾರಿಂದು ಬನ್ನಿರಿ ನಮ್ಮ |ಮಂದರೋದ್ಧರನಾ ಮದಿವೀಗೇ || ಮದುವೀಗೆ ಒರಳಕ್ಕಿ |ಛಂದದಿಂದಲಿ ಪಾಡಿ ಥಳಿಸೀರೇ 7ಶತರೂಪಿ ನೀ ಪ್ರೀಯ ವ್ರತ ಮೊದಲಾದವರನ್ನ |ಪತಿಯಿಂದ ಪಡದೂ ಅವನೀಯಾ || ಅವನೀಯ ಪಾಲಿಸಿದಪತಿವ್ರತೀ ಒನಕೀ ಕೈಕೊಳ್ಳೇ8ದೇವರಂಗನಿಯರಿಗೆ ಸಾವಧಾನದಿ ಜ್ಞಾನ |ನೀ ವರದೇ ಎಂಥಾ ಗುಣವಂತೇ || ಗುಣವಂತೆ ಕರುಣಾಳೆಪ್ರಾವಹೀ ಪಿಡಿಯೇ ಒನಕೀಯಾ 9ಅರುವತ್ತು ಮಕ್ಕಳನಾ ಹರುಷದಿಂದಲಿ ಪಡದು |ವರನೋಡಿ ಕೊಟ್ಟೀ ಪ್ರಸೂತೀ || ಪ್ರಸೂತಿ ನೀನುಹಂದರದ ಮನಿಯೊಳೂ ಇರಬೇಕೂ 10ಗಂಗಾದೇವಿ ಯಂಥ ಇಂಗಿತಜÕಳೆ ನೀನು |ಹಿಂಗಿಸಿದೆ ವಸುಗಳಪವಾದಾ || ಅಪವಾದ ತ್ರಯ ಜಗ-ನ್ಮಂಗಳೇ ಪಿಡಿಯೇ ಒನಕೀಯಾ 11ಅನಿರುದ್ಧಾಶ್ವಿನಿ ಚಂದ್ರ ಇನಕಾಲಾ ಸುರಗುರು |ವನತಿಯರೆ ಉಳಿದಾ ನವಕೋಟೀ || ನವಕೋಟಿ ಸುರರಮಾನಿನಿಯೇರು ಬಂದೂ ಥಳಿಸೀರೇ 12ಅನ್ಯರನ ಪಾಡಿದರೆಬನ್ನಬಡಿಸುವ ಯಮನು |ವನ್ನಜಾಂಬಕನಾಶುಭನಾಮಾ || ಶುಭನಾಮ ಪಾಡಿದರೆಧನ್ಯರಿವರೆಂದೂ ಪೊಗಳೂವಾ13ಈ ವ್ಯಾಳ್ಯದಲಿ ನೋಡಿ ನಾವು ಥಳಿಸೀದಕ್ಕಿ |ಪಾಪನ್ನವಾಗೀ ತ್ವರದಿಂದಾ || ತ್ವರದಿಂದ ನಮ್ಮ ಶ್ರೀಗೋವಿಂದನ ಶಾಸೀಗೊದಗಲೀ 14ಹೆಚ್ಚಿನಂಬರ ಉಟ್ಟು ಅಚ್ಚಿನ ಕುಪ್ಪುಸ ತೊಟ್ಟು |ಪಚ್ಚಾದಿ ರತ್ನಾಭರಣಿಟ್ಟೂ || ಇಟ್ಟು ಸುಸ್ವರಗೈದುಅಚ್ಯುತನ ಪಾಡೋರಿನಿತೆಂದೂ 15ಲಕ್ಕೂಮಿ ಪತಿಯಾಗಿ ಬಹು ಮಕ್ಕಳನ ಪಡದಿದ್ದಿ |ಇಕ್ಕೊಳ್ಳಿ ಈಗಾ ಮದುವ್ಯಾಕೇ || ಯಾಕೊನತರಾನಂದಉಕ್ಕೀಸುವದಕೆ ರಚಿಸೀದ್ಯಾ16ಎಂಂದಾಗೆದೊ ಶ್ರೀ ಮುಕುಂದ ನಿನ್ನಾ ಮದುವಿ |ಹಿಂದಿನಾ ಬ್ರಹ್ಮರರಿತಿಲ್ಲಾ || ರರಿತಿಲ್ಲಅವಿಯೋಗಿಎಂದು ಕರಸುವಳು ಶೃತಿಯೋಳೂ 17ಶೀಲಿ ಸುಂದರಿ ನಿನ್ನ ಆಳಾಗಿ ಇರುವಳು |ಶ್ರೀ ಲಕ್ಷ್ಮೀ ನೀನು ಸ್ವರಮಣಾ || ಸ್ವರಮಣನಾಗೆವಳಮ್ಯಾಲೆ ಮದುಪ್ಯಾಕೊ ಭಗವಂತಾ18ಆರು ಮಹಿಷಿಯರು ಹದಿನಾರು ಸಾವಿರ ಮ್ಯಾಲೆ |ನೂರು ನಾರಿಯರೂ ಬಹುಕಾಲಾ || ಬಹುಕಾಲ ಬಯಸಿದ್ದುಪೂರೈಸಿ ಕೊಟ್ಯೋ ದಯಸಿಂಧು 19ವೇದನೆಂಥಾ ಪುತ್ರ ವೇದನಂತಾ ಬಲ್ಲ |ವೋದುವಾ ನಿರುತಾ ನಿನ ಪೌತ್ರಾ || ಪೌತ್ರೌ ನಿಮ್ಮಣ್ಣ ಸ್ವ-ರ್ಗಾಧಿಪತಿ ಎಂದೂ ಕರಸೂವ 20ಜಗವ ಪಾವನ ಮಾಳ್ಪ ಮಗಳೆಂಥ ಗುಣವಂತಿ |ಅಗಣಿತಜ್ಞಾನವಂತಾರೊ || ಜ್ಞಾನವಂತರೊ ನಿನ್ನಯುಗಳಸೊಸಿಯರೂ ಪರಮಾತ್ಮಾ21ಈ ವಸುಧಿಯೊಳಗೆಲ್ಲಾ ಆವಶುಭಕಾರ್ಯಕ್ಕೂ |ದೇವೇಶ ನಿನ್ನಾ ಸ್ಮರಿಸೋರೋ || ಸ್ಮರಿಸುವರೊ ನಿನ ಮದುವಿ-ಗಾಂವೀಗ ನಿನ್ನೇ ನೆನೆವೇವೊ 22ಅಕ್ಲೇಶಾ ಅಸಮಂಧಾ ಶುಕ್ಲಶೋಣಿತದೂರಾ |ಹಕ್ಲಾಸುರಾರೀ ದುರಿತಾರೀ || ದುರಿತಾರಿ ಅಸಮ ನಿ-ನ್ನೊಕ್ಲಾದವರಗಲೀ ಇರಲಾರೀ 23ವೇದವೆಂಬದು ಬಿಟ್ಟು ಭೂ ದಿವಿಜಾರಮರಾರು |ಮಾಧವನ ಗುಣವಾ ಪೊಗಳೂವಾ || ಪೊಗಳುವಾ ಸುಸ್ವರವಾಶೋಧಿಸೀ ಕೇಳೂತಿರುವಾರೂ 24ಕಾಮಾದಿಗಳ ಬಿಟ್ಟು ಸೋಮಪರ ರಾಣಿಯರು |ಸ್ವಾಮಿಯ ವಿವಾಹಾ ನಾಳೆಂದೂ || ನಾಳೆಂದರಿಷಿಣದಕ್ಕೀಹೇಮಾಧರಿವಾಣಕ್ಕಿರಿಸೋರೂ25ಜಯ ಮತ್ಸ್ಯಾ ಕೂರ್ಮಾಕಿಟಿಜಯ ನರಸಿಂಹಾ ಋಷಿಜ |ಜಯ ರಾಮಕೃಷ್ಣಾ ಶ್ರೀ ಬುದ್ಧಾ || ಶ್ರೀಬುದ್ಧಕಲ್ಕಿ ಜಯಜಯ ದತ್ತಾತ್ರಯಶುಭಕಾಯಾ 26ಆನಂದಾದಿಂದಾ ಸುರ ಮಾನಿನಿಯಾರಾಡೀದ |ಈ ನುಡಿಯಾ ಪಾಡೀದವರೀಗೆ || ಅವರಿಗಿಹಪರದಲ್ಲಿಪ್ರಾಣೇಶ ವಿಠಲಾ ಒಲಿವೋನೂ 27
139-2ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ವಿಜಯದಾಸರಲಿ ಗೋಪಾಲದಾಸರಲಿನಿಜ ಗುರುಭಕ್ತಿ ವರ್ಧಿಸಿ ಹರಿದಾಸನಿಜಪಂಥದಿ ತನ್ನ ಸೇರಿಸೆ ಅನುಗ್ರಹಿಸೆನಿಜಭಾವದಲಿ ಆಚಾರ್ಯ ಬೇಡಿದರು 1ನರಸಿಂಹ ದಾಸರಾಗಿಹ ತಂದೆಮುಖದಿಂದವರಗಾಯತ್ರಿ ಮಂತ್ರ ಉಪದಿಷ್ಟರಾಗಿವರದೇಂದ್ರರಲಿ ಮೂಲಟೀಕಾದಿ ಗ್ರಂಥಗಳುಮಂತ್ರೋಪದೇಶವು ಕೊಂಡವರು ಮೊದಲೇ 2ಶ್ರೀನಿವಾಸಾಚಾರ್ಯರ ಕೋರಿಕೆಯಮನ್ನಣೆಮಾಡಿದರು ದಾಸಾರ್ಯರುಘನಮಹಾಸಚ್ಛಾಸ್ತ್ರ ತತ್ತ್ವ ವಿಷಯಗಳಕನ್ನಡಮಾತಲ್ಲಿ ಬೋಧಿಸಿದರು 3ಪ್ರಣವಹರಿ ಜಾಗ್ರದಾದ್ಯವಸ್ಥಾ ಪ್ರಣಯನಕೃಷ್ಣರಾಮ ನಾರಸಿಂಹವರಾಹವಿಷ್ಣು ಪರಂಜ್ಯೋತಿ ಪರಂಬ್ರಹ್ಮವಾಸುದೇವಏನೆಂಬೆ ಶ್ರೀಶ ಗುಣಕ್ರಿಯಾ ರೂಪಮಹಿಮೆ 4ಗಾಯತ್ರಿ ನಾಮಆಮ್ನಾಯಗಾಯನ ಮಾಡಿದಯದಿ ಜಗವೆಲ್ಲ ರಕ್ಷಿಸುವ ಸ್ವಾಮಿಹಯಗ್ರೀವ ಗಾಯತ್ರಿ ಮಂತ್ರ ಪ್ರತಿಪಾದ್ಯನುನಾರಾಯಣವಾಸುದೇವವೈಕುಂಠ5ತ್ರಾತಹಯ ಶೀರ್ಷನೆ ಗಾಯತ್ರಿ ನಾಮನುಭೂತಪೂರ್ಣ ವಾಗ್ವಶಿ ಶರೀರವ್ಯಾಪ್ತಪೃಥ್ವಿ ಆಶ್ರಯ ಪ್ರಾಣಾಧಾರ ಹೃದಯನುತ್ರಿಧಾಮ ಪಾದತ್ರಯ ಜಗತ್ಪಾದ ಸದೃಶ 6ಜ್ಞಾನ ಸುಖಬಲಪೂರ್ಣ ಸರ್ವ ಆಧಾರನುದಿನಪತೇಜಃ ಪುಂಜಚೇಷ್ಟಕ ಸ್ಫೂರ್ತಿದನುವನಜಜಾಂಡದ ಸರ್ವಕರ್ತನೂ ದೇವಭಜನೀಯ ಧ್ಯಾತವ್ಯ ಶ್ರೀ ನಾರಾಯಣನು 7ವರ್ಣಗಳು ನಿತ್ಯವು ವರ್ಣಾಭಿಮಾನಿಗಳೊಳ್ವರ್ಣಪ್ರತಿಪಾದ್ಯಹರಿ ಶ್ರೀ ಸಹ ಇಹನುಪೂರ್ಣ ಸುಗುಣಾರ್ಣವನುನಿರ್ದೋಷಸರ್ವಜಗತ್ಜನ್ಮಾದಿ ಕರ್ತನು ನಿಗಮೈಕವೇದ್ಯ 8ಶಬ್ದಗಳು ಸರ್ವವೂ ಮುಖ್ಯ ವೃತ್ತಿಯಲಿಮಾಧವನ್ನಲ್ಲಿಯೇ ವಾಚಕವಾಗಿವೆಯುವೈದಿಕ ಶಬ್ದಗಳು ಹರಿಗೇವೆ ಅನ್ವಯವುಸಂಸ್ತುತ್ಯ ದ್ರಷ್ಟವ್ಯ ಅನುಪಮೈಕಾತ್ಮ 9ಸತ್ಯಜ್ಞಾನಾನಂತಆನಂದಮಯಹರಿಯೆಶ್ರೋತವ್ಯ ಮಂತವ್ಯ ನಿಧಿ ಧ್ಯಾಸಿತವ್ಯವ್ಯಾಪ್ತನು ಸರ್ವತ್ರ ಸರ್ವದಾ ಸರ್ವಕ್ಕೂಆಧಾರ ಅಕ್ಷರನು ಕ್ಷರಾಕ್ಷರೋತ್ತಮನು 10ರಾಜಿಸುತಿಹ ನಮ್ಮ ದೇಹಾಖ್ಯ ರಥದಲ್ಲಿರಾಜರಾಜೇಶ್ವರನು ಶ್ರೀ ಹ್ರೀ ಸಮೇತಯುವರಾಜ ವಾಯುದೇವನ ಸೇವೆಕೊಳ್ಳುತಿಹರಾಜೀವೇಕ್ಷಣಹರಿಪ್ರಾಣನಾಮ11ಪ್ರಸ್ಥಾನತ್ರಯ ವೈದಿಕಶಾಸ್ತ್ರ ವಿಷಯಗಳುಇತಿಹಾಸಭಾಷಾತ್ರಯಪುರಾಣಗಳುಪ್ರತಿರಹಿತ ಸರ್ವೋತ್ತಮ ಸ್ವಾಮಿ ಶ್ರೀಶನ್ನಚಿಂತಿಸಿ ಕಾಣಲುಬಗೆ ತೋರಿಸುತಿವೆ 12ಆಚರಿಸಿ ಜ್ಞಾನ ಪೂರ್ವಕವಿಹಿತಕರ್ಮಅಚ್ಚಭಕ್ತಿಯಿಂದ ಚಿಂತಿಸಿ ಸ್ತುತಿಸೆಅಚ್ಚುತ ಸ್ವತಂತ್ರನು ಮುಖ್ಯ ಕಾರಣ ವಿಷ್ಣುಪ್ರೋಚ್ಯ ಸುಖವೀವನು ತೋರಿತಾ ಒಲಿದು 13ಮಧ್ವಮತ ಸಿದ್ಧಾಂತ ಪದ್ಧತಿ ಅನುಸರಸಿಸದನು ಸಂಧಾನ ಭಕ್ತಿ ಉನ್ನಾಹದಿಮಾಧವನ ಗುಣಕ್ರಿಯಾ ರೂಪಗಳ ಕೊಂಡಾಡಿಪದವಾಕ್ಯ ಶ್ಲೋಕ ಪದ್ಯಗಳ ನುಡಿಯುವುದು 14ಒಂದೊಂದು ಕೀರ್ತನೆ ಪದ್ಯ ಗ್ರಂಥಗಳಲ್ಲೂಇಂದಿರೇಶನು ತತ್ತತ್ ಪ್ರತಿಪಾದ್ಯ ಇಹನುಪದ್ಯ ಕೀರ್ತನೆ ಗ್ರಂಥ ವಿಷಯ ಶ್ರೀಹರಿಯಮಂತ್ರ ಚಿಂತಿಸಿ ಅರ್ಪಿಸಬೇಕು ರಚನೆ 15ಬೃಹತೀ ಸಹಸ್ರಸ್ವರ ವ್ಯಂಜನಾಕ್ಷರ ವಾಚ್ಯಶ್ರೀಹರಿಅಹರ್ನಿಶಿಕಾಯುವ ದಯಾಳುಅಹರಹ ಸದುಪಾಸ್ಯ ಬ್ರಹ್ಮ ಶಿವ ಈಡ್ಯನುದೇಹ ಒಳಹೊರಗಿಪ್ಪ ಸರ್ವಾಂತರ್ಯಾಮಿ 16ಸ್ವತಃ ಅವ್ಯಕ್ತನು ಸರ್ವದಾ ಸರ್ವತ್ರಸ್ವತಂತ್ರ ಪೂರ್ಣಜ್ಞಾನ ಆನಂದರೂಪಸ್ವಪ್ರಯತ್ನದಿ ಅಲ್ಲ ಮುಮುಕ್ಷುಗಳಿಗಪರೋಕ್ಷಮೋದಮಯ ಶ್ರೀಹರಿಯ ಪ್ರಸಾದದಿಂದಲೇ 17ಜ್ಞಾನಿಗೆ ಪ್ರತ್ಯಕ್ಷ ಹರಿಯ ಅವ್ಯಕ್ತತ್ವಅನ್ಯರಿಗೆ ವೇದ್ಯ ಸೂಕ್ಷ್ಮತ್ವಾನುಮಾನದಿತನ್ಮಾತ್ರ ತೇಜಸ್ಸು ಭೌತಿಕವು ಎಂಬಂಥಅಗ್ನಿಯ ಸೂಕ್ಷ್ಮತ್ವ ಸ್ಥೂಲತ್ವವೋಲ್ಲ 18ಎಲ್ಲೆಲ್ಲೂ ಎಂದೆಂದೂ ಏಕಪ್ರಕಾರದಲ್ಲಿಳಾಳಕನು ಅವ್ಯಕ್ತರೂಪ ಇರುತಿಹನುಇಲ್ಲ ಇವಗೆ ಎಂದೂ ಎಲ್ಲೂ ಪ್ರಾಕೃತರೂಪಒಲಿದು ಕಾಣುವ ತನ್ನ ಇಚ್ಛೆಯಿಂದಲೇ 19ಮೂಲರೂಪದಿ ಸೂಕ್ಷ್ಮತ್ವ ಅವತಾರಗಳಲಿಸ್ಥೂಲತ್ವವೆಂಬುವ ವಿಶೇಷವು ಇಲ್ಲಇಳೆಯಲ್ಲಿ ಕೃಷ್ಣಾದಿ ರೂಪಗಳ ಕಂಡದ್ದುಮಾಲೋಲನಿಚ್ಛೆಯೇ ಪುರುಷಯತ್ನದಿ ಅಲ್ಲ 20ಅರೂಪಮ ಕ್ಷರಂಬ್ರಹ್ಮ ಸದಾವ್ಯಕ್ತಂಆತ್ಮಾವರೇ ದ್ರಷ್ಟವ್ಯ ಎಂದುಈ ರೀತಿ ಅವ್ಯಕ್ತತ್ವ ಅಪರೋಕ್ಷತ್ವಎರಡು ಪೇಳುವಶ್ರುತಿವಿರೋಧವು ಇಲ್ಲ21ಆರಾಧನಾದಿ ಪ್ರಯತ್ನಕ್ಕೂ ಅವ್ಯಕ್ತಉರುಸುಖಮಯಅಪ್ರಾಕೃತಅವಿಕಾರಿಪರಮಪುರುಷ ಹರಿಯ ಇಚ್ಛಾಪ್ರಸಾದದಿಂಅಪರೋಕ್ಷಮೋಕ್ಷಗಳು ಲಭ್ಯಯೋಗ್ಯರಿಗೆ22ವನಜನಾಭನರೂಪಗುಣಮಹಿಮೆಕೇಳಿಅನುಭವಕೆ ಬರುವಂಥ ಮನನ ಸುಧ್ಯಾನಅನಘಹರಿಯಲಿ ಭಕ್ತಿ ಸುಖಬಾಷ್ಪ ಸುರಿಸೆತನ್ನಿಚ್ಚೆಯಿಂದಲೆ ಅಪರೋಕ್ಷವೀವ 23ಬ್ರಹ್ಮಪುರವನರುಹವೇಷ್ಮವ್ಯೋಮಸ್ಥದೇಹ ಸರ್ವಾಂಗಸ್ಥ ಸರ್ವನಾಡಿಸ್ಥಬಹಿರಂತರ ಸರ್ವಮೂರ್ತಾ ಮೂರ್ತಸ್ಥಮಹಾಮಹಿಮ ಹರಿಯು ಸರ್ವತ್ರ ಪ್ರಸಿದ್ಧ 24ಸರ್ವತ್ರ ವ್ಯಾಪ್ತನು ಸತ್ತಾದಿ ದಾತನುಸರ್ವದೊಳು ಸದಾಪೂರ್ಣಅಖಿಳಸಚ್ಛಕ್ತಸರ್ವೇಶ ಸರ್ವಾಧಾರನಾಗಿಹ ಸ್ವಾಮಿದೇವಿ ಲಕ್ಷ್ಮೀರಮಣ ವಿಷ್ಣು ನರಸಿಂಹ 25ಉಗ್ರವೀರನು ಮಹಾವಿಷ್ಣು ತೇಜಃಪುಂಜಸುಪ್ರಕಾಶಿಪ ಸರ್ವತೋಮುಖ ನೃಸಿಂಹಅರಿಗಳಿಗೆ ಭೀಷಣನು ಭಕ್ತರಿಗೆ ಇಷ್ಟಪ್ರದಸಂರಕ್ಷಕ ನಮೋ ಮೃತ್ಯುಗೇ ಮೃತ್ಯು 26ಪ್ರೋದ್ಯರವಿನಿಭದೀಪ್ತ ವರ್ತುಲ ನೇತ್ರತ್ರಯಹಸ್ತದ್ವಯ ಆಜಾನು ಮಹಾಲಕ್ಷ್ಮಿಯುತನುಸುದರ್ಶಿನಿ ಶಂಖಿಯುತ ಕೋಟ್ಯಾರ್ಕಾಮಿತತೇಜಉತ್ಕøಷ್ಟಅಖಿಳಸಚ್ಛಕ್ತ ನರಸಿಂಹ27ಇಂಥಾ ವಿಷಯಗಳ ಜಿಜ್ಞಾಸ ಉಪದೇಶಹಿತಮಾತ ಗೋಪಾಲದಾಸಾರ್ಯರಿಂದಮುದದಿಂದ ಶ್ರೀನಿವಾಸ ಆಚಾರ್ಯರು ಕೊಂಡುಪಾದಕೆರಗಿಹರಿಅಂಕಿತ ಬೇಡಿದರು28ವಾರಿಜಾಸನ ಪಿತನ ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 29- ತೃತೀಯ ಕೀರ್ತನೆ ಸಂಪೂರ್ಣಂ -
435(ಅ)ನಮೋ ಯತಿಕುಲಶಿಖಾಮಣಿಯೆ ಸುಗುಣನಿಧಿಯೆಮತಿಮತಾಂವರ ಮಾನಿನೇ ಪ.ಭುವನೇಂದ್ರತೀರ್ಥ ಯತಿಪ್ರವರಕರಸಂಜಾತಸುವಿವೇಕಿ ವರದೇಂದ್ರಕರಸಂಭವಾಯಅವಿಕಳಾನಂದ ವೈಷ್ಣವನಿವಹಗೀರ್ವಾಣತ-ರವ ಸುಕೃತೇಂದ್ರ ಸದ್ಗುರುವೆ ನಮೋಸ್ತುತೇ 1ಕಾಶೀಮಠಾದಿಪತಿಯೇ ಸುಸನ್ಯಾಸಿಯೇ ಸ(ತ್ತ್ವ) ಗುಣಭೂಷಾಯ ತೇವ್ಯಾಸ ರಘುಪತಿಚರಣದಾಸವತ್ಪೂಜಕ ವಿ-ಶೇಷಭಕ್ತಿಜ್ಞಾನಶಾಲಿನೇ ತುಭ್ಯಂ2ಆಜಾನುಬಾಹುವೇ ಗೌಡಸಾರಸ್ವತ ಮ-ಹಾಜನಸಮಾಜಮಂಡಲವಾಸಿನೇರಾಜೀವನಯನಾಯ ನಮಿತಜನನಿಕರ ಸುರಭೂಜಾಯಭೂರಿರವಿತೇಜಸ್ವಿನೇ3ತುಷ್ಟಾಯ ಭಾಗವತನಿಷ್ಟಾಯ ದ್ವಿಜಕುಲವರಿಷ್ಠಾಯ ಷಡ್ವರ್ಗಜಿಷ್ಣವೇ ತುಭ್ಯಂದುಷ್ಟ ಜನ ದೂರಾಯ ಧೀರಾಯ ಭಕ್ತದ-ತ್ತೇಷ್ಟಾಯ ಮಹತೇ ಸಹಿಷ್ಣವೇ ಮಹತೇ 4ಬ್ರಹ್ಮಚರ್ಯಾದಿ ವ್ರತಧರ್ಮಾತ್ಮನೇ ವಿಹಿತಕರ್ಮಣೇ ಸುಕೃತೇಂದ್ರ ಶರ್ಮಣೇ ತುಭ್ಯಂಬ್ರಹ್ಮಪಿತ ಲಕ್ಷ್ಮೀನಾರಾಯಣಾಂಘ್ರಿಧೃತಿ ಸು-ನಿರ್ಮಲಾಂತಃಕರಣ ಕರುಣನೀರಧಯೇ 5
ಇಂಥಾತನು ಗುರುವಾದದ್ದು ನಮಗೆ ಇ-ನ್ನೆಂಥಾ ಪುಣ್ಯದ ಫಲವೊ. ಪಚಿಂತೆಯಿಲ್ಲದೆ ಅತಿ ಸುಲಭದಿಂದಲಿ ಶ್ರೀಕಾಂತನ ಕಾಣಲಿಕ್ಕಾಯಿತುಪಾಯ ಅ.ಪತಾನು ಇಲ್ಲದೆ ಈ ಜಗದೊಳು ಹರಿಯಿಪ್ಪಸ್ಥಾನವಿಲ್ಲವೆಂದು ಸಾರಿದಹೀನ ದೈವಗಳ ನಂಬಿದ ಜನರಿಗೆ ತನ್ನಙ್ಞÕನದಿಂದಲಿ ಹರಿಯ ತೋರಿದ ||ನಾನಾ ಜೀವಿಗಳ ಒಳಗೆ ಹೊರಗೆ ಇದ್ದುತಾನೇ ಮುಖ್ಯನಾಗಿ ಮೀರಿದ |ಶ್ರೀನಾರಾಯಣನೆಂದು ಪೇಳುವರಿಗೆ ತನ್ನಧ್ಯಾನದಿಂದಲಿ ಮುಕ್ತಿಮಾರ್ಗವ ತೋರಿದ 1ಪನ್ನಗಪತಿ-ಗರುಡ-ರುದ್ರ-ಇಂದ್ರಾದ್ಯರಿಗೆಉನ್ನತ ಗುರುವಾಗಿ ಮೀರಿದ |ಘನ್ನವಾದ ಶ್ರುತಿತತಿಗಳಿಂದಲಿ ಜೀವಭಿನ್ನನು ಎಂತೆಂದು ತೋರಿದ ||ಹೊನ್ನು ಹೆಣ್ಣು ಮಣ್ಣಿನಾಶೆಯಿಲ್ಲದೆ ಅವಿ-ಚ್ಛಿನ್ನ ಭಕುತಿಯಿಂದ ಮೆರೆದ |ಚೆನ್ನಾಗಿ ಭಕುತಿ ವೈರಾಗ್ಯಗಳಿಂದಲಿ |ತನ್ನ ನಂಬಿದ ಭಕುತರ ಪೊರೆದ 2ಈರೇಳು ಲೋಕಂಗಳಿಗೆ ತಾನೇ ಮುಖ್ಯ ಆ-ಧಾರವೆಂಬುದ ಕಲಿಸಿದ |ಭಾರಣೆಯಿಂದಲೊಪ್ಪುತ ಬಲು ಹರುಷದಿಭಾರತಿಯನು ಒಲಿಸಿದಮೂರೇಳು ದುರ್ಭಾಷ್ಯಗಳ ಕಾನನವ ಕು-ಕಾರದಂತೆ ಕಡಿದಿಳಿಸಿದಸೇರಿ ಶ್ರೀಪುರಂದರ ವಿಠಲನಂಘ್ರಿಗಳಧೀರ ಪೂರ್ಣಪ್ರಙ್ಞÕಚಾರ್ಯರೆಂದೆನಿಸಿದ 3
ಇರಲೇ ಬಾರದು - ಇಂಥಲ್ಲಿಇರಬಾರದಿಂದ ......... ವರೆ ಭಯಂಕರದುರುಳ ಜನ ಸಹವಾಸದಲ್ಲಿ ದುಷ್ಟಮೃಗವಿದ್ದಡವಿಯಲ್ಲಿಉರಗಗಳು ಸೇರಿಕೊಂಡ ಸದನಗಳಲ್ಲಿಕರುಬರಿದ್ದ ಊರಗಳಲಿ ಕಲಹ ಹೆಚ್ಚಿದ ರಾಜ್ಯದಲ್ಲಿಪರಹಿಂಸೆಯ ಮಾಡಲಂಜದ ಪಾಪಿಗಳಿದ್ದಲ್ಲಿ 1ಅವಿವೇಕದ ಪ್ರಭುಸೇವೆಯಲ್ಲಿ ಆತ್ಮಸೌಖ್ಯವಿಲ್ಲದಲ್ಲಿಲವಶೇಶವು ಸದ್ವಿದ್ಯಾ ಮಾತ್ರ ಲಾಭವಿಲ್ಲದಲ್ಲಿನವಯೌವನಭರಿತ ನಾರಿ ತಾನೊಬ್ಬಳಿದ್ದಲ್ಲಿಅವನಿಯೊಳಗರ್ಥಪ್ರಾಪ್ತಿಇಲ್ಲದಂಥಲ್ಲಿ2ಮಾನವಲ್ಲದ ಸಭೆಯಲ್ಲಿ ಮಾತ ಕದಿವ ನ್ಯಾಯದಲ್ಲಿನೂನ್ಯಪೂರ್ಣ ಎನ್ನವವನ ಉಟ್ಟಕಾಲದಲ್ಲಿಶ್ರೀನಾಥ ಶ್ರೀ ಪುರಂದರವಿಠಲ ರೂಪಗಳುಅನಂತಾನಂತವೆಂದು ಅರಿಯದ ಅದ್ವೆಷ್ಣವರಲ್ಲಿ 3
ಎಲ್ಲಿ ಪೋಯಿತೊ ಅವಿದ್ಯಾಪಟಲ ಕಾಣೆ ನಾನುಶರಣರ ಪಾದರಜಸ್ಪರುಶ ಸಂಭೂತವಾದಅನಘಒಡನೆ ಮಧ್ವಮುನಿ ಸರೋವರದಿತೇರಿನೊಳಗೆ ನಿನ್ನ ವಿಹಾರ ಮೈ-ಅನಾದಿಯಿಂದ ಬಂದದ್ದುಅದರ ಸಂಬಂಧಿಗಳುಕದನಗ-
ಏನು ಗತಿಯೊ ರಂಗ ನಾ ನಿನ್ನವನಾಗಿಜ್ಞಾನದಂತಿರಲಿಲ್ಲವೊ ಪ.ಉಂಡುಂಡುತುಡುಗಕೋಣನಪರಿಸೊಕ್ಕಿದೆಕಂಡಲ್ಲಿ ಕುಳಿತೆ ನೊಣನ ತೆರದಿಭಂಡು ಭೂತದ ಮಾತನಾಡಿ ಭಂಡನಾದೆಪುಂಡರೀಕಾಕ್ಷನನ್ನಂಥ ಪಾತಕಿಗೆ1ಬಲು ಶಾಸ್ತ್ರಶ್ರವಣೆಂಬುವ ಮಳೆಗರೆದರೇನುಕಲುಗುಂಡಿನಂತೆ ಕೆಟ್ಟೆದೆ ತೊಯ್ಯದುಹಲವು ಅಧ್ಯಾತ್ಮವನುಸುರೇನು ಚಿತ್ತದಕಳವಳಿ ನಿಲಿಸಲಾರದ ಪಾಮರಗೆ 2ಭವಸುಖ ಉಂಬಾಗ ನೋವು ಬೇವಾದಾಗತವಕದಿ ನುಡಿವಾಗ ಕನಸಿನಾಗಅವಿರಳಅಚ್ಯುತನಿನ್ನಂಘ್ರಿ ನೆನೆದೀಶಅವಸರಕೊದಗೆಂದೆ ಪ್ರಸನ್ವೆಂಕಟೇಶ 3
ಘನಾನಂದ ನಿಬಿಡವು ತಾನೇ ತಾ |ಮನಬುದ್ಧಿಗಳು ಏನಿಲ್ಲಪಮಹಾಮಾಯಾಮಾಯಾಅವ್ಯಾಕೃತಿ |ಆಹಿರಣ್ಯಗರ್ಭವಿರಾಟಲ್ಲ1ಸ್ಥೂಲ ಸೂಕ್ಷ್ಮ ಕಾರಣ | ಮಹಾಕಾರಣಜಾಗ್ರತ್, ಸ್ವಪ್ನ, ಸುಷುಪ್ತಿಉನ್ಮನಿಬೆಳಕೆಲ್ಲ ||ಇದ್ದದ್ದು ಶಂಕರನ ಸುಖವಲ್ಲವೆ |ವಿದ್ಯಾ ಅವಿದ್ಯೆಯ ಕಲಕಿಲ್ಲ ||
ಚಿಂತೆಗೆಣಿಕೆ ಇಲ್ಲದಂತಾಗಿ ಎನ್ನಂತರಂಗದ ಕ್ಲೇಶಕೆಂತೌಷಧ ರಂಗ ಪ.ಒಂದು ದೊರೆತರೆ ಇನ್ನೊಂದಾಗಲುಬೇಕುಮಂದಿರವಿರಲು ಮೇಲಟ್ಟ ಬೇಕುಮಂದಮತಿಸತಿಇನ್ನೊಬ್ಬ ಸುಗುಣಿ ಬೇಕುಎಂದೆಂದು ಬೇಕೆಂಬ ನುಡಿಗುಂದದು ರಂಗ 1ಅವಭೋಗಿ ಅವಗಿಂತ ಮೀರ್ವೆನೆಂಬುವ ಹವಣುಅವನ ವಿದ್ಯಕೆ ಹೆಚ್ಚಲೆಂಬ ಹವಣುತವಕದಿ ಸಂಪದ ಮೇಳವಿಸುವ ಹವಣುಅವಿರಳ ಹವಣಕೆ ಕಡೆಗಾಣೆ ರಂಗ 2ರೂಢಿಲಿ ಸಿರಿವಂತರ ಮುಂದೆಖೋಡಿಮಾತಾಡಿ ಗುದ್ದಿಸಿಕೊಂಡ ನರನಂತೆನೋಡ ಪ್ರಸನ್ವೆಂಕಟೇಶಅಲ್ಲದಕೃತ್ಯಮಾಡಿ ಕ್ಲೇಶವನುಂಡೆ ನಿನ್ನ ಬೇಡದೆ ರಂಗ 3
ತಂದೆ ಪುರಂದರದಾಸರ ಸ್ಮರಿಸುವೆ ಎನ್ನಮಂದಮತಿಗಳೆದು ಹರಿಭಟನೆನಿಸುವೆ ಪ.ಗುರುವ್ಯಾಸರಾಜರ ಚರಣಾಬ್ಜ ಷಟ್ಚರಣನವಿರತಿಭಕುತಿ ಜ್ಞಾನದಾರ್ಣವನವರಉಪನಿಷದ್ವಾರಿನಿಧಿಗೆ ತಿಮಿಂಗಿಲನಹನಧರೆಯ ಕವಿಕುಲ ಶಿಖಾಮಣಿಯೆನಿಪನ 1ದಿನ ದಿನ ಯದೃಚ್ಛಾರ್ಥಲಾಭದಲಿ ತುಷ್ಟನಕನಕಲೋಷ್ಠ ಸಮಾನದೀಕ್ಷಿಸುವನಘನಸಿದ್ಧಿಗಳು ತಾವೆ ಬರಲೊಡಂಬಡದನಹರಿಗುಣಕೀರ್ತನೆಯಲ್ಲಿ ಪರವಶದಿಹನ2ಭವಜಲಧಿ ಗೋಷ್ಪದಕೆ ಸರಿದಾಟಿ ಕಾಮ ಕ್ರೋಧವಮೆಟ್ಟಿ ಭಕ್ತಿಸುಧೆಯುಂಡು ತೇಗಿಭುವಿಯಲ್ಲಿ ನಿಜಕೀರ್ತಿಯನು ಹರಹಿ ಪವನಮತದವರೆನಿಪ ದಾಸರಿಗೆ ತವರೂಪ ತೋರಿದನ 3ಕವನೋಕ್ತಿ ಮಳೆಗರೆದು ಹರಿದಾಸ ಪೈರ್ಗಳಿಗೆಅವಿರಳಾನಂದವಿತ್ತಥಿರ್üಸುವನನವಭಕುತಿ ಮನಗಂಡು ಸವೆಯದಾನಂದಪುರ ಪಥವನು ತೋರಿಸಿದಂಥ ಬಹುಕೃಪಾಕರನ 4ಗೀತ ಠಾಯಿ ಸುಳಾದ್ಯುಗಾಭೋಗ ಪದ್ಯಪದವ್ರಾತಪ್ರಬಂಧ ರಚಿಸಿ ವಿಠಲನಪ್ರೀತಿ ಬಡಿಸಿ ಕಂಡು ನಲಿವ ವೈಷ್ಣವಾಗ್ರನಾಥ ಪ್ರಸನ್ವೆಂಕಟ ಕೃಷ್ಣಪ್ರಿಯನ 5