ಒಟ್ಟು 1269 ಕಡೆಗಳಲ್ಲಿ , 91 ದಾಸರು , 959 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇರಬೇಕು ನಿಂದಕರು ಸಜ್ಜನರಿಗೆ ಪ ದುರಿತ ರಾಶಿಗಳ ಪರಿಹರಿಸಲೋಸುಗ ಅ.ಪ. ಕಲುಷ ಕರ್ಮವ ಮಾಡೆ ಕಳೆವರಿನ್ನಾರೆಂದು ಕಮಲಭವನು ತಿಳಿದು ನಿರ್ಮಿಸಿದವನಿಯೊಳಗೆ ನಿಂದಕರ ಕಲುಷರನ ಮಾಡಿ ತನ್ನವರ ಸಲಹುವ 1 ದಿವಿಜರಿಳೆಯೊಳಗೆ ಜನ್ಮಗಳೊಲ್ಲೆವೆಂದಬ್ಜ ಭವಗೆ ಮೊರೆಯಿಡಲು ವರವಿತ್ತನಂದು ಕರ್ಮ ಮಾಡಿದರು ಸರಿಯೆತ ನ್ನವನೆನಿಸದವಗೆ ತಜ್ಜನ್ಯ ಫಲ ಬರಲೆಂದು 2 ಮಾನವಾಧಮ ಜನರು ನೋಡಿ ಸಹಿಸದಲೆ ಹೀನ ಮತಿಯಿಂದ ಮಾತುಗಳಾಡಲು ಭಾನು ಮಂಡಲಕೆ ಮೊಗವೆತ್ತಿ ಉಗುಳಿದರೆ ನ್ನಾನನವೆ ತೊಯ್ವುದಲ್ಲದರ್ಕಗೇನಪಮಾನ 3 ಮಲವ ತೊಳೆವಳು ತಾಯಿ ಕೈಗಳಿಂದಲಿ ನಿತ್ಯ ತೊಳೆವ ನಿಂದಕ ತನ್ನ ನಾಲಗಿಂದ ಬಲು ಮಿತ್ರನಿವನೆಂದು ಕರೆದು ಮನ್ನಿಸಬೇಕು ಹಲವು ಮಹ ಪಾಪಗಳ ಕಳೆದು ಪುಣ್ಯವನೀವ 4 ಅನುಭವಿಪ ದುಷ್ಕರ್ಮಗಳ ಜನ್ಯ ಫಲವು ತ ನ್ನಣುಗರಿಗೆ ಅಪವಾದ ರೂಪದಿಂದ ಉಣಿಸಿ ಮುಕ್ತರ ಮಾಡಿ ಸಂತೈಪ ನರಕ ಯಾ ತನೆಗಳವರಿಗೆ ಇಲ್ಲದುದರಿಂದ ಎಂದೆಂದೂ 5 ಮನುಜಾಧಮರಿಗೆ ಹರಿದಾಸರಲಿ ದ್ವೇಷ ವೆನಿಪ ಸಾಧನವೆ ನಿಸ್ಸಂದೇಹವು ಅನುತಾಪ ಬಿಡದೆ ಹರುಷಿತರಾಗಿ ನಿಷ್ಪ್ರಯೋ ಜನದಿ ಹರಿಪದಾಬ್ಜ ಭಜಿಪ ಭಜಕರಿಗೆ 6 ಲೋಕದೊಳು ನಿರ್ಮಿಸಿದನಿರ್ವರನು ಹರಿ ತಾನು ಭೂ ಕೋವಿದರ ಮಲವು ಪೋಗಲೆಂದು ಶ್ರೀ ಕರಾರ್ಚಿತ ಜಗನ್ನಾಥವಿಠಲ ಗ್ರಾಮ ಸೂಕರರು ನಿಂದಕರು ಕರುಣಾಳು ಇಳೆಯೊಳಗೆ 7
--------------
ಜಗನ್ನಾಥದಾಸರು
ಇಷ್ಟುದಯ ಮಾಡಿದ್ದೆ ಅತಿ ಸೋಜಿಗ ಶೀಷ್ಟೇಷ್ಟದಾತ ಭ್ರಷ್ಟಮಾನವನಲ್ಲಿ ಪ. ಉದಯಕಾಲದಲೆದ್ದು ಪದುಮಸಂಭವ ಪಿತನ ವದನದಲಿ ನೆನೆಯದಲೆ ಮಾನುನಿಯರ ಚದುರತೆಗೆ ಮೆಚ್ಚುತಲೆ ಉದರ ಪೊರೆದನ ಮೇಲೆ ಚದುರ ಶ್ರೀಕೃಷ್ಣ ಬದಿಗನಾಗಿದ್ದು 1 ಕರುಣಾಸಮುದ್ರನ ಸ್ಮರಣೆ ಸಾಲದೆ ಎಂಬ ಪರಮ ಗುರುಗಳ ವಚನ ಮರೆತು ನಿನ್ನ ಸ್ಮರಿಸದೆಲೆ ನಿರುತದಿ ಪರರ ಬಾಗಿಲಿಗ್ಹೋಗಿ ಚರಣ ಧಣಿವುತ ಮನದಿ ಮರುಗಿದೆನೋ ಕೃಷ್ಣಾ 2 ಇನ್ನಾದರೆನಮನದಿ ಪನ್ನಗಾದ್ರಿನಿವಾಸ ನಿನ್ನ ಸ್ಮರಣೆಯ ಕೊಟ್ಟು ಮನ್ನಿಸೆನ್ನ ಘನ್ನ ಅಪರಾಧಗಳ ವರ್ಣಿಸಲಳವಲ್ಲ ಚೆನ್ನಿಗ ಶ್ರೀ ಶ್ರೀನಿವಾಸ ಘನ್ನ ಸಂಪನ್ನ ಸರಿಯಾರೋ 3
--------------
ಸರಸ್ವತಿ ಬಾಯಿ
ಈ ಭಾಗ್ಯವೆ ನಿನ್ನದೊ ವರ ಭೋಗಿಶಯನಾ ಪ ಸೌಭಾಗ್ಯವೇ ನಿನ್ನ ಮಹಿಮೆ ತಿಳಿಯುವ ಯೋಗಅ.ಪ ನೀನಿಲ್ಲದಾಸ್ಥಾನ ಈ ನಳಿನಜಾಂಡದೊಳಿಲ್ಲ ನೀನೆಲ್ಲವನು ಬಲ್ಲೆ ನಿನ್ನತಿಳಿಯಗೊಡದೆ ಹೀನಮಾನವ ನಾನು ನಿನ್ನನವರತ ಮರೆತರು ನೀ ಎನ್ನ ಮರೆಯದಲೆ ಎನ್ನೊಳಗೆ ಇಹೆ ಎಂಬ 1 ನಿಲ್ಲಿಸಲು ನಿಲ್ಲುವೆನು ಮಲಗಿಸಲು ಮಲಗುವೆನು ತಿಳಿಸಿದರೆ ನಾ ತಿಳಿವೆ ತಿಳುವಳಿಕೆ ನೀನೆ ತಿಳಿಯಗೊಡಿಸೋಎನ್ನಕ್ರಿಯೆಗಳನು ದೇಹದ ನೆಳಲಂತೆ ನಿನಗೆ ನಾನಿಹೆನಯ್ಯ ದೇವಾ 2 ಈ ಜಗತ್ತಿನೊಳಗೆಲ್ಲ ಪೂಜ್ಯಪೂಜಕ ಪೂಜ್ಯ ಪೂಜೋಪಕರಣದೊಳು ನೀನೆ ನಿಂತು ಮೂರ್ಜಗತ್ಪತಿಯೆ ನಿನ್ನನರ್ಚಿಸುವ ಭಜಕರಿಗೆ ನೈಜಸುಖ ವ್ಯಕ್ತಿಯನು ಮಾಡುತಲಿ ಪೊರೆವೇ 3 ನೀರು ತೃಣವನು ಕೊಡಲು ಹರುಷದಿಂದಲಿ ಗೋವು ಕ್ಷೀರವನು ಕರೆದು ಜನರ ಪೊರೆವಂತೆ ಸೂರಿಗಳು ಮಾಳ್ವ ಅಪರಾಧಗಳೆಣಿಸದಲೆ ಕರುಣದಿಂದಲಿ ಅವರ ಪೊರೆವ ಶ್ರೀಹರಿಯೆ4 ಪನ್ನಗಾಚಲನಿಲಯ ನೀನೆ ಎನ್ನೊಳಗಿರಲು ಬನ್ನಪಡಲ್ಯಾತಕೆ ಚಿನ್ಮಯರೂಪ ಎನ್ನಂಥಜೀವರಿನ್ನೆಷ್ಟೋ ಬ್ರಹ್ಮಾಂಡದೊಳು ಘನ್ನಭಕುತಿಯನೀಡೋ ಶ್ರೀಉರಗಾದ್ರಿವಾಸವಿಠಲ 5
--------------
ಉರಗಾದ್ರಿವಾಸವಿಠಲದಾಸರು
ಈ ಮಹಿಮೆಗೆ ಏನೆನಬಹುದು ಧ್ರುವ ರೂಪವಿಲ್ಲದೆ ರೂಪಾಗಿ ರೂಪಕ ಅರೂಪನಾದ ಅಪಾ ಮೂರು ಲೋಕಕ ಚಿದ್ರೂಪನಾದ ಮೂರ್ತಿಗೆ 1 ಸರ್ವರೊಳು ಸಾಕ್ಷವಾಗಿ ನಿರ್ವಿಕಲ್ಪ ನಿರ್ಗುಣಿ ತಾ ನಿರ್ವಿಕಾರನಾದ ನಿರ್ಭರ ನಿರ್ವಿಶೇಷಗೆ 2 ಭಾವಕ ಸ್ವಭಾವನಾದ ಪವಿತ್ರಪಾವನನೀತ ಭವನಾಶಗೈಸಿದ ಮಹಿಪತಿ ಗುರುಮೂರ್ತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈತನೀಗ ಭಾರತೀಶನು ತನ್ನ ಪ್ರೀತಿಸುವರ | ಮನದ ಮಾತು ಸಲಿಸಿ ಮುಕುತಿ ಈವ ಪ ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ | ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ || ಮುರಿದು ಧರೆಗೆ ವರಿಸಿದಾತಾ ಅಪ ಧುರದೊಳಕ್ಷನ ಹರಣವಳಿದು | ಗುರುವರ್ಹತ್ತುಶಿರನ ಜರಿದು || ನಗರ ಉರುಪಿ ಮರಳಿ | ಹರಿಯ ಚರಣಕ್ಕೆರಗಿದಾತಾ 1 ಕುರುನಿಕರ ಕರುಬಿ ಬೊ-| ಬ್ಬಿರಿದು ನಿಂದುರವಣಿಸಿ ಎದುರಾ-|| ದರಿಗಳ ಶಿರ ತರಿದು ತಳೋ-| ದರಿಯ ಹರುಷಬಡಿಸಿದಾತಾ2 ಕರಿಯ ತೆರದಿ ದುಷ್ಟ ಸಂಕರನು | ತಿರುಗಲವನ ಮುರಿದು ಮತ್ತೆ || ಮರುತಮತದ ಬಿರುದನೆತ್ತಿ - |ಪರನೆ ವಿಜಯವಿಠ್ಠಲನೆಂದಾ 3
--------------
ವಿಜಯದಾಸ
ಉಗಾಭೋಗ ಗುರುವಿನ ಕರುಣದಿ ವೈರಾಗ್ಯ ಭಾವವು ಗುರುವಿನ ಕರುಣದಿ ತತ್ವ ಸಾಧನೆಗಳು ಗುರುವಿನ ಕರುಣದಿ ಆತ್ಮ ವಿವೇಕಗಳು ಅಪರೋಕ್ಷ ಪುಟ್ಟಲು ಗರುವಿಕೆಯನೆ ಬಿಡಿಸಿ ಕರೆದು ಕೊಡುವ ಮುಕ್ತಿ
--------------
ಅಂಬಾಬಾಯಿ
ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು
ಉತ್ಥಾನ ದ್ವಾದಶಿಯ ದಿವಸ (ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ) ರಂಭೆ ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ. ಮಾನಿನೀಮಣಿ ಈತನ್ಯಾರೆ ಕರು ಣಾನಿಧಿಯಂತಿಹ ನೀರೆ ಹಾ ಹಾ ಭಾನುಸಹಸ್ರ ಸಮಾನಭಾಷಿತ ಮ- ಹಾನುಭಾವನು ಸುಪ್ರವೀಣನಾಗಿಹ ಕಾಣೆ 1 ಭಯಭಕ್ತಿಯಿಂದಾಶ್ರಿತರು ಕಾಣಿ- ಕೆಯನಿತ್ತು ನುತಿಸಿ ಪಾಡಿದರು ನಿರಾ- ಮಯ ನೀನೇ ಗತಿಯೆಂದೆಲ್ಲವರು ಹಾ ಹಾ ಭಯನಿವಾರಣ ಜಯ ಜಯವೆಂದು ನುತಿಸೆ ನಿ- ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ2 ಭೂರಿ ವಿಪ್ರರ ವೇದ ಘೋಷದಿಂದ ಸ್ವಾರಿಗೆ ಪೊರಟ ವಿಲಾಸ ಕೌಸ್ತು- ಚಾರುಕಿರೀಟಕೇಯೂರಪದಕಮುಕ್ತಾ ಹಾರಾಲಂಕಾರ ಶೃಂಗಾರನಾಗಿರುವನು3 ಸೀಗುರಿ ಛತ್ರ ಚಾಮರದ ಸಮ ವಾಗಿ ನಿಂದಿರುವ ತೋರಣದ ರಾಜ ಭೋಗ ನಿಶಾನಿಯ ಬಿರುದ ಹಾ ಹಾ ಮಾಗಧ ಸೂತ ಮುಖ್ಯಾದಿ ಪಾಠಕರ ಸ- ರಾಗ ಕೈವಾರದಿ ಸಾಗಿ ಬರುವ ಕಾಣೆ4 ಮುಂದಣದಲಿ ಶೋಭಿಸುವ ಜನ ಸಂದಣಿಗಳ ಮಧ್ಯೆ ಮೆರೆವ ತಾರಾ ವೃಂದೇಂದುವಂತೆ ಕಾಣಿಸುವ ಹಾಹಾ ಕುಂದಣ ಖಚಿತವಾದಂದಣವೇರಿ ಸಾ- ನಂದದಿ ಬರುವನು ಮಂದಹಾಸವ ಬೀರಿ5 ತಾಳ ಮೃದಂಗದ ರವದಿ ಶ್ರುತಿ ವಾಲಗ ಭೇರಿ ರಭಸದಿ ಜನ ಜಾಲ ಕೂಡಿರುವ ಮೋಹರದಿ ಹಾಹಾ ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ- ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6 ಊರ್ವಶಿ:ಈತನೆ ಭಾಗ್ಯನಿಧಿ ನೋಡೆ ನೀ ಮುದದಿಪ. ಈತನೆ ಈರೇಳು ಲೋಕದ ದಾತ ನಾರಾಯಣ ಮಹಾ ಪುರು- ವಿನುತ ನಿ- ರ್ಭೀತ ನಿರ್ಗುಣ ಚೇತನಾತ್ಮಕಅ.ಪ. ಮಂದರ ಪೊತ್ತ ಭೂನಿತಂಬಿನಿಯ ಪ್ರೀತ ಮಾನವಮೃಗಾಧಿಪ ತ್ರಿವಿಕ್ರಮ ದಾನಶಾಲಿ ದಶಾನನಾರಿ ನ- ವೀನ ವೇಣುವಿನೋದ ದೃಢ ನಿ- ರ್ವಾಣ ಪ್ರವುಢ ದಯಾನಿಧಿ ಸಖಿ 1 ವಾರಿಜಾಸವಾನವಂದಿತ ಶ್ರೀಪಾದಯುಗ್ಮವ ತೋರಿಕೊಂಬುವ ಸಂತತ ಕೇರಿಕೇರಿಯ ಮನೆಗಳಲಿ ದಿ- ವ್ಯಾರತಿಯ ಶೃಂಗಾರ ಭಕ್ತರ- ನಾರತದಿ ಉದ್ಧಾರಗೈಯಲು ಸ್ವಾರಿ ಪೊರಟನು ಮಾರಜನಕನು 2 ಮುಗುದೆ ನೀ ನೋಡಿದನು ಕಾಣಿಕೆಯ ಕ- ಪ್ಪಗಳ ಕೊಳ್ಳುವನು ತಾನು ಬಗೆಬಗೆಯ ಕಟ್ಟೆಯೊಳು ಮಂಡಿಸಿ ಮಿಗಿಲು ಶರಣಾಗತರ ಮನಸಿನ ಬಗೆಯನೆಲ್ಲವ ಸಲ್ಲಿಸಿ ಕರುಣಾ ಳುಗಳ ದೇವನು ಕರುಣಿಸುವ ನೋಡೆ3 ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ ಗಡಣ ಓಲಗಕೆ ಇಮ್ಮಡಿಯು ಜನ- ರೊಡಗೂಡಿ ಬರುತಿಹ ನಡೆಯು ಹಾ ಹಾ ಮೃಡ ಸರೋಜ ಸುರಗಡಣ ವಂದಿತ ಕ್ಷೀರ ಕಡಲ ಶಯನ ಜಗದೊಡೆಯನಹುದು ಕಾಣೆ1 ಮದಗಜಗಮನೆ ನೀ ಪೇಳೆ ದೇವ ಸದನವ ಪೊರಡುವ ಮೊದಲೇ ಚಂದ- ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ ಮುದದಿಂದ ಬಾಲಕರೊದಗಿ ಸಂತೋಷದಿ ಚದುರತನದಿ ಪೋಗುವನು ಪೇಳೆಲೆ ನೀರೆ2 ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ ಶ್ರೀರಮಾಧವನ ಲೀಲೆ ಘೋರ ದೈತ್ಯಕುಠಾರ ಲಕ್ಷ್ಮೀ ನಾರಾಯಣನ ಬಲಕರ ಸರೋಜದಿ ಸೇರಿ ಕುಳಿತ ಗಂಭೀರ ದಿನಪನ ಭೂರಿತೇಜದಿ ಮೆರೆವುದದು ತಿಳಿ1 ದೊರೆಯು ಬರುವನು ಎಂದು ಎಲ್ಲರಿಗೆ ಗೋ- ಚರಿಸುವನೊಲಿದು ಇಂದು ತರ ತರದ ಆರತಿಗಳನು ನೀವ್ ಧರಿಸಿ ನಿಂದಿರಿಯೆಂದು ಜನರಿಗೆ- ಚ್ಚರಿಗೆಗೋಸುಗ ಮನದ ಭಯವಪ- ಹರಿಸಿ ಬೇಗದಿ ಪೊರಟು ಬಂದುದು ರಂಭೆ :ಸರಸಿಜನಯನೆ ನೀ ಪೇಳೆ ಸೂರ್ಯ ಕಿರಣದಂತಿಹುದೆಲೆ ಬಾಲೆ ಸುತ್ತಿ ಗೆರಕವಾಗಿಹುದು ಸುಶೀಲೆ ಆಹಾ ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ- ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1 ಊರ್ವಶಿ:ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ ದ್ವಾದಶಿಯೊಳಗೆ ಬಾಲೆ ಮಾಧವನ ಪ್ರೀತ್ಯರ್ಥವಾಗಿ ಶು- ಭೋದಯದಿ ಸಾಲಾಗಿ ದೀಪಾ ರಾಧನೆಯ ಉತ್ಸಹದ ಮಹಿಮೆಯ ಸಾದರದಿ ನೀ ನೋಡೆ ಸುಮನದಿ1 ನಿಗಮಾಗಮದ ಘೋಷದಿ ಸಾನಂದ ಸು- ತ್ತುಗಳ ಬರುವ ಮೋದದಿ ಬಗೆ ಬಗೆಯ ನರ್ತನ ಸಂಗೀತಾ ದಿಗಳ ಲೋಲೋಪ್ತಿಯ ಮನೋಹರ ದುಗುಮಿಗೆಯ ಪಲ್ಲಂಕಿಯೊಳು ಕಿರು2 ನಗೆಯ ಸೂಸುತ ನಗಧರನು ಬಹ ಚಪಲಾಕ್ಷಿ ಕೇಳೆ ಈ ವಸಂತ ಮಂ- ಟಪದಿ ಮಂಡಿಸಿದ ಬೇಗ ಅಪರಿಮಿತ ಸಂಗೀತ ಗಾನ ಲೋ- ಲುಪನು ಭಕ್ತರ ಮೇಲೆ ಕರುಣದಿ ಕೃಪೆಯ ಬೀರಿ ನಿರುಪಮ ಮಂಗಲ ಉಪಯಿತನು ತಾನೆನಿಸಿ ಮೆರೆವನು3 ಪಂಕಜಮುಖಿ ನೀ ಕೇಳೆ ಇದೆಲ್ಲವು ವೆಂಕಟೇಶ್ವರನ ಲೀಲೆ ಶಂಕರಾಪ್ತನು ಸಕಲ ಭಕ್ತಾ ಕರ ಚ ಕ್ರಾಂಕಿತನು ವೃಂದಾವನದಿ ನಿ ಶ್ಯಂಕದಿಂ ಪೂಜೆಯಗೊಂಡನು4 ಕಂತುಜನಕನಾಮೇಲೆ ಸಾದರದಿ ಗೃ- ಹಾಂತರಗೈದ ಬಾಲೆ ಚಿಂತಿತಾರ್ಥವನೀವ ಲಕ್ಷ್ಮೀ ಕಾಂತ ನಾರಾಯಣನು ಭಕುತರ ತಿಂಥಿಣಿಗೆ ಪ್ರಸಾದವಿತ್ತೇ- ಕಾಂತ ಸೇವೆಗೆ ನಿಂತ ಮಾಧವ5
--------------
ತುಪಾಕಿ ವೆಂಕಟರಮಣಾಚಾರ್ಯ
ಉದಯ ಕಾಲವದಗಿತೀಗಲೂ ನಿನ್ನಿನ್ನಂತೆ ರವಿ ಪಪದುಮನಾಭನ ಸ್ಮರಿಸುತ ಮೋ-ದದಿಯಾನ್ಹೀಕ ಬುಧರು ಮಾಳ್ಪ ಅ.ಪಅಪರಾತ್ರಿಯಲ್ಲಿ ಎದ್ದುಚಪಲಚಿತ್ತರಾಗದಲೆ ಸು-ರಪನ ದೆಸೆಯ ನೋಡಿ ನಮಿಸಿಸುಫಲಗಳನು ಪಡೆಯುವರಿಗೆ 1 ಕಣ್ಣುತೆರೆದು ಕೈಗಳುಜ್ಜಿ ಕನ್ನಡಿಯನು ನೋಡಿ ಶೌಚ ವನ್ನು ತೀರಿಸಿ ಸ್ನಾನ ಸಂಧೆÀ್ಯಗ- ಳನ್ನು ಮಾಳ್ಪ ಸದ್ವಿಜರಿಗೆ2 ಬ್ರಂಹ್ಮಯಜ್ಞ ಜಪವು ಮುಖ್ಯ ಕರ್ಮಗಳಿಂ ಸವಿತೃನಾಮಕ ಒಮ್ಮನದಲಿ ಧ್ಯಾನಿಸುವರಿಗೆ 3
--------------
ಗುರುರಾಮವಿಠಲ
ಉದಯಾದ್ರೀಶ ವಿಠಲ ಮುದವನಿತ್ತವನೀಗೆಉದ್ಧರಿಸ ಬೇಕೆಂದು ಪ್ರಾಥಿಸುವೆ ಹರಿಯೇ ಪ ಸದಯ ನೀನಿರೆದೇವ ಸಂಸ್ಕøತಿಯ ಶೃಂಖಲೆಗೆಬೆದರಿಕಿಲ್ಲವೊ ಇವಗೆ ನರಹರಿಯೆ ಸ್ವಾಮಿಅ.ಪ. ಸ್ವಾಪದಲಿ ನಭದಲ್ಲಿ ರೂಪವನೆ ತೋರಿದ ಯೊಪಯೋನಿಧಿಯಾಗಿ ಮೆರೆವೆ ವೆಂಕಟೇಶ |ಆಪಯೋಜಾಸನ ವಿಷಾದ್ಯರಿಗೆ ನಿಲುಕದಅಪಾರ ತವಮಹಿಮೆ ನಾ ಪೇಳಲೊಶವೇ 1 ಸಾರನಿಸ್ಸಾರವೆನೆ ಜಗದೊಳಗೆ ನೀನೊಬ್ಬಸಾರತಮನೆಂದೆಂಬ ಪಾರಮಾರ್ಥಿಕವ |ತಾರತಮ್ಯ ಜ್ಞಾನ ಮೂರೆರಡು ಭೇಧಗಳಸಾರವನೆ ತಿಳಿಸಿ ಸಂಸಾರ ನಿಧಿ ದಾಟಿಸೋ 2 ಗರ್ವರಹಿತನು ಇವಗೆ ಕವನ ಶಕ್ತಿಯನಿತ್ತುಸರ್ವತ್ರ ಸರ್ವದಾ ಸರ್ವಕಾರ್ಯಗಳಲ್ಲಿಸರ್ವೇಶ ತವನಾಮ ಸ್ಮøತಿಯನ್ನೆ ಕರುಣಿಸುತದರ್ವಿ ಜೀವನಕಾಯೊ ಸರ್ವಾಂತರಾತ್ಮಾ 3 ಶ್ರೀದ ಶ್ರೀ ವೆಂಕಟನ ನೋಡಿದೆ ಎಂಬಂಥಮೋದದಾಯಕ ಪದವು ಉದಯ ವಿಠಲಾಂಕಿತವಾದಿರಾಜರ ಶಿಷ್ಯ ಪಾಡಿ ಪೂರೈಸುತಿರೆನೀದಯದಿ ತವರೂಪ ತೋರ್ದುದನು ಮರೆ ಮಾಡಿದೆ4 ಪಾವಮಾನಿಯ ಪ್ರೀಯ ಭಾವುಕರ ಪರಿಪಾಲಗೋವತ್ಸ ಧ್ವನಿ ಕೇಳಿ ಧಾವಿಸೀ ಬರುವಂತೆತೀವ್ರುಪಾಸನೆ ಇತ್ತು ಇವನ ಹೃತ್ಕಂಜದಲಿದೇವ ಗುರು ಗೋವಿಂದ ವಿಠಲ ತವರೂಪ ತೋರೊ5
--------------
ಗುರುಗೋವಿಂದವಿಠಲರು
ಉದ್ಧರಿಸೆನ್ನಯ್ಯ ಮುದ್ದು ಶ್ರೀಹರಿಯೆ ಬಿದ್ದು ಬೇಡುವೆ ನಿಮ್ಮ ಪಾದಪದ್ಮದೊಳು ಪ ಬದ್ಧಗುಣ ಬಚ್ಚಿಟ್ಟು ಶುದ್ಧ ಮನದವನಂತೆ ಸುದ್ದಿ ಹೇಳುತ ಸತತ ಕದ್ದು ತಿನ್ನುವ ಎನ್ನ ಬದ್ಧ ಮನಸಿನ ಡೊಂಕ ತಿದ್ದು ಬೇಗದೊಳು 1 ನಂಬಿಗುಳ್ಳವನಂತೆ ಹೇಳುವ ಪರರ ಅಂಬುಜಾಕ್ಷಯರೊಲುಮೆ ಹಂಬಲವ ಮನದಿ ತುಂಬಿಕೊಂಡಿಹ್ಯ ಎನ್ನಡೊಂಕ ಶಂಭುವಿನುತನೆ ತಿದ್ದಿ ಇಂಬುಗೊಡು ಜವದಿ 2 ಸಫಲಮಾನಿಸನಂತೆ ಜಪಮಾತುಗಳಾಡಿ ಕಪಟತ್ವದಿಂದಿತರ ಅಪಹರಿಸುವ ಕುಪಿತ ಮನಸಿನ ಡೊಂಕ ಅಪರೂಪತಿದ್ದಿ ನುತ ಸುಫಲದಾಯಕ ಹರಿ ಕೃಪೆಮಾಡು ಜವದಿ 3 ಹಸುತೃಷಳಿದವನಂತೆ ವಸುಧೆಜನರಿಗೆ ತೋರಿ ಬಸವಳಿದು ಬಾಯಾರಿ ದೆಸೆಗೆಟ್ಟು ಪರರ ಅಶನ ಬೇಡುಂಬ ಪುಸಿಯ ಮನಸಿನ ಡೊಂಕ ಹಸನಾಗಿ ತಿದ್ದಿ ಲಕುಮೀಶ ಒಲಿ ದಯದಿ 4 ಪಾಮರಮನದ ದುಷ್ಕಾಮಿತಗಳನೆಲ್ಲ ಕ್ಷೇಮದಿಂ ಕಡೆಹಾಯ್ಸಿ ಸ್ವಾಮಿಯೇ ನಿಮ್ಮ ನಾಮಧ್ಯಾನದ ನಿತ್ಯನೇಮವನು ಪಾಲಿಸಿ ಪ್ರೇಮದ್ಹಿಡಿಕರ ಶ್ರೀರಾಮಪ್ರಭುತಂದೆ 5
--------------
ರಾಮದಾಸರು
ಉದ್ಧಾರ ಮಾಡಯ್ಯ ಉಡುಪಿ ನಿಲಯ ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ ಪ. ಬಂದೆ ಬಹುದೂರದಲಿ ನಿಂದೆ ತವಚರಣದಡಿ ತಂದೆ ಮುದ್ದುಮೋಹನ ಗುರುಕರುಣದಿಂದ ಕುಂದುಗಳನೆಣಿಸದೆಲೆ ಸಿಂಧುಶಯನನೆ ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ 1 ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು ಕರ್ಮಸಾಸಿರ ಕಡಿದು ಕರುಣದಿಂದ ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ ಸನ್ಮಾರ್ಗವನೆ ತೋರೊ ಸರ್ವಲೋಕೇಶ 2 ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ ಉಪವಾಸದುಪಟಳವು ಗತಿ ತೋರದೆನಗೆ ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ ಅಪಹಾಸಗೊಳಿಸದಲೆ ಆದರಿಸೊ ಜೀಯ 3 ಬೇಡಲೇನನು ನಿನ್ನ ಕಾಡಲೇತಕೆ ನಾನು ದಾತ ನೀ ಸರ್ವಜ್ಞನಿರಲು ಮಾಡುವೆನು ಸಾಷ್ಟಾಂಗ ಬೇಡುವೆನು ಪದದಾಸ್ಯ ನೋಡು ಕರುಣಾದೃಷ್ಟಿಯಿಂದೆನ್ನ ಕಡೆಗೆ 4 ಅಂತರಂಗದಲಿಪ್ಪ ಸರ್ವಾಂತರಾತ್ಮಕನೆ ಚಿಂತನೆಗೆ ನೆಲೆತೋರು ಚಿನ್ಮಯಾತ್ಮಕನೆ ಕಂತುಪಿತ ಗೋಪಾಲಕೃಷ್ಣವಿಠ್ಠಲನೆ ಸಿರಿ ಕಾಂತ ಕಾಪಾಡು ಕಡು ಕರುಣಿ ಮಧ್ವೇಶ 5
--------------
ಅಂಬಾಬಾಯಿ
ಉಪಕಾರವೇನಾ ಹೇಳಲಿ | ಮಾಯಾದೇವಿಯಾ || ಅಪರ ಮಾತನ ರೂಪಕೆ ಮರೆಯಾಗಿ | ಅನುದಿನ ಜನರಿಗೆ | ಅಪರಾಧ ದಾರಿಗೆ ದೂರವಿಟ್ಟಳು ಪ ಸೂರಿಯ ನಾರಾಯಣೆಂಬರು | ಶರಣೆಂದು ಬಾಗರು ತಲೆಯನು ಒಬ್ಬರು || ಪರಿ | ಧರೆಯೊಳುದಾಸೀನ ಮಾಡುವರೈಯಾ1 ಅಗ್ನಿದೇವರ ಮುಖವೆಂದು | ಸುಜ್ಞಾನಿಗಳಿದು ಹೇಳುತಲಿಹಲು || ಅಜ್ಞಾನಿಗಳು ಅಲ್ಲೆ ಕಾಲವ ಕಾಸುತ | ವಜ್ಞೆಯ ಮಾಡುವ ಉಗುಳುತಿಹರು2 ಎಂದೆಂದು ನಿಲುಕದ ಚಿದ್ರೂಪ ಘನವಾದ | ತಂದೆ ಮಹೀಪತಿ ನಂದನ ಪ್ರಾಣನ || ಛಂದದಿ ಭಕ್ತಿಯ ಮಾರ್ಗದಿ ನಡೆಸುತ | ಇಂದೆನ್ನ ಹರಿಮೆಚ್ಚು ಮಾಡಿದಳೈಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಉಪಕೃತಿ ಎನ್ನದಲ್ಲ ನರಹರಿ ಕೃಪೆ ಕಾರಣವಿದಕೆಲ್ಲ ಪ ಅಪರಾಧಗಳನು ಮನ್ನಿಸಿ ಪೊರೆಯುವ ವಿಪುಲ ಕೃಪಾನಿಧಿ ಹರಿಯಲ್ಲದೆಲೆ ಅÀ.ಪ. ಜೀವ ಪರಾಧೀನ ಸ್ವತಂತ್ರ ರಾ ಜೀವದಳನಯನ ಸರ್ವೋತ್ತಮ ಪ್ರಭು ಕರಿಗಿರೀಶನೆ ಜಗ ಜೀವನ ಪಾವನ ಪ್ರೇರಕನಲ್ಲದೆ 1
--------------
ವರಾವಾಣಿರಾಮರಾಯದಾಸರು
ಉಪಾಯಗಾರತ್ತಿಗೆಯ ಮಹಾತ್ಮೆಯು ಶಿಪಾಯಿಗಳೆಲ್ಲಾ ತಿಳಿದಿಹರು ಪ ಅಪಾಯವು ಜನರೆ ಬಲ್ಲರು ಅ.ಪ ಮನೆಗೊಬ್ಬರಿಗೂಟಕೆ ಹೇಳಿ | ಭೋ- ಜನ ಸಹಾಯ ನಮಗಿಲ್ಲವೆಂದು ಉಪಚಿರಸುತ ಆಡುತಿಹಳು ಕಾಂತೆ 1 ನುಚ್ಚಕ್ಕಿ ಅನ್ನ ಗೊಡ್ಡುಸಾರೇಸಾಕು ನೂರಾರು ಜನರು ಬರಲಿ ಜೋಕೆ 2 ಅಳಿಯಗೆ ದೀಪಾವಳಿಗೆ ಕೊಡೋಣ ಮಗುಟ ಪಾತ್ರೆಗಳಿಹುದು ಕೆಲಸವಾದರೇಸಾಕು ಗುರುರಾಮ ವಿ ಠಲನೆ ಬಲ್ಲ ಬಿಡಿ ಎಂತೆಂದು 3
--------------
ಗುರುರಾಮವಿಠಲ