ಪಾಲಿಸು ಪರಮೇಶ | ಪಾಪ ವಿನಾಶ ಪ
ಫಾಲನಯನ ತ್ರಿಶೂಲಧರ ಕರು
ಣಾಲವಾಲ ವಿಶಾಲ ಮಹಿಮನೆ
ಕಾಲಕಾಲ ಕಪಾಲಧರ ಸುರ
ಜಾಲನುತ ಪದ ಶೈಲಜಾವರ ಅ.ಪ.
ಶಂಕರ ಶಶಿಶೇಖರ | ಸದಾಶಿವ
ಸಂಕಟಹರ ಈಶ್ವರ | ವರದಾನ ಶೂರ
ಶಂಕೆಯಿಲ್ಲದೆ ತ್ವತದಾಂಬುಜ
ಪಂಕ ಕಳೆವ ಅಕ
ಳಂಕ ಮತಿಯನು ಕರುಣಿಸುವ ಮೀ
ನಾಂಕ ಮದಹರ ಮೃಡಸುರೇಶ್ವರ 1
ಗಜ ಚರ್ಮಾಂಬರಧರನೆ | ಗೌರೀವರನೆ
ಅಜಸುತಾಧ್ವರ ಹರನೆ | ಪ್ರಣಿತಾರ್ಥಿಹರನೆ
ನಿಜಪದಾಂಬುಜ ಪೂಜೆ ಮಾಡುವ
ಸುಜನ ಮನ ಅಂಬುಜ ದಿವಾಕರ
ಭಂಜನ ಭುಜಗಭೂಷಣ
ನಿಜ ಚರಣ ಪಂಕಜವ ತೋರಿಸಿ..... 2
ಹರಿನೀಲನಿಭಕಂಧರ | ಮುಪ್ಪುರಹರ
ಶರಣಜನ ಮಂದಾರ | ಕೈಲಾಸಮಂದಿರ
ವರ ವಿನಾಯಕ ಜನಕ ಜಾಹ್ನವಿ
ಧರನೇ ಕರುಣಾಭರಣ ಪಾವನಕರಿಗಿರೀಶನ ಪರಮಪ್ರಿಯ ಹರಿ..... 3