ಒಟ್ಟು 1330 ಕಡೆಗಳಲ್ಲಿ , 105 ದಾಸರು , 1177 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಭಕುತಿಯುಳ್ಳವರ ಶರೀರವೆ ಕುರುಕ್ಷೇತ್ರ - ಇವರು |ನರರೆಂದು ಬಗೆವವರೆ ನರವಾಸಿಗಳು ಪ.ಸದಮಲನ ಧ್ಯಾನಿಸುವ ಹೃದಯ ಕಾಶೀಪುರವು |ಮಧುವೈರಿಗೊಲಿದ ಮನ ಮಣಿಕರ್ಣಿಕೆ ||ಪದುಮನಾಭನ ಪಾಡಿ ಪೊಗಳುವಾತನ ದಿವ್ಯ |ವದನವು ಅಯೋಧ್ಯೆ ಪುರವಾಗಿ ಇಹುದು 1ನರಹರಿಯ ನೀಕ್ಷಿಸುವ ನಯನ ದ್ವಾರಾವತಿಯು |ಹರಿಯ ನಿರ್ಮಾಲ್ಯ ವಾಸಿಪ ಮೂಗು ಮಥುರೆ ||ಕರುಣಾಕರನ ಕಥೆಯ ಕೇಳ್ವ ಕಿವಿ ಕೇದಾರ |ಸಿರಿಧರೆಗೆ ಎರಗುವಾ ಶಿರವೆ ಬದರಿ 2ಚಕ್ರಧರಗೆ ಪೋಪಚರಣ ಮಾಯಾವತಿ ತ್ರಿ - |ವಿಕ್ರಮನ ಪೂಜಿಸುವ ಕರಿವೆ ಕಂಚಿ ||ಅಕ್ರೂರಗೊಲಿದಸಿರಿ ಪುರಂದರವಿಠಲನಸತ್ಕøಪೆಯು ಉಳ್ಳವರ ಅಂಗಸಾಯುಜ್ಯವು 3
--------------
ಪುರಂದರದಾಸರು
ಹರಿಯ ಚರಣವೆಂಬ ಸುರಧೇನವನುಗುರುಬೋಧೆಯೆಂಬ ಕಣ್ಣಿಯಲಿ ಕಟ್ಟಿರಯ್ಯಪ.ಭಕುತಿಯೆಂಬ ಕರುವನೆ ಬಿಟ್ಟು ನಿರುತ ವಿರಕುತಿಯೆಂಬ ಚೆನ್ನದಳಿಯ ಹಾಕಿ ||ಯುಕುತವಾದ ನಿತ್ಯಕಾಯ ಚರಿಗೆಯೊಳುಮುಕುತಿನಾಮಾಮೃತ ಕರೆದುಕೊಳ್ಳಿರಯ್ಯ 1ಕಾಮ ಕ್ರೋಧ ಲೋಭ, ಮೋಹ ಮದ ಮತ್ಸರಗಳೆಂಬಹಮ್ಮೆಂಬ ಕುರುಳನೆ ತಾಳಿ ಹಾಕಿ ||ತಾಮಸ ಜ್ಞಾನಾಗ್ನಿ ಪುಟಗೈದು ಇಂದ್ರಿಯನೇಮದ ನೀರ ಬೆರಸಿ ಕಾಯಲಿಡರೊ 2ಶಾಂತಗುಣವೆಂಬ ಹದನರಿತು ಆರಿಸಿ ಮತ್ತೆಭ್ರಾಂತಮನ ಮಜ್ಜಿಗೆಯ ಹೆಪ್ಪನಿಕ್ಕಿ ||ಕಾಂತವಿಷ್ಣು ಮಾಯಾಮಂಥದಿ ಶೋಧಿಸಿ ಸಿ -ದ್ಧಾಂತವೆಂಬ ಕಡೆಗೋಲ ನೇಣನೆ ಪಿಡಿದು 3ಪರಬೊಮ್ಮನೆನಿಪ ಬೆಣ್ಣೆಯ ಮುದ್ದಿಯನೆ ತೆಗೆದುಶರಣಮಣಿಯೆಂಬ ತುಪ್ಪವನೆ ಕಾಯಿಸಿ ||ಮರಣವೆಂಬ ನೊರೆ ತೆಗೆದೊಗೆದು ಅಮೃತವನಿರುತ ಹೃದಯವೆಂಬ ಕೊಡವನೆ ತುಂಬಿರೊ 4ಅನವರತ ಹರಿಸ್ಮರಣೆಯೆಂಬ ಬೀಸೂರಿಗೆಅನುವಾಗಿ ಕುಳಿತುಂಡು ಸುಖದಿ ತೇಗಿ ||ಚಿನುಮಯ ಚಿದಾನಂದ ಪುರಂದರವಿಠಲನಅನುದಿನ ನೆನೆ ನೆನೆದು ಸುಖಿಯಾಗಿರಯ್ಯ 5
--------------
ಪುರಂದರದಾಸರು
ಹರೇ ಶಂಕರ ಪಾರ್ವತೀವರ ಪಾಲಿಸು ನೀ ಎನ್ನ ಪ.ದುರಿತರಾಶಿಗಳ ದೂರಮಾಡು ಗಿರಿ-ವರಮಹಾನುಭಾವ ಶಿವಶಿವಅ.ಪ.ತ್ರಿಗುಣಾತ್ಮಕ ತ್ರಿದಶಾಲಯ ಪೂಜಿತನಿಗಮಾಗಮವಿನುತಅಗಜಾಲಿಂಗಿತಆಶೀವಿಷಧರಮೃಗಧರಾಂಕಚೂಡಹೃದ್ಗೂಢ1ಸರ್ವೋತ್ತಮ ಹರಿಯಹುದೆಂಬ ಜ್ಞಾನವಸರ್ವಕಾಲಕ್ಕೀಯೊದುರ್ಮತಗಳನೆಲ್ಲ ದೂರ ಮಾಡೊ ಕರಿ-ಚರ್ಮಾಂಬರಧರ ಪ್ರವೀರ 2ಸಂಜೀವನ ಲಕ್ಷ್ಮೀನಾರಾಯಣ ಮಣಿ-ರಂಜಿತ ನಿರ್ಲೇಪಮಂಜುಳಕದಿರೆಯ ಮಂಜುನಾಥ ಭವ-ಭಂಜನಹರಿಪ್ರಿಯ ಜಯ ಜಯ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹೆಜ್ಜೆಗಳಿವೆ ನೋಡಿರಿ ರಂಗಯ್ಯನಹೆಜ್ಜೆಗಳಿವೆ ನೋಡಿರಿ ಪಹೆಜ್ಜೆಗಳಿವೆ ನೋಡಿರಿ ಮೂರ್ಜಗದÉೂಡೆಯನಅಬ್ಜಭವಾದ್ಯರ ಹೃದ್ಗøಹವಾಸನ ಅ.ಪಮಧುರಾಪುರದಿ ಜನಿಸಿದನ ಬೇಗಮಾವ ಕಂಸನ ಛೇದಿಸಿದನಚದುರೇರಿಗೊಲಿದ ಶ್ರೀಶನ ದಿವ್ಯಮದನಮೋಹನ ಕೃಷ್ಣವಿಧಿಭವಾರಾಧ್ಯನ1ಗೋಕುಲವಾಸನೆಂದೆನಿಪ ದಿವ್ಯನಾಕೇಶವಂದ್ಯ ಸರ್ವೇಶನಭೀಕರ ದೈತ್ಯರ ಸದೆದನ ಸವ್ಯ-ಸಾಚಿಯ ರಥದೊಳು ಏಕಾಂತ ನುಡಿದನ 2ವೇದ ಚೋರನ ಭೇದಿಸಿದನ ಗಿರಿಭಾರಬೆನ್ನಿಲಿ ಪೊತ್ತು ನಿಂತನಆದಿ ದೈತ್ಯನ ಸೀಳಿ ಭೂಮಿಯ ತಂದುಕ್ರೂರ ದೈತ್ಯನ ಕರುಳ್ಹಾರ ಮಾಡಿದ ಹರಿಯ 3ಬಲಿಯ ದಾನವ ಬೇಡಿದನ ಬಲುಛಲದಿ ಕ್ಷತ್ರಿಯರ ಸೋಲಿಸಿದನಲಲನೆಯ ತಂದ ಶ್ರೀವರನಗೊಲ್ಲರ ಕುಲದಲ್ಲಿ ಬೆಳೆದ ಶ್ರೀಚಲುವ ಗೋಪಾಲನ 4ದುಷ್ಟಕಾಳಿಂಗನ ಮದವನಳಿದುಮೆಟ್ಟಿನಾಟ್ಯದಿ ಸಿರದಿ ತುಳಿದನಪುಟ್ಟಪಾದದ ದಿವ್ಯ ಚಲುವನ ಗೋವ್ಗ-ಳಟ್ಟಿ ಹೋಗುವ ನಮ್ಮ ಪುಟ್ಟ ಗೋಪಾಲನ 5ಶಂಖು ಚಕ್ರವು ಗದ ಪದ್ಮವು ಹೊಳೆವÀಕಿಂಕಿಣಿಪೈಜನಿನಾದವುಬಿಂಕದಿ ಊದುವ ಕೊಳಲಗಾನವು ನಿ-ಶ್ಶಂಕೆಯಿಂದಲಿ ಭಕ್ತವೃಂದವ ಪೊರೆದನ 6ಥಳಥಳಿಸುವ ದಿವ್ಯ ತಿಲಕವು ಹೊಳೆಯೆಬರಿಮೈಯ್ಯ ತೋರುತ ನಿಂತನಕುದುರೆಯನೇರುತ್ತ ಬರುವನಸಿರಿಕಮಲನಾಭ ವಿಠ್ಠಲ ಭಕ್ತಪೋಷನ7
--------------
ನಿಡಗುರುಕಿ ಜೀವೂಬಾಯಿ
ಹೊರಿಯೊ ವಿಪಗಮನ ಮಂಗಳಶರಧಿಜಾರಮಣ ಪ.ಸುರಕಾರ್ಯಕೆ ಪಕ್ಷ ಶಾರ್ವರಿಚರವರ ಶಿಕ್ಷಧರಣಿಜ ಹರ ಸತ್ರಾಜಿತಜಾವರಶರಣಾಗತಭಟದುರಿತವಿದೂರ1ಪೌಂಡ್ರಕವೈರಿ ನಿಜ ಕೃಷ್ಣಪಾಂಡವರ ತಾರಿಶುಂಡಾಲಚಾಣೂರ ಸಂಹಾರಿಖಾಂಡವವನ ದಹಕಾರಿ 2ವಿದುರೋದ್ಧವ ಪೋಷಸುಖತೀರ್ಥಹೃದಮಾನಸ ಹಂಸಪದುಮನಾಭ ಪ್ರಸನ್ವೆಂಕಟೇಶಪಾಹಿಸದಮಲಸದನ ಕ್ಷೀರಾರ್ಣವಶಾಯಿ 3
--------------
ಪ್ರಸನ್ನವೆಂಕಟದಾಸರು
ಹ್ಯಾಗಾಹದು ಭವರೋಗಿಗಾರೋಗ್ಯಮ್ಯಾಗೆ ಮ್ಯಾಗಪಥÀ್ಯವಾಗುತಿದೆ ಕೃಷ್ಣ ಪ.ಗುಜ್ಜುಗಿರಿವ ಆಶಾಲಕ್ಷಣ ಚಳಿಲಜ್ಜೆಗೆಡಿಸುತಿವೆ ಗದಗದಿಸಿವಜ್ಜರಹೊದಪಿಲಿ ನಿಲವು ಕುಶಾಸ್ತ್ತ್ರದಗಜ್ಜರಿಕಾಯಿ ದಣಿಯೆ ಮೆಲುವವಗೆ 1ಮೊರಮೊರಸು ಮೂರ್ಪರಿ ಜ್ವರ ದಾಹದಿನಿರಸನ ರಸನಾಯಿತಿದರೊಳಗೆಅರಿಕಿಲ್ಲದಹ ಗಾರಿಗೆ ಕಾಮನಹರಿಬದನೆಕಾಯುಂಬುವಗೆ 2ಕಾಮಿನಿನೋಟದ ಕಾಮಾಲೆಯಾಯಿತುನೇಮದಿ ಸೊಬ್ಬೇರಿತು ಮೈಯಪ್ರೇಮದ ಚಕ್ಷುದೋಷ್ಯಾತರಲೈದದುಕಾಮತಪ್ತ ವರೇಣ್ಯವಗೆ 3ನಮ್ಮದು ನಮ್ಮದು ಕೋ ಕೋ ಎನ್ನುತಕೆಮ್ಮಿಗೆ ಖುಳಖುಳಸಿತುಕಾಯಹಮ್ಮುಗಳಕ್ಕರೆಯ ಖಣಿಯಾದ ಉಳ್ಳಿಯಹೆಮ್ಮೂಲಂಗಿಯ ತಿನುವವಗೆ 4ಜಗಸಟೆಯೆಂಬಗೆ ಸಂಗ್ರಹಣಿಯು ಅವನಿಗೆ ಪಾಂಡಿತ್ಯ ಪಾಂಡುರೋಗವಿಗಡಕುತರ್ಕ ಚಿಕಿತ್ಸದಿ ನೂಕುನುಗ್ಗೆ ತೊಂಡೆಕಾಯಿ ಸವಿವವಗೆ 5ಅಂಜದೆ ಸಲ್ಲದ ನಿಷಿಧಗÀಳುಂಡರೆನಂಜೇರದೆ ಬಿಡುವುದೆ ಬಳಿಕಾಕಂಜಾಕ್ಷನ ಬಿಟ್ಟಿತರ ಸುರಾಸುರರೆಂಜಲು ಮೈಲಿಗೆ ಬಿಡದವಗೆ 6ಹೃದ್ರೋಗವು ಹೋಗುವುದೆ ನಿಂಬ ಹರಿದ್ರದ ಹುಡಿ ತಲೆಗೊತ್ತಿದರೆನಿದ್ರಿಲ್ಲದೆಕರಪಂಜಲಿ ಕುಣಿದರೆರುದ್ರದುರಿತಹೊಡೆಯದೆ ಬಿಡುವುದೆ7ಇಂತೆ ದಿನಾಂತರ ಕ್ಷಯ ಮೇಲಿಕ್ಕಿತ್ತುಅಂತ್ಯೌಪದ ಯಮಪುರದೊಳಗೆಎಂತಾದರೆ ಮಾಡಿಸಿ ಕೊಂಡಳುತಿಹಭ್ರಾಂತ ಕಳಿಂಗದ ಪ್ರಿಯದವಗೆ 8ಮನ್ವಂತರ ಕಲ್ಪಾಂತರ ಈ ಕ್ಲೇಶಾನ್ವಯವೆಗ್ಗಳಭೋಗಿಸುತ ಪ್ರಸನ್ವೆಂಕಟಪತಿಗುರುಮಧ್ವೇಶಧನ್ವಂತ್ರಿಯ ಪದ ವಿಮುಖನಿಗೆ 9
--------------
ಪ್ರಸನ್ನವೆಂಕಟದಾಸರು