ಒಟ್ಟು 1814 ಕಡೆಗಳಲ್ಲಿ , 99 ದಾಸರು , 1349 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣನೆಂಬ ನಾಮದ ಬೀಜವ ನಿಮ್ಮನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ಪ.ಹೃದಯಹೊಲವನು ಮಾಡಿ ಮನವ ನೇಗಿಲ ಮಾಡಿ |ಶ್ವಾಸೋಚ್ವಾಸ ಎರಡೆತ್ತಮಾಡಿ ||ಜಾÕನವೆಂಬ ಹಗ್ಗ ಕಣ್ಣಿಯ ಮಾಡಿ ||ನಿರ್ಮಮವೆಂಬ ಗುಂಟೆಲಿ ಹರಗಿರಯ್ಯ 1ಮದಮತ್ಸರಗಳೆಂಬ ಮರಗಳನೆ ತರಿದು |ಕಾಮಕ್ರೋಧಗಳೆಂಬ ಕಳೆಯ ಕಿತ್ತಿ ||ಪಂಚೇಂದ್ರಿಯವೆಂಬ ಮಂಚಿಕೆಯನೆ ಹಾಕಿ |ಚಂಚಲವೆಂಬ ಹಕ್ಕಿಯ ಹೊಡಿಯಿರಯ್ಯ 2ಉದಯಾಸ್ತಮಾನವೆಂಬ ಎರಡು ಕೊಳಗದಲಿ |ಆಯುಷ್ಯವೆಂಬ ರಾಶಿ ಅಳೆಯುತಿರೆ ||ಸ್ವಾಮಿ ಶ್ರೀ ಪುರಂದರವಿಠಲನ ನೆನೆದರೆ |ಪಾಪ ರಾಶಿಯ ಪರಿಹರಿಸುವನಯ್ಯ 3
--------------
ಪುರಂದರದಾಸರು
ನಾರಾಯಣನೆಂಬ ನಾಮವ ನೇಮದಿ ನೆನೆಯುತಿರೆಚ್ಚರಿಕೆ |ನೀರ ಮೇಲಿನ ಗುಳ್ಳೆ ನಡೆಯೆಂಬ ಡಿಂಭವ ನಂಬದಿರೆಚ್ಚರಿಕೆ ಪ.ಪರರು ಮಾಡಿದ ಪಾತಕವ ನಾಲಿಗೆಯೊಳುಚ್ಚರಿಸದಿರೆಚ್ಚರಿಕೆಗುರು ಹಿರಿಯರ ಸೇವೆ ಮಾಡದೆ ಉದರವ ಪೊರೆಯದಿರೆಚ್ಚರಿಕೆ ||ಹರಿದಿನದುಪವಾಸ ಇರುಳ ಜಾಗರವ ನೀ ಮರೆಯದಿರೆಚ್ಚರಿಕೆನರಹರಿಯಂಘ್ರಿಯ ಸ್ಮರಿಸದೆ ನರಸ್ತುತಿ ತರವಲ್ಲ ಎಚ್ಚರಿಕೆ 1ಹೀನ ಮಾನನಿಯರ ಧ್ಯಾನಕಾನನದೊಳಿಳಿಯದಿರೆಚ್ಚರಿಕೆನಾನೆಂಬ ಅಹಂಕಾರ ಮಾಡಿ ನರಕದೊಳು ನರಳದಿರೆಚ್ಚರಿಕೆ ||ಜಾಹ್ನವಿ ಸ್ನಾನಸಂಧ್ಯಾನ ಧಾನ್ಯವ ಸುಜಾÕನ ಮುಂದೆ ಜ್ಞಾಚ್ಚರಿಕೆಜಾನಕಿರಮಣನ ಧ್ಯಾನವೆ ಧರ್ಮ ಸಂತಾನ ಮುಂದೆಚ್ಚರಿಕೆ 2ಮಡದಿ ಮಕ್ಕಳೆಂಬ ಕಡುಮೋಹಕೆ ಸಿಲುಕಿ ಕೆಡಬೇಡವೆಚ್ಚರಿಕೆನಡೆವಾಗ ನುಡಿವಾಗ ಗಿಡವೆಲ್ಲ ನೆಂಟರು ಕಡೆಗಿಲ್ಲ ಎಚ್ಚರಿಕೆ ||ಕೊಡುಗೈಯ ಮಾಡದೆ ಮಡುಗಿದ ಧನ ಸಂಗಡ ಬಾರದೆಚ್ಚರಿಕೆ |ಒಡೆಯ ಶ್ರೀ ಪುರಂದರವಿಠಲನ ನೆನೆದು ನೀ ಕಡೆ
--------------
ಪುರಂದರದಾಸರು
ನಾರಾಯಣಯೆಂದರಾಗದೇ ನಿನ್ನಘೋರದುರಿತದೂರ ಹೋಗದೇವಾರಿಜನಾಭನ ವಲಿಸದೇನರಶಾರೀರದಲಿ ಬಂದು ಫಲವೇನಿದೆ1ಸಾರಷಡ್ರಸಾನ್ನ ಭುಜಿಸುತ್ತಪರದಾರಾಂಶದಲಿ ಮನವಿರಿಸುತ್ತಾಕ್ರೂರಕೃತ್ಯವನಿತ್ಯಗೈಯ್ಯುತ್ತ ಯಮ-ನೂರಿಗೆ ಪೋಗುವದೇನು ಹಿತ2ನಡೆವಾಗ ನುಡಿವಾಗ ಕುಡಿವಾಗ ವೀಳ್ಯಮಡಿವಾಗ ಕೊಡುವಾಗ ಪಡೆವಾಗ ಜಲಜನಾಭನಎಡಬಿಡದೀಗಾ ನೆನೆಕಡೆಗೆ ನಾಲಿಗೆ ಬಿದ್ದು ನುಡಿಯಲಾಗಾ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಈಶಣತ್ರಯದಲಿ ಸಿಲುಕುತ್ತಾ ಒಂದುನಶಿಸೆ ತಾಡಕಕೃತಿಗೈಯುತ್ತಾಎಸೆವ ಮೂರು ವೈರಾಗ್ಯ ತಾಳುತ್ತಾ ಸುತ್ತುಈಶ ತ್ರಿಮೂರ್ತಿ4ಜನಿಸುತ್ತಲೇನ ತಂದಿರುವೆಯೋ ನಾಳೆತನುವನೀ ..... ಲೇನನೊಯ್ವೆನೊತನುಮಧ್ಯ ಭಾಗ್ಯದಿ ಮೆರೆವೆಯೋ ನಿನ್ನಜನುಮದ ನೆಲೆಯ ನೀನರಿವೆಯೊ5ಇಂದುಸುಕರ್ಮ ಮಾಡದೆ ನೀನು ನಾಳೆಎಂದರೆ ತನುವಿಗೆ ನಿಜವೇನುಚಂದದಿ ಸ್ಮರಿಸು ಗೋವಿಂದನು ತಾನೆಬಂದು ದಾಸರ ನೋಡಿ ಪೊರೆವಾನು6
--------------
ಗೋವಿಂದದಾಸ
ನಿನ್ನ ದಾಸಾನುದಾಸನು ನಾ ಸುಪ್ರ-ಸನ್ನಾತ್ಮ ನಿಗಮಸನ್ನುತನೆ ಪ.ಎನ್ನನಂತಪರಾಧಗಳ ಕ್ಷಮಿಸುಪೂರ್ಣೇಂದುವಕ್ತ್ರ ಪನ್ನಗಶಯನ ಅ.ಪ.ಸಂತಾಪಘ್ನಾನಂತಮಹಿಮ ಜಗ-ದಂತರ್ಯಾಮಿ ಪರಂತಪನೆಮಂತ್ರಾತ್ಮ ರಮಾಕಾಂತ ಕಲಿಮಲ-ಧ್ವಾಂತಧ್ವಂಸನಾಚಿಂತ್ಯ ಸ್ವತಂತ್ರನೆ1ಬಟ್ಟೆಯೊಳ್ ಕೆಂಡವಕಟ್ಟಿಸ್ವಗೃಹದಿ ಬ-ಚ್ಚಿಟ್ಟಂತೆ ಕಾರ್ಯ ದುಷ್ಟರದುಗುಟ್ಟರಿಯದೆಪರಮೇಷ್ಠಿಜನಕ ನಿನ್ನಭ್ರಷ್ಟರಾಚರಣೆಗೆಷ್ಟೆಂಬುವದ್ಯೆ 2ಏಳೆರಡು ಲೋಕಪಾಲಕರು ಸರ್ವರೂಳಿಗದ ಜನರು ಮೂಲೇಶಶ್ರೀಲಕ್ಷ್ಮೀನಾರಾಯಣ ನಿರ್ಗುಣಕಾಲನಿಯಾಮಕ ದೈತ್ಯಾಂತಕ ಜಯ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಿನ್ನ ನಾಮವೆ ಎನಗೆ ಅಮೃತಾನ್ನವು |ಕೇಶವನೆಂಬ ನಾಮ ಕರಿದ ಹೂರಣಗಡಬು |ನಾರಾಯಣನ ನಾಮ ನೊರೆಹಾಲು ಸಕ್ಕರೆ |ಯದುಪತಿಯೆಂಬ ನಾಮ ಎಣ್ಣೂರಿಗೆಯ ರಾಶಿ |ದೇವಕಿಸುತನ ನಾಮ ವಧ್ಯನ್ನದಾ ಮುದ್ದೆ |ಗರುಡವಾಹನನ ನಾಮ ಘೃತಪಯೋದಧಿತಕ್ರ |ಈ ಪರಿಯ ನಾಮಾವಳಿಯನು ಸವಿದುಂಡು |
--------------
ಪುರಂದರದಾಸರು
ನಿನ್ನ ಸೇರಿದೆ ಮಹಾಲಿಂಗ ಎನ-ಗಿನ್ಯಾರುಗತಿಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗಪ.ನಿನ್ನಂತೆ ಕೊಡುವ ಉದಾರ ತ್ರಿಭು-ವನ್ನದೊಳಿಲ್ಲದಕ್ಯಾವ ವಿಚಾರಮುನ್ನ ಮಾರ್ಕಾಂಡೇಯ ಮುನಿಯ ಭಯವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ 1ಸರ್ವಾಪರಾಧವ ಕ್ಷಮಿಸು ಮಹಾ-ಗರ್ವಿತರಾಶ್ರಯಕ್ಕೊಲ್ಲದು ಮನಸುಶರ್ವರೀಶಭೂಷ ನಿನ್ನ ಹೊರ-ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ 2ಅಂತರಂಗದ ದಯದಿಂದ ಯುದ್ಧ-ಮಂ ತೊಡಗಿದೆ ಪಾರ್ಥನೊಳತಿಚಂದಪಂಥದ ನೆಲೆಯನ್ನು ತಿಳಿದು ಸರ್ವ-ಮಂತ್ರಾಸ್ತ್ರಗಳನಿತ್ತೆಯೊ ಭಕ್ತಗೊಲಿದುದೊಡ್ಡದು ನಿನ್ನ ಬಿರುದು 3ಸಿದ್ಧಿಸು ಸರ್ವಸಂಕಲ್ಪ ಅಡ್ಡ-ಬಿದ್ದು ಬೇಡುವೆ ನಿನಗ್ಯಾವದನಲ್ಪಬುದ್ಧಿಯ ನಿರ್ಮಲಮಾಡು ನಿನ್ನಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು 4ಅಂಜಿಕೆ ಬಿಡಿಸಯ್ಯ ಹರನೆ ಪಾ-ವಂಜಾಖ್ಯವರಸುಕ್ಷೇತ್ರಮಂದಿರನೆಸಂಜೀವನ ತ್ರಿಯಂಬಕನೆ ನವ-ಕಂಜಾಕ್ಷ ಲಕ್ಷುಮಿನಾರಾಯಣಸಖನೆಸಲಹೊ ಪಂಚಮುಖನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಿನ್ಹೊರತು ಪೊರೆವರಲಿಲ್ಲಹರಿಮುರಾರಿಪ.ಪೂರ್ಣಾತ್ಪೂರ್ಣ ಕ್ಷೀರಾರ್ಣವ ಶಯನ ವ-ರೇಣ್ಯ ಸ್ವತಂತ್ರವಿಹಾರಿ 1ಜೀವನಿಚಯಕೃತ ಸೇವೆಯ ಕೈಗೊಂಡುಪಾವನಗೈವೆಖರಾರಿ2ತಾಪತ್ರಯಹರ ಗೋಪಾಲ ವಿಠಲಆಪನ್ನಭಯನಿವಾರಿ 3ಪ್ರಾಣನಾಥ ಸರ್ವ ಪ್ರಾಣನಿಯಾಮಕಪ್ರಾಣದಾನಂತಾವತಾರಿ 4ಲಕ್ಷ್ಮೀನಾರಾಯಣ ಬ್ರಹ್ಮಾದಿ ವಿ-ಲಕ್ಷಣ ರಕ್ಷಣಕಾರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಿರ್ಭಯವಾಗಲಿಯೋಗಿಜಿತಭೋಗಿಪ.ಲಭ್ಯಸುಕೃತವಿರಭ್ಯುದಯವಾಗಿ ಅ.ಪ.ಸತ್ಯಜ್ಞಾನ ಸುವಿರಕ್ತಿ ಹರಿಭಕ್ತಿಚಿತ್ತದೊಳಿದ್ದರೆ ನಿತ್ಯಾಸಕ್ತಿ 1ಹೊದ್ದಿದನಿವನು ಬ್ರಾಹ್ಮಣನು ನಮ್ಮವನುಇದ್ದರೆ ಪುಣ್ಯವು ಶುದ್ಧಾಂತಃಕರಣನು 2ರಕ್ಷಿಸುವದು ನಿನ್ನಭಾರಸರ್ವಾಧಾರಲಕ್ಷ್ಮೀನಾರಾಯಣ ಲಕ್ಷ ನಮಸ್ಕಾರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನೀ ಸಾಹೆಯಾಗು ಯಮಗನುಗಾಲ |ಶೇಷಾದೇವರೆ ರೋಹಿಣಿ ಬಾಲಾ ಪಮೂರುತಿಯಲ್ಲಿ ಪುಟ್ಟಿ | ನಾರಾಯಣನ್ನ ಕೂಡಿ ||ಚಾರುಬದರಿಯಲ್ಲಿ ತೋರುತಿಹನೆ 1ದಶರಥನ ಮಡದಿ | ಬಸುರೀಲಿ ಜನಿಸೀದಿ ||ಕುಸುಮನಾಭನರ್ಚನೆ ಎಸಗಿದಿಯೋ 2ಪ್ರದ್ಯುಮ್ನಪರಿಯಂಕ| ರುದ್ರಾನಲಂಕಾರ ||ಭದ್ರ ಪ್ರದಾಯಕ ಭಕ್ತ ಪೋಷಾ3ನೀಲಾಂಬರವನುಟ್ಟ | ತಾಳಾಂಕಬಿನ್ನಪ||ಲಾಲೀಸೊ ನಿನ್ನವನೆಂದ ನಿಶಾ4ಪ್ರಾಣೇಶ ವಿಠಲನ | ಧ್ಯಾನದೋಳಿರುವಂತೆ ||ನೀನೊಲಿವದು ದೂರು ನೋಡದಲೇ 5
--------------
ಪ್ರಾಣೇಶದಾಸರು
ನೀನೇಕೊ ನಿನ್ನ ಹಂಗೇಕೊ - ನಿನ್ನ -ನಾಮದ ಬಲವೆನಗಿದ್ದರೆ ಸಾಕೊ ಪ.ಆ ಮರ ಈ ಮರವೆಂದೆನ್ನುತಿರೆ ರಾಮ - |ನಾಮವೆ ವ್ಯಾಧನ ಮುನಿಪನ ಮಾಡಿತು 1ನಾರಾಯಣೆನ್ನದೆ ನಾರಗನೆನ್ನಲು |ಘೋರಪಾತಕಿಯನು ನಾಮವೆ ಕಾಯ್ದಿತೊ2ತಂದೆ ಪ್ರಹ್ಲಾದನ ಬಾಧೆಯ ಪಡಿಸೆ - ಗೋ |ವಿಂದನೆಂಬ ಸಿರಿನಾಮವೆ ಕಾಯ್ದಿತೊ 3ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ 4ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |ಪರಮಪುರುಷ ಹರಿನಾಮವೆ ಕಾಯ್ದಿತೊ 5ನಾರಿಯನೆಳತಂದು ಸೀರೆ ಸೆಳೆಯುತಿರೆ |ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ 6ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |ವಸುದೇವಸುತ ನಿನ್ನ ನಾಮವೆ ಕಾಯ್ದಿತೊ 7ನಿನ್ನ ನಾಮಕೆ ಸರಿಯಾವುದ ಕಾಣೆನೊಪನ್ನಗಶಯನ ಶ್ರೀ ಪುರಂದರವಿಠಲ 8
--------------
ಪುರಂದರದಾಸರು
ನೀಲಮೇಘಶ್ಯಾಮರಾಮನಿಖಿಳಲೋಕ ಕ್ಷೇಮಧಾಮ ಪ.ಪಾಲಿಸೊಲಿದು ಹನುಮಪ್ರೇಮಪಾವನಾತ್ಮ ಸೀತಾರಾಮ ಅ.ಪ.ಸತ್ಯಸಂಕಲ್ಪಾನುಸಾರಚಿತ್ತಚಿನ್ಮಯಾತ್ಮ ಶ್ರೀಧರನಿತ್ಯಮುಕ್ತ ಪುಣ್ಯನಾಮಪ್ರತ್ಯಗಾತ್ಮ ಪೂರ್ಣಕಾಮ 1ಕಮಲನಾಭ ರವಿಶತಾಭಸುಮನಸಾರ್ಚಿತಾಂಘ್ರಿಶೋಭಅಮಿತವಿಕ್ರಮ ಸಮರಭೀಮಶಮಲಶಮನ ಸಾರ್ವಭೌಮ 2ಶಾರದೇಂದುಸನ್ನಿಭಾನನಮಾರುತಿಹೃದಯೈಕಸದನಧೀರಲಕ್ಷ್ಮಿನಾರಾಯಣಸೂರಿಜನೋದ್ಧರಣನಿಪುಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನೆನೆ ಮನವೆ ದಾನವಾರಿಯಹಿತಕಾರಿಯಾಶ್ರಿತ ದೊರೆಯ ಪ.ಹೀನ ಪಾಪಾಖ್ಯ ವಿಪಿನದಾವಕೃಶಾನುಸನಾತನ ನಾರಾಯಣ ಶ್ರೀನಾಥನ 1ಘೋರನಿರಯವಿದೂರ ಕರುಣಾಪಾರವಾರಿಜಾಸನ ವಂದ್ಯ ಸುರಶ್ರೇಷ್ಠನ 2ತನ್ನವರಿಗೆ ಪ್ರಸನ್ನವೆಂಕಟಕೃಷ್ಣಮನ್ಯ ಸದ್ಭಕ್ತರಪಾವನ್ನನಾಮನ3
--------------
ಪ್ರಸನ್ನವೆಂಕಟದಾಸರು
ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿದಿವ್ಯ ಷಡುರಸಾನ್ನವನಿಟ್ಟೆನೊ ಪ.ಘಮಘಮಿಸುವ ಶಾಲ್ಯನ್ನ ಪಂಚಭಕ್ಷ್ಯಅಮೃತಕೂಡಿದ ದಿವ್ಯ ಪರಮಾನ್ನವು ||ರಮಾದೇವಿಯು ಸ್ವಹಸ್ತದಿ ಮಾಡಿದ ಪಾಕಭೂಮಿ ಮೊದಲಾದ ದೇವಿಯರ ಸಹಿತ ತಾನು 1ಅರವತ್ತು ಶಾಕ ಲವಣ ಶಾಕ ಮೊದಲಾದಸರಸ ಮೊಸರುಬುತ್ತಿ ಚಿತ್ರಾನ್ನವಪರಮ ಮಂಗಳ ಅಪ್ಪಾಲು ಅತಿರಸಗಳಹರುಷದಿಂದಲಿ ಇಟ್ಟ ಹೊಸ ತುಪ್ಪವ 2ವಡೆಯಂಬೋಡಿಯು ದಧಿವಡೆಯ ತಿಂಢಿಣಿಒಡೆಯಸೆ ಬಡಿಸಿದೆ ಅಧಿಕವಾಗಿ ||ದೃಢವಾದ ಪಡಿಪದಾರ್ಥವನೆಲ್ಲ ಇಡಿಸಿದೆಒಡೆಯ ಶ್ರೀ ಪುರಂದರವಿಠಲ ನೀನುಣ್ಣೊ 3
--------------
ಪುರಂದರದಾಸರು
ನೋಡಿದೆ ಮನದಣಿಯೆ ಶ್ರೀನಿವಾಸನನೋಡಿದೆ ಮನದಣಿಯೆ ಪ.ನೋಡಿದೆನು ಶೇಷಾದ್ರಿಯಿಂದೊಡ-ಗೂಡಿ ಭಕ್ತರ ಬೀಡಿನೊಳು ನಲಿದಾಡಿ ಮೆರೆವ ಸಗಾಢ ದೈತ್ಯವಿಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.ಶರಣರಪೇಕ್ಷೆಯನು ಕೊಟ್ಟುಳುಹಲುಕರುಣಾಳು ನಿಜದಿ ತಾನುಸ್ಥಿರತೆಯೊಳು ಸ್ವಪ್ನದಲಿ ತಾ ಗೋಚರಿಸಿ ಭರವಸೆಯಿತ್ತು ವೆಂಕಟಗಿರಿಯವೋಲ್ ಸಾನ್ನಿಧ್ಯ ವದನಾಂ-ಬುರುಹದಲಿ ಮೆರೆದಿಹನ ಚರಣವ 1ಲಲನೆಲಕ್ಷ್ಮಿಯು ಬಲದಿ ಶೋಭಿಪ ವಾಮದೊಳಗೆ ಗಣಪ ಮುದದಿಒಲವಿನಿಂ ಗರುಡಾಂಕ ಮೃದುಪದನಳಿನದಾಶ್ರಯದಿಂದ ವಾಯುಜಬಳಗ ಚಾತುರ್ದೇವತೆಯರಿಂ-ದೊಳಗೆ ಪೂಜೆಯಗೊಂಬ ದೇವನ 2ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-ಕೊಂಡು ಪಟ್ಟಣಕೆ ಬಹಕೆಂಡದಂದದೊಳುರಿವ ಶತಮಾ-ರ್ತಾಂಡದೀಪ್ತಾ ಮುಖಂಡ ಭೃತ್ಯನಕೊಂಡುಯಿದಿರಲಿ ಮಂಡಿಸಿದನಖಿಳಾಂಡಕೋಟಿ ಬ್ರಹ್ಮಾಂಡನಾಥನ 3ನೀಲಮೇಘಶ್ಯಾಮಲ ಕೌಸ್ತುಭವನಮಾಲಕಂಧರಶೋಭನನೀಲಮಾಣಿಕವಜ್ರಮುತ್ತಿಸಾಲ ಸರ ಪೂಮಾಲೆಗಳ ಸುಖಲೀಲೆಯಿಂದೊಪ್ಪಿರುವ ಭಕ್ತರಕೇಳಿಯಲಿ ನಲಿದಾಡುತಿಹನನು 4ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-ಕ್ಷ್ಮೀನಾರಾಯಣ ಹರಿಯಕಾಣಿಕೆಯ ಕಪ್ಪಗಳ ತರಿಸುತಮಾನಿಸುತ ಭಕ್ತಾಭಿಮತವನುತಾನೆ ಪಾಲಿಸಿ ಮೆರೆವ ಕಾರ್ಕಳಶ್ರೀನಿವಾಸ ಮಹಾನುಭಾವನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನೋಡೊ ನೋಡೊ ರಂಗ ತನ್ನಖೋಡಿತನ ಬಿಡದೋಡು ಚಿತ್ತವು ಪ.ಎಳೆ ಎಳೆದು ನಾನೆ ಬಳಲಿದೆ ತಾ ತನ್ನತಿಳಿದ ಕಡೆಯಲಿ ಸುಳಿದಾಡಿತುಒಲಿದು ಭಕುತಿಯ ಬಲಿದಿರೆಂದರೆಛಲದಿ ಶುಭಮಾರ್ಗ ಕೊಳದು ದಾತಾರ 1ಕ್ಷಣದೊಳಾರೆ ನಾರಾಯಣ ದಾಮೋದರಮುನಿಧ್ಯೇಯನೆ ನಿನ್ನ ನೆನೆದಾಡದೆಹಣಿದಾಡೆನ್ನೊಳು ಒಣ ಧ್ಯಾನಿಸುತಿದೆಜನದೂಷಣದೊಳು ದಣಿದಾಡುತಿದೆ 2ಇನ್ನಾವಗೆ ಪೇಳಲೆನ್ನ ಒಡಲ ಮಾತಎನ್ನ ಒಡೆಯ ಪಾವನ್ನಕಾಯ ಪ್ರಸನ್ನ ವೆಂಕಟರನ್ನ ಒಲಿಯೊ ನೀಅನ್ಯ ವಿಷಯಕೆ ದೈನ್ಯವಾಗಿದೆ 3
--------------
ಪ್ರಸನ್ನವೆಂಕಟದಾಸರು