ಒಟ್ಟು 97 ಕಡೆಗಳಲ್ಲಿ , 31 ದಾಸರು , 92 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಂಡಿರನಾಳುವಳೀ ಕನ್ನಿಕೆ |ಗಂಡನಿಲ್ಲದ ಹೆಂಗುಸೀ ಕನ್ನಿಕೆ ಪಅಂಥಿಂಥಿವಳೆಂದು ಅಳವಡಿಸಲು ಬೇಡ |ಇಂಥ ಸೊಬಗನಂತ ಏನೆಂಬೆನೊ ||ಸಂತತಸುರ - ದನುಜರಿಗೆ ಪ್ರಪಂಚದಿ |ಪಂಕ್ತಿಯೊಳಮೃತವ ಬಡಿಸಿದಳು 1ಶಿಶುವು ಬೊಂಬೆಯ ತೋರ ಆಲದೆಲೆಯ ಮೇಲೆ |ಅಸುಮಯಜಲದಲಿ ಮಲಗಿ ಮೈಮರೆದಳು ||ಒಸಗೆಯಾಗದ ಮುನ್ನ ಹೊಕ್ಕುಳ ಹೂವಿನಲಿ |ಬಸುರಲಿ ಬೊಮ್ಮನ ಪಡೆದಳೀ ಕನ್ನಿಕೆ 2ಬೇಗೆಗಣ್ಣವನಿಗೆ ಬಿಸಿಗೈ ತಾಗುವಾಗ |ಭೋಗದ ಸೊಗತೋರಿ ಬೂದಿಯ ಮಾಡಿ ||ಭಾಗೀರಥಿಯ ಪಿತ ಬೇಲೂರ ಚೆನ್ನಿಗ |ಯೋಗಿ ಪುರಂದರವಿಠಲನೆಂಬ3
--------------
ಪುರಂದರದಾಸರು
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ ನಾರದವಂದಿತನೆ ದೇವಾ ಪಮಂಗಳಾಭಿಷೇಕಕೆಉದಕತರುವೆನೆನೆಗಂಗೆಯ ಅಂಗುಟದಿ ಪಡೆದಿಹೆಯೊ ||ಸಂಗೀತ ಕೀರ್ತನೆ ಪಾಡುವೆನೆಂದರೆಹಿಂಗದೆ ತುಂಬುರ ನಾರದರು ಪಾಡುವರೊ 1ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||ಮುಪ್ಪತ್ತು ಮೂರ್ಕೋಟಿ ದೇವತೆಗಳು ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು 2ಕೋಟಿಸೂರ್ಯರ ಕಾಂತಿ ಮಿಗಿಲಾದವನಿಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||ಸಾಟಿಗಾಣದಸಿರಿಉರದೊಳು ನೆಲಸಿರೆಪೋಟುಗಾಸನು ಎಂತು ಕಾಣಿಕೆಯಿಡಲಯ್ಯ 3ಹಾಸಿಗೆಯನು ನಿನಗೆ ಹಾಸುವೆನೆಂದರೆಶೇಷನ ಮೈಮೇಲೆ ಪವಡಿಸಿಹೆ ||ಬೀಸಣಿಕೆಯ ತಂದು ಬೀಸುವೆನೆಂದರೆಆಸಮೀರಣ ಚಾಮರವ ಬೀಸುತಿಹನೋ4ನಿತ್ಯಗುಣಾರ್ಣವ ನಿಜಸುಖ ಪರಿಪೂರ್ಣಸತ್ತು ಚಿತ್ತಾನಂದ ಸನಕಾದಿ ವಂದ್ಯ ||ಮುಕ್ತಿದಾಯಕ ನಮ್ಮಪುರಂದರವಿಠಲನುಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ 5
--------------
ಪುರಂದರದಾಸರು