ನೋಡಿದ್ಯಾ ಶ್ರೀರಾಮನ ನೋಡಿದ್ಯಾ ಪ.
ನೋಡಿದ್ಯಾ ನಯನವೆ, ಕೊಂಡಾಡಿದ್ಯಾ ಮನವೆ
ಪಾಡಿದ್ಯಾ ವದನವೆ ಬಾಗಿದ್ಯಾ ಶಿರವೇ ಅ.ಪ.
ಕುವಲಯ ಶ್ಯಾಮ ಸುಂದರನ ಶ್ರೀ
ಭುವಿಜಾತೆಯರಸನ ರಾಘವನ (ವರ)
ಪವಮಾನಸುತ ಸಂಸೇನ್ಯನ
ಸರ್ವವ್ಯಾಪಕ ಶ್ರೀ ರವಿಕುಲ ತಿಲಕನ
ಭುವನಮೋಹನ ವಿಗ್ರಹನಾ 1
ಪಂಕ್ತಿರಥನಂದನನ ವರ
ಪಂಕೇರುಹ ಪತ್ರೇಕ್ಷಣನ ವರ
ಪಂಕಜಸಖನಿಭ ಭಾಸುರನ ಆಹಾ
ಪಂಕಜಾಸನನ ಪೆತ್ತಾತನ
ಶಂಕರಪ್ರಿಯ ಕೋದಂಡರಾಮನ 2
ದುಷ್ಟ ತಾಟಕಿಯನು ತಾ ಕೊಂದು
ಎಸೆವ ಮಂಗಳಮೂರ್ತಿ ದಶರಥರಾಮನ 3
ದೃಢದಿಯಹಲ್ಯೆಯ ಶಾಪಕಳೆದು ಬಂದು
ಪೊಡವಿಜಾತೆಯ ಕೈಪಿಡಿದು
ಪಡೆದ ತಾಯ್ತಂದೆಯರ
ಒಡಗೂಡಿ ಮೆರೆದಂಥ ಒಡೆಯ ರಾಘವನ 4
ದಾಸರ ದಾಸನೆಂದೆನಿಸಿದಾತನ 5
ಗರುಡವಾಹನ ಮುರಹರನ ವರ
ಪರಶುಧರ ಗರ್ವಹರನಾ ಆಹಾ
ವರಶೇಷಗಿರಿಯಲ್ಲಿ ಮೆರೆವ ವೆಂಕಟನಾ
ಶರಣಾಭರಣ ಶ್ರೀ ನರಹರಿ ರೂಪನ 6