ಯಾಚಕರು ಪರರ ಸಂಕಟ ಬಲ್ಲರೆಣ ಪ
ಭೂ ಚಕ್ರದಲಿ ಗಾಳಿಯಂತೆ ತಿರುಗಲು ಬಿಡರುಅ.ಪ
ಕಾಪೀನವನು ಧರಿಸಿ ಮುಖವ ಡೊಂಕನೆ ಮಾಡಿ
ಕೋಪದಿಂದಲಿ ಕರವನೆತ್ತಲ್ಯಾಕೆ
ಪಾಪಿ ಕೂಪವ ಮೀರಿ ಸಮುದ್ರವನು ನೆರೆ ದಾಟಿ
ರೂಪಾಂತರದಿ ಮನೆ ಮನೆಯ ಪೊಕ್ಕರು ಬಿಡರು 1
ವಿಷವ ಸವಿದುಂಡು ಮಹ ಮಡುವ ಪ್ರವೇಶಿಸಿ
ವಸುಧೆಯೊಳು ಬೇಡಿ ಕಿರಿತಂದುಂಡರು
ವಸಿಸಿ ಮಾನಸದಿ ಗೃಹಕರ್ಮ ಮಾಡಲಿ ಬಿಡರು 2
ಜುಟ್ಟು ಜನಿವಾರವನು ಕಿತ್ತುಕೊಂಡು ಯತಿಯಾಗಿ
ಕಟ್ಟ ಕಡೆಯಲಿ ಗೃಹಸ್ಥ ಧರ್ಮ ತೊರೆದು
ಹುಟ್ಟುಗತಿ ಯಿಲ್ಲೆನಗೆ ಕೃಷ್ಣ ಕೃಷ್ಣ ವಿಜಯ
ವಿಠ್ಠಲನ ಪಾದಕೆ ಮೊರೆಯಿಟ್ಟರು ಬಿಡರು 3