ಚನ್ನಕೇಶವ ಚನ್ನಕೇಶವ
ಚನ್ನಕೇಶವ ತ್ರಾಹಿಮಾಂ ಪ
ಮನ್ನಿಸೆನ್ನನು ರಕ್ಷಿಸೆನ್ನನು
ಸನ್ನುತಾಂಗನೆ ಪಾಹಿಮಾಂ ಅ.ಪ.
ಭವದಿ ನೊಂದೆನು ಸವೆದು ಬೆಂದೆನು
ಜವದಿ ಬಂದೆನು ತ್ರಾಹಿಮಾಂ
ಭವಣೆಯನು ಪರಿಹರಿಸಿ ದೇವನೆ
ಭವ ವಿದೂರನೆ ಪಾಹಿಮಾಂ1
ನಾನು ಏನನು ನಿನ್ನ ಮರತೆನು
ನಾನು ಬಡವನು ತ್ರಾಹಿಮಾಂ
ಗಾನ ಲೋಲನೆ ಬಿಡದೆ ಭಜಿಸುವೆ
ದೀನ ವತ್ಸಲ ಪಾಹಿಮಾಂ 2
ಭಕ್ತವತ್ಸಲ ಭಕ್ತದಾಯಕ
ಭಕ್ತಿಯರಿಯೆನು ತ್ರಾಹಿಮಾಂ
ಮುಕ್ತಿದಾಯಕ ಶಕ್ತಿ ಮೂರುತಿ
ಮುಕ್ತಿ ಪಾಲಿಸಿ ಪಾಹಿಮಾಂ3