ಜೋಗಿ ಬಂದ ಕಾಣೇ ಈತ ಮಹಾಯೋಗಿ ಬಂದ ಕಾಣೇ
ಗಗನ ಮಣಿಯ ಮೀರುವ ತೇಜದ ದತ್ತ
ದಿಗಂಬರ ನೆನಿಪೆ ನೋಡಮ್ಮಾ ಪ
ತವೆ ಸಂಜೆ ಧಾರೆಗಳು ಹೊಳೆವ ಲೊ
ಪ್ಪುವ ಕೆಂಜೆಡಿಯಗಳು
ಕುವಲಯ ಶಾಮನು ಕಿರೀಟ ಕುಂಡಲದಿಂದ
ಠವಠವಿಸುವ ಮೊಗದಾ ನೋಡಮ್ಮಾ 1
ಕೇಶರ ಗಂಧವನು ನುಂಪಿಟ್ಟು
ತ್ರಿಸರೋಜ ಮಾಲೆಯನು
ಭೂಷಿತ ದಿವ್ಯಾಂಬರ ಕಾಂಚಿ ಧಾಮದಿ
ಘೋಷಿಪ ಘಂಟೆಗಳು ನೋಡಮ್ಮಾ 2
ಮೆಟ್ಟಿದ ಪಾದುಕೆಯಾ ರತನದ
ಬೊಟ್ಟಿಲಿ ಜಪ ಮಾಲೆಯಾ
ನೆಟ್ಟನೆ ನೆನೆವ ರುದ್ಧರಿಸಲು ತಾರಕ
ಸೃಷ್ಟಿಗೆ ಗುರುವಾಗಿಹ ನೋಡಮ್ಮಾ 3
ಆದಿ ಯೋಗವನು ಪ್ರಕಟಿಸಿ
ಹಾದಿಯ ತೋರುವನು
ದ್ವಾದಶ ನಾದದ ಭೇದ ತೋರುವ ಶಂಖ
ನೂಡುತ ನಲಿಯುತಲಿಹ ನೋಡಮ್ಮಾ 4
ಮೂರ್ತಿ ಚಿ-ಹ್ನವನು ದೋರುವಾ
ಶ್ರೀ ಮನೋರಮ ದೇವನು
ನೇಮದ ಮಹಿಪತಿ ನಂದನ ಪ್ರಭು ಭಕ್ತ
ಕಾಮಿತಾರ್ಥವ ನೀಡುವ ನೋಡಮ್ಮಾ 5