ಪಾಲಿಸಯ್ಯ ವರವ ಹರಿಹರಿ
ಪಾಲಿಸಯ್ಯ ವರವ ಪ
ಪಾಲಿಸಯ್ಯ ವರ ಬಾಲಗೆ ಬೇಗನೆ
ಕಾಲಕಾಲದಿ ನಿನ್ನ ಲೀಲಾನಂದವ ಅ.ಪ
ಸತತದಿ ತವಭಜನೆ ಅಗಲಿಸ
ದತಿ ಗುಪ್ತ ತತ್ವವನು
ಯತಿತತಿ ಪೊಗಳುವ ಸ್ಮøತಿಶಾಸ್ತ್ರರ್ಥವನಿತ್ತು
ಸುತಗೆ ಮಹಗತಿಯ ಪಥಕೆ ಹಚ್ಚು 1
ಮತಿ ಮಾನ್ಯರು ಸದಾ ಪೊಗಳುವ-
ಪಾದ ಸತತ
ನುತಿಪ ಅತಿಹಿತ ಮತಿಯಿತ್ತು
ಪತಿತ ಪಾವನ ಮಾಡು ರತಿಪತಿಪಿತನೆ 2
ಜಡ ಬಡತನ ಕಡಿದು ಗಡನೆ
ನ್ನೊಡಲಾಶೆಯ ತೊಡೆದು
ನುಡಿನುಡಿಗಡಿಗಡಿಗೆಡಬಡದಲೆ ನಿ
ನ್ನಡಿಧ್ಯಾನ ಕೊಡು ಎನ್ನೊಡೆಯ ಶ್ರೀರಾಮ 3