ನಾರಾಯಣ ತನ್ನ ನಂಬಿದ ಭಕುತರ ಕಾರುಣ್ಯದಿ ಕಾವ ಪ
ಮಾರುತಿ ಸಹಿತನಾಗಿ ತಾನೀ ಶರೀರದೊಳಿಹ ದೇವ ಅ.ಪ
ಅನಿರುದ್ಧನು ತಾ ಸಕಲ ಚರಾಚರ ಸೃಷ್ಟಿಯ ಗೈವ
ವನಧಿಶಯನ ಪ್ರದ್ಯಮ್ನನು ಬ್ರಹ್ಮಾಂಡವ ಪಾಲಿಸುವ
ತ್ರಿನಯನನಂತರ್ಗತ ಸಂಕರ್ಷಣ ತಾನು ಲಯವನು ಗೈವ
ವಾಸುದೇವ ಸುಜೀವರಿಗೆ ಮೋಕ್ಷವನೀವ 1
ನರಸಿಂಹ ರೂಪದಿ ಹರಿಯು ಭಕುತ ಪ್ರಹ್ಲಾದನ ಕಾಯ್ದ
ಸಿರಿ ರಾಮನು ತಾನಾಗಿ ಬಂದು ದಶಶಿರನ ಭಂಜಿಸಿದ
ದುರುಳ ಕಂಸನ ನಿಗ್ರಹಿಸಲು ಯದು ವಂಶದೊಳುದಿಸಿ ಬಂದ
ಪರಾಶರಾತ್ಮಜನಾಗಿ ವರವೇದ ವಿಭಾಗವ ಗೈದ 2
ವರಾಹ ನರಹರಿರೂಪವ ತಾ ಕೊಂಡ
ಇಚ್ಛೆಯಿಂದಲಿ ವಟುವಾಗಿ ಕೊಡಲಿಯ ಪಿಡಿದ ಪ್ರಚಂಡ
ಸಿರಿ ಕೃಷ್ಣ ದಿಗಂಬರನಾಗಿ ಕಂಡ
ಸ್ವಚ್ಛ ಅಶ್ವವೇರಿದ ರಂಗೇಶವಿಠಲ ಬಿನಗು ದೈವರ ಗಂಡ 3