ಸಲಹು ಸಲಹು ಸಲಿಲಜನಯನಾ|ಎನ್ನಾ|
ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ಪ
ಕರುಣ ನೋಟಗಳಿಂದಲಿ ನೋಡಿ|ಸರ್ವ|
ಭಾರ ಒಪ್ಪಿಸಿಕೊಂಡು ನಿಜ ನೀಡಿ|
ದಾರಿದೋರುವ ಸುಮತಿಯ ನಿಲಿಸಿ|ಅತಿ|
ತರಳನೆನುತ ಭಯವನೆ ಹರಿಸಿ 1
ಹರಿದುರಿತದ ಬಂಧನ ಬಲಿಯಾ|ತವ|
ಚರಣದ ಭಕುತಿ ಕೊಡಲಿ ದೊರಿಯಾ|
ಹರಿಗುಡದರಸನ ದಶಮುಖದಾ ಸಂಗ|
ಲಿರಿಸು ದಾಸರ ಸಗಟವನೊದೆದಾ2
ತ್ರಿಪುಟಿಯ ಸಂಗ ಬಿಡಿಸು ಮನದಿ|ಎನ್ನ|
ವಿಪುಳ ವಾಜಿಯೊಳಿರಿಸು ಧೃಡದಿ
ಕೃಪೆಯಲಿ ಮಹಿಪತಿ ಸುತ ಪ್ರಾಣಾ|ಎನ್ನ|
ಅಪರಾಧ ಕ್ಷಮಿಸಿ ಹೊರಿಯೊ ಪೂರ್ಣಾ3