ಏನ ಪೇಳಲಿ ಹರಿಯ ವ್ಯಾಪಾರ ಮಹಿಮೆ ಪ
ಆನಂದ ಆಶ್ಚರ್ಯ ಆಗುವುದು ಎನಗೆ ಅ.ಪ.
ಮರಳಿಗೋಸುಗ ಪೋಗೆ ಮಾಣಿಕ್ಯ ದೊರೆಯಿತು
ಅಮೃತ ಕಳಶವಾಯ್ತು
ಇರುಳು ಕತ್ತಲೆಯೊಳಗೆ ಮಣಿದೀಪ ಮಿರುಗಿತು
ಕಮಲ ಮಾಲಿಕೆಯಾಯ್ತು 1
ಪಾಪ ಕಾರ್ಯವ ಕೊಳಲು ಪುಣ್ಯ ಸಾಧನವೀವ
ಪಾಪ ಸಾಧನವೀವ ಪುಣ್ಯ ಕಾರ್ಯದಲಿ
ಪಾಪ ಬೀಜದ ಪುಣ್ಯ ಪುಣ್ಯ ಬೀಜದ ಪಾಪ
ಶ್ರೀಪತಿಯ ವ್ಯಾಪಾರ ಈ ಪರಿಯಲಿಹುದು2
ಮೃಗಯಾ ವಿಹಾರದಲಿ ಮನವಿಟ್ಟು ನಾ ಬರಲು
ಮೃಗಲಾಂಛನವನ ಕಳೆಯ ಮೀರುವಂಥ
ಮಿಗೆ ತೇಜದೀ ಮಗುವು ಎನಗೆ ದೊರೆತುದು ನರ
ಮೃಗರೂಪಿ ಕರಿಗಿರೀಶನ ಕರುಣವಿಲ್ಲದಲೆ 3