ಶಿಶುವಿನ ಯಾತಕ ದೂರವಿರೆ|
ನಿಶಿದಿನ ನೋಡಲು ಮಾತವರಿದವಾ|
ಮರಳನೆ ಮಾಡುವರೆ ಪ
ಅತಿ ಮೋಹದಿಂದಲಿ ಮೊಲೆಯನು|
ಬಾಯೊಳಗಿಟ್ಟರೆ ಸೇವಿಸನು|
ಮಿಲೆ ಯಿಲ್ಲದ ಪಾಲ್ಮೊಸರನು|
ಕುಡಿಯಲು ತಕ್ಕವನೆ 1
ಪರಿಪರಿಯಿಂದಲಿ ಮುಂದಕೆ ಕರೆದರೆ|ಸರಕನೆ ಹೆಜ್ಜಿಡನು|
ಹರಿ ನಿಮ್ಮುಡುಗೆಯ ಸೆಳೆದು ಕೊಳುತಲಿ|
ಮರವನೆ ಏರುವನೆ 2
ಸುರಜನ ಪಾಲಕ ಮಹಿಪತಿ ನಂದನ|ಜೀವನ ಮೂರುತಿಯಾ|
ಕುರುಪಿಡಬಹುದೆನೆ ಮಾನವನೆಂದು|
ಲೀಲೆಯ ದೋರುತಿಹ 3