ಸಂತರ ಸಹವಾಸ ಮಾಡು ಮನುಜ ನೀ |
ಭ್ರಾಂತ ಜನರ ಸಂಗ ವೀಡ್ಯಾಡು |
ಅಂತರಂಗದಲಿ ಸುಖವ ಸೂರ್ಯಾಡು | ಅ |
ನಂತನ ನಾಮವ ಕೊಂಡಾಡು ಪ
ದಾವ ಗ್ರಾಮದಲ್ಲಿ ಧನ ಧಾನ್ಯ ಬನವು |
ತೀವಿಕೊಂಡಿಹ ಸಂದಣಿ ಜನವು |
ಆವೂರೊಳಿಲ್ಲದಿರೆ ಸಂತರನವು |
ನೀ ವಾಸ ಮಾಡಬ್ಯಾಡ ಅರಕ್ಷಣವು 1
ಎಲ್ಲಿ ನೋಡಲು ದಿವ್ಯ ಪಟ್ಟಣಲ್ಲಾ |
ಚಲ್ಪಗೋಪುರ ಮನುಧೊರೆರಿಲ್ಲಾ |
ಅಲ್ಲಿ ಸಾಧುರ ನರಹಳಿದಲ್ಲಾ |
ನಿಲ್ಲು ಕಾಲೂರಿ ಸುಖವಿಹುದೆಲ್ಲಾ 2
ಅವರಿದ್ದುದೆ ಸ್ಥಳ ವಾರಣಾಸೀ |
ಅಚರ ದರುಶನ ಪುಣ್ಯದ ರಾಶೀ |
ಅವರ ನೆರೆಯಲ್ಲಿ ಸ್ವರ್ಗ ಸುಖದಾಶಿ |
ಈ ವಾಕ್ಯ ಮಹಿಪತಿ ಜ ನಾಲಿಸಿ 3