ಒಟ್ಟು 401 ಕಡೆಗಳಲ್ಲಿ , 72 ದಾಸರು , 375 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತಯಾಮಿ ರಾಮಮಮಿತಮಹಿಮಂ ಶಾಂತದಾಂತ ಮಾಕಾಂತ ಧೀಮಂತ ಪ ಅಂತರಾತ್ಮಮಮಲ ಸುಗುಣ ಭರಿತಂ ಸಂತ ಹನೂಮಂತನಮಿತ ಚರಿತಂಅ.ಪ ಮೌನಿಯಾಗ ಪಾಲಮತುಳ ಶೂರಂ 1 ಮಾನಿನೀಮಣಿ ಶಾಪಭಂಗ ಚತುರಂ 2 ಜಾನಕೀ ಹೃದಯಾಪಹಾರ ಧೀರಂ 3 ಸಾನುಜ ಭರತೇಷ್ಟದಾತಮುದಾರಂ 4 ದಾನವ ಖರದೂಷಣ ಸಂಹಾರಂ 5 ಆನತ ಖಚರೇಂದ್ರ ಮೋಕ್ಷದಾತಾರಂ6 ಕಾನನ ಸತ್ಪಾವನಕರ ಸಂಚಾರಂ 7 ವಾನರಪತಿ ಸೇವಿತ ಪರಿವಾರಂ 8 ದಾನವ ರಾವಣ ಮರ್ದನ ಶೂರಂ9 ದೀನಪಾಲ ಮಾಂಗಿರಿಪತಿ ಗಂಭೀರಂ 10
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚಿರಶಾಂತಿ ಪ್ರದಾತಾ ಗುರುವರಾ ಪರಮಾರ್ಥಪ್ರಬೋಧಾ ಸುಖಕರಾ ಭವವಿತರಣಾ ದಿವ್ಯಚರಣಾ ತಿಮಿರ ಮುಸುಕಿರೆ ಸೋಹಮೆನಿಪ ಜ್ಞಾನಸೂರ್ಯ ಉದಿಸಿ ನೀ ಘನಸ್ವಾತ್ಮರಂಜನಾ ಶೃತಿಶಿರಗಳಿಗೂ ಪೇಳಲಾಗದೆ ನೇತಿ ಎನ್ನುವ ಮೌನವ ಧರಿಸಿದ ಆತ್ಮತತ್ವವ ಪೇಳ್ದೆ ಧೀರನೇ ಭವಶರಧಿಯಲಿ ನಾವಿಕ ನೀನೇ ಸಾವಕಾಶದಿ ದಾಂಟಿಸುತಿರುವೀ
--------------
ಶಂಕರಭಟ್ಟ ಅಗ್ನಿಹೋತ್ರಿ
ಜಯ ರುಕ್ಮಿಣೀ ಕಾಂತ ಜಯ ಪಯೋನಿಧಿ ಶಾಂತ ಪ ಜಯತು ಜಯ ಭಗವಂತ ಜಯತು ಧೀಮಂತ ಅ.ಪ ಜಯ ಭಕ್ತಮಂದಾರ ಜಯ ಮೌನಿಪರಿವಾರ ಜಯತು ಜಯ ಧುರಧೀರ ಜಯತು ಸಾಕಾರಾ 1 ವಿಜಯ ಮೌಕ್ತಿಕಾಭರಣ ಜಯತು ವಿಧಿನುತಚರಣ ಜಯತು ಜಯ ಭವತರಣ ಜಯ ಶರಣಕರುಣಾ 2 ಜಯನಾದ ಸುವಿಲಾಸ ಜಯತು ಭಾಸ್ಕರ ಭಾಸ ಜಯ ಮಾಂಗಿರೀವಾಸ ಜಯ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯದೇವ ಜಯದೇವ ಜಯ ಚಿದಾನಂದಜಯ ಜಯತು ಜಯ ಜಯತು ಜಯ ನಿತ್ಯಾನಂದ ಪ ದೃಶ್ಯಾ ದೃಶ್ಯವಿದೂರ ದೂರ ಪರತತ್ವಾಮಿಕ್ಕು ಮೀರಿಹ ತೇಜ ತೇಜ ಮಹತ್ವಾಪೊಕ್ಕು ನೋಡಿಯೆ ಕಂಡು ನಿನ್ನ ನಿಜತ್ವನಕ್ಕು ನಿಜದಲಿ ಮಾಳ್ವೆ ಪಂಚೋಪಚಾರತ್ವ 1 ತಾನೆ ತಾನಾದ ಸುವಸ್ತು ನಿರ್ಲೇಪಧ್ಯಾನ ಮೌನ ಸಮಾಧಿಗೆ ತೋರ್ವರೂಪಏನ ಬಣ್ಣಿಸುವೆನು ಈ ಜಗವ್ಯಾಪಾನಾನರ್ಪಿಸುವೆ ನಿನಗೆ ಗಂಧಾನುಲೇಪ 2 ದುರಿತ ಕುಠಾರ ನೀನೆನಿಪೆಭರ್ಗಾ ಶ್ರೀವತ್ಸ ವೀಥಿಗಳ ರಕ್ಷಿಸುವೆಸರ್ಗಾದಿ ಮಹಾಪುಷ್ಪ ನಿನಗೆ ನಾನರ್ಪಿಸುವೆ3 ವಾಸನಕ್ಷಯದ ನಿರ್ವಾಸನ ಸ್ಪೂರ್ತಿಭಾಸಮಾನದಿ ತೋರುತಿದೆ ನಿನ್ನ ವಾರ್ತೆಈಶ ತಾಪಸರುಗಳು ನಿನ್ನ ಮೂರ್ತಿದೇಶಿ ಕೋತ್ತಮ ನಿನಗರ್ಪಿಸುವೆ ಧೂಪಾರತಿ4 ವಿಶ್ವ ವಿಶ್ವ ಸೂತ್ರ ವಿಖ್ಯಾತವಿಶ್ವ ಪೂರಿತ ತಂತ್ರ ವಿಶ್ವಾತೀತವಿಶ್ವ ಜ್ಯೋತಿಯನರ್ಪಿಸುವೆ ಗುರುನಾಥ 5 ನಿತ್ಯ ಸಂತುಷ್ಟ ಶಿರೋಭಾಗಅತ್ಯಂತ ಆನಂದವಹ ಸದಾಭೋಗಪ್ರತ್ಯಗಾತುಮತರ ಪುಷ್ಪಪರಾಗಅರ್ಥಿಯಲಿ ಅರ್ಪಿಸುವೆ ನೈವೇದ್ಯ ನಾನೀಗ6 ಇಂತುಪಚಾರಪಂಚದ ಪೂಜೆಯನೀಗಅಂತರಂಗದಿ ಚಿದಾನಂದನಿಗೆ ಈಗ ಸಂತಸದಿಂದ ನಾ ಮಾಡುತಲಾಗಎಂತು ಎನಲಿ ತಾನೇ ತಾನಾದ ಬೇಗ7
--------------
ಚಿದಾನಂದ ಅವಧೂತರು
ಜರ ಇನ್ಯಾತಕೆ ಬಂತಮ್ಮಾ ಸಜ್ಜನರಿಗೆಜರ ಇನ್ಯಾತಕೆ ಬಂತಮ್ಮಾ ಸಜ್ಜನರಿಗೆ ಪ ಪರಮೇಷ್ಠಿ ಜನಕಾನೆಪರನೆಂದು ತಿಳಿಸಾದೆ ಪರಗತಿಯ ತೋರದ ಅ.ಪ. ಸ್ನಾನವ ಮಾಡಿಕೊಂಡು ಕುಳಿತು ಬಲುಮೌನದಿಂದಿರಲೀಸಾದೆ ||ಶ್ರೀನಿವಾಸನ ಧ್ಯಾನ ಮಾಡಾದೆ ಮನಸುಶ್ವಾನನೋಪಾದಿಯಲ್ಲಿ ತಾ ಓಡುವಂಥ 1 ಜಪ ಮಾಡುವ ಕಾಲದಲ್ಲಿ ಕರೆಯ ಬರೆವಿಪರೀತವಾಗುವದು ಮನಸು ||ಸ್ವಪನದಂತೆ ಮನಸಿಗೆ ಪೊಳದು ಬಲುಸುಪಥವ ತಪ್ಪಿಸಿ ಅಪಗತಿ ಕೊಡುವಂಥ 2 ಯಜಮಾನನು ಮಾಡಿದ ಪಾಪಂಗಳವ್ರಜವು ಬಿಡದೆ ಅನ್ನದೊಳಗಿಪ್ಪುದ ||ದ್ವಿಜನು ಭುಂಜಿಸಲಾಗಿ ಅವನ ಉದರದೊಳುನಿಜವಾಗಿ ಇಪ್ಪಾವು ಸುಜನಾರು ಲಾಲಿಸಿ 3 ಉದರದೊಳಗೆ ಬಿಚ್ಚದ ಸಾವಿರಾರುವಿಧವಾಗುವದು ಕೇಳು ||ಅದೇ ದೇಹ ಪುಷ್ಟಿ ಮಲ ರೇತಸ್ಸುಅದೇ ಪಾಪಿಗೆ ತಿಳಿಯದೆ ಭುಜಿಸುವಂಥ 4 ಕೆಳಗೆ ಕುಳ್ಳಿರಿಸಿದಾರೆ ಜ್ಞಾನಿ-ಗಳ ಬೊಗಳುವೆ ಕುನ್ನಿಯಂದದಿ ||ಒಳಗೆ ಕರೆದು ಒಯ್ದು ಬೆಳಗಿಲಿಕುಳ್ಳಿರಿಸೆ ಸಾಯಂ ಪ್ರತಿ ಸ್ತುತಿ ಮಾಡುವಾ 5 ಪ್ರಸ್ತದಾ ಮನೆಯೊಳಗೆ ಕರೆಯಾದಲ್ಲಿಗೆಸ್ವಸ್ಥಾದಿ ನೀ ಕುಳಿತುಕೊಂಡು ||ವಿಸ್ತಾರದಿ ಹಾರೈಸಿ ಪ್ರ-ಶಸ್ತವಾಯಿತೆಂದೂ ಮಸ್ತಕ ತಿರುಹುವೆ 6 ಮಾಡಿದ ಮಹಾ ಪುಣ್ಯದ ಓದನಕಾಗಿಕಾಡಿಗೊಪ್ಪಿಸಿ ಪೋದಂತಾಯಿತು ||ಗಾಡಿಕಾರ ಮೋಹನ್ನ ವಿಠಲನಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ 7
--------------
ಮೋಹನದಾಸರು
ಜಲಧಿ ಪವನಜ ಪ್ರೇಮಾ ಪ ಪರಮ ಪಾವನ ನಾಮ | ಲೋಕಾಭಿರಾಮಾ ಅ.ಪ ಜಾನಕಿ ರಾಮ | ದಾನವ ಭೀಮಾ ಭಾನು ಕುಲೋದ್ದಾಮಾ | ನೀರದ ಶ್ಯಾಮ 1 ಮೌನಿಜನಾರಾಮ | ಶಿವನುತರಾಮ ಅನುಪಮಸೀಮ | ಮಾಂಗಿರಿಧಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಾನಕೀಮನೋಹರಾ ಜನಪಕುಮಾರಾ ಭಾನುವಂಶಭಾಸ್ಕರಾ ದುರಿತವಿದೂರಾ ಪ ಮಾರಕೋಟಿಸುಂದರ ಶರಧಿಗಂಭೀರ ಶೂರ ದೈತ್ಯಭೀಕರ ಪರಮ ಉದಾರ 1 ವಾನರೇಂದ್ರ ವಂದಿತ ಮೌನಿನಿಕರ ಸೇವಿತ ಸನ್ನುತ 2 ಪಾಹಿ ಪಾಹಿ ರಾಘವೇಶ ಪಾಹಿ ಲೋಕೇಶ ಪಾಹಿ ಪಾಹಿ ಮಾಂಗಿರೀಶ ಸುಪ್ರಕಾಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಾನಕೀಶ ವಿಠಲ ನೀನಿವನ ಪೊರೆಯೋ ಪ ಮೌನಿಕುಲ ಸನ್ಮಾನ್ಯ | ಆನತೇಷ್ಟಪ್ರದನೆಆನಮಿಸಿ ಪ್ರಾರ್ಥಿಸುವೆ | ಭಿನ್ನಪವ ಪಾಲಿಸೋ ಅ.ಪ. ಸತಿ ಸ್ವಪ್ನದಲಿ | ಅವನಿಜೆಯ ವಲ್ಲಭನೆ ತವನಾಮ ಸೂಚಿಸಿಹೆ | ಎನ್ನ ರೂಪದಲೀಭವವನಧಿ ದಾಟಲ್ಕೆ | ತವನಾಮ ಸಂಸ್ಮರಣೆನವಪೋತವೆನಿಸಿಹುದು | ಪವನಾಂತರಾತ್ಮಾ 1 ನಿತ್ಯ ತವ ಪದದಲ್ಲಿ | ಭಕ್ತಿ ಕರುಣಿಸೋ 2 ಮಧ್ವಮತ | ಸಾಕಷ್ಟು ತಿಳಿಸುತ್ತಾಮಾಕಳತ್ರನೆ ಇವನಾ | ವ್ಯಾಕುಲದಲ್ಹರಿಸೀಲೌಕಿಕವೆಲ್ಲ ವೈ | ದೀಕ ವೆಂದೆನಿಸುತ್ತಪ್ರಾಕ್ಕು ಕರ್ಮವ ಕಳೆಯೊ | ಲೋಕ ಲೋಕೇಶಾ 3 ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತಮ ಹರಿಯು ನಿ | ಸ್ಸಾರ ಜಗವೆಂಬಾಚಾರುಮತಿಯನೆ ಇತ್ತು | ಪಾರಗಾಣಿಸು ಭವವಧೀರ ನೀನಲ್ಲದಲೆ | ಆರು ಕಾಯುವರೋ 4 ಜೀವ ಬಹು ಪರತಂತ್ರ ದೇವ ನಿಜ ಸ್ವತಂತ್ರಈ ವಿಧದ ಸುಜ್ಞಾನ | ಸಾರ್ವಕಾಲದಲೀದೇವ ನೀ ದಯದಿ ಈ | ಜೀವಂಗೆ ಕರುಣಿಸೇಭಾವದಲಿ ಬೇಡ್ವೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜೋ ಜೋ ಜೋ ಜೋ ಜೋ ಎನ್ನ ಗುರುವೆ ಜೋ ಜೋ ಜೋ ನಿಜ ಕಲ್ಪತರುವೆ ಜೋ ಜೋ ಎಂದು ಜನ್ಮಕ್ಕೆ ಬರುವೆ | ಜೋ ಜೋ ನಿಮ್ಮ ಚರಣದಲ್ಲಿರುವೆ ಜೋ ಜೋ ಪ ಅಷ್ಟ ಸಿದ್ಧಿಗಳೆಲ್ಲ ಬಡ್ಡಿಯ ಕೊರೆಸಿ | ಗಟ್ಟ್ಯಾಗಿ ವೇದದ ಕಾಲವ ನಿಲ್ಲಿಸಿ ಅಷ್ಟತತ್ತ್ವದ ಹುರಿ ಹೆಣಿಕಿಲಿ ಬಿಗಿಸಿ | ತೊಟ್ಟಿಲೊಳರುವಿನ ಹಾಸಿಗೆ ಹಾಸೀ || ಜೋ ಜೋ 1 ಸಾಧನ ನಾಲ್ಕೆಂಬೋ ಹಗ್ಗವ ಹೊಸೆದು | ಬೋಧದ ಗಂಟು ತುದಿಯಲ್ಲಿ ಬಿಗಿದು | ನಾದ ಅನಾಹತ ಗಂಟೆಯ ಹೊಡೆದು | ಆದಿ ಗುರುವಿನ ಮಲಗಲಿ ಕರೆದು || ಜೋ ಜೋ || 2 ಕಾಲಿಗೆ ಯೋಗದ ಪಾಶವ ಕಟ್ಟಿ | ಮೂಲೈದು ಬ್ರಹ್ಮರಂಧ್ರಕ್ಕೆ ಮುಟ್ಟಿ | ಮೇಲಿನ ಜೋತೆಗೆ ಭಾಸದ ಬುಟ್ಟಿ | ಲೀಲೆಯಿಂದಲಿ ನೋಡು ಗುರುವಿನ ದೃಷ್ಟಿ || ಜೋ ಜೋ 3 ಮನಸೀಗೆ ಬಾರದ ಮಾತುಗಳಾಡಿ |ನೆನೆಹಿಗೆ ನಿಲ್ಕದ ನಿತ್ಯನ ಕೂಡಿ | ಕನಸು ಎಚ್ಚರದ ಗಾಢವ ನೋಡಿ |ಉನ್ಮನಿ ಬೆಳಗುವ ಮೂರ್ತಿಯ ಪಾಡಿ || ಜೋ ಜೋ 4 ಭಕ್ತಿ ವಿರಕ್ತಿಗೆ ಸಿಲ್ಕುವನೀತಾ | ಸತ್ಯ ಶರಣ್ಯ ಸದ್ಗುರು ನಾಥಾ | ಕರ್ತೃತ್ವ ಇಟ್ಟನು ಮೌನದಲ್ಲೀತಾ | ವೃತ್ತಿ ವಿರಹಿತ ಗಿರಿ ಪಾಲಿಸು ಗುರುತಾ || ಜೋ ಜೋ 5
--------------
ಭೀಮಾಶಂಕರ
ಜೋ ಸಚ್ಚಿದಾನಂದನೆ ಜೋ ಜೋ ದೇವಕಿಕಂದನೆ ಜೋಜೋ ಬ್ರಹ್ಮಾದಿವಂದ್ಯನೆ ಧ್ರುವ ಹುಟ್ಟಿ ಬಂದು ನಿಜದೋರಿದೆ ಖೂನ ಮುಟ್ಟಿ ಬೀರುವ ಸುಚಿನ್ನಸಾಧನ ಇಟ್ಟ ಕಾವಲಿ ಹಾಕಿದೆ ಮೌನ ಮೆಟ್ಟಿಮರ್ದಿಸಿ ಬಂದೆ ಮಾವನ 1 ಮಾಡಬಂದೆ ನೀ ಧರ್ಮಸ್ಥಾಪನಿಯ ನೋಡಬಂದೆನಿಷ್ಟ ಜನರಾರ್ಚನಿಯ ಆಡಬಂದೆ ನಂದಯಶೋದೆ ಮನಿಯ ನೀಡಬಂದೆ ನಿಜಸುಖಸಾಧನಿಯ 2 ಶಿಷ್ಟಜನರಿಗಾಗಿ ಸಹಾಕಾರಿ ಸೃಷ್ಟಿಯೊಳು ತೋರಬಂದೆ ಶ್ರೀಹರಿ ದುಷ್ಟ ಜನರ ಮರ್ದಿಸುವಾವತಾರಿ ಕಂಸಾರಿ 3 ದೇವಾದಿಗಳ ಮಗುಟಮಣಿಯೆ ಭಾವಿಸಲಳವಲ್ಲ ಸದ್ಗುಣಿಯೆ ಕಾವ ದೈವ ನೀನೆ ಕೃಷ್ಣ ಕರುಣೆಯೆ ದೇವಕಿ ಗರ್ಭನಿಧಾನದ ಖಣಿಯೆ 4 ಬಲವಾಗಿ ಎನಗಬಂದೆ ಸರ್ವೇಶ ಒಲಿದು ಭಾನುಕೋಟಿತೇಜಪ್ರಕಾಶ ಫಲವ ನೀಡಿ ತೋರಬಂದೆ ಸಂತೋಷ ಸಲಹಬಂದೆ ಮಹಿಪತಿ ಪ್ರಾಣೇಶ 5 ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ ನೀನೆ ಮುರಾರಿ 6 ಅನೆ ಕಾಯಲಿಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀಹರಿ 7 ಪತಿತ ಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜೋಜೋಜೋ ಬಾಲ ಮುಕುಂದಾ | ಯೋಗಿ ಹೃದಯಾನಂದ | ಜೋಜೋ ನಮ್ಮ ಗೋಪಿಯ ಕಂದಾ | ಜೋಜೋ ಗೋಪಾಲ ಗೋವಿಂದಾ | ಜೋ ಜೋ ಪ ಉರಗರಾಜನ ಹಾಸಿಗೆ ಮೇಲೆ | ಶಿರಿದೇವಿ ಕೈಯಲಿ ಶೇವೆಯ ಕೊಳ್ಳುತಲಿ | ಭರದಿ ನಾರದ ಗಾಯನದಲಿ | ಇಂಥಾ | ಮೆರೆವ ಯೋಗದ ನಿದ್ರೆಯಲೀ || ಜೋಜೋ 1 ಆದನೆಲ್ಲವ ಬಿಟ್ಟು ಶ್ರೀಹರಿ | ವಿದಿತ ಬಾಲಕ ವೇಷವದೋರಿ | ಪುದುಳದಿಂದಲಿ ತೊಟ್ಟಿಲ ಸಾರಿ | ಮುದದಲ್ಲಾಡುವ ಸುರ ಸಹಕಾರಿ || ಜೋಜೋ 2 ಏನು ಪುಣ್ಯವೋ ಗೋಕುಲ ಜನರ | ಶ್ರೀ ನಂದಾತ್ಮಜ ನಾದವಿನೋದಾ | ಧ್ಯಾನ ಮೌನಕೆ ಗೋಚರಪಾದ | ಮಹಾ | ದಾನಿ ಮಹೀಪತಿಸುತ ಪ್ರಿಯನಾದಾ | ಜೋ ಜೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಟೀಕಾರ್ಯ - ಟೀಕಾರ್ಯ ಪ ಕಾಕು ಮತಗಳ ವಿ | ವೇಕದಿ ಖಂಡನ ಅ.ಪ. ಎತ್ತಾಗಿರುತಿರೆ | ಶಾಸ್ತ್ರಬೋಧ ಶ್ರುತಉತ್ತಮ ಸಂಸ್ಕøತಿ | ಪೊತ್ತು ಜನಿಸಿದೆ 1 ಲಕ್ಷವಿತ್ತನೀ | ಲಕ್ಷಿಸದಲೆ ಮುನಿತ್ರ್ಯಕ್ಷನಂಶರಿಂ | ಭಿಕ್ಷುಕನಾದವ 2 ಮಧ್ವಶಾಸ್ತ್ರ ದು | ಗ್ದಾಬ್ಧಿ ಮಥಿಸಿ ಬಹುಶುದ್ಧ ಸುಧೆಯ ನೀ | ಮೆದ್ದು ಉಣಿಸಿದೆ 3 ಮೌನಿ ಮಧ್ವಕೃತ | ಮಾನ ಲಕ್ಷಣಕೆಗಾನ ಮಾಡ್ದೆ ಪ್ರ | ಮಾಣ ಪದ್ಧತಿಯ 4 ಪದ್ಧತಿಯಿಂದಲಿ | ವಿದ್ಯಾರಣ್ಯರಸದ್ದಡಗಿಸಿದೆಯೊ | ಬುದ್ಧಿ ಚಾತುರ್ಯ 5 ಯೋಗಿ ವರೇಣ್ಯನೆಕಾಗಿನಿ ತೀರಗ ಭಾಗವತರ ಪ್ರಿಯ 6 ಮಾವಿನೋದಿ ಗುರು | ಗೋವಿಂದ ವಿಠಲನಭಾವ ಕುಸಮದಿಂ | ದೋವಿ ಪೂಜಿಸುವ 7
--------------
ಗುರುಗೋವಿಂದವಿಠಲರು
ತನುವೆಂಬ ಭವನದಲಿ ಮನವೆಂಬ ಮಂಟಪದಿ ವನರುಹಾಸನ ವಿಹುದು ನಿನಗಾಗಿ ಕೃಷ್ಣಾ ಪ ಅನವರತ ಸ್ವಾಗತವ ಇನಿದಾಗಿ ಪೇಳುತಲಿ ಸನುಮತದೊಳೀರೈದು ಮುನಿವರರು ನಿಂದಿಹರು ಅ.ಪ ಎನಗೆ ತನಗೆಂದಿಬ್ಬರನುವಾಗಿ ಕಾದಿಹರು ಘನ ಮೌನಿಯಂತೊಬ್ಬ ಮಣಿಯುತಿಹನು ವನಜ ಸಂಭವ ಜನಕ ಮುನಿಯೊಡನೆ ನೀ ಬಂದು ಕನಕಮಂಟಪವೇರು ಅವರಿಬ್ಬರೋಡುವರು 1 ಕರಿಯ ಮೈಯವನೊಬ್ಬ ದುರದುರನೆ ನೊಡುವನು ಪರಿವಾರದವರನ್ನು ತೋರುತಿಹನೊಬ್ಬ ಕರದಿ ಸನ್ನೆಯ ಮಾಡುತಿಬ್ಬರೂ ಬರುತಿಹರು ತರಿದವರ ಮಂಟಪವನೇರೊ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು |ಸರ್ಪಶಯನನ ದೂತಾ ||ಇಪ್ಪತು ಒಂದು ಕುಭಾಷ್ಯ ಮುರಿದ | ರಾ ಮ |ತ ಪ್ರವರ್ತಕ ರಾಘವೇಂದ್ರ ಮುನಿಪ ಮಹಾ ಪ ಪ್ರತಿ ವರುಷಕೆ ಬಂದು ಸನುತಿಸಿ ಪೋಗು ಎಂದು |ನತ ಸ್ವಪ್ನದಲಿ ನೀ ಬಂದೂ ||ಹಿತದಿಂದ ಪೇಳಲು ರತನಾಗಿ ಧನದಿ ಮ |ರತು ಬಿಟ್ಟೆ ನಿಮ್ಮನು ಯತಿಕುಲೋತ್ತಮ ಇಂಥಾ 1 ಸ್ನಾನ ಸಂಧ್ಯಾನ ಸುಜಪತಪ ವ್ರತಹೋಮ |ಮೌನ ಮಾರ್ಗಗಳರಿಯೆ ||ಜ್ಞಾನಿಗಳಾನು ಸಂಧಾನ ಪೂರ್ವಕ ಪೂಜೆ |ಯಾನು ಮಾಡದೆ ದುಷ್ಟ ಮಾನವರೊಳಗಿದ್ದೆ 2 ಏಸು ಜನ್ಮದಿ ಬಂದಾ ದೋಷವ ಕಳದು ವಿ |ಶೇಷ ಸುಖವ ಕೊಡುವಾ ||ಈ ಸುವಾರ್ತಿಯ ಕೇಳಿ ಮೊರೆಹೊಕ್ಕೆ ಗುರು ಪ್ರಾ ||ಣೇಶ ವಿಠಲನ ದೂತಾ ಮತಪ್ರೀತಾ 3
--------------
ಗುರುಪ್ರಾಣೇಶವಿಠಲರು
ತಾನಸÉ ತಾನಾದೆನ್ನ ಸ್ವಾಮಿ ಭಾನುಕೋಟಿ ಅಂತರ್ಯಾಮಿ ಧ್ರುವ ಕಾಣಬರುತಾದೆ ನೋಡಿ ಙÁ್ಞನವಂದಭ್ಯಾಸ ಮಾಡಿ ಭಾನು ಭವದಲಿ ಕೂಡಿ ನಾನು ನೀನೆಂಬುದೀಡ್ಯಾಡಿ 1 ತಿರುಗಿ ನೋಡು ದೋರುತಾನೆ ಅರುವಿನೊಳು ನಿಂತಾನೆ ಸಾರಸುಖ ಬೀರುತಾನೆ ಕೋರಿ ತಾರ್ಕಣ್ಯಾಗ್ಯಾನೆ 2 ಧ್ಯಾನ ಮೌನಾಗ್ಯಾನೆ ತಾನೆ ಜ್ಞಾನಗುರು ದೋರುತಾನೆ ದೀನ ಮಹಿಪತಿಗೆ ತಾನೆ ಖೂನ ಪರಿಪೂರ್ಣಾಗ್ಯಾನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು