ಒಟ್ಟು 104 ಕಡೆಗಳಲ್ಲಿ , 40 ದಾಸರು , 93 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಣ್ಣವಿಲ್ಲ ಭಾಗವತರೆ |ನುಣ್ಣನೆಯ ಗೋಡೆಗೆ ನಿನ್ನ ತೊಡೆದು ಬಿಟ್ಟೆ......... ಪ.ವೀಳೆಯ ಹಾಕುವನಲ್ಲ ವ್ಯಾದಿಷ್ಠ ನನಗಂಡ ||ಬಾಳುಗೇಡಿ ಎನ್ನ ಬಾಯನೋಡಿ ||ಹಾಳಾದ ಮನೆ ಹೊಕ್ಕು ಗೋಳುಗರಿಯತ್ತೇನೆ |ಕೇಳಿದ ಬಳಿಕಿನ್ನು ಹೇಳದೆ ಫಲವೇನು......... 1ಮದ್ದು ಮದ್ದು ತಿಂದು ಮನೆಯೆಲ್ಲ ಬರಿದಾಯ್ತು |ಹೊದ್ದಿತು ಮೂದೇವಿ ಮೈದುನಗೆ ||ಬದ್ಧತನದಿ ಸಂಜೆಭಂಗಿ ಮುಕ್ಕುವಭಾವ |ಒದ್ದು ಕೊಳ್ಳುತಾನೆ ಒಳಗೆ ಕದವನಿಕ್ಕಿ 2ಅನ್ನೆಕಾರಿ ಅತ್ತೆ ತೊನ್ನು ಬಡಕ ಮಾವ |ಗನ್ನ ಘಾತಕಿರಂಡೆಅತ್ತಿಗೆ ಮುಂಡೆ ||ಎನ್ನ ಗೋಳು ತಾಗಿ ಎಂದಿಗೆ ಹೋದಾರು |ಪನ್ನಗಶಯನ ಶ್ರೀ ಪುರಂದರವಿಠಲ 3
--------------
ಪುರಂದರದಾಸರು
ಸುರತಸುಖಕೆ ಅಂಗನೆಯರ ಮೇಳದಲಿಇಹಗೆ ಆಧ್ಯಾತ್ಮದಗೊಡವೆಏತಕೆಪಭಂಗಿ ಮಧ್ಯದಿ ಕೂಡಿ ಇಹಗೆ ಭಜನೆ ಸಾಧನೆಗಳೇತಕೆರಂಗುರಾಗದಿ ಮುಳುಗುವವನಿಗೆ ರೇಚಕ ವಿದ್ಯೆಯಾತಕೆಶೃಂಗಾರದ ಪದವಿಡಿದ ಮನುಜಗೆ ಸುಷುಮ್ನದ ಮಾರ್ಗವಿದೇತಕೆ1ನಲ್ಲೆಯರ ನುಡಿಯಿಂದ ಕೇಳುವಗೆ ನಾದಧ್ವನಿ ತಂಪೇತಕೆಚೆಲ್ಲೆಗಣ್ಣರ ಕುಚದಲೊರಗುವಗೆ ಚಿತ್ಕಳ ವಿಷಯವೇತಕೆಜೊಲ್ಲು ಕುಡಿಯುತಲಿಹ ಜಡನಿಗೆ ಜ್ವಲಿಸುತಿಹ ಅಮೃತವದೇತಕೆಹಲ್ಲು ತೆರೆವಹೊತ್ತಿಲಿರುವನಿಗೆ ಹಂಸದ ಕೂಟವದೇತಕೆ2ಭಾಮಿನಿಯರ ಸಭೆಯಲಿದ್ದವನಿಗೆ ಭ್ರೂಮಧ್ಯದ ಸದರೇತಕೆವಾಮಲೋಚನೆಯ ಅಂಗಸಂಗಗೆ ಹೃನ್ಮನ ಚಿಂತನವೇತಕೆಕಾಮಿನಿಯ ಕಣ್ಬಲೆಗೆ ಬಿದ್ದವಗೆ ಕಡೆಹಾಯುವ ಚಿಂತನೆಯೇತಕೆಸ್ವಾಮಿ ಚಿದಾನಂದ ಗುರುವಿನ ಸ್ಮರಣೆಯದು ಅವಗೇತಕೆ3
--------------
ಚಿದಾನಂದ ಅವಧೂತರು
ಹಿಡಿಸುವೆ ಹುಚ್ಚನೆ ಹಿಡಿಸುವೆರಂಗನರಸಿಯರ ಪಾಟ ಬಡಿಸುವೆ ಪ.ತಮವೆಂಬ ಭಂಗಿಯ ಕುಡಿಸುವೆಬುದ್ಧಿಭ್ರಮೆಗೊಂಡ ಮಾತು ನುಡಿಸುವೆಸುಮನಸರಿಗೆ ಹೆಂಡ ಕುಡಿಸುವೆಯಾರೂ ನಮಿಸದಂತೆ ದೂರ ಇಡಿಸುವೆ 1ರಜವೆಂಬೋದ್ರವ್ಯ ಬಚ್ಚಿಡಿಸುವೆಇವರ ರಾಜ ಲಕ್ಷಣಕಟ್ಟಿಇಡಿಸುವೆಗಜಗಮನೆಯರ ಗರ್ವ ಮುರಿಸುವೆನಮ್ಮತ್ರಿಜಗವಂದನ ಹಾಸ್ಯ ಮಾಡಿಸುವೆ2ಸತ್ಯ ಸಾಮಿತ್ಯವತೆಗೆಸುವೆಉನ್ಮತ್ತೆಯರ ಮಾಡಿ ಮೆರೆಸುವೆಕತ್ತಲೆ ಮನೆÀಯೊಳಗೆ ಹೊಗಿಸುವೆಇನ್ನೆತ್ತ ಹೋಗಲೆಂದು ಎನಿಸುವೆ 3ಯಾರೂ ಇಲ್ಲದಲಿ ಇಡಿಸುವೆಇವರ ನೀರು ಕಂಡು ಭಯಬಡಿಸುವೆಓರೆಂದು ಗಾಬರಿಗೆಡಿಸುವೆಕಾಯೋ ಶ್ರೀನಿವಾಸಾನೆಂದೆನಿಸುವೆ 4ಒಬ್ಬರಿÉಲ್ಲದಲಿ ಇಡಿಸುವೆಇವರನು ಗುಬ್ಬಿಯ ಹಾಂಗೆ ಭಯ ಪಡಿಸುವೆತಬ್ಬಿಬ್ಬುಗೊಂಡು ತಳವೆಳಸುವೆಅರ್ಥಿಲೊಬ್ಬ ರಾಮೇಶನ ನೋಡಿಸುವೆ 5
--------------
ಗಲಗಲಿಅವ್ವನವರು