ಒಟ್ಟು 99 ಕಡೆಗಳಲ್ಲಿ , 35 ದಾಸರು , 93 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಭಾರತೀ ತಾಯೆ |ಕರವಬಿಡದಲೆ ಕಾಯೆ ||ಮರುತದೇವನ ರಮಣಿ | ಸುರ ನದಿಯ ಭಗಿನಿ ಪಪ್ರದ್ಯುಮ್ನ ದೇವಸುತೆ | ರುದ್ರಾದಿ ಸುರ ವಿನುತೆ ||ಭದ್ರ ವಿಗ್ರಹೆ ದಯಾ ಸ | ಮುದ್ರೆ ಕುಲಿಶೆ ||ಅದ್ರಿಯೋಪಮ ದೋಷ | ಕಿದ್ದ ದುರ್ಮತಿಕ್ಲೇಶ||ವೊದ್ದು ನಿನ್ನವನೆನ್ನು | ಬುದ್ಧಿ ಕೊಡು ಇನ್ನೂ 1ನೀರಜಾಂಬಕೆ ಯನಗೆ | ತೋರು ಸಾಧನ ಕುನಗೆ |ಜಾರಿಸು ಭಕುತಿಯನ್ನು | ತೋರು ಕರುಣಾ ||ವಾರಿಧಿಹರಿಯಪಾದ| ಆರಾಧಿಸಲುಮೋದ|ವಾರವಾರಕೆ ಈಯೇ |ವಾರಣಗಮನೆಯೇ 2ಪ್ರಾಣೇಶ ವಿಠಲನ | ಧ್ಯಾನದೊಳಗಿರಿಸು ಮನ |ವಾಣೀ ಪದವೈದುವಳೇ |ಮಾನನಿನ್ನದೆಲೆ ||ಹೀನ ವಿಷಯಗಳೊಲ್ಲೆ | ನೀನೇ ಸ್ವಾಂತದಿ ನಿಲ್ಲೆ |ಕ್ಷೋಣಿಯೊಳಗತಿ ಮಾನೀ | ಜ್ಞಾನೀ ಅಹಿವೇಣೀ 3
--------------
ಪ್ರಾಣೇಶದಾಸರು
ಸದಾ ಪೂಜಿಪೆ ನಿನ್ನ ಸೌಭಾಗ್ಯಳೆ ಪಇಂದಿರಾದೇವಿಯೆ ಮಂದರೋದ್ಧರನ ರಾಣಿಇಂದೀವರಾಕ್ಷಿ ಆನಂದದಲಿ 1ಪದ್ಮಾಕ್ಷಿ ಎನ್ನ ಹೃತ್ಪದ್ಮದಿ ಹರಿಪಾದಪದ್ಮವ ತೋರಿ ಉದ್ಧರಿಸುವಳೆ 2ಅಂಬುಜಪಾಣಿಯೆ ಅಂಜುಜಾಕ್ಷನ ರಾಣಿಅಂಬುಧಿಶಯನನ ಪೊಂದಿರ್ಪಳೆ 3ಆದಿಕಾರಿಣಿ ಪತ್ರಾದಿ ರೂಪದಿ ಹರಿಯಆರಾಧಿಸುವಿ ಸರ್ವರಾಧಾರಿಯೆ 4ಹೆದರದೆ ಭೃಗುಮುನಿ ಒದೆಯೆ ಪಾದದಿಂದಕದನವ ಮಾಡಿದ ಕಲ್ಯಾಣಿಯೆ 5ಭಕ್ತಜನರು ನಿನ್ನ ಭಕ್ತಿಯಿಂ ಪೂಜಿಸಲುಮುಕ್ತಿ ಮಾರ್ಗವ ತೋರಿ ಸಲಹುವಳೆ 6ಸರಸಿಜಾಸನ ಮಾತೆ ಸ್ಮರಿಸುವೆ ನಿಮ್ಮಪಾದಸ್ಮರಣೆ ಮರೆಯದಂತೆ ಕರುಣಿಪುದು 7ಪಂಕಜನಾಭನ ಕಿಂಕರರನ್ನು ಕಾಯ್ವಬಿಂಕನಿನ್ನದು ಸರ್ವ ಅಲಂಕಾರಿಣಿ8ಕಮಲನಯನನೆ ಶ್ರೀ ಕಮಲನಾಭ ವಿಠ್ಠಲನಕ್ಷಣ ಬಿಡದಲೆ ತೋರು ನಮಿಸುವೆನು 9
--------------
ನಿಡಗುರುಕಿ ಜೀವೂಬಾಯಿ
ಸೀತೆ ಸದ್ಗುಣ ಗಣ | ವ್ರಾತೆ ಈರೇಳು ಲೋಕ |ಮಾತೆ ಪ್ರಣತ ಜನ | ಪ್ರೀತೆ ಸಾಗರ ಜಾತೆ ||ಮಾತು ಮಾತಿಗೆ ರಘು | ನಾಥನ ಸ್ಮರಣೆಯ |ಆತುರದಲಿ ಕೊಡು | ಸಿತಾಂಶು ವದನೆ ||ಪಲ್ಲ||ಶ್ರೀ ಭೂ ದುರ್ಗಾಂಭ್ರಣೀ ಸ್ವ | ರ್ಣಾಭೆ ರಾಮನ ರಾಣೀ |ಸಾಭಿಮಾನ ನಿನ್ನದ | ಮ್ಮಾ ಬಾಲಕನ ಕರ- ||ವ ಬಿಡದಲೆ ಸರ್ವ | ದಾ ಬಾದರಾಯಣನಂ- |ಘ್ರಿಬಿಸಜದ್ವಯವ | ನೇ ಭಜಿಸಲು ಜ್ಞಾನ- ||ವ ಒಲಿಸುವದತಿ | ಶೋಭನ ವಿಗ್ರಹೆ |ಹೇ ಬಡವನು ಗೈ | ಯ್ವಾ ಬಿನ್ನಪವನು |ನೀ ಬಿಸುಟದೆ ಬಹ | ಳಾ ಭಯ ಪರಿಹರಿ |ಸೀ ಭಕುತ ಜನರೊ | ಳು ಬೆರಸುವದೇ 1ಮಾಕಂಜದಳನೇತ್ರೆ | ಶ್ರೀ ಕುಂಭಿಣೀಜೆ ದಾತೆ |ನೀ ಕರುಣದಿ ನೋ | ಡೀಕಕುಲಾತಿಹಿಂಗಿಸೆ |ಬೇಕು ಸತ್ಸಾಧನವು | ಸಾಕು ದುರ್ವಿಷಯಗಳು |ಲೌಕಿಕಗಳೆಲ್ಲಾ ವೈ | ದಿಕವಾಗಲೆನಗೆ ||ನಾಕು ಮೊಗನ ಜನ | ನೀ ಕರಿಗಮನೆ ಪ- |ರಾಕುದಿವಿಜನುತೆ | ಶೋಕರಹಿತೆ ದನು- |ಜಾ ಕುಲ ಸಂಹರೆ | ಈ ಕಠಿಣ ಭವದೊ- |ಳೇಕೆ ದಣಿಸುತಿಹೆ | ನೀ ಕಡೆಗೆತ್ತಲೆ 2ದಾತಪ್ರಾಣೇಶ ವಿಠಲ | ಸೋತೆನೆಂದು ನಗಲು ನೀ- |ನಾತನ ದಾಯದಿಂ ಪುರು | ಹೂತನ ಸೋಲಿಸಿ ಪ್ರ- |ಖ್ಯಾತೆಯಾದೆ ಉದರೌ | ಜಾತ ಸದನೆ |ಸತ್ರಾಜಿತೆ ಲಕ್ಷ್ಮೀಯಾದಿ ದೇ | ವತೆಭಾಸ್ಕರಕಾಂತೆ ||ಭೂತಳದೊಳಗೆ ಅ | ನಾಥರಿಗೆವರಪ್ರ- |ದಾತೆ ಕೃಪಾ ನಿಧಿ | ಯೇ ತಡೆ ದುರ್ಮತಿ |ಧೌತ ವ್ರಜನಿ ಧರಿ | ಪೋತನಕನಲದೆ |ವಾತಪೂಜಿತೆ ರಮೆ | ಪಾತು ಪ್ರತಿಕ್ಷಣದಿ 3
--------------
ಪ್ರಾಣೇಶದಾಸರು