ಗುರುರಾಯರ ನಂಬಿರೋ | ರಾಘವೇಂದ್ರಗುರುರಾಯರ ನಂಬಿರೋ ಪ
ದುರಿತ ದುಷ್ಕ್ರತ ಹರಿಸಿಪುರುಷಾರ್ಥ ಪರಮವ ಕರಗತ ಕೈಗೊಳ್ಳಿ ಅ.ಪ.
ಪರಿಮಳೇತ್ಯಾದಿ ಸಂದ್ಗ್ರಂಥ | ವಿರಚಿಸಿವರಮೋಕ್ಷ ಪ್ರದವೆನಿಸುವಂಥ |ಎರಡೆರಡ್ಹತ್ತು ಮತ್ತೆ | ಎರಡೈದು ಗ್ರಂಥವಧರಣಿ ಸುರರಿಗಿತ್ತು | ಕರುಣವ ತೋರಿದ 1
ರಾಮಕೃಷ್ಣ ನರಹರೀ | ವೇದವ್ಯಾಸಮಾಮನೋಹರ ವೃಂದಾವನದಿವಾಮಾಂಗ ಎನಿಸೀಹ | ಶ್ರೀಮಹಿಳೆಸಹಿತಾಗಿಕಾಮಿತಾರ್ಥದ ಹರಿ | ನೇಮದಿ ನೆಲಸೀಹ 2
ಕೂಸೆರಡರ ವಯದೀ | ಮಂತ್ರಾಲಯದೇಶಕೆ ಪೋಗಿ ಮುದದೀ |ಲೇಸು ಸೇವೆಯ ಗೈಯ್ಯೆ | ಕಾಸರೋಗವನೀಗಿಮೇಶ ಗುರುಗೋವಿಂದ | ದಾಸನ್ನಾಗಿಸಿದ 3