ಒಟ್ಟು 168 ಕಡೆಗಳಲ್ಲಿ , 62 ದಾಸರು , 158 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯುದೇವರು ಆಂಜನೇಯ ಕುಂತೀತನಯ- ಅಂಜನಾಭಪ್ರಿಯ ಮಧ್ವಾಖ್ಯರಾಯ ಪ. ಮಂಜುಳಾಂಗ ಮೃತ್ಯುಂಜಯಾದಿ ಸುರ- ನಿತ್ಯ ನಿ- ರಂಜನ ದೇವಪ್ರಭಂಜನತನಯ ಅ.ಪ. ರಾಮರಾಯಬಂಟ ದಿತಿಸುತ- ಸ್ತೋಮಹರಣ ತುಂಟ ಸ್ವಾಮಿಕಾರ್ಯಮನಪ್ರೇಮನಿರಾಮಯ ಭೀಮಪರಾಕ್ರಮಧಾಮ ಘನಾಘನ- ಶ್ಯಾಮ ನಿಕಾಮ ಸುಧೀಮಲಲಾಮ 1 ಚಿಂತಾಮಣಿ ರಾಮ ನೇಮ- ವಾಂತು ಸಾರ್ವಭೌಮ ಸಂತೋಷದಿ ಗಗನಾಂತರಪಂಥದಿಂ ಅಂತರಿಸುತ ಮಹಾಂತೋದಧಿಯ ಪ್ರಾಂತಕೆ ಹಾಯ್ದ ನಿಶ್ಚಿಂತ ಹನುಮಂತಾ2 ಆಟನೋಟದಿಂದ ವನದೊಳು ಸಾಟಿಯಾಗಿ ಬಂದ ಮೀಟೆನಿಸುವ ಬಲು ಕಾಟಕ ದೈತ್ಯರ ಕೂಟ ಕೆಡಹಿ ಪುರಕೋಟಿಯ ತಿಕ್ಕಿದ ಪಾಟಲಮುಖ ಶತಕೋಟಿಶರೀರ 3 ಅಟ್ಟಹಾಸದಿಂದ ಕಮಲದಿ ಪುಟ್ಟಿದಾಸ್ತ್ರದಿಂದ ಕಟ್ಟಿಕೊಳ್ಳಿಸಿ ಜಗಜಟ್ಟಿ ಖ್ಯಾತಿಯಿಂದ ದಟ್ಟಿಸಿ ಲಂಕೆಯ ಪಟ್ಟಣವನು ಸೂರೆ- ಸುಟ್ಟುಬಿಟ್ಟ ಕಡುದಿಟ್ಟ ಹನುಮಂತಾ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಾಯುದೇವರು ಆಂಜನೇಯ ಕುಂತೀತನಯ- ಅಂಜನಾಭಪ್ರಿಯ ಮಧ್ವಾಖ್ಯರಾಯ ಪ. ಮಂಜುಳಾಂಗ ಮೃತ್ಯುಂಜಯಾದಿ ಸುರ- ನಿತ್ಯ ನಿ- ರಂಜನ ದೇವಪ್ರಭಂಜನತನಯ ಅ.ಪ. ರಾಮರಾಯಬಂಟ ದಿತಿಸುತ- ಸ್ತೋಮಹರಣ ತುಂಟ ಸ್ವಾಮಿಕಾರ್ಯಮನಪ್ರೇಮನಿರಾಮಯ ಭೀಮಪರಾಕ್ರಮಧಾಮ ಘನಾಘನ- ಶ್ಯಾಮ ನಿಕಾಮ ಸುಧೀಮಲಲಾಮ 1 ಚಿಂತಾಮಣಿ ರಾಮ ನೇಮ- ವಾಂತು ಸಾರ್ವಭೌಮ ಸಂತೋಷದಿ ಗಗನಾಂತರಪಂಥದಿಂ ಅಂತರಿಸುತ ಮಹಾಂತೋದಧಿಯ ಪ್ರಾಂತಕೆ ಹಾಯ್ದ ನಿಶ್ಚಿಂತ ಹನುಮಂತಾ 2 ಆಟನೋಟದಿಂದ ವನದೊಳು ಸಾಟಿಯಾಗಿ ಬಂದ ಮೀಟೆನಿಸುವ ಬಲು ಕಾಟಕ ದೈತ್ಯರ ಕೂಟ ಕೆಡಹಿ ಪುರಕೋಟಿಯ ತಿಕ್ಕಿದ ಪಾಟಲಮುಖ ಶತಕೋಟಿಶರೀರ 3 ಅಟ್ಟಹಾಸದಿಂದ ಕಮಲದಿ ಪುಟ್ಟಿದಾಸ್ತ್ರದಿಂದ ಕಟ್ಟಿಕೊಳ್ಳಿಸಿ ಜಗಜಟ್ಟಿ ಖ್ಯಾತಿಯಿಂದ ದಟ್ಟಿಸಿ ಲಂಕೆಯ ಪಟ್ಟಣವನು ಸೂರೆ- ಸುಟ್ಟುಬಿಟ್ಟ ಕಡುದಿಟ್ಟ ಹನುಮಂತಾ 4
--------------
ತುಪಾಕಿ ವೆಂಕಟರಮಣಾಚಾರ್ಯ
ವಾಯುದೇವರು ಆನಂದ ಸಾಧನ ತಿಳಿ ಕಂಡ್ಯಾ ಮನವೆ ಪ ಶಕುತಿಯು ಇದ್ದಷ್ಟು ತಿಳಿದು ಮತವು ಬಲು ಯುಕುತಿಯಿಂದಲಿ ನೀ ಒಲಿಸು ಕಂಡ್ಯ ಭಕುತಿಯು ಗುರುಗಳ ಪದದಲಿ ಮಾಡಲು ಮುಕುತಿಯು ಕರವಶವಾಗುವದೊ ಸಿದ್ಧ 1 ತಿಳಿಯದಿದ್ದರೆ ನೀನು ತಿಳಿದವರ ಬಳಿಯಲ್ಲಿ ಮಿಳಿತನಾಗಿ ಪೋಗಿ ತಿಳಿದುಕೊಳ್ಳೊ ಖಳಜನ ಸಹವಾಸ ಕುಮತಗಳಭ್ಯಾಸ ಒಳಿತಲ್ಲವೊ ನಿನಗೆಂದಿಗನ್ನ 2 ಪ್ರವಚನ ಮಾಡುವ ಬುಧಜನ ಪೇಳುವ ಸುವಚನ ಕೇಳಿ ನೀ ಬದುಕು ಕಂಡ್ಯಾ ಭವ ಛಳಿ ಬಾಧಿಗೆ ಪ್ರವಚನ ಬಾಹೋದೆಂದಿಗನ್ನ3 ಇದ್ದವರಿಗೆ ಕೊಟ್ಟು ಅವರ ಹಿಂದೆ ಇಷ್ಟು ಮೆದ್ದರೆ ಕೋಟಿ ಭೋಜನದ ಪುಣ್ಯ ಗೆದ್ದರು ಇವರನ್ನ ನಂಬಿದ ಜನರು ಬಿದ್ದರು ದೂಷಕ ಜನ ತಮದಿ 4 ಕಾಸುವೀಸಕೆ ನೀನು ಮೋಸಗೊಳಲು ಬ್ಯಾಡ ತಾಸು ಘಳಿಗೆ ನೆಚ್ಚಲು ಬೇಡ ಏಸೇಸು ಸುಕೃತದಿ ದೊರಕಿತು ಈ ಮತ ವಾಸುದೇವವಿಠಲನ್ನ ಪಾಡೊ 5
--------------
ವ್ಯಾಸತತ್ವಜ್ಞದಾಸರು
ವಾಯುದೇವರು ಇದು ಏನು ಕೌತುಕವೊ ಹನುಮರಾಯ ಪದುಮನಾಭನ ದಯಾಪಾತ್ರ ಶುಭಕಾಯ ಪ. ಅಂಜನೆಯ ಸುತನಾಗಿ ಅಂದು ಶ್ರೀ ರಾಮರಡಿ ಕಂಜಗಳ ಸೇವಿಸುತ ಮುದ್ರಿಕೆಯನು ಕಂಜಾಕ್ಷಿಗಿತ್ತು ಕ್ಷೇಮವನರುಹಿ ಬಂದಾಗ ಸಂಜೀವ ನಿನಗಿಷ್ಟು ತೊಡಿಗೆ ಕೊಟ್ಟಳೆ ದೇವಿ 1 ಮರುವಾರ್ತೆ ತಂದು ರಾಮಗರುಹಿ ಸೇತುವೆಯ ಗಿರಿಯಿಂದ ಕಟ್ಟಿ ಕಾರ್ಯವ ಸಾಧಿಸೆ ಸಿರಿಸಹಿತ ಶ್ರೀ ರಾಮ ರಾಜ್ಯಕೆ ಬಂದಾಗ ಮರುತ ನಿನಗಿಷ್ಟು ಆಭರಣ ಕೊಟ್ಟನೆ ಪೇಳು 2 ಎಲ್ಲೆಲ್ಲಿ ನಿನ್ನ ಕೀರ್ತಿಯ ಕೇಳೆ ಕೌಪೀನ ವಲ್ಲದಲೆ ಮತ್ತೊಂದರ್ಹಂಬಲಿಲ್ಲ ಮಲ್ಲ ವೈರಾಗ್ಯದಲಿ ಎಂಬುದನು ಕೇಳಿದೆನು ಇಲ್ಲಿ ನೋಡಲು ಇಷ್ಟು ವೈಭವವ ಪಡುತಿರುವೆ 3 ರಾತ್ರೆಯಲಿ ಕೀಚಕನ ಕೊಲ್ಲಲೋಸುಗ ಅಂದು ಮಿತ್ರೆ ರೂಪವ ಧರಿಸಿ ಶೃಂಗರಿಸಿಕೊಂಡು ಕತ್ತಲೊಳು ನೋಡಿಕೊಳ್ಳಲು ಆಗಲಿಲ್ಲೆಂದು ಹಸ್ತ ಕಡಗ ಹರಡಿ ಇಟ್ಟು ಮೆರೆಯುವೆಯೊ 4 ಹುಟ್ಟುತಲೆ ಸಂನ್ಯಾಸ ತೊಟ್ಟು ಬ್ಯಾಸತ್ತೊ ನಡು ಪಟ್ಟಿ ಉಡುದಾರ ಉಡುಗೆಜ್ಜೆ ಕಾಲ್ಗಡಗ ಇಟ್ಟು ನಾನಾ ಬಗೆ ಕದರುಂಡಲಿಯಲಿ ನೆಲಸಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ಪ್ರಿಯನಾದಿ 5
--------------
ಅಂಬಾಬಾಯಿ
ವಾಯುದೇವರು ಎರಡೂ ಕೈ ಮುಗಿದೂ ಬೇಡುವನ್ಯಾರೇ ಪೇಳಮ್ಮಯ್ಯ ಪ ಸುರನರರ ಖಳರ ಪರಿಪರಿ ಕರ್ಮವ ಹರಿಗೊಪ್ಪಿಸುವಮರುತ ಕಾಣಮ್ಮ ಅ.ಪ. ಕರವ ಬಲಕೆತ್ತೆ ನಿಂತಹನ್ಯಾರೇ ಪೇಳಮ್ಮಯ್ಯಾಭರದಿಂದ ಚರಣಗಳೂರಿದನ್ಯಾರೇ ಪೇಳಮ್ಮಯ್ಯಾದುರುಳ ಜನರ ಮೆಟ್ಟಿ ಶರಣರಿಗಭಯವಕರೆದು ಕೊಡುವ ಬಹು ಕರುಣಿ ಕಾಣಮ್ಮ 1 ಬಿಂಕಾದಿ ಮುಖವಾ ತಿರುಹಿದನ್ಯಾರೇ ಪೇಳಕ್ಕಯ್ಯಟೊಂಕಾದಿ ಎಡಗೈಯಿಟ್ಟಿಹನ್ಯಾರೇ ಪೇಳಕ್ಕಯ್ಯಕಿಂಕರರಡಿ ಬರೆ ಅಂಕದೊಳೆತ್ತುವಡೊಂಕನಾದ ನಿಷ್ಕಳಂಕ ಕಾಣಮ್ಮ 2 ಚೆಲುವ ಸರ್ವಾಂಗಲಕ್ಷಣನ್ಯಾರೇ ಪೇಳಮ್ಮಯ್ಯಹಲವೂ ಫಲಗಳನೂ ನೀಡುವನ್ಯಾರೇ ಪೇಳಮ್ಮಯ್ಯಸುಲಭಗೋಪತಿವಿಠಲನ ಪ್ರಿಯಕದರುಂಡಲಗಿ ಪುರಿ ಧೊರೆ ಇವನಮ್ಮ 3
--------------
ಗೋಪತಿವಿಠಲರು
ವಾಯುದೇವರು ಎಲ್ಲಿರುವೆ ತಂದೆ ಬಾರೊ ಮಾರುತಿ ಪ ಎಲ್ಲೆಲ್ಲಿನೋಡಿದರು ಅಲ್ಲಿ ನಿನ್ನ ಕೀರುತಿ ಅಲ್ಲಿನಿನ್ನಕೂಡಿರುವ ನಿತ್ಯಾಶ್ರೀಪತಿಅ.ಪ ವಾರಿಧಿಯ ಹಾರಿ ನೀ ಸೇರಿ ತ್ವರದಿ ಲಂಕೆಯ ಕ್ರೂರರನ್ನು ಕೊಂದು ಕುರುಹ ತಂದ ಮಹರಾಯ 1 ದುರುಳ ಕುರುಪನನ್ನು ಕೊಂದು ತರಳೆಯಮಾನ ಹರುಷದಿಂದ ಪೊರೆದು ನೀ ಮೆರೆದ್ಯೊ ಸುಮ್ಮಾನ 2 ಹಿತದಿ ಸತತ ಭಜಿಸಿ ಶೇಷ ವಿಠ್ಠಲನ ಮೋದಿಸಿದಿ 3
--------------
ಬಾಗೇಪಲ್ಲಿ ಶೇಷದಾಸರು
ವಾಯುದೇವರು ನಮೋ ನಮೋ ಹನುಮಾ ಪ್ಲವಗೋ ತ್ತುಮಾಂಜನೇಯ ನಾಮಾ ಪ ಶಮಾದಿಗುಣಗಣ ಸಮೀರ ನುತಜನ ಪ್ರಮಾದ ಹರಿಸೆಲೊ ಉಮೇಶ ವಂದ್ಯನೆ ಅ.ಪ ದಶಾಪುರುಷ ನೀನೇ ತ್ರೀ - ದಶಾಸ್ಯಮುಖ ಮಹ ನಿಶಾಚರೇಶರ ದಶಾಕಳೆದು ಈ ವಸೂಧಿಯೋಳು ಮೆರೆದೆ 1 ಬಕಾಸುರಗೆ ವೈರೀ ನಿನ್ನ ಭಕೂತ ಜನಕೀಪರಿ ಅಖೀಳ ಸೌಖ್ಯದ ಲಕೂಮಿರಮಣನ ಭಕೂತಿ ಪೂರ್ವಕ ಮೂಕೂತಿ ದಾಯಕ 2 ಯತೀಶಕುಲನಾಥಾ ದಶ - ಮತೀನಾಮ ಖ್ಯಾತಾ ಕ್ಷಿತೀಶ ಗುರುಜಗನ್ನಾಥಾವಿಠಲ ದೂತ ಪಾಥೋಜಜಾಂಡಕೆ ನಾಥಾನೆ ಪಾಲಿಸೊ 3
--------------
ಗುರುಜಗನ್ನಾಥದಾಸರು
ವಾಯುದೇವರು ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ ಅನ್ಯ ಹಂಬಲ ಬಿಡಿಸಿ ಬಿಂಬ ಮೂರುತಿ ತೋರೋ ಪ ಹಿಂದೆ ತ್ರೇತಾಯುಗದಿ ರಾಮನಾಜ್ಞೆಯ ಹೊಂದಿ ಸಿಂಧು ದಾಟಿ ಸೀತೆಗೆರಗಿ ನಿಂದು ಸುಂದರ ರಾಮ ಮುದ್ರಿಕೆಯಿತ್ತು ಲೀಲೆಯಲಿ ಕೊಂದ ರಕ್ಕಸ ಪುರವನನಲಗೆ ಇತ್ತೆ 1 ಬಂಡಿ ಅನ್ನವನುಂಡು ಭಂಡ ಬಕನಾ ಕೊಂದು ಹಿಂಡು ನೃಪರಾ ಜರಿದು ಕೊಂಡು ದ್ರೌಪದಿಯಾ ಮಂದಮತಿಗಳನಳಿದು ತಂದಿ ಸೌಂಗಂಧಿಕವ ಪುಂಡ ಕೀಚಕರಳಿದ ಪಾಂಡವಪ್ರಿಯದೂತ 2 ಮೋದತೀರ್ಥರೆನಿಸಿ ವಾದಿಗಳ ನಿಗ್ರಹಿಸಿ ಬೋಧಿಸಿ ಸುಜನರಿಗೆ ಮಾಧವನ ಗುಣವ ಸಾಧು ವಂದಿತ ಬಾದರಾಯಣರು ಇರುತಿರುವ ಬದರಿಯಲ್ಲಿರುವಿ ಶ್ರೀ ನರಹರಿಯ ತೋರೋ 3
--------------
ಪ್ರದ್ಯುಮ್ನತೀರ್ಥರು
ವಾಯುದೇವರು ಬಾರಯ್ಯ ಬಾರೋ ಮಾರುತಿ ಪ ಅಕ್ಷಯಕುವರನ | ಕುಕ್ಷಿಯನೋಡಲು | ಪಕ್ಷಿವಾಹನರಾಮ | ಈಕ್ಷಣ ಕರೆವ ಬಾ 1 ದುರುಳ ದುಶ್ಶಾಸನನ | ಉದರವ ಭಂಗಿಸೆ | ತರಳೆದ್ರೌಪತಿ ದೇವಿ | ಕರೆದಳೊ ಬೇಗ 2 ಮಧ್ವಮುನಿಯೆ ನಿನ್ನ | ಶುದ್ಧತತ್ವದಿ ನಮ್ಮ | ಉದ್ಧರಿಸಲು | ಅನಿರುದ್ಧನು ಕರೆವ ಬಾ 3 ಜಗದಿ ಭ್ರಾಂತೇಶನೆ | ಮೃಗಯಾಪುರದೊಳು | ಮಿಗಿಲು ರಥವನೇರಿ | ಸೊಗಸಿಲಿ ಬೇಗ ಬಾ 4 ಶ್ರೀಶಕೇಶವದೂತ | ಭೂಸುರವಿನುತ | ದಾಸರ ಸಲಹಲಿನ್ | ಈ ಸಮಯದಿ ಬೇಗ5
--------------
ಶ್ರೀಶ ಕೇಶವದಾಸರು
ವಾಯುದೇವರು ಮಾರುತೀ ಮತ್ಪ್ರಾಣೇಶ ಮಾರುತೀ ಪ ಮಾರುತಿ ನಮಿಪೆ ನಾ ನಿನ್ನಾ ಭವಭಾರವನಿಳಿಸು ನೀ ಯೆನ್ನ | ಗತಿ ತೋರು ಸದ್ಗುಣ ಸಂಪನ್ನಾ | ಬೇರೆ ಯಾರಿಲ್ಲ ಪೊರೆವರು ಯನ್ನಾ | ನಿನ್ನೀ ಚಾರುಚರಿತೆಯ ಪಾಡಿ ಕೊಂಡಾಡುವೆ | ಸೇರೆ ರಾಮನ ಪದವಾರಿಜ ತೋರಿಸು ಅ.ಪ ಲಂಕಾ ಪತಿಯನು ಕಂಡೆ 1 ಪುರದಿ ಭೂಜಾತೆಯನರಸೀ ಕಾಣದರಿತು ವನವ, ತಲೆ ದುರುಳ ರಾವಣನ ಪರಿಕಿಸಿ | ಆಹಾ | ಭರದಿ ಮುದ್ರಿಕೆಯಿತ್ತು | ಪುರವನುರಿಸಿ | ರಘು | ವರನಡಿಗಳ ಕಂಡ | ಧುರಧೀರರರಸನೇ 2 ದೊಡೆಯನಿಗೆಡೆಗುಡೆ ಶರಧೀ | ಲಂಕೆ ಯೆಡೆಯೊಳ್ರಕ್ಕಸರ ಸಮರದಿ | ಕೊಲ್ಲುತಡುವ ಭೂತಗಳುಣ್ಣೆ ಅಡಿಯೊಂದಿಗೊರೆಸಿ ರಾಘವನ ಮೆಚ್ಚಿಸಿದ 3 ನರವರಗ್ಹ ಸ್ತಿನ ಪುರದೀ | ವರನೊಡಗೂಡಿ ಕಾಳಗದೀ | ದುರುಳ ಕೌರವರ ಬೇರೊರೆಸಿದ ಬಲಭೀಮ ||4 ಪುಟ್ಟಿ | ಬಲಿದರ ಶಾಸ್ತ್ರ ಬಲದೀ | ಸ್ಥಾಪಿಸಿ ನೀ ನಲಿದೀ | ಭಲ | ಭಳಿರೆ ರಜತಪುರಿಯರಸನ ರಘುರಾಮವಿಠಲ ದೂತ 5
--------------
ರಘುರಾಮವಿಠಲದಾಸರು
ವಾಯುದೇವರು ಶಾಂತ ಜನರಿಗೀಶಾ ರವಿಕುಲ ಕಾಂತನ ನಿಜದಾಸ ಪ ಭ್ರಾಂತಿ ಬಿಡಿಸಿ ನಿಶ್ಚಿಂತ ಮನದಿ ವೇ- ದಾಂತವೇದ್ಯನಲಿ ಸಂತಸ ಕೊಡುವನ ಅ.ಪ. ಕಡಲ ದಾಟಿ ಬಂದೂ ಒಡೆಯನ ಮಡದಿಗುಂಗುರ ತಂದೂ ಸಡಗರದಲಿ ತುಡುಗ ದೈತ್ಯವ ಕೊಂದು ಅಡಿಯಿಡೆ ಲಂಕೆ ಸುಟ್ಟು ಸುಡುಭುಗಿ ಮಾಡಿದೆ 1 ಏಕಚಕ್ರದಲ್ಲೀ ಬಕಗೆಂ- ದ್ಹಾಕಿದ ಗ್ರಾಸದಲೀ ಶಾಖಡಿಸಲಬಿಡದೇಕತುತ್ತು ಮಾಡಿ ಭೀಕರ ದೈತ್ಯನವಲೋಕಿಸದ್ಹೊಡದೆಲೋ 2 ವಾಯು ಹನುಮ ಭೀಮ ಮಧ್ವಾ ಕಾಯೋ ಪೂರ್ಣಕಾಮಾ ಸಾಯ ಬಡಿದೀ ನೀ ಮಾಯಿಗಳೆಲ್ಲರ ರಾಯ ಶ್ರೀನಿಧಿವಿಠಲಾಯಗೆ ತಿಳಿಸಿದೆ ಎಲೆಲೋ 3
--------------
ಶ್ರೀನಿಧಿವಿಠಲರು
ವಾಯುದೇವರು - ಹನುಮಂತ ಎಂಥ ವೈರಾಗ್ಯ ಹನುಮಂತ ಎಂಥ ಸೌಭಾಗ್ಯ ಗುಣವಂತ ಪ ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ ಭಕುತಿಯ ಬೇಡಿದೆಯೊ ಅ.ಪ ಆವರಿಹರು ನಿನ್ಹೊರತು ರಾಘವರ ಭಾವವರಿತು ಪ್ರತಿ ಕ್ಷಣಗಳಲಿ ಸೇವೆ ಸಲಿಸಿ ದಯ ಪಡೆಯಲು ಭೋಗವ ದಾವದನುಭವಿಸೆ ದುರ್ಲಭವು ಜೀವೋತ್ತಮನದ ಬಯಸದೆ ಏಕೋ ಭಾವದಿ ಪದಸೇವೆಯ ಕೇಳಿದ ವೀರ 1 ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ ಷ್ಠಾನ ಪವನಸುತ ಜಗತ್ರಾಣ ನೀನಲ್ಲದೆ ಖಗಮೃಗ ಸುರನರರುಗ ಳೇನು ಚಲಿಸಬಲ್ಲರೊ ಹನುಮ ಪ್ರಾಣಭಾವಿ ಚತುರಾನನ ಭುವಿಯೊಳ ಗೇನು ರುಚಿಯೊ ಕಲ್ಯಾಣಚರಿತ ನಿನಗೆ 2 ಕಪಿ ರೂಪದಿ ದಶಕಂಧರನ ಮಹಾ ಅಪರಾಧಕ್ಕೆ ಶಿಕ್ಷೆಯನಿತ್ತೆ ನೃಪರೂಪದಿ ದುರ್ಯೋಧನನಸುವನು ಅಪಹರಿಸಿದೆಯೋ ಬಲ ಭೀಮ ವಿಪುಲ ಪ್ರಮತಿ ವರವೈಷ್ಣವ ತತ್ವಗ ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ3
--------------
ವಿದ್ಯಾಪ್ರಸನ್ನತೀರ್ಥರು
ಶೇಷ-ರುದ್ರದೇವರು ಪಾದ ಭೂ- ಪಾದ ಪ. ಹರಿಗೆ ಹಾಸಿಗೆಯಾಗಿ ಹರುಷಪಡುವ ಪಾದ ಹರಿಯ ಮಂದಿರಲ್ಲಿ ಇರುವ ಪಾದ ಹರ ಪುರಂದರರಿಗೆ ಪೂಜ್ಯವಾಗಿಹ ಪಾದ ಪಾದ 1 ವಾರುಣಿ ದೇವಿಗೆ ವರನೆನಿಸಿದ ಪಾದ ಶ್ರೀ ರಾಮಗೆ ಕಿರಿಯನಾದ ಪಾದ ಘೋರ ಇಂದ್ರಾರಿಯ ಸಂಹರಿಸಿದ ಪಾದ ಪಾದ 2 ವಾಯುದೇವರು ಜೊತೆಗೆ ವಾದವಾಡಿದ ಪಾದ ನೋಯದೆ ಭೂಮಿಯನು ಪೊತ್ತಿಹ ಪಾದ ಶ್ರೀಯರಸನ ಪಾದಪದ್ಮ ಸೇವಿಪ ಪಾದ ಸುರರು ಪಾದ 3 ಸಪ್ತೆರಡು ಭುವನದಲಿ ಗುಪ್ತವಾಗಿಹ ಪಾದ ಚಿತ್ತದಭಿಮಾನಿಗೆ ಸೇವಕನಾದ ಪಾದ ಮತ್ತೆ ಮನ ಅಹಂಕಾರ ತತ್ವದೊಡೆಯನ ಪಾದ ಪಾದ 4 ಘೋರರೂಪವ ತೊರೆದು ಸೌಮ್ಯವಾಗಿಹ ಪಾದ ಸೇರಿದವರನು ಪೊರೆವ ಶ್ರೇಷ್ಠ ಪಾದ ಹಾರೈಸಿ ಗೋಪಾಲಕೃಷ್ಣವಿಠ್ಠಲನ ಪಾದ ಪಾದ 5
--------------
ಅಂಬಾಬಾಯಿ
ಶೇಷದೇವರು ಖಗರಾಜ ಮಹೋಜ ಸತ್ತ್ವಧಾಮ ಭಕ್ತಿಭಾವ ರವಿತೇಜ ಜಿತಕಾಮ ಪ. ನಿಗಮಾಗಮಯೋಗತತ್ತ್ವ ಪ್ರಾಜ್ಞ ಮಹಾಭಾಗ ನಾಗಾಂತಕ ಮನೋಜ್ಞ 1 ಸಾಮಗಾನಪ್ರವೀಣ ವೈನತೇಯ ಹರಿಧ್ಯಾನೈಕತಾನ ಶುಭಕಾಯ 2 ವರಲಕ್ಷ್ಮೀನಾರಾಯಣನ ವರೂಥ ಹರಿಪಕ್ಷ್ಯೆಕದೀಕ್ಷ ಪ್ರಖ್ಯಾತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶೇಷದೇವರು ಖಗರಾಜ ಮಹೋಜ ಸತ್ತ್ವಧಾಮ ಭಕ್ತಿಭಾವ ರವಿತೇಜ ಜಿತಕಾಮ ಪ. ನಿಗಮಾಗಮಯೋಗತತ್ತ್ವ ಪ್ರಾಜ್ಞ ಮಹಾಭಾಗ ನಾಗಾಂತಕ ಮನೋಜ್ಞ 1 ಸಾಮಗಾನಪ್ರವೀಣ ವೈನತೇಯ ಹರಿಧ್ಯಾನೈಕತಾನ ಶುಭಕಾಯ 2 ವರಲಕ್ಷ್ಮೀನಾರಾಯಣನ ವರೂಥ ಹರಿಪಕ್ಷ್ಯೆಕದೀಕ್ಷ ಪ್ರಖ್ಯಾತ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ