ಪರಮೇಶ್ವರಾ ಕರುಣಾಕರಾ
ಗಿರಿಜಾಪ್ರಿಯ ಸೋಮಶೇಖರಾ ಪ
ಸಾರ ಶರನಿಧಿ ಗಂಭೀರ
ಸ್ಮರಹರಾ ಉದಾರ, ಪಾಹಿಶಂಕರ ಅ.ಪ
ಕಮಲಾಕ್ಷ ಮಿತ್ರ ಕಮನೀಯಗಾತ್ರ
ಅಮರಾರಿ ವೇತ್ರ ವಿಮಲಾ ತ್ರೀನೇತ್ರಾ
ರಮಣೀಯ ಚಾರಿತ್ರ ಹಿಮಶೈಲಜಾಪಾತ್ರ
ಅಮರೇಂದ್ರನುತ ಗೋತ್ರ ಶರಣಾತಪತ್ರ 1
ಉರಗ ವಿಭೂಷಣ ಪರಿಜನ ತೋಷಣ
ಸುರನದಿ ರಮಣಾ ಭವಭಯ ಭೀಷಣ
ದುರಿತ ನಿವಾರಣ ಪರಮ ಕೃಪಾಗುಣ
ಪರಶಿವ ಮಾಂಗಿರಿಶೃಂಗಾಭರಣಾ 2