ತಪ್ಪು ಕ್ಷಮೆ ಮಾಡೋ ಕೃಪೆಯಿಂದ ನೋಡೋ ಪ
ನೀನೆದಯಾನಿಧಿ ನಾನು ಅಪರಾದಿ
ಖೂನದೋರೋ ಹಾದಿ ಸ್ಥಾನ ನಿಜಾನಾದಿ 1
ಅನಾಥನೆಂದು ನೋಡಿ ಸನಾಥನೆನ್ನಮಾಡಿ
ಸ್ವಾನಂದ ಸುಖನೀಡಿ ಮನ್ನಾಥ ನಿಜಗೂಡಿ2
ಹೇಳಲಾರೆ ಬಹಳಾ ಕೇಳೋನೀದಯಾಳಾ
ತಾಳಿಯನ್ನ ತೋಲಾಬಾಲವಿಶ್ವಷಾಲಾ 3
ಸೇವಿ ಇದೇನಮ್ಮ ಭಾವಿಸುದು ನಿಮ್ಮ
ಪಾವನ್ನಗೈಸು ವರ್ಮಾ ಸುನಿತ್ಯ ಪರಬ್ರಹ್ಮಾ 4
ಬಂದ ಮ್ಯಾಲೆ ಶರಣಾ ಕುಂದವ್ಯಾಕೋ ಪೂರ್ಣ
ಕಂದ ಮಹಿಪತಿಗುಣಾ ಛಂದ ಮಾಡೋಕರುಣಾ 5