ಅಕ್ರೂರ ವರದ ವಿಠಲ | ಕಾಪಾಡೊ ಇವಳಾ ಪ
ಶ್ರೀಕೃಷ್ಣ ನಿನದಾಸ್ಯ ಚೊಕ್ಕ ಪಾಲಿಸುತಾ ಅ.ಪ.
ವಿನಯಾದಿ ಗುಣ ಭರಿತೆ ಜನನಿ ಜನಕರಪ್ರೀತೆಮನೊ ಮೈಲಿ ಕಳೆಯುತಲಿ ಮನೊಮಾನಿ ಒಡೆಯಾ ಗುಣ ಉಳ್ಳವಳ ಮಾಡಿ | ಜಾಣ್ಮೆಯಲಿ ಸಂಸಾರಅನುಸರಿಸುವಂತೆಸಗೊ | ಅನಿಲಾಂತರಾತ್ಮಾ 1
ಭಕುತರಾ ಸುರಧೇನು | ಭಕುತಿ ಜ್ಞಾನವನಿತ್ತುಮುಕುತಿ ಪಂಥದಿ ಹಾದಿ | ಯುಕುತಳೆನಿಸೋಕಕುಲಾತಿಯನೆ ಕಳೆದೂ | ಶಕುತಿ ಇದ್ದುದ ತಿಳಿಸಿಸುಕರ ಸತ್ಸಾಧನವ | ಪ್ರಕಟವನೆ ಮಾಡೋ 2
ಪತಿಸುತರು ಹಿರಿಯರಾ | ಸತ್ಸೇವೆ ಕೈಕೊಂಡುಅತುಳ ಹರಿ ಆವರಲ್ಲಿ | ಸ್ಥಿತನೆಂದು ತಿಳಿದೂಹಿತದಿಂದ ಸೇವಿಸಲು | ಗತಿಯ ಆಹುದೆಂದೆಂಬಮತಿಯನೇ | ಕರುಣಿಸುತ | ಕೃತ ಕೃತ್ಯಳೆನಿಸೋ 3
ಕಷ್ಠ ನಿಷ್ಠುರಗಳಲಿ | ಇಷ್ಟಸಂತುಷ್ಠಿಯಲಿದೃಷ್ಟಿ ಸಮತೆಯ ಕೊಟ್ಟು | ಕಾಪಾಡೊ ಹರಿಯೇಸೃಷ್ಠಿ ಕರ್ತನು ಹರಿಯು | ಶ್ರೇಷ್ಠ ದೇವತೆಯೆಂಬ ಸ್ಪಷ್ಟಮತಿ ಕರುಣಿಸುತ | ಪ್ರೇಕ್ಷ ನೀನಾಗೋ 4
ಗಾಮಲ್ಗಣಿ ವರದ | ನೀವೊಲಿಯದಿನ್ನಿಲ್ಲಭಾವದಲಿ ಮೈದೋರಿ | ಭವದ ಸುತ್ತರಿಸೋಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5