ಶ್ರೀ ಗಣಾಧಿನಾಥಾಶ್ರಿತ ಸೌಖ್ಯಧಾತ ಪ
ನಾಗಭೂಷಣಸುತ ನಾರದಾದಿವಂದಿತ ಅ.ಪ
ಗಜವದನ ಗಣೇಶ ಲಂಬೋದರ ಗಿ-
ರಿಜಾಮಲ ಸಮುದ್ಭವ ಭೂತೇಶ
ಭೂರಿ ಭಜಿಸುವೆ ನಾನಿನ್ನ
ಸುಜನರ ಕಾರ್ಯಕೆ ಬರುತಿಹ ವಿಘ್ನ
ರಜಗಳಿಗೆ ನಮೊ ನಮೋ ಎಂಬುವೆನಾಂ 1
ಇಂದುಧರನ ತನಯಾ ರವಿ ಶಶಿ ಸಂ-
ಕ್ರಂದನ ಮುಖ ಸುರಬೃಂದ ಸೇವ್ಯಮೃದು
ಮಂದಹಾಸ ಪೂರ್ಣೇಂದುವದನ ಸ್ಫುರಿ-
ತೇಂದೀವರನಯನಾ
ಇಂದಿನದಿನ ಸಕಲ ದೇಶದವರು ಮುದ-
ದಿಂದ ನಾಟಿ ಭೈರವಿ ಶ್ರೀರಾಗಗ-
ದ್ವಂದ್ವಗಳನು ಕೊಂಡಾಡುತಲಿಹರೊ 2
ಪಾಶಾಂಕುಶಗಳ ಕರದಿ ಹಿಡಿದು ನಿಜ-
ದೋಷದೂರ ಗುರುರಾಮವಿಠಲನ
ದಾಸರದಾಸ್ಯವನಿತ್ತು ಸದಾಸಂ-
ತೋಷದಿಂದ ಪಾಲಿಸು ಎನ್ನನು ಸ-
ರ್ವೇಶ ಮೋದಕ ಪ್ರಿಯ ವಿಘ್ನೇಶಾ 3