ಇಂದಿರಾ ರಮಣ ಗೋವಿಂದನಾ
ಜ್ಞೆಯ ಪಡೆದು ಬಂದಿರುವ ದಾಸರಿವರು ಪ
ಇಂದು ಧರ್ಮದಿ ಹರಿಯ ಬಾಂಧವರ ಗೃಹ ಸ್ವರ್ಣ
ಮಂದಿರವಾಗುವುದೆಂದು ಸಂದೇಶ ಕಳಿಸಿರುವ ಅ.ಪ
ಸತ್ವ ರಜ ತಮ ಭೇದವಿಹುದು ದಾನಗಳಲ್ಲಿ
ಕರ್ತವ್ಯವೆಂದರಿತು ಭಕ್ತಿಯಿಂದ
ಉತ್ತಮೋತ್ತಮ ದೇಶ ಪಾತ್ರ ಕಾಲಗಳರಿತು
ಪ್ರತ್ಯುಪಕೃತಿಯ ಗಣಿಸದಿತ್ತ ದಾನವೇ ಶ್ರೇಷ್ಠ 1
ಶ್ರಾವಣದ ಶನಿವಾರ ಶ್ರೀ ವ್ಯಾಸರಾಜರ
ಮಾಧವ ದೇಶಕಾಲ ಪಾತ್ರ
ಈ ವಿಧದ ಯೋಗವಿನ್ಯಾವ ಜನಗಳಿಗುಂಟು
ನೀವು ನೀಡುವ ದಾನ ಕಾವುದಾಪತ್ತಿನಲಿ 2
ಒಂದು ಹಿಡಿಯವಲಕ್ಕಿ ತಂದಿತಾ ಬ್ರಾಹ್ಮಣಗೆ
ಎಂದೂ ಕೇಳದ ಸಕಲ ಸೌಭಾಗ್ಯವ
ಇಂದು ನೀಡಿರಿ ಮಿತ್ರ ಬಾಂಧವರೆ ದೇವಕಿಯ
ಕಂದನ ಪ್ರಸನ್ನತೆಯ ಬಂದು ಪಡೆಯಲಿಬಹುದು 3