ಆನಂದಮೆಂದಿದಕೆ ಹೆಸರಿಟ್ಟೀ ಪಾಪಿ ಪ
ಮನಬಂದತೆರ ಸೇಂದಿ ಸೆರೆಕುಡಿದು ಉಬ್ಬಿ ಅ.ಪ
ಕೊಡ ಪಡಗ ಹೆಂಡವನು ಕುಡಿದು ಎಚ್ಚರದಪ್ಪಿ
ತಡೆಯದಲೆ ಮಲಮೂತ್ರ ಬಿಡುತದರೋಳುರುಳಿ
ಬಡಿಸಿಕೊಂಡಟ್ಟೆಯಿಂ ಒಡನೆ ಎಚ್ಚರವೊಂದಿ
ಕೆಡಿಸಿದಾನಂದಮ್ಹಿಡಿ ಕೊಡುವೆ ಶಾಪೆನುವಿ 1
ಅವಸರದಿಂ ಜಿಹ್ವೆಯ ಸವಿರುಚಿ ಲವಲವಿಕೆಯಿಂ
ಭವಿಜನುಮಿಗಳು ಎಲ್ಲ ಕವಿದುಬಂದಿಳಿದು
ಸವಿಯಬಾರದ್ದು ಸವಿದು ಶಿವನೆನಾವೆಂದೆನುವ
ಭವಿಗಳೆಲ್ಲರು ಜಗದಿ ಶಿವನ ಪೋಲುವರೆ2
ಕದ್ದು ಮುಚ್ಚಿಲ್ಲದಲೆ ಮುದ್ದೆ ಮುದ್ದೆ ಗಾಂಜವನು
ಸಿದ್ಧಪತ್ರೆಂದೆನುತ ಶುದ್ಧಮತಿಗೆಟ್ಟು
ಬದ್ಧರೆಲ್ಲ ಸೇದಿ ನಿಜ ಪದ್ಧಿತಿಯನ್ಹದಗೆಡಿಸಿ
ಶುದ್ಧಾತ್ಮರೆನಲು ಪರಿಶುದ್ಧರಾಗುವರೆ 3
ನಾನುನೀನೆಂದೆಂಬ ಖೂನಡಗಿ ಎತ್ತ ತಾನೆ
ತಾನೆಂದು ಹೊಳೆವ ಬ್ರಹ್ಮ ಆನಂದ ಸೊಬಗು
ಏನೊಂದು ತಿಳಿಯದೆ ಆನಂದವೆಂದೆನುತ
ಶ್ವಾನನಂದದಿ ಕೂಗ್ವಿ ಜ್ಞಾನಾಂಧ ಅಧಮ 4
ಹುಚ್ಚುಮನುಜನೆ ನಿನಗೆ ಹೆಚ್ಚಿನ ಗೋಜ್ಯಾಕೆ
ನಿಶ್ಚಲಭಕುತಿಂ ಬಚ್ಚಿಟ್ಟು ಮನದಿ
ಅಚ್ಯುತ ಶ್ರೀರಾಮನ ಹೆಚ್ಚೆಂದು ದೃಢವಹಿಸಿ
ಎಚ್ಚರದಿ ಭಜಿಸಿ ಭವಕಿಚ್ಚಿನಿಂದುಳಿಯೊ 5