ಕಲಿಯುಗದೊಳು ಕಂಡೆನು ನಿನ್ನೊಬ್ಬನ | ಕಲಿವಾಳದನಿಂಗಪ್ಪ || ಕಲಿತ ಬುದ್ಧಿಯು ಕಡೆಯಲಿ ನಿನ್ನ |ಕೆಲಸಕೆ ಏನೂ ಬಾರದಪ್ಪ ಪ
ಎತ್ತು ಎಮ್ಮಿ ಆಕಳ ಹೋರಿ | ಜತನ ಮಾಡೀದೆಪ್ಪ || ಮೃತ್ಯು ದೇವತೆಗೆ ತುತ್ತು ಇದರೊಳು | ಮುಕ್ತಿ ನಿನಗಿಲ್ಲಪ್ಪಾ 1
ಹೊಲಮನಿಯೆಂದು ನಲಿನಲಿದಾಡುತ | ಒಲಒಲ ಗುಟ್ಟುವಿಯಪ್ಪಾ || ಹೊಲಮನಿ ಸಾಧಿಸಿ ಸಂಗಡ |ಒಯ್ದಿಲ್ಲಾ ನಿಮ್ಮಪ್ಪಾ 2
ಶುದ್ಧವಾಗಿ ನೀ ಕೋಶವ ಕಲಿತು | ಬದ್ಧವ ತಿಳಕೋಳಪ್ಪಾ || ಬುದ್ಧಿವಂತನು ನೀ ಸ್ವರ್ಗದ ಸುದ್ದಿಯು | ಸ್ವಲ್ಪವು ನಿನಗಿಲ್ಲಪ್ಪಾ 3
ರೋಗವ ನೀಗಿಸಿ ಜನರಿಗೆ ಭೋಜನ | ಭೋಗವನ್ನು ನೀ ಪಡೆದೆಪ್ಪಾ || ಹೋಗದು ಕರ್ಮವು ಇದರಲಿ ಮುಂದಿನ | ಆಗಮ ಮಹಿಮೆಯ ತಿಳಕೋಳಪ್ಪಾ 4
ಅಪರೂಪದ ನರದೇಹಕೆ ಬಂದು | ವಿಪರೀತ ವಿದ್ಯಾಕಪ್ಪ || ಗುಪಿತದಿ ಭವತಾರಕನ ಭಕ್ತರ |ಕೃಪೆಯನು ನೀ ಸಂಪಾದಿಸಪ್ಪಾ 5