ಒಟ್ಟು 114 ಕಡೆಗಳಲ್ಲಿ , 28 ದಾಸರು , 103 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
--------------
ಪುರಂದರದಾಸರು
ಕಾಯೋ ಕೃಷ್ಣಭವತೋಯದಿ ಮುಳುಗಿ ಉ- |ಪಾಯವ ಕಾಣದೆ ಬಾಯ ಬಿಡುವೆನೋ ಕಾಯೋ ಕಾಯೋ ಪಭಾಗವತರ ಪ್ರಿಯ ನಾಗಭೂಷಣಸಖ|ನೀಗಿಭಯವಕರಬೇಗನೆ ಪಿಡಿಯೊ 1ಇಂದಿರೆಯರಸ ಮುಕುಂದ ಯಶೋದೆಯ |ನಂದನ ಕರುಣಿಸೊ ಇಂದೀವರಾಕ್ಷ2ಸಿಂಧುಶಯನ ಪೊರೆಯೆಂದು ಕರೆಯಕರಿ|ಬಂದು ಸಲಹಿದೆಯೋಮಂದದಯಾಳು3ಕುರುಪ ಪಿಡಿಯಲುದ್ಧರಿಸಿದೆ ತರುಣಿಯ |ನರಕಹ ನಿನಗೆ ನಾ ಪರಕೀಯನಲ್ಲೋ 4ಜಾನಕೀವಲ್ಲಭನೀನೇ ಮರೆದುಬಿಡೆ |ಕಾಣೆನೊ ಒಬ್ಬರ ನಾನವನಿಯೊಳು5ಭಕುತರಿಗೋಸುಗ ಹತ್ತವತಾರವ |ಅರ್ತಿಂದಲಿ ಕೊಂಡುತ್ತಮ ಶ್ಲೋಕ6ದ್ವೇಷಿಗಳೆನ್ನನು ಘಾಸಿಸದಂದದಿ |ಪೋಷಿಸುವುದು ಪ್ರಾಣೇಶ ವಿಠ್ಠಲನೇ 7
--------------
ಪ್ರಾಣೇಶದಾಸರು
ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆಕ್ಲೇಶ ಪಾಶಗಳ ಹರಿದು ವಿಳಾಸದಿ ದಾಸರ ನುತಿಗಳ ಪೊಗಳುತ ಮನದೊಳು ಪ.ಮೋಸದಿ ಜೀವಿಯಘಾಸಿ ಮಾಡಿದ ಫಲಕಾಶಿಗೆ ಹೋದರೆ ಹೋದೀತೆದಾಸರ ಕರೆ ತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆಭಾಷೆಯ ಕೊಟ್ಟು (ನಿ) ರಾಸೆಯ ಮಾಡಿದಫಲ ಮೋಸವು ಮಾಡದೆ ಬಿಟ್ಟೀತೆಶಶಿವದನೆಯ ಅಧರಾಮೃತ ಸೇವಿಸಿ ಸುಧೆಯೆಂದಡೆ ನಿಜವಾದೀತೆ 1ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನಮನಸಿಗೆ ಸೊಗಸೀತೆಹೀನ ಮನುಜನಿಗೆ ಜಾÕನವ ಭೋಧಿಸೆ ಹೀನ ವಿಷಯಗಳು ಹೋದಿತೇಮಾನಿನಿ ಮನಸು ನಿಧಾನವು ಇಲ್ಲದಿರೆಮಾನಭಿಮಾನ ಉಳಿದೀತೆಭಾನುವಿಕಾಸನ ಭಜನೆಯ ಮಾಡದ ದೀನಗೆ ಮುಕುತಿಯು ದೊರಕೀತೆ 2ಸತ್ಯದ ಧರ್ಮವ ನಿತ್ಯವು ಭೋಧಿಸೆ ತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಯ ಮನಸಿಗೆ ತಿಳಿದೀತೆಪುತ್ಥಳಿ ಬೊಂಬೆಯ ಚಿತ್ರದಿ ಬರೆದಿರೆ ಮುತ್ತುಕೊಟ್ಟರೆ ಮಾತಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯುತೋರದೆ ಇದ್ದೀತೆ 3ನ್ಯಾಯವ ಬಿಟ್ಟು ಅನ್ಯಾಯ ಪೇಳುವ ನಾಯಿಗೆ ನರಕವು ತಪ್ಪೀತೆತಾಯಿ ತಂದೆಗಳ ನೋಯಿಸಿದ ಅನ್ಯಾಯಿಗೆ ಮುಕ್ತಿಯು ದೊರಕೀತೆಬಾಯಿ ಕೊಬ್ಬಿನಿಂದ ಬೈಯುವ ಮನುಜಗೆ ಘಾಯವುಆಗದೆ ಬಿಟ್ಟೀತೆಮಾಯಾವಾದಗಳ ಕಲಿತಾ ಮನುಜಗೆ ಕಾಯಕಷ್ಟ ಬರದಿದ್ದೀತೆ 4ಸಾಧು ಸಜ್ಜನರನು ಬಾಧಿಸಿದಾ ಪರವಾದಿಗೆ ದೋಷವು ತಪ್ಪೀತೆಬಾಧಿಸಿ ಬಡವರ ಅರ್ಥವ ಒಯ್ವವಗೆ ವ್ಯಾಧಿ ರೋಗಗಳು ಬಿಟ್ಟೀತೆಬದ್ದ ಮನುಜ ಬಹು ಕ್ಷುದ್ರವ ಕಲಿತರೆಬುದ್ದಿ ಹೀನನೆಂಬುದು ಹೋದೀತೆಕದ್ದು ಒಡಲ ತಾ ಪೊರೆವನ ಮನೆಯೊಳಗೆಇದ್ದುದು ಹೋಗದೆ ಇದ್ದೀತೆ 5ಅಂಗದ ವಿಷಯಂಗಳನು ತೊರೆದಾತಗೆ ಅಂಗನೆಯರಬಗೆ ಸೊಗಸೀತೆಸಂಗ ಸುಖಂಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆಇಂಗಿತವರಿಯುವ ಸಂಗ ಶರೀರ ವಜ್ರಾಂಗಿಯಾಗದೆ ಇದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದ ಭಂಗಗೆ ಮುಕ್ತಿಯು ದೊರಕೀತೆ 6ಕರುಣಾಮೃತದಾ ಚರಣವ ಧರಿಸಿದ ಪರಮಗೆ ಸರಳಿ ಬಂದೀತೆಕರಣ ಪಾಶದುರವಣೆ ತೊರೆವಾತಗೆ ಶರಣರ ಪದ್ಧತಿ ತಪ್ಪೀತೆಆರುಶಾಸ್ತ್ರವನು ಮೀರಿದ ಯೋಗಿಗೆತಾರಕ ಬ್ರಹ್ಮವು ತಪ್ಪೀತೆವರದ ಪುರಂದರವಿಠಲನ ಚರಣಸ್ಮರಿಸುವವನಿಗೆ ಸುಖ ತಪ್ಪೀತೆ * 7
--------------
ಪುರಂದರದಾಸರು
ಗಿಳಿಯು ಪಂಜರದೊಳಿಲ್ಲ - ಶ್ರೀ ರಾಮ ರಾಮ |ಗಿಳಿಯು ಪಂಜರದೊಳಿಲ್ಲ ಪ.ಅಕ್ಕ ಕೇಳೆ ಎನ್ನ ಮಾತು ||ಚಿಕ್ಕದೊಂದು ಗಿಳಿಯ ಸಾಕಿದೆ ||ಅಕ್ಕ ನಾನಿಲ್ಲದ ವೇಳೆ |ಬೆಕ್ಕು ಕೊಂಡು ಹೋಯಿತಯ್ಯೋ 1ಅರ್ತಿಗೊಂದು ಗಿಳಿಯ ಸಾಕಿದೆ |ಮುತ್ತಿನ ಹಾರವನು ಹಾಕಿದೆ ||ಮುತ್ತಿನಂಥ ಗಿಳಿಯು ತಾನು |ಎತ್ತ ಹಾರಿ ಹೋಯಿತಯ್ಯೋ 2ಹಸಿರು ಬಣ್ಣದ ಗಿಳಿಯು |ಹಸಗುಂದಿ ಗಿಳಿಯು ತಾ |ಮೋಸ ಮಾಡಿ ಹೋಯಿತಯ್ಯೋ 3ಮುಪ್ಪಾಗದ ಬೆಣ್ಣೆಯ |ತಪ್ಪದೆ ಹಾಕಿದೆ ಹಾಲು ||ಒಪ್ಪದಿಂದ ಕುಡಿದು ತಾನು |ಗಪ್ಪನೆ ಹಾರಿ ಹೋಯಿತಯ್ಯೋ 4ಒಂಬತ್ತ ಬಾಗಿಲ ಮನೆಯು |ತುಂಬಿದ ಸಂರ್ದಶಿ ಇರಲು ||ಕಂಬ ಮುರಿದುಡಿಂಬ ಬಿದ್ದು |ಅಂಬರಕಡರಿ ಹೋಯಿತಯ್ಯೋ 5ರಾಮ ರಾಮ ಎಂಬ ಗಿಳಿಯು |ಕೋಮಲ ಕಾಯದ ಗಿಳಿಯು ||ಸಾಮಜಪೋಷಕ ತಾನು |ಪ್ರೇಮದಿ ಸಾಕಿದ ಗಿಳಿಯು 6ಅಂಗೈಯಲಾಡುವ ಗಿಳಿಯು |ಮುಂಗೈಯ ಮೇಲಿನ ಗಿಳಿಯು ||ರಂಗ ಪುರಂದರವಿಠಲನಂತ |ರಂಗದೊಳಿಹ ಗಿಳಿಯು 7
--------------
ಪುರಂದರದಾಸರು
ತುತ್ತೂರಿಮೌರಿತಾಳ ದಂಡಿಗೆ ಮದ್ದಲೆ |ಉತ್ತಮ ಶಂಖದ ನಾದಗಳಿಂದ ||ಸುತ್ತಮುತ್ತಿ ನಾರಿಯರು ತಾಥೈಯೆಂದು |ಅರ್ತಿಯಿಂದ ಕುಣಿಸುವರುಪರವಸ್ತುತತ್ಥೈಹಿಡಿದು 2ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ |ಪ್ರೇಮದಿಂದ ಬಿಗಿಬಿಗಿದಪ್ಪಿ ಮುದ್ದಾಡಿ ||ಕಾಮಿತ ಫಲವೀವ ಭಕುತಜನರೊಡೆಯ |ಸ್ವಾಮಿ ಶ್ರೀ ಪುರಂದರವಿಠಲರಾಯನ 3
--------------
ಪುರಂದರದಾಸರು
ದಾಸನೆಂತಾಗುವೆನು ಧರೆಯೊಳಗೆ ನಾನು |ವಾಸುದೇವನಲಿ ಲೇಸ ಭಕುತಿಯ ಕಾಣೆ ಪ.ಗೂಟನಾಮವ ಹೊಡೆದು ಗುಂಡು ತಂಬಿಗೆ ಹಿಡಿದು |ಗೋಟಂಚುಧೋತರ ಮುಡಿಯನುಟ್ಟು ||ದಾಟುಗಾಲಿಡುತ ನಾಧರೆಯೊಳಗೆ ಬರಲೆನ್ನ |ಬೂಟಕತನ ನೋಡಿ ಭ್ರಮಿಸದಿರಿ ಜನರೆ 1ಅರ್ಥದಲ್ಲಿಯ ಮನಸು ಆಸಕ್ತವಾಗಿದ್ದು |ವ್ಯರ್ಥವಾಯಿತು ಜನ್ಮ ವಸುಧೆಯೊಳು ||ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ |ಸತ್ಯ - ಶೌಚಗಳರಿಯೆ ಸಜ್ಜನರುಕೇಳಿ2ಇಂದಿರೇಶನ ಪೂಜೆ ಬಂದು ಮಾಡಿದ್ದಿಲ್ಲ |ಸಂಧ್ಯಾನ - ಜಪ - ತಪವೊಂದನರಿಯೆ||ಒಂದು ಸಾಧನ ಕಾಣೆ ಪುರಂದರವಿಠಲನ |ದ್ವಂದ್ವಪಾದವ ನಂಬಿ ಅರಿತು ಭಜಿಸಿದರೆ 3
--------------
ಪುರಂದರದಾಸರು
ಧರ್ಮಕ್ಕೆ ಕೈಬಾರದೀಕಾಲ - ಪಾಪ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕರ್ಮಕ್ಕೆ ಮನ ಬಾಹುದೀ ಕಲಿಕಾಲ ಪ.ದಂಡದೋಷಕೆ ಉಂಟು ಪುಂಡುಪೋಕರಿಗುಂಟು |ಹೆಂಡಿರು - ಮಕ್ಕಳಿಗಿಲ್ಲವೀ ಕಲಿಗಾಲ ||ಭಂಡೆಯರಿಗುಂಟು ದಿಂಡೆಯರಿಗುಂಟು - ಬೇಡಿ - |ಕೊಂಡಿವರಿಗಿಲ್ಲವು ಈ ಕಲಿಕಾಲ 1ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು |ಹೆತ್ತತಾಯಿಗಿಲ್ಲ ಈ ಕಲಿಕಾಲ ||ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ |ಉತ್ತಮರಿಗೆ ಇಲ್ಲವೀ ಕಲಿಕಾಲ 2ಹುಸಿದಿಟವಾಯಿತು ರಸ - ಕಸವಾಯಿತು |ಮಸಿ ಮಾಣಿಕವಾಯಿತೀಕಾಲ ||ವಸುಧೆಯೊಳಗೆ ನಮ್ಮ ಪುರಂದರವಿಠಲನ |ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ 3
--------------
ಪುರಂದರದಾಸರು
ಭೂರಿಕರುಣಿ ಹನುಮ ಪಾಲಿಸುಪ.ಬೀರಕಬ್ಬಿಯ ಕೃಷ್ಣಾತೀರನಿವಾಸಭಾರತಮಲ್ಲ ಬುಧರ ಪರಿತೋಷ ಅ.ಪ.ಕರ್ತನ ನೇಮದಿ ಕಡಲ ಕಾಲುವೆ ಮಾಡಿಅರ್ತಿಲಿ ದಾಟಿ ರಕ್ಕಸರ ಪಟ್ಟಣದಿಕೀರ್ತಿಯ ಬೆಳಗಿದೆ ವನವ ಕಿತ್ತು ವಿನೋದಮೂರ್ತಿಬಲ್ಲಿದರಾಮನ ಬಂಟನಹುದೊ1ಭೀಕರಅಕ್ಷಮೊದಲಾದರೊದೆದುಏಕಜ್ವಾಲೆಯಲಿ ಲಂಕೆಯ ಸುಟ್ಟು ನಲಿದುಕಾಕುತ್ಸ್ಥನಿಗೆ ಸೀತೆ ಕುಶಲವ ಮುಟ್ಟಿಸಿದೆ ಮೂಲೋಕದಿ ನಿನಗೊಬ್ಬ ಸಮನೆನ್ನಬಹುದೆ 2ಅತಿ ಘಾತಿಸಿಕೊಂಡು ಕಪಿಗಳು ರಣದಲಿಮೃತ ವಿಕ್ರಮರಾಗಿ ಹರಣಗುಂದಿರಲುಮೃತ ಸಂಜೀವನವ ತಂದು ರಕ್ಷಿಸಿದೆ ಅಪ್ರತಿಮ ಪ್ರಸನ್ವೆಂಕಟೇಶಗರ್ಪಿಸಿದೆ 3
--------------
ಪ್ರಸನ್ನವೆಂಕಟದಾಸರು
ವರತೀರ್ಥರಾಜ ಪ್ರಯಾಗವೆನಿಸುವ ಕ್ಷೇತ್ರ - |ದೊರೆ ಮಾಧವನ ಭಜಿಸಿರೈ 3ಆ ಮಾಘಮಾಸದತಿಶಯವಾದ ಸ್ನಾನವನು |ಈ ಮಹಾನದಿಯೊಳಗೆ ಮಾಡಲೋಸುಗಬೊಮ್ಮ |ಸೋಮಶೇಖರ ಮುಖ್ಯ ದೇವತೆಗಳೈತಹರು |ಪ್ರೇಮದಿಂದಲಿ ನಿರುತ ||ನೇಮವಿದು ದ್ವಿಜಕುಲೋತ್ತಮರಾದವರುಕೇಳಿ |ಕಾಮ - ಕ್ರೋದವ ಜರಿದ ಪ್ರಾಯಾಗ ಕ್ಷೇತ್ರದಲಿ |ರಾಮಣೀಯಕ ಸ್ನಾನನುಷ್ಠಾನ ತೀರ್ಥವಿಧಿ |ಹೋಮಗಳ ಮಾಡಿರಯ್ಯ 4ಆರ್ಯವರ್ತದ ಬ್ರಹ್ಮವರ್ತ ದೇಶದ ಮಧ್ಯೆ |ಧಾರ್ಯವಾದಲೆ ಪುಣ್ಯವಾರಾಣಾಸೀ ಕ್ಷೇತ್ರ |ಕಾರ್ಯವಿಶ್ವೇಶತಾರಕ ಮಂತ್ರವುಪದೇಶಿ |ಸೂರ್ಯಚಂದ್ರಾಗ್ನಿನಯನ||ತ್ವರ್ಯುಗ್ರನೆನಿಪಭೂತೇಶ ಭೈರವನಲ್ಲಿ |ವೀರ್ಯದಿಂದಘಾಕಾರಿ ಜೀವಿಗಳ ಶಿಕ್ಷಿಸುವ |ಶೌರ್ಯಅಗಣಿತ ಮಹಿಮ ಶ್ರೀ ಬಿಂದು ಮಾಧವಗೆ |ಕಾರ್ಯದೊರೆತನವು ಅಲ್ಲಿ 5ಅರ್ತಿಯಲಿ ಪಂಚಗಂಗೆಯಲಿ ಮಜ್ಜನಮಾಡಿ |ನಿತ್ಯ ನೈಮಿತ್ತ್ಯ ಕರ್ಮಂಗಳನು ಪತಿಕರಿಸಿ |ಸುತ್ತಿ ಅಂತರ್ವೇದಿಯನ್ನು ಪಂಚಕ್ರೋಶ - |ಯಾತ್ರೆಗಳ ಮಾಡಿ ಬಳಿಕ ||ಮತ್ತೆ ಶ್ರೀ ವಿಶ್ವೇಶ್ವರಗೆ ಪ್ರದಕ್ಷಿಣೆ ಮಾಡಿ |ಭಕ್ತಿಪೂರ್ವಕವಾಗಿ ಅಲ್ಲಲ್ಲಿ ಇಹ ವೈಷ್ಣ - |ವೋತ್ತಮರಿಗೆರಗಿ ಸದ್ಧರ್ಮಗಳ ಮಾಡಿ -ಕೃತ ಕೃತ್ಯರೆಂದೆನಿಸಿದರಯ್ಯ 6
--------------
ಪುರಂದರದಾಸರು
ವೃಂದಾವನ ಲಕ್ಷ್ಮಿ ಜಯಜಯತೂಸುಂದರಿ ಸುಗುಣೆ ಸುಶೀಲೆ ಜಯತು ಜಯಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕ್ಷೀರಾಬ್ಧಿ ಮಥಿಸಲುಸುಧೆಹುಟ್ಟಿ ಬರಲೂನಾರಾಯಣ ಹರುಷಾಶ್ರು ಸುರಿಸಲೂಧಾರಿಣಿಯೊಳಗದು ಗಿಡವಾಗಿ ಶೋಭಿಸೆನಾರಿ ಲಕ್ಷುಮಿಯಂಗ ತುಳಸಿಯೆಂದೂ1ಆಲಯದಿಪ್ಪತ್ತೆಂಟು ಹೆಜ್ಜೆ ಈಶಾನ್ಯದಿಏಳುದಳಿದ ತುಳಸಿಗಿಡವಮೂಲದಿ ನವರತ್ನವಿಟ್ಟು ಪ್ರತಿಷ್ಠಿಸೆಪಾಲಿಸೆ ವಿಷ್ಣು ತಾನಲ್ಲಿರುವೆನೆಂದು2ಧಾತ್ರಿನೆಲ್ಲಿಯು ವಾಣಿ ಗಿರಿಜೆಯರಂಶದಿಪೃಥಿವಿಯೊಳಿರೆ ಕಂಡು ತುಳಸಿಯಂಕದಲಿಅರ್ತಿಯಿಂದಲಿ ನಟ್ಟು ಪೂಜೆಯನೆಸಗಲುಪ್ರೀತಿಸಿ ಬ್ರಹ್ಮ ವಿಷ್ಣು ರುದ್ರರೆ ವರವೀವರು3ಬೃಂದೆ ಜಲಂಧರನರಸಿ ಪತಿವ್ರತೆ-ಯಂದಿರೆ ವಿಷ್ಣುವೊಲಿಸಿ ದುರುಳರ ಗೆಲಿಸೆಬೃಂದೆ ವರವ ಬೇಡಿ ಸಹಗಮನವಾದ ಸ್ಥಳನಿಂದಾನು ವಿಷ್ಣು ತುಳಸಿಯೊಳ್4ಕಾರ್ತೀಕ ದಾಮೋದರನೆನಿಸಿ ಪ್ರೀತಿಯಿಂದಲಿತುಳಸಿಯಲಿ ತಾ ನೆಲಸಿಘೃತದಿ ಜ್ಯೋತಿಯನಿಟ್ಟು ಪೂಜಿಸಿದವರಿಗೆಅತಿಶಯ ವರವಿತ್ತು ಸ್ವಾಮಿ ಪರಸುವನು5ಕಟ್ಟಿಗೋಮಯದಿ ಬಳಿದೂಹಿಟ್ಟಲಿ ರಂಗೋಲಿ ಬರೆದೂ ನೀರೆರೆದುಶ್ರೇಷ್ಠದಿ ತೀರ್ಥವಗೊಂಡು ನಿರ್ಮಾಲ್ಯ ಧರಿಸಲುಅಕ್ಷಯವರವಿತ್ತು ದೇವಿ ಮನ್ನಿಪಳೂ6ವಿಷ್ಣು ಪಾದದಿ ತುಳಸಿ ದಳದಿಂದರ್ಚಿಸಲುಇಷ್ಟ ಪಡುವ ವಾಸುದೇವನು ತಾನುಇಷ್ಟದಿ ತುಳಸಿ ಚರಿತೆ ನಿತ್ಯದಿ ಪಠಿಸಲುಇಷ್ಟಾರ್ಥ ವರವೀವ ಗೋವಿಂದದಾಸರಿಗೆ7
--------------
ಗೋವಿಂದದಾಸ
ವೇಣುಗೋಪಾಲವಿಠಲದಾತಮಹಾಪ್ರಭುವೆಸಾಧು ಜೀವರ ಸೃಜಿಸಿದುದಕೆ ಫಲವೇನಿಲ್ಲ ಬಾಧೆ ತಂದಿತ್ತ ಬಳಿಕಚಿಂತ್ರಣಿಯ ವೃಕ್ಷ ವಿಷಾದಕಾರಣ ಎಲ್ಲಿ ಚಿಂತಿಪರು ಸಂತರುಗಳುಬಿತ್ತಿ ಬೀಜವ ಬೆಳೆಸಿ ಕೊಯ್ಯಕುಳಿತವಗೆ ಮಾರುತ್ತರವು ಭಿರಿಯಲ (?)ಆವ ಜನುಮದಲಿಂದ ಸಾವವೊ ಅರಿಯೆ ನೋವು ಮೊಳಕಿನ್ನು ಬಹಳಪ್ರಾರ್ಥಿಸಿದೆ ನಿನ್ನ ಭಕುತನ ಅರ್ತಿಯನ್ನು ಮನದಲಿ ಸ್ಫೂರ್ತಿ ಆರದರಿಂದಲಿ
--------------
ಗೋಪಾಲದಾಸರು
ಹಣ್ಣು ಕೊಂಬುವ ಬನ್ನಿರಿ ಹರಿದಾಸರುಹಣ್ಣು ಕೊಂಬುವ ಬನ್ನಿರಿ ಪ.ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆಬಾಳೆಹಣ್ಣು ಅಪಸುತ್ತೇಳು ಲೋಕದಿಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯಮಾಧವನೆಂಬ ಅಚ್ಚಮಾವಿನ ಹಣ್ಣು1ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣುಸುಜನಭಕ್ತರೆಲ್ಲಕೊಳ್ಳಬನ್ನಿರಿ ಹಣ್ಣು2ತುರವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧೃವನಿಗೆ ಪಟ್ಟಗಟ್ಟಿದ ಹಣ್ಣು
--------------
ಪುರಂದರದಾಸರು
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ