ಚಂದ್ರನ ನೋಡಿರೈ ಸುಶೀಲೇಂದ್ರ ಪಾಡಿರೈ
ಸುಜನ ಮಂದಾರ | ಮಾಘ ವಿರೋಧಿ
ಸುಮ ತಪಯೋಗಿ ಪ
ಯತಿ ಕುಲವರ್ಯ ಸುವೃತೀಂದ್ರ ಕರಾಂಬುಜ |
ಜಾತ ಜಿತ ಮನೋಜಾತ ||
ಪೃಥ್ವಿ ಸುರಾರ್ಚಿತ ಪತಿತ ಮತಾರಣ್ಯಜಾತ ವೇದಸನೀತ
ನಳಿನ ಷಟ್ಚರಣ
ಅತಿಶಯ ವಿಭವದಿ ಜಗದಿ ಮೆರೆದರವಿತೇಜ ಕುಜನ ಸರೋಜ1
ವರದುಕೂಲದಿ ಪರಿಶೋಭಿಪರಿತ್ತಿಗ್ರಾಮ ಕೃತ ನಿಜಧಾಮ
ಪೂರ್ಣಸುಪ್ರೇಮ ಪಡೆದಸನ್ಮಹಿಮ ||
ಪರಿಮಳ ಸುಧಾನ್ಯಾಯಾಮೃತ ತತ್ವದಸಾರವರೀತ ಗಂಭೀರ
ಧರಣಿ ಸುರಾಗ್ರಣಿ ಸುವೃತೀಂದ್ರ ಹೃಕುಮದ ಸುಮನ ಶರತದ 2
ಅಕ್ಷಯ ವತ್ಸರಾಷಾಢ ಸುನೀತ ತಿಥಿ ತ್ರಯದಲಿ |
ಲಕ್ಷ್ಯವಿಟ್ಟು ಲಯ ಚಿಂತನೆ ಗೈದ್ಹರುಷದಲಿ ಸುಸ್ವಾಂತದಲಿ ||
ತ್ರ್ಯಕ್ಷವಿನುತ ಶಾಮಸುಂದರನಂಘ್ರಿ ಧ್ಯಾನಿಸುತಕ್ಷೋಣಿತ್ಯಜಿಸುತ
ಚಕೋರ 3