ಸ್ವಾಮಿ ನಿನಗೆ ಶರಣನೆಂಬೆ ಸೋಮನಾಥಾ ಸಕಲ
ಕಾಮಿತಾರ್ಥವಿತ್ತು ಸಲಹೊ ಸೋಮನಾಥಾ ಪ.
ಹರಿಯ ಕರುಣಾ ಬಲದಿ ನೀನು ಸೋಮನಾಥಾ ಸರ್ವ
ಸುರರಿಗೆಲ್ಲ ಧೊರೆಯಾಗಿರುವಿ ಸೋಮನಾಥ
ಪಾದ ನಂಬಿ ಸೋಮನಾಥ
ಮೊರೆಯ ಹೊಕ್ಕೆ ನಿಂದು ಬಂದು ಸೋಮನಾಥ 1
ವಿಘ್ನರಾಜ ನಿನ್ನ ಮಗನು ಸೋಮನಾಥಾ ಬೇಗ
ಭಸ್ಮಗೈಸು ವೈರಿಗಳನು ಸೋಮನಾಥಾ
ಮಗ್ನನಾದೆ ಮಹಾಂಬುಧಿಯೊಳ್ ಸೋಮನಾಥಾ ಸರ್ವ
ವಿಘ್ನವೋಡಿಸೈ ಕೃಪಾಳೊ ಸೋಮನಾಥ 2
ಶಂಕರ ಕೈಪಿಡಿಯೊ ತ್ರಿಪುರ ಬಿಂಕವಾರಿ ಶ್ರೀ-
ವೆಂಕಟಾದ್ರಿನಾಥನ ಮನೋನುಸಾರೀ
ಕಿಂಕರನೆಂದೆನಿಸೆನ್ನ ಮೃಗಾಂಕಧಾರೀ ಪಾದ-
ಪಂಕಜವ ನೀಡು ಸರ್ವಾತಂಕಹಾರೀ 3