ಒಟ್ಟು 8021 ಕಡೆಗಳಲ್ಲಿ , 132 ದಾಸರು , 4501 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈವಲ್ಯ ಕೃಪೆಯ ಸುಜ್ಞಾನ ಸಾಧುಜನರ ನಿಜಸ್ಥಾನ ಅನುದಿನ 1 ವರ್ಣದೋರುವದನೇಕ ತುಂಬಿ ವರಮುನಿಗಳಿಗೆ ಕೌತುಕ ಪರಿಪೂರ್ಣಗಿಹ್ಯ ಮೂರು ಲೋಕ ದೋರುತಿಹದು ಬ್ರಹ್ಮಸುಖ 2 ಎನ್ನೊಳಗಾನಂದ ಭರಿತ ಜನವನದೊಳು ತಾ ಸಾಕ್ಷಾತ ತನ್ನೊಳಗದೆ ತಾ ಸ್ವಹಿತ ಕೈವಲ್ಯನಿಧಿ ಗುರುನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೈವಲ್ಯಪತಿ ವಿಠಲ | ಇವಳ ನೀ ಸಲಹೋ ಪ ದೇವದೇವೊತ್ಮತವ | ದಾಸ್ಯಕಾಂಕ್ಷಿಪಳಾ ಅ.ಪ. ಗುರುಗಳೊಂದಗೆ ಯಾತ್ರೆ | ಭರದಿ ಸ್ವಪ್ನದಿಗೈದು |ಮರಳಿ ಕೊಲ್ಹಾಪುರದ | ಶಿರಿರಮೆಯ ಕಂಡೂ |ಮರುತ ದರ್ಶನದಿಂದ | ವರಸು ಉಪದೇಶಕ್ಕೆತರುಣಿ ಶುದ್ಧಳು ಇಹಳು | ಉರಗಾದ್ರಿವಾಸಾ 1 ತೈಜಸನು ನೀನಾಗಿ ನೈಜದಂಕಿತ ಪ್ರಾಪ್ತಿಮಾಜದಲೆ ಸೂಚಿಸಿಹೆ | ಭ್ರಾಜಿಷ್ಣು ಮೂರ್ತೇ|ಯೋಜಿಸಿದೆ ಅದಕಾಗಿ | ತರಳೆಗಂಕಿತವನ್ನುರಾಜಿಸೋ ಮನದಿ ತವ | ನೈಜರೂಪವನೂ 2 ತರತಮದ ಸುಜ್ಞಾನ | ಹರಿಗುರೂ ಸದ್ಭಕ್ತಿಮರುತ ಮತ ದೀಕ್ಷೆಯನು | ಪರಮ ವೈರಾಗ್ಯಕರುಣಿಸುತ ಸಂಸಾರ ಶರಧಿಯನೆ ದಾಂಟಿಸೊಅರವಿದೂರನೆ ಹರಿಯೆ | ಪ್ರಾರ್ಥಿಸುವೆ ನಿನ್ನಾ 3 ಕರ್ಮ ನಿಷ್ಕಾಮದಲಿ | ಪೇರ್ಮೆಯಲಿ ಚರಿಪಂತೆಭರ್ಮಗರ್ಭನ ಪಿತನೆ | ಸನ್ಮನವನಿತ್ತೂ |ನಿರ್ಮಮತೆ ನೀಡಿ | ಕರ್ಮನಿರ್ಲೇಪದಲಿಹಮ್ರ್ಯ ವೈಕುಂಠವನು | ಗಮಿಪ ತೆರಮಾಡೋ 4 ಭಾವುಕರ ಪರಿಪಾಲ | ಭೂವೈಕುಂಠಲೋಲದೇವದೇವೋತ್ತಮನೆ | ಗೋವಿಂದ ಮೂರ್ತೇ |ನೀ ವೊಲಿಯದಿಲ್ಲ ಗುರು | ಗೋವಿಂದ ವಿಠ್ಠಲನೆಸೇವಕಳ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 5
--------------
ಗುರುಗೋವಿಂದವಿಠಲರು
ಕೊಟ್ಟು ಕೊಂಡಾಡ ಬೇಕು ಘಟ್ಟಿಕೊಂಡು ಗುರುಭಕ್ತಿ ಗುಟ್ಟಿನೊಳು ನೋಡ ಬೇಕು ಇಟ್ಟು ದೋರುತದ ಮುಕ್ತಿ ಧ್ರುವ ಕೊಟ್ಟು ಗುರುವಿಗೆ ಮನಕೊಳ್ಳಬೇಕು ನಿಜಘನ ಇಟ್ಟಾದೆ ನಿಜಧನ ಪಡಿಬೇಕು ಸಾಧನ ಕೊಟ್ಟಾಂಗ ಕೊಂಬು ಖೂನ ಹೇಳಿ ಕೊಡುವ ಗುರು ಜ್ಞಾನ ಮುಟ್ಟಿ ಭಜಿಸುದು ಪೂರ್ಣ ಸ್ವಾಮಿ ಶ್ರೀನಾಥಾರ್ಪಣ 1 ಕೊಟ್ಟು ಕೊಂಡು ನೋಡಿ ನೇಮ ಸೃಷ್ಟಿಯೊಳು ಸುಧಾಮ ಕೊಂಡ ದಿವ್ಯಗ್ರಾಮ ಕೊಟ್ಟು ಶ್ಯಾಖದಳವಮ್ಮ ದ್ರೋಪದ್ಯಾದಳು ಸಂಭ್ರಮ ಕೃಷ್ಣಗಿದೆ ಅತಿ ಪ್ರೇಮ ಶಿಷ್ಟ ಜನರ ಸುಕ್ರಮ 2 ಮುಕ್ತಿಗಿದೇ ಮೇಲು ಭಕ್ತಿನೋಡಿ ಸಜ್ಜನರ ಯುಕ್ತಿ ಭೋಕ್ತ ಬಲ್ಲ ಗುರುಮೂರ್ತಿ ಮಾಡಬೇಕು ಭಾವ ಭಕ್ತಿ ಮುಕ್ತ ಜನರಿಗಿದೇ ಗತಿ ಕೊಟ್ಟು ಕೊಂಡಾಡುವ ಶಕ್ತಿ ಅರ್ತು ಇದೇ ಮಹಿಪತಿ ಕೊಂಡಾಡೋ ಗುರುಸ್ತುತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊಂಡಜ್ಜಿ ಶ್ರೀ ಜನಾರ್ದನ ಸ್ವಾಮಿ ಸ್ತೋತ್ರ ಎಂಥಾ ಸುಂದರನೊ ಶ್ರೀಕಾಂತನೂ ||ಅ|| ಸಂತರ ಮನೋರಥ ಸಂತತ ಪಾಲಿಸಿಪಂಥಾವ ಗೆಲಿಪ ಮಹಾಂತನೋ - ಶ್ರೀಕಾಂತನೂ ಅ.ಪ. ಮಾನಿನೀಯಳ ಬಿಟ್ಟು | ಮೌನಿಯಂದದಿ ನೀನುಕಾನನವನೆ ಸೇರಿ ನೆಲೆಸೀರ್ಪುದೂ | ಮುನಿಜನ ವಂದ್ಯಾ 1 ತೊಂಡ ಜನರು ನಿನ್ನ | ಬಂಡುಣಿಯಂದದಿಪುಂಡು ಮಾಡುವರೆಂದು ಬಂದೆಯಾ | ಪುಂಡರಿಕಾಕ್ಷಾ 2 ಹಿಂಡು ಭಕ್ತರು ತಮ್ಮ | ದಿಂಡು ಮಂಡಿಪರೆಂದು ಕೊಂಡಜ್ಜಿಯಲಿ ನೆಲಿಸೀದ್ಯಾ | ಪಾಂಡವ ಪ್ರೀಯಾ 3 ವೇಲಾಪುರಿಗೆ ಪೋಗ | ಲೊಲ್ಲೆನೆಂದೆನುತಲಿಇಲ್ಲೇ ನೆಲಸಿ ಪೂಜೆಗೊಂಬುದು ಫಾಲಾಕ್ಷ ಪ್ರಿಯನೇ 4 ಎಲ್ಲಿಪೋದರೂ ಬಿಡ | ಲೊಲ್ಲರೂ ನಿನ್ನ ಜನಸಲ್ಲಿಸೆನ್ನಯ ಮನೋಭೀಷ್ಟವ | ಹೇ ಜನಾರ್ಧನಾ 5 ಆರು ಕಾಯುವರಿಲ್ಲ | ಸಾರಿದೆ ತವ ಚರಣಪೋರನಾಮಯ ಹರಿಸಯ್ಯಾ | ನಾರದ ವಂದ್ಯಾ 6 ಗುರುಗಳಂತರ ಗುರು | ಗೋವಿಂದ ವಿಠಲನೆಪರಿಪರಿ ನಿನ ಕೀರ್ತಿ ನುಡಿಸಯ್ಯಾ | ಸುರವರ ವಂದ್ಯಾ7
--------------
ಗುರುಗೋವಿಂದವಿಠಲರು
ಕೊಂಡಾಡಬಹುದೆ ಯತೀಂದ್ರ ಎನ್ನಾ ಪಾಂಡವಪ್ರಿಯನಾಭಜಕ ವಾದಿರಾಜಯತಿ ಪ ನಾನಾ ಜನುಮದಾ ಯೋನಿಮುಖದಲಿ ಬಂದು ಮಾನವಳಿದು ಜ್ಞಾನಶೂನ್ಯನಾಗಿಹ ಶ್ವಾನಮನದ ಮೂಢಮನುಷ್ಯನಾಗಿ ಹೀನ ಅಹಂಕಾರಪೂರಿತ ದೋಷಿಂiÀi1 ಅರಿಷಡ್ವರ್ಗದೊಳು ಸಿಲುಕಿ ನರಗುರಿಯಾಗಿ ಪರರವಾರ್ತೆಯ ಸವಿವ ಹಗಲು ಇರಳೂ ದುರುಳ ದುಶ್ಚೇಷ್ಟಿಕನು ಬಹುದುರಾತ್ಮನು ನಾನು ಗುರುಹಿರಿಯರಿಗೆ ಎರಗದ ಗೂಢಪಾಪಿಯನು 2 ಒಡೆಯ ವೈಕುಂಠ ವಿಠಲನ ಭಜಿಸದೆ ಪೊಡವಿಯೊಳು ಕ್ಷುದ್ರ ದೈವಗಳಿಗೆಲ್ಲ ಪೊಡಮಡುತಿಹೆ ಸ್ವಾಮಿದ್ರೋಹಿ ಗರುವಿಯಾ ಕಡುಪಾತಕನ್ನ ನಡತೆಯನು ನೀನರಿಯದಲೇ 3
--------------
ಬೇಲೂರು ವೈಕುಂಠದಾಸರು
ಕೊಂಡಿರ್ಯಾ ನೀವು ಕೊಂಡಿರ್ಯಾ ಮಂಡಲದೊಳು ವಸ್ತು ಕೊಂಡಿರ್ಯಾ ಧ್ರುವ ಕೊಳಬೇಕಾದರ ನೀವು ತಿಳಿದುಕೊಂಡು ಬನ್ನಿ 1 ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ 2 ಬೆಲೆಯು ಹೇಳುವದಲ್ಲ ನೆಲೆಯ ತಿಳಿಯುವದಲ್ಲ 3 ಕೊಳಗ ಎಣಿಸುವುದಲ್ಲ4 ತೂಕ ಮಾಡುವುದಲ್ಲ ಲೆಕ್ಕ ಇಡುವುದಲ್ಲ 5 ಇಟ್ಟು ಮಾರುವದಲ್ಲ ಕೊಟ್ಟರ್ಹೋಗುವುದಲ್ಲ 6 ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ 7 ಹೇಳಿದ ನಾ ನಿಮಗೊಂದು ಸುಲಭವಾಗಿಂದು 8 ಒಮ್ಮನವಾದರ ಸುಮ್ಮನೆಬಾಹುದು 9 ಸಾಧುಸಜ್ಜನರಿಗೆ ಸಾಧ್ಯವಾಗುದಿದು 10ಸಾರಿ ಚೆಲ್ಲೇದ ಮಹಿಪತಿ ವಸ್ತುಮಯಮಿದು11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊಡಿಸೊ ಅಂಕಿತವಾ ಗುರುರಾಯಾ ನಿನ್ನ ಅಡಿಗಡಿಗೆರಗಿ ನಾ ಬೇಡುವೆನಯ್ಯಾ ಪ ನಾ ಶರಣೆಂಬೆ ತಂದೆ ದರುಶನ ನುಡಿಯ ಪಾಲಿಸೋದಯದಿಂದ 1 ಎಂದು ಬಿಡದಲೇ ಕಾಡಿ ನೀ ದಯ ಮಾಡಿ 2 ಬೇಡ್ವೆ ಈ ಭಾಗ್ಯ ಯೋಗಿ 3 ಇಷ್ಟಾ ಪೂರೈಸೋ ನೀನು ನೋಡೊ ಸುರ ಕಾಮಧೇನು 4 ಅಂತರ್ಯಾಮಿ ಬಲ್ಲ ಇತ್ತರೆ ನಿನ್ನ ಕೇಳ್ವರಿಲ್ಲಾ 5
--------------
ಹನುಮೇಶವಿಠಲ
ಕೊಡು ಕೊಡು ಕೊಡೋ ವರವಾ ತಡವ್ಯಾಕೋ ದೇವಾ ನೀ ಪ ಒಡೆಯ ನಿನ್ನಯ ಯುಗ ಅಡಿಗಳ ಭಜಿಸುವೋ ಸು ಧೃಢ ಭಕುತಿ ಜ್ಞಾನವನ್ನು ತಡೆಯದೆ ಎನಗೆ ನೀ ಅ.ಪ ಪೊಡವಿ ಪಾಲಕ ನೀನೆಂದು ಭಿಡೆಯವನ್ನು ನಾ ಮಾಡೆ ಕಡಲಶಯನ ಸುಮ್ಮನೆ ಮಡದಿಸಹಿತಾಗಿ ನೀ 1 ಜಡಜಲೋಚನ ದೇವಾ ಹುಡಗ ನೀನೆಂದು ನಾ ನುಡಿದ ಮಾತುಗಳ ನಿ ನ್ನೊಡಲೊಳಗಿಡದೆ ನೀ 2 ಚಟುಲಗುರು ಜಗನ್ನಾಥಾ ವಿಠಲ ನಿನ್ನ ನಾ ಕÀರಾ ಪುಟದಿ ಬೇಡುವೆ ಮಮ ಹೃ ತ್ಪುಟದಿ ತೋರುವೆನಿಂದು ನೀ 3
--------------
ಗುರುಜಗನ್ನಾಥದಾಸರು
ಕೊಡು ಬ್ಯಾಗಭೀಷ್ಟವ ತ್ವರದೀ - ನೀ ಸನ್ಮನದೀ ಪ ಕೊಡುವೊದೆನುತ ನಿನ್ನಡಿಯನು ಭಜಿಸುವ ಬಡವನ ಕರವನು ಪಿಡಿದೀ ಕಾಲದೀ ಅ.ಪ ವಡೆಯ ನೀನೆನುತತಿ ಹರುಷದಲಿ ನಂಬಿದೆ ನಿನ್ನಾ ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ ಪಿಡಿದು ಭವಶ್ರಮ ಕಳಿಯುತಲಿ - ಬಹು ತೋಷದಲೀ ನುಡಿದ ವಚನವ ಚಿತ್ತಕೆ ತಂದು ಪತಿ ಗುರುರಾಯನೆ ನೀ 1 ನಮಿಪ ಜನರಿಗೆ ಸುರಧೇನು ಭಜಿಸುವ ಜನಕೆ ಸುಮನಸೋತ್ತಮ ವರತರು ನೀನು - ಚಿಂತಿಪ ಜನಕೆ ಅಮರೋತ್ತಮ ರತುನವು ನೀನು - ಎನುತಲಿ ನಾನು ಅಮಿತ ಮಹಿಮವ ತೋರುತಲೀಗ ಶ್ರಮವ ಕಳೆದು ಸುಖಸುರಿಸುತ ನೀ 2 ಭೂತಳ ಮಧ್ಯದಲತಿ ಖ್ಯಾತ - ನೆನಿಸಿದ ನಾಥ ಪಾತಕ ಕುಲವನ ನಿರ್ಧೂತಾ - ಮಾಡುತ ನಿಜಪದ ದೂತಜನ ತತಿಮನೋರಥ - ಪೂರ್ತಿಪ ದಾತಾ ವಾತ ಗುರುಜಗನ್ನಾಥ ವಿಠಲಗತಿ ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ3
--------------
ಗುರುಜಗನ್ನಾಥದಾಸರು
ಕೊಡು ಹರಿಯೇ ದಾಸರ ಸಂಗವನು ಪ ತವ ಮಂಗಳ ಚರಿತಾಮೃತ ದಡಿಯಾ | ಶ್ರವಣದಿ ಸವಿಸವಿದುಂಬುವಿ ರಂಗಾ 1 ಪೊಡವಿಲಿ ಭಜನಿಯ ದಾರಿಯ ದೋರೀ | ಬಿಡಿಸುವರು ಮುನ್ನಿನ ಮನದಂಗಾ 2 ಗುರುಮಹಿಪತಿ ಪ್ರಭು ಧನ್ಯನಾಗುವೆನು | ಪರಿ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೊಡುಮತಿ ದಿವ್ಯಮತಿ ಭಾರತೀ ಪ ಪಾದ | ಬಿಡದೆ ಭಜಿಪ ಮತಿಅ.ಪ. ಅಜ್ಞಾನ ತಮದೊಳು | ಪ್ರಜ್ಞೆ ರಹಿತನಾದೆಸುಜ್ಞಾನ ಕರುಣಿಸೀ | ತಜ್ಞನೆನಿಸೆ ತಾಯೇ 1 ಮಂದ ಜನರ ಸೇರಿಕುಂದು ನೋಡದೆ ಕಾಯೇ | ಗಂಧವಾಹನ ಜಾಯೇ 2 ಕೋವಿದರೊಡನಾಡೀ | ಕಾವ ಕರುಣಿ ಗುರುಗೋವಿಂದ ವಿಠಲನ | ಭಾವದಿ ನೋಡುವ 3
--------------
ಗುರುಗೋವಿಂದವಿಠಲರು
ಕೊಡುವನು ಸಂಪದವ ಸುಙÁ್ಞನವ ಕೊಡುವ ಪ ಬಹುಜರನು ವಲಿಸಿ ಪಿತೃಭ್ರಾತಾಚಾರ್ಯನು ತಾನೆಂದೆನಿಸಿ ಕವಿವರ ನೆಂದೆನಿಸಿ ಬಹುವಿಧದಲಿ ತಾನು ಅತಿಹಿತದಲಿ ಗೈಯಲು ಸುಸ್ತವವನು ವರ್ಣಿಸೆ ಮಹಿಮೆಯನು1 ಸ್ಮರಿಸುವ ಭಕ್ತರ ಪೊರೆವಕರಣಿತಾನು ಸ್ವೀಕರಿಸಿದನದನು ಹರಿಸಾಕ್ಷಾನನವೆನಿಪಸುವಾಕ್ಯವನು ಸಂಪಾದಿತ ತಾನು ಹರಿವಿಶ್ವಸುನಾಮದಿ ಭೂತಳದಲ್ಲಿ ಉದಿಸಿದ ಮುದದಲ್ಲಿ ಪರಿಚಾರ ಕಾಮದಿ ಕರಸ್ನೇಹದಲಿ ಜನಿಸಿದ ಪೂರ್ವದಲಿ 2 ಸಿರಿಗೋಪಾಲಾಖ್ಯರು ಸುಙÁ್ಞನವನು ಕರುಣಿಸೆ ಮರ್ಮವನು ಸರಸದಿ ಗ್ರಂಥದವರ ಸುಹಸ್ಯವನು ಸಂಗ್ರಹಿಸಿದ ತಾನು ಸಿರಿರಘುವರ ಕರುಣದಿ ಧರೆಯೊಳು ಮೆರೆವುಲ್ಲರುವಿಗಿಲ್ಲರುವ ಗುರುವಿನ ಮಹಿಮೆಯನು3
--------------
ವರದೇಶವಿಠಲ
ಕೊಡುವೆ ವೀಳ್ಯವನು ಕಡಲ ಶಯನನೇ ನಾ ಪ. ಬುತ್ತಿ ಚಿಗುರು ಎಲೆಯು ಕತ್ತರಿಸಿದ ಅಡಕೆ ಮುತ್ತಿನ ಸುಣ್ಣವನ್ನು ನಾ 1 ಯಾಲಕ್ಕಿ ಲವಂಗ ಬಾಲ ಮೆಣಸು ಸಹ ಬಾಲೆ ನಾನು ಬೇಡುವೆನು ನಾ 2 ಶ್ರೀ ಶ್ರೀನಿವಾಸನೆ ಶ್ರೀ ರಮಾಲೋಲನೆ ಶಿರವನಿಂದು ಬಾಗುವೆನು ನಾ 3
--------------
ಸರಸ್ವತಿ ಬಾಯಿ
ಕೊಂಬುವರಿಲ್ಲೆನ್ನ ಸರಕ | ಇಂಬಿಲ್ಲ ಇಡಲಿಕ್ಕೆ |ಹೂರಲಾರೆ ಮುದುಕ ನಾ ಪ ಸುರರು ಸೇವಿಸಲಿನ್ನು | ಸೆರೆ ಸಿಕ್ಕಿರುವರಲ್ಲಾ | ಧರೆಯೊಳು ಲೋಗರಿಗೆ |ಗುರುತಿಲ್ಲಾ ಇದರೊಳು 1 ಕೊಂಡವರಿಗೆ ಲಾಭವು ಒಂದಕ್ಕೆ ನಾಲ್ಕು | ಇಸಗೊಂಡವರಿಗೆಂಟು ಮಡಿಯಹುದು || ಪುಂಡತನದಲಿ ಕಸಗೊಂಡೇನೆಂದವರಿಗೆ | ಮಂದಮತಿಗಳಿಗೆಂದಿಗೂ ದೊರೆಯದು 2 ತಂದೆ ಸದ್ಗುರು ಭವತಾರಕನ ಭಜಕ- | ರಿಂದು ಈ ವಾರ್ತೆಯನು ಕೇಳಿದರೆ | ಬಂದು ವಂದಿಸೆನ್ನ || ಆನಂದವ ಬಡಿಸುವರು | ಎಂದು ಆಗುವದೋಹಾಗೆಂದು ಯೋಚಿಸುವೆ 3
--------------
ಭಾವತರಕರು
ಕೊರಡು ಎಂಬೆನು ಇಂಥವನ ಕಂಡು ಕೊರಡು ಎಂಬೆಹುಸಿಯದೆಕೊರಡು ಅಲ್ಲದೆ ಶಿವನಿರೆ ಜೀವನೆಂಬುವನ ಕೊರಡು ಎಂಬೆ ಪ ಹಿರಿಯರು ಬರಲು ಏಳದವನನು ಕಂಡು ಕೊರಡು ಎಂಬೆಮರೆತು ತನ್ನನು ಕಲ್ಲ ಪೂಜಿಪ ಕಂಡು ಕೊರಡು ಎಂಬೆಅರಿತು ತನ್ನನು ಅಹುದಲ್ಲವೋ ಎಂಬುವನ ಕೊರಡು ಎಂಬೆಗುರುಪಾದ ಹೊಂದಿ ತನ್ನನು ತಿಳಿಯದವನು ಕೊರಡು ಎಂಬೆ 1 ತನ್ನೊಳು ಪರಮಾತ್ಮನಿರಲು ಕಾಣದವನನು ಕೊರಡು ಎಂಬೆಅನ್ನವ ಬಿಟ್ಟು ತೊಪ್ಪಲ ತಿಂಬನ ಕಂಡು ಕೊರಡು ಎಂಬೆತಿನ್ನುವನಿರುಲು ಉಪವಾಸ ಬೀಳ್ವನ ಕಂಡು ಕೊರಡು ಎಂಬೆಚೆನ್ನಾಗಿ ಹಮ್ಮಳಿಯದೆ ಶ್ರೇಷ್ಠನೆಂಬುವನ ಕೊರಡು ಎಂಬೆ 2 ನೀನಾರು ಎಂಬುವನ ಅದಾರೆನ್ನದನ ಕಂಡು ಕೊರಡು ಎಂಬೆವೇದಶಿರವನೋದಿನರ ತನ್ನನೆಂಬನ ಕೊರಡು ಎಂಬೆವಾದಕ್ಕೆ ಠಾವಿಲ್ಲ ಖೇದ ಮಾಡುವನ ಕಂಡು ಕೊರಡು ಎಂಬೆಬೋಧ ಚಿದಾನಂದನಿರೆ ಕಾಣದವನನು ಕೊರಡು ಎಂಬೆ 3
--------------
ಚಿದಾನಂದ ಅವಧೂತರು