ಒಟ್ಟು 1726 ಕಡೆಗಳಲ್ಲಿ , 94 ದಾಸರು , 1321 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಾಂತರ್ಯಾಮಿ ನೀನೆ ಸರಿ ಸರ್ವಜ್ಞನು ಸ್ವಾಮಿ ಪ ಸರ್ವಶರೀರಕ ಸರ್ವನಿಯಾಮಕ ಅ.ಪ ಹರಿ ಕೊಡುವನು ಬಂದು ಹರಿಸುತನನು ಗುರಿಮಾಡಿದೆ 1 ಮನೆ ಕಾಣಿಸುವನು ಎಂದೂ ಜಾಣತನದಿ ಸಪ್ರಾಣರ ಮಾಡಿದೆ 2 ಕರದಪ್ಪುವನೆಂದು ಶರಣರ ಹರಣವನುಳುಹಿದೆ 3 ಶೈಲದ ಗುಹೆಯೊಳಗೆ ಮಲಗಿದ್ದ ನೃ ಪಾಲನ ಖತಿಯೊಳಗೆ ಮೇಲೆ ಶರಧಿಯೊಳಾಲಯ ಮಾಡಿದೆ 4 ದುರುಳ ಪುಲಿಯು ಬಂದು ಶರಣನ ಸಲಹಿದ ವರದವಿಠಲಹರಿ 5
--------------
ವೆಂಕಟವರದಾರ್ಯರು
ಸಲಹು ಶ್ರೀ ಗುರುರಾಯಾ | ಸಲಹು ಬುಧ ಜನಪ್ರೀಯಾ | ಸಲಹೆನ್ನ ಪರಮ ಗೇಹ್ಯಾ ಪ ಚಿಕ್ಕವನು ನಾ ಮೊದಲು | ಸೊಕ್ಕಿ ಭವಸುಳಿಯೊಳಗೆ | ಸಿಕ್ಕಿ ಬಹು ನೊಂದೆನೆಂದು | ಹೊಕ್ಕೆ ಮೊರೆ ನಿನ್ನ ಹಿಂದಿಕ್ಕಿಕೋ ದಯದಿಂದ | ಮಕ್ಕಳಂದದಲಿ ಚೆನ್ನಾಗೆನ್ನಾ 1 ಪಿಂತಿನಾ ಭವಣೆಗಳು | ಎಂತಾದರಾಗಲೀ | ಶಾಂತ ಮೂರುತಿಯೇ ಎನ್ನಾ | ಅಂತರಂಗದಲಿನ್ನು ನಿಂತು ನಿನ್ನಯ ರೂಪ | ಸಂತತವಾಗಿ ದೋರೋ ಬೀರೋ 2 ಅನ್ಯಪಥಕೆಳಿಸಿದಾ ಘನ್ನ ತಪ್ಪವ ಕ್ಷಮಿಸಿ | ನಿನ್ನ ಪದಯುಗಳ ದೋರಿ | ಸನ್ನುತವೆ ಮಹಿಪತಿ ಚಿನ್ನ ಕೃಷ್ಣನ ಸ್ವಾಮಿ | ಇನ್ನಾರೆ ದಯಮಾಡೋ ನೋಡೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹೋ ಎನ್ನನು ಸ್ವಾಮಿ ಸರ್ವಾಂತರ್ಯಾಮಿ ಪ ಜಲಜಾಪ್ತಕುಲ ಭೂಷಾನತಜನ ಪ್ರೇಮಿ ಅ.ಪ ದಶರಥನಂದನ ದಾನವ ಹರಣಾ ಪಶುಪತಿ ಮುಖಸುರ ಪೂಜಿತ ಚರಣಾ 1 ಭಕ್ತ ಮಾನಸ ಹಂಸ ಭವರೋಗ ವೈದ್ಯ ಮುಕ್ತಿ ಪ್ರದಾಯಕ ನಿಗಮಾಂತ ವೇದ್ಯಾ 2 ಸೀತಾ ಮನೋಹರಾ ಶ್ರಿತ ಪರಿಪಾಲ ವಾತ ಸಂಭವ ಪ್ರೀಯ ಗುರುರಾಮವಿಠಲ 3
--------------
ಗುರುರಾಮವಿಠಲ
ಸಲ್ಲಾ ಸಲ್ಲಾ ಭಕುತಿಗೆ ಸಲ್ಲಾ ಸಲ್ಲಾ | ರತಿಯಿಲ್ಲದೆ ಡಾಂಭಿಕನು | ಬೆಲ್ಲದೊಳಗಿನ ಕಲ್ಲಿನಂದದಲಿಹನು | ಪರಿಪಾಕದಲ್ಯವ ದೂರಾಹನು | ಅವನೀಗ ಪ ಗುರುವಿನಂಘ್ರೀಯ ಕಂಡು | ಗುರುತಕ ಬಾರದೆ | ಧರಿಯೊಳು ವ್ಯಭಿಚಾರಿತೆರನಂದದಿ | ಗುರುಭಕ್ತನೆನುಸುವ ಗುರಶೇವೆಘೋದಲುವ | ಗುರುನಾಮ ಜಾಗಿಸುವನು ಯಲ್ಲರೊಳು | ಗುರುದಯ ದೋರಿಸು | ನಿಷ್ಠಿಗೆ | ಹುರುಳಿಲ್ಲ ಮಾನಿಸನು 1 ಎಲ್ಲಾ ಶಾಸ್ತ್ರವ ಕಲೆ ಬಲ್ಲವ ನಾನೆಂದು | ಸೊಲ್ಲು ಸೊಲ್ಲಿಗೆ ತನ್ನ ಹೊಗಳುತಲಿ | ಒಳ್ಳೆವರನು ಕಂಡು ಮನ್ನಿಸಿಕೊಳ್ಳದೆ | ನಿಲ್ಲದೇ ವಾದಿಸುವ ಅವರಾಚು ಸೊಲ್ಲಿಗೆ | ಸೊಲ್ಲಿಗೆ ಕುಂದಿಡುವ | ಆಚಾರ | ಕ್ಷುಲ್ಲಕತನದಿ ನೋಡುವಾ ಅವನಿಗೆ 2 ಘನ ಗುರು ಮಹಿಪತಿ ಸ್ವಾಮಿಯ ಸೂತ್ರದಿ | ಅನುವಾದಾ ಲಾಭಾ ಲಾಭಗಳೆನ್ನುತ | ಜನರಿಗೆ ಹೇಳುವಾತಾ ಹಾದಿತಪ್ಪುವಾ | ಧನ ಮದಾಂಧರ ಮನವಾ | ಹಿಡಿವುತ | ತನುಪರವಶ ಮಾಡುವಾ | ಸಿದ್ಧಾಂತ | ಅನುಭವ ನುಡಿಮರವಾ ಅವನೀಗ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂಸಾರ ಚಿಂತೆ ನಮ್ಮ ಸ್ವಾಮಿ ಶ್ರೀ ಹರಿಗುಂಟು ಸಂಸಾರಿ ಕೃಷ್ಣ ಕರುಣಿಸುವ ಇದರಿಟ್ಟು ಧ್ರುವ ತುತ್ತಾಯತವ ಮಾಡಿ ಹೊತ್ತು ನಡೆಸುವ ಒಡಿಯ ಮತ್ತೆ ಚಿಂತಿಸಲ್ಯಾಕೆ ಹತ್ತು ಕಡೆಯ ಭಕ್ತವತ್ಸಲ ಸ್ವಾಮಿ ಚಿಂತ್ಯಾಕೆನ್ನೊಡಿಯ ಗ್ರಾಸ ಭಕ್ತರೊಡಿಯ 1 ಅನೆ ಮೊದಲಿರುವೆ ಕಡೆ ತಾಂ ನಡೆಸುತಿರಲಿಕ್ಕೆ ಜನಕೊಡ್ಡಿ ಕೈಯ ನಾ ದಣಿಯಲೇಕೆ ಅನುದಿನ ಹರಿವಾಕ್ಯ ಅನುಭವಿಸುತಿರಲಿಕ್ಕೆ ಅನುಮಾನವಿಡಿದು ನಾ ಹೆಣಗಲ್ಯಾಕೆ 2 ಭಾರ ವಹಿಸಿ ಕೊಂಡಿರಲು ಮಾರಪಿತ ಪರಿಪೂರ್ಣ ಸಾರಾಂಶ ವಿತ್ತು ವರಕೃಪೆಯ ಙÁ್ಞನ ಆರ್ಹಂಗವೆನಗ್ಯಾಕೆ ತೋರುತಿದೆ ನಿಧಾನ ತರಳ ಮಹಿಪತಿ ಹೊರೆವ ಗುರು ಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಕು ಸಾಕು ಸ್ವಾಮಿ ಸಂಸಾರವು ಪ ಸಾಕಿದರೊಳು ಲೇಶ ಸೌಖ್ಯವು ಕಾಣೆನು ಬೇಕು ನಿನ್ನ ಪಾದಭಜನೆ ನಿರಂತರ ಅ.ಪ ಚತುರಶೀತಿ ಲಕ್ಷಯೋನಿಗಳಲಿ ಪು- ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು 1 ಮಾಂಸರಕ್ತ ಪೂರಿತ ಕೂಪದಿ ನವ- ಮಾಸ ಮಾತೃಗರ್ಭಯಾತನೆಯಿನ್ನು 2 ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು ಗೋಲಿ ಗಜ್ಜುಗಗಳಾಡಿದ ಆಟವು 3 ಗರ್ವದಿಂದ ಮೈಮರೆತು ತಿರುಗುವುದು 4 ಸೇರಿ ಇರುವ ಕೌಮಾರಾವಸ್ಥೆಯು 5 ಕಿವಿಗಳು ಕೇಳದು ಕಣ್ಕಾಣದು ಬಾಂ- ಧವರಧೀನದಲಿ ಬಾಳುವ ಕಷ್ಟವು 6 ಮರಣವಾದ ಮೇಲೆ ನರಕವು ಸ್ವರ್ಗವು ಧರಣಿಯಲಿ ಪುಟ್ಟುವುದೋ ತಿಳಿಯದು 7 ಎಂತಾದರು ನಿನ್ನವರೊಳಿಡು ಸದಾ ಪಂಥವೆ ದೀನರ ಮೇಲೆ ದಯಾನಿಧೆ 8 ಭಾಗ್ಯವಲ್ಲಿ ಹನುಮಂತನೊಡೆಯ ಶರ- ಣಾಗವÀತ್ಸಲ ಗುರುರಾಮವಿಠಲ9
--------------
ಗುರುರಾಮವಿಠಲ
ಸಾಕು ಸ್ವಾಮಿ ಲೋಕವಾಸವು ಪ ಬೇಕು ನಿಮ್ಮ ಚರಣಸೇವೆ ಲೋಕದಿಂದ ಪಾರು ಮಾಡೆನ್ನ ಅ.ಪ ಕಷ್ಟದಿಂದಿನ್ನು ಜೀವಿಸಲು ನಾ ನೆಷ್ಟು ಪಾಪವ ಮಾಡುವೆನೊ ಇಷ್ಟೆ ಸಾಕಯ್ಯ ಕಷ್ಟನಿವಾರ ಸೃಷ್ಟಿಯಿಂದೆನ್ನ ಪಾರುಮಾಡೊ 1 ಹಲವು ಭ್ರಾಂತಿಗಳಲಿ ನಾನು ತೊಳಲಿಬಳಲಿ ಚಲನೆಗೆಡುತ ದುರಿತ ಸಾಕೈ ಇಳೆಯಿಂದೆನ್ನನು ಗೆಲಿಸು ದೇವ 2 ಸಕಲವಿಧದಿ ದು:ಖರೂಪ ಕಾಕುಸಂಸಾರ ಬಲು ತಾಪ ಭಕುತಜನಪ್ರಿಯ ಮುಕ್ತಿಸೋಮ ಮುಕುತಿ ಕರುಣಿಸು ನಿರುತ ಶ್ರೀರಾಮ 3
--------------
ರಾಮದಾಸರು
ಸಾಕೊ ರಂಗ ಅರಸುತನ ಯಾಕೊ ಯಾಕೊಗೋಕುಲದ ಗೊಲ್ಲರು ನುಗಿಸಿ ಗಲ್ಲವ ಹಿಂಡಿಕಾಕು ಮಾಡಿದ್ದು ನಿನಗೆ ಬೇಕೊ ಬೇಕೊ ಪ. ರುದ್ರ ಬ್ರಹ್ಮ ಹತ್ಯಾಕಾರ ಕ್ಷುದ್ರ ಬಲೀಂದ್ರನು ಕದ್ದೊಯ್ದ ಸುವರ್ಣ ಮುಕುಟವಕದ್ದೊಯ್ದ ಸುವರ್ಣ ಮುಕುಟವ ಬಲರಾಮ ಮಧ್ಯಪಾನಿ ಎಂದು ನುಡಿದನು ನುಡಿದನು 1 ಮಗನ ಮಗನು ಬಲು ಕೊಂಡೆಗಾರನಾದ ಮಗಳ ಮಗ ನಿನ್ನ ಹಣಿಗಚ್ಚಿದ ಮಗಳ ಮಗ ನಿನ್ನ ಹಣಿಗಚ್ಚಿದ್ದು ಕಂಡುನಗತಾರೊ ನಿನ್ನ ಸರಿಯವರು ಸರಿಯವರು2 ಶುಕ ಪಿತೃದ್ರೋಹಿ ಪ್ರಲ್ಹಾದ ಭ್ರಾತೃದ್ರೋಹಿ ವಿಭೀಷಣಭ್ರಾತೃದ್ರೋಹಿ ವಿಭೀಷಣ ಇವರು ಮುಖ್ಯಪಾತ್ರರೊ ನಿನ್ನ ಕರುಣಕೆ ಕರುಣಕೆ3 ಸ್ವಾಮಿದ್ರೋಹಿ ಅಕ್ರೂರ ಗುರು ದ್ರೋಹಿ ಪ್ರಲ್ಹಾದ ಬ್ರಾಹ್ಮಣರ ದ್ರೋಹಿಗಳು ಯಾದವರು ಬ್ರಾಹ್ಮಣರ ದ್ರೋಹಿಗಳು ಯಾದವರು ನಿನ್ನ ಮುಖ್ಯಪ್ರೇಮಕ್ಕೆ ವಿಷಯರೊ ವಿಷಯರೊ4 ದುರುಳ ಶಿಶುಪಾಲನ ಸಭೆಯೊಳು ಬೈದದ್ದುಸರಿಬಂತೆ ರಾಮೇಶನ ಮನಸಿಗೆ ಮನಸಿಗೆ 5
--------------
ಗಲಗಲಿಅವ್ವನವರು
ಸಾಗಿಬಾರಯ್ಯ ನಾಗಶಯನ ಪ ಭೋಗದಾಸೆ ನೀಗಿಸೆನ್ನು ಬೇಗ ರಕ್ಷಿಸು ಬಾಗಿ ಬೇಡ್ವೆ ಅ.ಪ ದುಷ್ಟಭವದರಿಷ್ಟದಲಿ ಇ ನ್ನೆಷ್ಟುದಿನ ನಾ ಕಷ್ಟಬಡಲಿ ದೃಷ್ಟಭ್ರಷ್ಟತೆ ನಷ್ಟಗೊಳಿಸಿ ಶಿಷ್ಟಸಂಗದೊಳಿಟ್ಟು ಸಲಹೊ 1 ಜನನ ಮರಣವ ನೆನೆಸಿಕೊಳ್ಳದೆ ಬಿನಗುತನದಲಿ ದಿನವಗಳೆದೆ ಅಣುಗನ ಘನತಪ್ಪು ಗಣಿಸದೆ ಘನ ಘನ ನಿಮ್ಮ ನೆನಹ ಪಾಲಿಸು 2 ಸ್ವಾಮಿಯೆನ್ನಯ ನೇಮವಿಲ್ಲದ ಕಾಮಿತಂಗಳ ದೂರಮಾಡಿ ಪ್ರೇಮದೆನ್ನಗೆ ಕ್ಷೇಮಕೊಡು ಶ್ರೀ ರಾಮ ಮೂಜಗ ಸಾರ್ವಭೌಮ3
--------------
ರಾಮದಾಸರು
ಸಾಧನ ಬ್ಯಾರ್ಯದೆ ಸ್ವಹಿತ ಸಾಧನ ಬ್ಯಾರ್ಯದೆ ಧ್ರುವ ವಿದ್ಯಾ ವ್ಯುತ್ಪತ್ತಿ ಬೀರಿದರೇನು ರಿದ್ಧಿಸಿದ್ಧಿಯುದೋರಿದರೇನು 1 ಜಪತಪ ಮೌನಾಶ್ರಯಿಸಿದರೇನು ಉಪವಾಸದಿ ಗೊಪೆ ಸೇರಿದರೇನು 2 ದೇಶದ್ವೀಪಾಂತರ ತಿರುಗಿದರೇನು ವೇಷ ವೈರಾಗ್ಯವ ತೋರಿದರೇನು 3 ಭಾನುಕೋಟಿತೇಜ ಒಲಿಯದೆ ತಾನು ಅನೇಕ ಸಾಧನಲ್ಯಾಗುವದೇನು 4 ದೀನ ಮಹಿಪತಿಸ್ವಾಮಿಯಾಶ್ರಯಧೇನು ಮನವರ್ತದೆ ಕೈಯಗೊಡುವ ತಾನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧನದ ಚಿಂತೆ ಎನಗ್ಯಾಕೊ ಹರಿಯೇ ಪ. ಮಾಧವಾ ನೀಯನ್ನಾ ಮನಸಿಲಿದ್ದು ಮಾಡಿಸುವಿ ಧೊರಿಯೇ ಅ.ಪ. ಹಿಂದೇಸು ಜನ್ಮಗಳು ಬಂದು ಪೋದವು ಒಂದು ತೃಣವಾದರೂ ನಾ ಗಳಿಸಲಿಲ್ಲ ಮುಂದಿನ ಗತಿಯು ತಿಳಿಯದು ಬಿಂದು ಮಾಧವಾ ಯಾದವಾ 1 ನಿನ್ನ ಹೊರತು ಎನಗೆ ಮನ್ನಿಸುವರು ಯಾರೋ ಬೇರೆ ಗತಿ ಕಾಣೆ ಪುಸಿಯಲ್ಲಿ ಯನ್ನಾಣೆ ಪಾದಸ್ಮರಣೆ ಮಾಡಿಸುವ ಬಾರಾ ಉದಾರ ಭಕ್ತರಾಧಾರಾ 2 ಯೆಷ್ಟು ಪೊಗಳಿದರು ನಿನ್ನ ಕರುಣಕೆ ಇನ್ನು ಕೇಡು ಉಂಟೇ ಸ್ವಾಮಿ ದಯಾ ದೃಷ್ಟಿಯಿಂದಲಿ ನೋಡು ಪ್ರೇಮಿ ದುಷ್ಟ ಅಘರಾಶಿ ದೂರ ಮಾಡೋ ಕಣ್ತೆರೆದು ನೋಡೋ ಕಾಳಿಮರ್ಧನ ಕೃಷ್ಣನೆ ಮಧ್ವಮುನಿ ಪ್ರಿಯನೆ 3
--------------
ಕಳಸದ ಸುಂದರಮ್ಮ
ಸಾಧಿಸಿ ಪಡೆದಿದ್ದೀ ನರಜನುಮ ಸಂ ಪಾದಿಸಿ ಕೊಳ್ಳೆಲೆ ಹರಿನಾಮ ಪ ಪೋದಬಳಿಕ ಇಂಥ ಮಹಜನುಮ ಮತ್ತೆ ಸಾಧನ ಸಾಧ್ಯವಲ್ಲೆಲೊ ತಮ್ಮ ಅ.ಪ ಮಡದಿಮಕ್ಕಳೆಂಬ ಒಣಭ್ರಾಂತಿ ನಿನ ಗ್ಹಿಡಿದಿದೆ ಮಾಯದ ಘನಚಿಂತಿ ಒಡೆದು ತೋರುವ ಜಗಕ್ಷಣ ಸಂತಿ ಇದು ಕಡೆಗೆ ಒಂದು ಇಲ್ಲ ನಿನ್ನ ಸಂಗತಿ1 ಅರ್ಥಇಲ್ಲದೆ ನಾನಾ ಯೋನಿಯಲ್ಲಿ ನೀ ಸತ್ತುಹುಟ್ಟುತ ಬಹು ಬಳಲುವ್ಯಲೇ ಸತ್ಯ ನಿತ್ಯಸುಖ ತಿಳಿಮರುಳೇ ಕಾಂಬ ಮತ್ರ್ಯಭೋಗವೆಲ್ಲ ಸುಳ್ಳುಸುಳ್ಳೆ 2 ತೊಳಲುತ ಎಂಭತ್ತು ನಾಲ್ಕುಲಕ್ಷ ಜನ್ಮ ತಾಳುತ ಪಡೆದಿದ್ದಿ ಬಲುಶಿಕ್ಷೆ ಚೆಲುವ ಶ್ರೀರಾಮನೊಳು ಇಡು ಲಕ್ಷ್ಯ ನಿನಗೊಲಿದು ಕೊಡುವ ಸ್ವಾಮಿ ನಿಜಮೋಕ್ಷ 3
--------------
ರಾಮದಾಸರು
ಸಾಧು ಆದವ ಸಾಧುರ ಬಲ್ಲನೋ | ಸಾಧು ವೇಷದಿ ಮೆರೆವವ ಸಲ್ಲನೋ ಪ ಧರಿಯೊಳು ಲೋಕದಿ ಸರೀ | ಹೊರವಳಿ ನಡತಿಯ ತೋರಿ | ಅವ | ತೋರಿ ತೋರದಲಿಹನೋ 1 ಯೋಗಿ | ಭೋಗಿಗೆ ಭೋಕ್ತನೂ ಆಗಿ | ಆವ | ಆಗಿ ಆಗದಲಿಹನೋ 2 ಗುರುವರ ಮಹಿಪತಿಸ್ವಾಮಿ ಅರಿತಾ ನಂದದ ಪ್ರೇಮಿ | ಅವ | ಪ್ರೇಮಿ ಪ್ರೇಮಿಗೆ ವಲಿವನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧು ನೀನಾಗೆಲೊ ಸ್ವಾಮಿ ತಾ ಕಾಣುವಾ ಪ ಮೇದಿನಿ ಅ.ಪ ಎಂದಿಗೆ ನಂದಿ ನಾನೊಂದುವೆನೆಂದು ನೀ ಸಂದೇಹ ಸಂವರಿಪನೊಲಿದು ತಾ 1 ತಾನಾದರೆ ತನ್ನದೇನು ಜಾಣ ತಾ ನೋಡುತಂ ಪ್ರಾಣನಾಥ ನೀನೆಂದಾಡುತಂ ಪಾಡುತ 2 ವಿಶ್ವದೊಳು ರಾಜಿಪ ಸಸ್ವರೂಪಾ ಗುರು ಅಸ್ಮದಾರ್ಯ ತುಲಸಿರಾಮದಾಸನಿತ್ತ 3
--------------
ಚನ್ನಪಟ್ಟಣದ ಅಹೋಬಲದಾಸರು
ಸಾಮಾಜಿಕ ಕೀರ್ತನೆಗಳು ಆಸೆತ ಬಿಡು ಮನವೆ ನಿನ್ನ ದುರಾಸೆಯ ಬಿಡು ಮನವೆ ಪ ಆಸೆಯ ಬಿಟ್ಟು ಶ್ರೀವಾಸುದೇವನ ಪಾದ ಘಾಸಿಯಾಗದೆ ನಂಬು ಲೇಸಾಗುವುದು ನಿನಗೆ ಅ.ಪ ಕಾಮಕ್ರೋಧಗಳ ಬಿಟ್ಟು ಮೋಹಮದಡಂಭ ಅಸೂಯೆಸುಟ್ಟು ಎಮ್ಮದು ತಮ್ಮದು ಎಂಬ ಭ್ರಾಂತಿಯ ಬಿಟ್ಟು [ನಮ್ಮ] ವನಜನಾಭನ ಪಾದದೊಳಗೆ ನೀ ಮನವಿಟ್ಟು 1 ಬರಿದೆ ನವರತ್ನ ರಜತ ಸುವರ್ಣ ಧನಧಾನ್ಯದಾಶೆಯ ಬಿಟ್ಟು ನಿರಾಶೆಯೊಳಿರು ನೀನು 2 ಹಾನಿವೃದ್ಧಿ ಯಶೋಲಾಭಗಳೆಲ್ಲ ಸ್ವಾಮಿಯಧೀನವಲ್ಲದೆ ನೀನು ಯೋಚನೆಯನ್ನು ಮಾಡಿಯೆ ಫನವೇನು ಪಾದ ನೇಮದಿಂದಲೆ ನಂಬು 3
--------------
ಯದುಗಿರಿಯಮ್ಮ