ಒಟ್ಟು 18838 ಕಡೆಗಳಲ್ಲಿ , 137 ದಾಸರು , 8355 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉ) ಯತಿವರರು ಜಿತಾಮಿತ್ರ ತೀರ್ಥರು 52 ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ಪ. ಬಂದ ದುರಿತಗಳ ಹಿಂದೆ ಕಳೆದು ಆ- ನಂದ ಪಡುವ ವಿಭುದೇಂದ್ರ ಕರೋಧ್ಭವನಅ.ಪ. ಸೂತ್ರ ಅಗಣಿತ ಮಹಿಮರ1 ವರಮಹಾತ್ಮೆ ತಿಳಿಸಿ ಮೊದಲಿಂದೀ ಪರಿಯಂದದಿಚರಿಸಿ ನಿರುತ ಮನವ ನಿಲಿಸಿ ಶ್ರೀಹರಿ ಕರಿವರದನ ಒಲಿಸಿದರೆ ಜನರಿಗೆ ಅರಿಯದೆ ಮರೆಯಾಗುತ ಹರುಷದಿ ಗೋನದ ತರವಲ್ಲಿರುವವರ2 ಮುದದಿ ಕೃಷ್ಣಾ ತಟಿಯ ಮಧ್ಯದಿ ಸದನದ ಪರಿಯಸದಮಲ ಯತಿವರ್ಯ ತಪಮೌನದಲಿಇದ್ದು ದ್ರುತ ಕರಿಯಕಾರ್ಯ ಒದಗಿ ನದಿಯು ಸೂ -ಸುತ ಬರಲೇಳು ದಿನಕುದಯಾದವರ ಸುಪದ ಕಮಲಂಗಳ3 ಮಾಸ ಮಾರ್ಗಶೀರ್ಷಾರಾಧನೆಗಶೇಷದಿನ ಅಮಾವಾಸ್ಯ ದಾಸರು ಪ್ರತಿವರುಷ ಮಾಳ್ಪರುಲೇಸೆನಲು ಶ್ರಿತಿಗೋಷ ಕಾಶಿಯ ಕ್ಷೇತ್ರ ಈ ಸ್ಥಳ ಮಿಗಿಲೈದಾಸರಿಗೆ ಭೂಸುರ ಪದಗಳ 4 ಮಧ್ವಶಾಸ್ತ್ರ ಗ್ರಂಥಸಾರದ ಪದ್ಧತಿ ತಿಳಿಸಿದಂಥರುದ್ರವಂದ್ಯ ಮೂರುತಿ ರಂಗವಿಠಲ ಪದ ಪದ್ಮಾರಾಧಕ ಪ್ರಸಿದ್ಧ ಮುನೀಂದ್ರರ5
--------------
ಶ್ರೀಪಾದರಾಜರು
ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು ಪ ಚಕ್ರಧರ ಪರಮಾತ್ಮನೊಬ್ಬನಲ್ಲದಿಲ್ಲವೆಂದು ಅ.ಪ ಕರಿ ಮೊರೆಯಿಡಲು ಕಂಡುನೆರೆದ ಬೃಂದಾರಕರು ಅಂದು ಪೊರೆದರೆ ಬಂದುಕರದಲೊಪ್ಪುವ ಮುತ್ತಿಗೆ ಕನ್ನಡಿಯ ನೋಡಲೇಕೆಭರದಿ ಗಜೇಂದ್ರನ್ನ ಕಾಯ್ದ ಹರಿಯೆ ಪರದೈವವೆಂದು 1 ಮತಾಂತರದಲ್ಲಿ ಭಗವದ್ಗೀತೆಯನದ್ವೈತವೆಂದುವಾತಗುದ್ಧಿ ಕೈಗಳೆರಡು ನೋಯಿಸಲೇಕೆ‘ಏತತ್ಸರ್ವಾಣಿ ಭೂತಾನ್ಯೆಂ’ಬ ಶೃತ್ಯರ್ಥವ ತಿಳಿದುಜ್ಯೋತಿರ್ಮಯ ಕಿರೀಟಿ ಅಚ್ಯುತಾಂತರ್ಯಾಮಿಯೆಂದು 2 ತಾನೆ ಪರಬ್ರಹ್ಮನೆಂಬ ಮನುಷ್ಯಾಧಮನು ತಾನುಜ್ಞಾನಹೀನನಾಗೆ ಲೋಕದಾನವನೆಂದುಭಾನು ಕೋಟಿ ತೇಜೋತ್ತಮ ವರದ ಶ್ರೀಹರಿಯೆಂಬಜ್ಞಾನವೆ ಕೈವಲ್ಯದ ಸೋಪಾನವೆಂದು ಸಭೆಯಲ್ಲಿ 3 ತಪ್ಪಾದ ವಿಚಾರದಿಂದ ತತ್ತರವ ಪಡಲೇಕೆತಪ್ಪು ಶಾಸ್ತ್ರ ವೋದಿ ದೇಹ ದಂಡಿಸಲೇಕೆಕಲ್ಪ ಕಲ್ಪಾಂತರದಲ್ಲಿ ವಟಪತ್ರಶಯನನಾಗಿಮುಪ್ಪು ಮೊದಲಿಲ್ಲದ ಮುಕುಂದನಲ್ಲದಿಲ್ಲವೆಂದು 4 ಶಕ್ತಿ ಶೂನ್ಯನಿವನೆಂದು ಸಂಶಯವ ಪಡಲೇಕೆಕೃತ್ಯದಿಂದ ನೋಡೆ ಶ್ರೀಕೃಷ್ಣನೊಬ್ಬನೆಹತ್ತಾರು ಸಾಸಿರ ನೂರು ಗೋಪಸ್ತ್ರೀಯರನ್ನು ಆಳಿನಿತ್ಯ ಬ್ರಹ್ಮಚಾರಿಯೆನಿಪ ನಿಷ್ಕಳಂಕನೊಬ್ಬನೆಂದು 5
--------------
ವ್ಯಾಸರಾಯರು
ಉಗಾಭೋಗ ಏಕೋನಾರಾಯಣಾಸೀತೆಂಬ ಶ್ರುತಿ ಪ್ರತಿಪಾದ್ಯನಾಗಿ ಮಾಕಮಲಾಸನ ಮೊದಲಾದವರಲ್ಲಿನಿಂತು ಸಾಕಿಸಲಹಿ ಸಂಹಾರ ಮಾಡುತ್ತ ಜೀವರಾಶಿಯೊಳಗೆನ್ನ ಸ್ವೀಕಾರ ಮಾಡದೆ ನೂಕಿ ಬಿಸಾಟು ಈಕುಂಭಿಣಿ ಮಧ್ಯದಲ್ಲಿ ಕಾಕುಮನುಜಾರಿಗಿಂತ ಕನಿಷ್ಠನ್ನಮಾಡಿ ಸಾಕಲಾರದೆ ಕೈಬಿಡುವಾರೇನೊ ನಾಕಜಜನಕ ಮುದ್ದುಮೋಹನವಿಠಲ ಲೌಕೀಕ ಮಾರ್ಗ ಬಿಡಿಸಿ ಹೃತ್ಕರ್ಣಿಕೆಯಲ್ಲಿ ಪೊಳೆಯೋ
--------------
ಮುದ್ದುಮೋಹನವಿಠಲದಾಸರು
ಉಗಾಭೋಗ ಏನೇನು ಪಾಟು ಬಿದ್ದರು ಮುನ್ನ ಕರ್ಮ ಬೆಂಬಿಡದಿರೆ ಶ್ರೀನಿವಾಸನÉ ನಿನ್ನಲನುಗಾಲ ಧ್ಯಾನಿಸಲೇಕೊ ಸ್ವಾಮಿ ನೀನೊಲಿದ ಮೇಲೆ ಪೂರ್ವಾಜಿತ ಕರ್ಮ ವೇನು ಮಾಡಬಲ್ಲದು ಹೀನ ಮಾನವರಿದನರಿಯದೆ ನಾನಾ ಪ್ರಕಾರದಿ ತೊಳಲುವರು ಶ್ವಾನನಂದದಿ ಭವದೊಳಗೆ ನಿನ್ನ ಮರೆದು ಏನು ಕಷ್ಟ ಬಂದರೂ ಬರಲಿ ನಾ ನಿನ್ನ ಮರೆಯೆನೊ ದೇವರದೇವ ಸಾನುರಾಗದಿ ಸಲಹೆನ್ನ ಶ್ರೀನಿಧಿ ರಂಗೇಶವಿಠಲ
--------------
ರಂಗೇಶವಿಠಲದಾಸರು
ಉಗಾಭೋಗ ಗುರುವಿನ ಕರುಣದಿ ವೈರಾಗ್ಯ ಭಾವವು ಗುರುವಿನ ಕರುಣದಿ ತತ್ವ ಸಾಧನೆಗಳು ಗುರುವಿನ ಕರುಣದಿ ಆತ್ಮ ವಿವೇಕಗಳು ಅಪರೋಕ್ಷ ಪುಟ್ಟಲು ಗರುವಿಕೆಯನೆ ಬಿಡಿಸಿ ಕರೆದು ಕೊಡುವ ಮುಕ್ತಿ
--------------
ಅಂಬಾಬಾಯಿ
ಉಗಾಭೋಗ ಚಿಕ್ಕ ಮಗುವಾದ ಪ್ರಹ್ಲಾದ ದೇವನನು ರಕ್ಕಸನು ಪಿಡಿದತಿ ಹಿಂಸೆಪಡಿಸುವದ ನೋಡಿ ಉಕ್ಕಿಬರುತಿಹ ಕೋಪದಿಂ ಕಿಡಿಕಿಡಿಯಾಗಿ ಉಕ್ಕಿನ ಕಂಬದಿಂ ಉರಿಯ ಕಾರುತ ಬಂದು ಪಕ್ಕಿದೇರನು ಹಿರಣ್ಯಕಶಿಪನ ಪಿಡಿದು ತಾ ಉರ ಬಗೆದು ಕರುಳ ಮಾಲೆಯ ಗಕ್ಕನೆ ಗಳಕಿಕ್ಕಿಕೊಂಡು ಆರ್ಭಟಿಸಿದಂದು ಲಕ್ಕುಮಿಯಾದಿಯಾಗಿ ಮುಕ್ಕೋಟಿ ದೇವತೆಗಳು ಬೆದರಿ ದಿಕ್ಕೆಟ್ಟು ಗಡ ಗಡ ನಡುಗುತಿರಲಾಗ ಅಕ್ಕರದ ಭಕುತ ಪ್ರಹ್ಲಾದ ಬರೆ ಬಿಗಿಯಪ್ಪಿ ತಕ್ಕೈಸಿ ಮುಂಡಾಡಿ ಪ್ರಸನ್ನನಾದನು ತನ್ನ ಭಕ್ತರೊಳಿನ್ನೆಷ್ಟು ಪ್ರೀತಿಯೋ ರಂಗೇಶವಿಠಲಗೆ
--------------
ರಂಗೇಶವಿಠಲದಾಸರು
ಉಗಾಭೋಗ ದಾಸ ಭಾಗ್ಯವೆ ಭಾಗ್ಯ ಹರಿಕೊಟ್ಟ ಸೌಭಾಗ್ಯ ದಾಸ ಭಾಗ್ಯಕ್ಕೆ ಜಗದಿ ಸರಿಮಿಗಿಲಿಲ್ಲವೆಂದು ದಾಸತ್ವವೇ ಮಧ್ವಮತ ಸಾರತತ್ವವೆಂದು ವ್ಯಾಸರಾಯರು ಜಗದಿ ದಾಸರ ನಿಲ್ಲಿಸಿದರು ದಾಸರಿಗಂಕಿತ ಇರಲೇಬೇಕೆನುತಲಿ ದಾಸ ಪುರಂದರವಿಠ್ಠಲನಿಗೆನಿಸಿದರು ಈ ಸುಮಾರ್ಗವ ತಂದೆ ಮುದ್ದುಮೋಹನ ಗುರು ಮಾಸದಂತೀಗ ಮತ್ತೆ ಬಿತ್ತಿ ಬೆಳೆಸಿದರು ದಾಸ ಜನಪ್ರಿಯ ಗೋಪಾಲಕೃಷ್ಣವಿಠ್ಠಲ ತಾ ಸುಮ್ಮನೀವ ತನ್ನ ನಿಜದಾಸರಿಗೆ ಮುಕ್ತಿ
--------------
ಅಂಬಾಬಾಯಿ
ಉಗಾಭೋಗ ಪದ್ಮಾಲಯೆ ಪದ್ಮೆ ಪದ್ಮ ಸಂಭವೆ ಲಕುಮಿ ಪದ್ಮಾಕ್ಷಿ ಪದ್ಮ ಹಸ್ತೆ ಪದ್ಮಾಸನನ ಜನನಿ ಪದ್ಮಮುಖಿಯೆ ನಿನ್ನ ಪದಪದ್ಮ ಧ್ಯಾನ ನೀಡೆ ಪದ್ಮನಾಭನ ಹೃದಯ ಪದ್ಮಸದನ ನಿಲಯೆ ಪದ್ಮಿನಿ ಎನ್ನ ಹೃದಯ ಪದ್ಮ ಮಧ್ಯದಿ ಸತತ ಪದ್ಮಾಕ್ಷ ಗೋಪಾಲಕೃಷ್ಣವಿಠಲನ ಪದ
--------------
ಅಂಬಾಬಾಯಿ
ಉಗಾಭೋಗ ಪರಿಪರಿ ದೇಹ ಧರಿಸಿ ನರ ಜನ್ಮದಲಿ ಬಂದು ಕರಕರೆ ಪಡುತಲಿ ಇರುವ ಮಾನವರೊಳು ಅರಿತು ಸಾತ್ವಿಕರನು ಕರದು ಬುದ್ಧಿಯ ಪೇಳೆ ಹರಿಯ ಪಾದವ ತೋರ್ವ ಗುರುವು ಒಬ್ಬರು ಬೇಕು ಪರಮಪ್ರಿಯರು ಇವರು ಅರಿವರು ಸಾತ್ವಿಕರ ಕರದು ಉಪದೇಶವಿತ್ತು ಉದ್ಧಾರ ಮಾಡುವರು ಚರಿತೆಯ ವರ್ಣಿಸಲು ನರರಿಗೆ ಸಾಧ್ಯವಲ್ಲ ನರಹರಿಯೆ ಬಲ್ಲ ಉರಗಾಖ್ಯರ ಮಹಿಮೆ ವರಭಕ್ತರಾಗಿ ಹರಿಗೆ ಶರಣು ಹೊಕ್ಕವರನು ಕರುಣೆಯಿಂ ಸ್ವರೂಪವರಿತು ಉದ್ಧರಿಪರು ಪರತರ ಗೋಪಾಲಕೃಷ್ಣವಿಠ್ಠಲನ ಚರಣವ ತೋರುವರು ವರ ತಂದೆ ಮುದ್ದುಮೋಹನರು
--------------
ಅಂಬಾಬಾಯಿ
ಉಗಾಭೋಗ ಬಡವನಾದವನ ಭವಮಡುವಿನೊಳಗೆನೂಕಿ ಮಿಡುಕಿಸೀನೋಡುವುದು ಥರವೇನೋ ಒಡಲಿಗೋಸುಗ ನಿನ್ನ ಬೇಡ ಬಂದವನಲ್ಲ ದೃಢಭಕ್ತಿ ಜ್ಞಾನಕೊಟ್ಟು ರಕ್ಷಿಸೋಧೊರಿಯೆ ಕಡಲಶಯನ ನಮ್ಮ ಮುದ್ದುಮೋಹನವಿಠಲ ಗಾಢರತಿಯ ಪಾಲಿಸು ಸುಲಭದಿಂದಾ
--------------
ಮುದ್ದುಮೋಹನವಿಠಲದಾಸರು
ಉಗಾಭೋಗ ಭಕ್ತಿದಾಯಕ ಕೇಳೊ ನಿನ್ನನು ಒಲಿಸಲು ಶಕ್ತಿ ಎನಗೆ ಇಲ್ಲ ಸರ್ವೇಶ್ವರ ಭಕ್ತಿಪಾಶದಿ ನಿನ್ನನುಕ್ತಿಯಿಂದಲಿ ಬಿಗಿವೆ ಮುಕ್ತಿಗೊಡೆಯ ಹೃದಯ ಮಧ್ಯದಿ ಬಂಧಿಸುವೆ ಶಕ್ತಿ ನಿನಗಿಲ್ಲ ಬಿಡಿಸಿಕೊಳ್ಳಲು ಇನ್ನು ಯುಕ್ತಾಯುಕ್ತ ತಿಳಿಸಿ ಉದ್ಧರಿಸಬೇಕಿನ್ನು ಶಕ್ತನಿಲ್ಲವೊ ನಿನಗೆ ಸರಿ ಜಗದೊಳು ಮಹ ಸಿರಿ ಗೋಪಾಲಕೃಷ್ಣವಿಠ್ಠಲಾ
--------------
ಅಂಬಾಬಾಯಿ
ಉಗಾಭೋಗ ಮಕ್ಕಳ ಮಾಣಿಕ್ಯ ಮಧುರೆ ಗೋಕುಲ ಬಿಟ್ಟು ಚಿಕ್ಕಯತಿಗಳಿಂದ ಪೂಜೇಯ ಕೈಕೊಂಡು ರಕ್ಕಸಾಂತಕ ತನ್ನ ಭಕ್ತರ ಕಾಯುತ್ತ ಅಜ ಶಿವ ಇಂದ್ರಾದಿ ವರದನು ಚೊಕ್ಕ ಚಿನ್ನದ ಬೊಂಬೆಯಂತೆ ನಿಂತಿರುವನು ಮುಕ್ತಾಮುಕ್ತರ ಬಿಂಬ ಗೋಪಾಲಕೃಷ್ಣವಿಠಲ
--------------
ಅಂಬಾಬಾಯಿ
ಉಗಾಭೋಗ ವಿಕ್ರಮ ಸಂವತ್ಸರದಲ್ಲಿ ನಿನ್ನ ನಿಜ ದಾಸಕೂಟ ಜನಕೆ ಪ- ರಾಕ್ರಮ ಹೆಚ್ಚಲಿ ಅಚ್ಚುತಾನಂತ ಕೃಷ್ಣ ಶಕ್ರಾನುಜನೆ ನಿನ್ನ ದೂತ ಹನುಮನ ಸೇವೆ ವಕ್ರವಿಲ್ಲದೆ ನಡೆದು ನಿನ್ನ ಕೃಪೆಯಾಗಲಿ ಅಕ್ರೂರವರದ ತಂದೆ ಮುದ್ದುಮೋಹನ್ನರ ವಿಕ್ರಮೌದಾರ್ಯ ದಶ ದಿಕ್ಕುಗಳ ಬೆಳಗಲಿ ಶಕ್ರಾನುಜನೆ ಉದರ ಬಗೆದು ತರಳನ ಕಾಯ್ದ ವಕ್ರನಖನೆ ನಮ್ಮ ನೀತ ಶ್ರೀ ಗುರುಗಳಿಗೆ ವಿಕ್ರಮ ಶಾಂತಿ ಆಯುರಾರೋಗ್ಯ ಭಾಗ್ಯವಿತ್ತು ಚಕ್ರಧರನೆ ನಿನ್ನ ಸೇವೆ ಕೈಕೊಂಡೆಮ್ಮ ಭವ- ಚಕ್ರ ತೊಡಕು ಬಿಡಿಸಿ ದಾಸ ಜನರ ಕಾಯೋ ಉ- ರು ಕ್ರಮದೇವ ಜಗಚ್ಚಕ್ರವರ್ತಿಯೆ ನಮೋ ಶಕ್ತಾದ್ಯಮರ ನುತ ಗೋಪಾಲಕೃಷ್ಣವಿಠಲಾ
--------------
ಅಂಬಾಬಾಯಿ
ಉಗಾಭೋಗ ಹತ್ತಾವತಾರದಿಂದ ಹರಿಯೆ ಕೊಂಡಾಡು ಪಾಡು ಚಿತ್ತಾಭಿಮಾನಿ ಮುನಿಗೆ ವಲಿದು ಬಂದವನೆನ್ನು ನಿತ್ಯ ಉಡುಪಿಲಿ ನಿಂದು ನಿಜ ಜನರನ್ನು ಕಾಯ್ವ ಸ್ತುತ್ಯ ಗೋಪಾಲಕೃಷ್ಣವಿಠ್ಠಲನಿವನೆನ್ನೊ
--------------
ಅಂಬಾಬಾಯಿ
ಉಗಾಭೋಗ ಹನುಮ ಭೀಮ ಮಧ್ವಮುನಿರಾಯ ಗುಣಧಾಮ ಹರಿಪಾದ ಸೇವೆಯೊಳಧಿಕ ಪ್ರೇಮ ಆಂಜನೇ ವರಪುತ್ರ ಅಕಳಂಕ ಚರಿತ್ರ ಸಂಜೀವಗಿರಿಧರನೆ ಸಾಧುವರನೆ ದುರಿತ ದೂರ ಸರಸ್ವತಿ-ಭಾರತಿ-ತುಳಸಿ
--------------
ವಾದಿರಾಜ