ಇನ್ನೆಂದಿಗು ಮಾಡದಿರು ಶ್ರೀ
ಕೃಷ್ಣ ಸರ್ವೋತ್ತಮನೆಂಬುವರಾ ಸಂಗನುದಿನ ಬಿಡದಿರು ಪ
ಕೂಡಿರು ಇನ್ನು ವೇದ ಬಾಹ್ಯರ
ದುರ್ಭೋಧಿಗಳ ಸಂಗೆಂದಿಗು ಹೋಗದಿರು
ಶ್ರೀಧರನಂಘ್ರಿಯ ಚಿತ್ತದಿ ಬಿಡದಿರೊ ಶರಣರ ಹೊಂದಿರು
ಮಂಡಲಿಸೇರದಿರು 1
ದುರ್ಮನುಜರಾದ ಈ ದುಷ್ಟದುರಾತ್ಮರ ಮಾತನೆ ಕೇಳದಿರು
ಅನಿಮಿಷ ಬಿಡದಾ ಸಂತರ ಪಾದವು ಅರ್ಚಿಸುತಲಿ ಇರು
ದುರ್ಗುಣವುಳ್ಳ ಪರಮ ಪತಿತ ಜನರ ಪಥವನೆ ಬಿಟ್ಟಿರು 2
ಸಕಲ ವೇದ ಶಾಸ್ತ್ರ ಮಂತ್ರ ಮರ್ಮಗಳ ಸರ್ವದಾ ತಿಳಿದಿರು
ಇನ್ನು ವಿಕಟ ಕುಭಕ್ತರ ಶಾಸ್ತ್ರಗಳೆಂಬುವನೆಂದಿಗು ನೋಡದಿರು
ರುಕ್ಮಿಣಿವರ ಶ್ರೀ ಹೆನ್ನೆವಿಠ್ಠಲನ ಭಕುತಿಯ ಬಿಡದಿರು
ಕೂ------ಕತರಾದ ಕುಚೇಷ್ಟರ ಕೂಡಿ ಭಂಗವ ಬಡದಿರು 3