ಎನ್ನ ಸಲಹೋ ಚರಣವನ್ನು ದೋರಿ ಪರಮ|
ನಿನ್ನ ಕಿಂಕರನೆಂದು ಘನ್ನದಯವನು ಬೀರಿ ಎನ್ನಾ ಪ
ಶರಣ ಜನ ಮಾನ ರಕ್ಷಕನೇ
ವರಕಮಲ ಕರಕಮಲ ಪದವಿಮಲ ಮಹಿಮನೇ
ಸಕಲ ಗುಣಧಾಮ ಘನಶ್ಯಾಮ ಸುರ ರಿಪು ಮಥನ|
ಗೋಕುಲರಿ ಸೋದರಾನಂತ ಗುಣಾ ಶ್ರೀ ಹರಿ
ಭಕ್ತರ ವಸರಕೊದಗುವೆ ನೀ ಪರೋಪರಿ|
ಸುಕಲ್ಪತರು ದನುಜ ಕುಲಸಂಹಾರ
ಸರ್ವದುರಿತ ನಿವಾರಾ 1
ಅಖಿಳ ಶೃತಿ ಸ್ಮøತಿ ನಿಕರಲಿಂದ ನುತಿಸಿಕೊಂಬೆ|
ವಿಕಸಿತನುಪಮ ವದನಬ್ಜ ಕುಲ ಅಬ್ಜರವಿ
ಪ್ರಕಟದೊಳೊದಗಿ ಬಂದೆ
ಸರಸೀರುಹ ನಯನ ಜಗದ ತಂದೇ|
ಸಿರಿನಂದ ನಂದನ ಪರಮುದಾರೇ|
ಸುರವೃಂದ ರಕ್ಷಕ ವರ ಮುರಾರೇ 2
ಶರಣಾಗತ ಜನರ ಪಾಲಾ|
ಸಿರಿ ಉರಗಾರಿಗಮನ ಸೂರಾರಿ ಸಿಬಿಕುಲ|
ಶೌರಿ ನರಸಹಕಾರಿ ಗಿರಿಧರನೇ|
ಕರುಣಾಕರ ತ್ರಯದಿ ಸ್ಮರಣ ಮಾಳ್ಪರ ಭಯವ|
ಹರಣ ಶರಣ ಕೌಸ್ತುಭಾಭರಣ ನೀಲವರಣಾನಂದ3
ವರ ಶ್ರೀರಮಣ ದೇವ ಜಗಜೀವ ಮಹಿಪತಿ ನಂದ ನೊಡಿಯ|
ಪರಮಾನಂದ ಜೀವದೊರಿಯೇ|
ಭವ ವಿನುತ ಮತಿ ಚರಿತಾ ಸಿಂಧೂರ|
ನವನೀತ ಚೋರ ಜಗದೀಶ ಹರಿಯೇ4