ಮಂಗಳ ಮಹಿಮ ಶುಭಾಂಗಗ ಮಂಗಳ
ಅಂಗಜ ಜನಕ ಶ್ರೀರಂಗಗ ಮಂಗಳ ಪ
ಸಿರಿದೇವಿ ಮುಖಪದ್ಮ ಭಂಗಗ ಮಂಗಳ
ಸುರ ಮುನಿಜನ ರಂಗ ಸಂಗಗ ಮಂಗಳ
ಶರಣಾಗತರ ಭವಭಂಗಗ ಮಂಗಳ
ದುರಿತಾಳಿವ್ಯಾಳ ವಿಹಂಗಗ ಮಂಗಳ 1
ಯಾದವ ಕುಲಾಂಬುದಿ ಚಂದ್ರಗ ಮಂಗಳ
ಕೈಟಭಾರಿ ಮಹೀಂದ್ರಗ ಮಂಗಳ
ವಿಧಿಭವ ವಂದ್ಯ ನಾದುಪೇಂದ್ರಗ ಮಂಗಳ
ಸದಮಲಸದ್ಗುಣಸಾಂದ್ರಗ ಮಂಗಳ 2
ನಾರದಗಾಯನ ಪ್ರೇಮಿಗೆ ಮಂಗಳ
ಸುರಸಾದಾಸಾಸಿರ ನಾಮಿಗೆ ಮಂಗಳ
ಗುರುವರ ಮಹಿಪತಿಸ್ವಾಮಿಗೆ ಮಂಗಳ
ಕರುಣಾಳು ಜಗದಂತ್ರಯಾಮಿಗೆ ಮಂಗಳ 3