ಭಾರ ನಿನ್ನದು ತಂದೆ
ಸಿಂಧು ಎಂದೆಂದು | ಗುರುವರ್ಯ
ಬಂದು ಕರುಣಿಸುವನು ಮದ್ಬಂಧೊ 1
ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು
ಪೊಂಗಳಧರನ ತೋರಯ್ಯ | ಅಜರಾಯ
ಭಂಗಬಡಲಾರೆ ಭವದೊಳÀು 2
ನಾರಾಯಣನ ಪುತ್ರ ನಾರಾಯಣಗೆ ಮಿತ್ರ
ನಿರವದ್ಯ | ನೀಡಭಯ
ಕರುಣಾತ್ಮ ಗುರುವೆ ಒಲಿದಿಂದು 3
ಕಾಮರೂಪನೆ ಹರಿಯನೇಮದಲಿ ಕಪಿಯಾಗಿ
ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ
ತಾಮಸರ ಹುರಿದೆ ಪುರದಲ್ಲಿ 4
ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ
ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ
ಹರಿ ಅಂಗ ಸಂಗ ಪಡೆದಯ್ಯ 5
ಸಿಂಧÀುವನು ಬಂಧಿಸಿ ಬಂದ ವಿಭೀಷಣಗೆ
ಕುಂದದೆ ಅಭಯ ಕೊಡಿಸಿದೆ | ದಯಸಿಂಧು
ನಿಂದೆನ್ನ ಒಳಗೆ ಮುದವೀಯೊ 6
ದೇವೇಶನಾಜ್ಞೆಯಲಿ ಜೀವೇಶ ಸಂಜೀವ
ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ
ಮೊದಲೆಡೆಗೆ ಬಗೆದ ಕುಶಲಾತ್ಮ 7
ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು
ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ
ಭೀಷಣಗೆ ರಾಷ್ಟ್ರ ಕೊಡಿಸಿದೆ 8
ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು
ಕಾಯ ಬಿಡುತೀರೆ | ಉಳುಹಿದೆ ಶ್ರೀ
ರಾಮನಾಗಮನ ತಿಳುಹೀಸಿ9
ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು
ಪಾದ ಪಿಡಿಯಲು | ಭಕ್ತಿಯಲಿ
ಪಟ್ಟಾಭಿರಾಮ ತನ್ನಿತ್ತ 10
ಆಖಣಾತ್ಮಕಾಯನೆ ಅಕಳಂಕ ಗುಣಧಾಮ
ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ
ಶ್ರೀಕೃಷ್ಣ ಭಕ್ತಾ ಕಲಿಭೀಮ 11
ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು
ನಸುನಗುತ ಜನನಿಗಭಯವ | ನಿತ್ತಂಥ
ಪಶುಪಾಲ ಪರನೆ ಪೊರೆಯೆನ್ನ 12
ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ
ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ
ಸರ್ವಜ್ಞ ಭೀಮ ಬಿಡೆ ನಿನ್ನ 13
ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ
ಪಶುವಂತೆ ವಧೆಯ ಮಾಡಿದಿ | ರಣದೊಳು
ಸುಸ್ವಾದ ಗುಣಸಾರ ಮಹವೀರ 14
ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ
ಪ್ರಾಣಸಖನಾಗಿ ಸಲಹಿದೆ | ಜಯಭೀಮ
ಪಾಣೆ ಪಿಡಿಯೆನ್ನ ಮಹಘನ್ನ 15
ದುರಾರಾಧಕ ದುಷ್ಟ ಜರಸಂಧನ ಸೀಳಿ
ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ
ಪುರಾರಿ ವಂದ್ಯಾಗತಿ ನೀನೆ 16
ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು
ಚೀರಿ ನಮೋಯೆನ್ನೆ ನೃಪರೆಲ್ಲ | ಸ್ಮøತಿ ತಪ್ಪೆ
ಧೀರ ಎದುರಾಗಿ ನೀ ನಿಂತೆ 17
ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ
ಮರಿಯದೆ ಅವನ ಅನುಜರ | ಸದೆಬಡಿದು
ಮೋದ ನೀನಿತ್ತೆ 18
ಉರಗ ಬಂಧವ ಹರಿದು
ಕರಿ ಮುಂದೆ | ನೀನಿಂತೆ
ಸರ್ವನಿತ್ಯಾತ್ಮ ಕೃಷ್ಣಾತ್ಮ 19
ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ
ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ
ಮುದದಿಂದ ನಲಿದೆ ಕಮಲಾಕ್ಷ 20
ಅರಗಿನ ಮನೆಯಲ್ಲಿ ವೈರಿಜನರ ಕೊಂದು
ಪೊರೆದೆ ನೀ ಜನನಿ ಅನುಜರ | ಪಂಜರನೆ
ಧರೆಯೊಳಗೆ ಎನ್ನ ಸಲಹಯ್ಯ 21
ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು
ನಡೆದೇಕ ಚಕ್ರಪುರದಲ್ಲಿ | ಬಕನೊರಸಿ
ನಡಕ ಬಿಡಿಸೀದಿ ಸುಜನರ 22
ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ
ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ
ಲೇಸಾಗಿ ಮುಂದೆ ನಡೆದಯ್ಯ 23
ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು
ವಾಸುದೇವನ ಕಂಡು ಆನಂದ | ತುಳುಕುತ್ತ
ಆ ಸತಿಯ ತಂದೆ ವಿಜಯಾತ್ಮ 24
ರಾಜರೆಲ್ಲರ ಹಿಡಿದು ರಾಜಸೂಯಯಾಗವನು
ಪೂಜೆಯನು ಮಾಡಿ ಮೆರದಯ್ಯ 25
ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ
ದಕ್ಷನೆ ನೀನು ವನವಾಸ | ಅಜ್ಞಾತ
ಪಕ್ಷವ ಕಳೆದು ಮರಳಿದೆ26
ಸಂಗರವ ನೀ ಹೂಡಿ ಭಂಗಿಸಿ ಕೌರವನ
ರಂಗನ ಮುಂದೆ ಅರ್ಪಿಸಿ | ವಂದಿಸಿ
ಮಂಗಳಾತ್ಮಕನೆ ಸಲಹೆಮ್ಮ 27
ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ
ನಿರ್ಮೂಲಗೈದು ಅರಿಗಳ | ಕೊಂದ ಪರ
ಧರ್ಮಪರರನ್ನು ಪೊರೆದಯ್ಯ 28
ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ
ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ
ವಿದ್ಯಾಧಿಪತಿಯೆ ಸಲಹೆನ್ನ 29
ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ
ಉಸರಲೇನಯ್ಯ ನಿನ್ನಲ್ಲಿ | ಜೀವೇಶ
ಸೂಸುವ ಭಕ್ತಿ ನೀಡಯ್ಯ 30
ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ
ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ
ಮಧ್ವಾಖ್ಯ ಗುರುವೆ ಪರಿಪಾಹಿ 31
ಸುರರು ದುಂದಭಿ ಮೊರೆಯೆ
ದುರುಳರ ಎದೆಯು ನಡುಗಲು | ಹರುಷದಲಿ
ಮೆರೆದು ನೆರೆದರು ಸುಜನರು 32
ಕೈವಲ್ಯ ನೀನಿತ್ತೆ
ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ
ನೀವಲಿದು ಹರಿಯ ತೋರಯ್ಯ 33
ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ
ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು
ಗುಣಪೂರ್ಣ ಹರಿಯ ಪ್ರತಿಬಿಂಬ 34
ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ
ವಿಪ್ರ ಸುರರು ಪೂಜಿಸೆ | ನಲವಿಂದ
ಅವನಿಯೊಳು ಪೊಳೆದೆ ರವಿಯಂತೆ 35
ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ
ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ
ಉದ್ಧರಿಸು ಎನ್ನ ದ್ವಿಜರತ್ನ 36
ಜನನಿ ಜನಕರು ತಡಿಯೆ ಅನುವಾದ ಸುತನಿತ್ತು
ಘನವಾದ ತುರ್ಯ ಆಶÀ್ರಮ | ಕೈಗೊಂಡು
ಸುನವ ಪದ್ಧತಿಯ ತೋರಿದೆ 37
ಅಚ್ಯುತ ಪ್ರೇಕ್ಷಕರಿಗೆ
ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ
ಅಚ್ಚುಮೆಚ್ಚುವ ನೀ ಹರಿಗೆಂದು 38
ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ
ಛೇದಿಸಿ ಖಳರ ಮದವನ್ನು | ಹರಿಸಿದೆ
ಸ್ವಾದ ಗುಣಸಿಂಧು ಮದ್ಬಂಧು 39
ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ
ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ
ಕೊಳ್ಳುವದುಯೆಂದು ವರದಯ್ಯ 40
ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು
ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ
ಬೋಧವೊ ಮಹಿಮೆಯೆಂದಾರು 41
ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು
ಮುದದಲ್ಲಿ ಬಂದು ನಮಿಸಲು | ಶಿಷ್ಯಜನ
ಯೈದಿ ಭಕ್ತಿಯನು ನಮೋ ಎಂದು 42
ಹರಿಯಂತೆ ನರಿಗಳನು ತುರಕ ದೂತರ ಜರಿದು
ನರಪನಿಂದರ್ಧ ಮಹಿಮೆಯನ್ನು | ಪಡೆದಂಥ
ಯರಡೇಳು ಭುವನ ಅಧಿಪತಿ 43
ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು
ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ
ಭೃತ್ಯತ್ವಯೆನಗೆ ನೀಡಯ್ಯ 44
ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು
ಈಶ ಸಲಹೆಂದು ಎರಗಲು | ಮನವುಬ್ಬಿ
ಬಾ ಸುತನೆ ಎಂದು ತಬ್ಬಿದ 45
ಆನಂದ ಮೂರ್ತಿಯ ಆನಂದ ಸಂಗವನು
ಆನಂದದಿಂದ ನೀ ಯೈದಿ | ನಂದ
ಆನಂದ ತೀರ್ಥ ಕೊಟ್ಟೆಯೊ 46
ನಾರಾಯಣನಲಿ ಕರೆದೊಯ್ಯೆ ಬದರಿಪನ
ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ
ಗುರುರತ್ನ ಸಲಹೊ ಧನ್ಯಾತ್ಮ 47
ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ
ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ
ಅಚ್ಯುತಾತ್ಮಾನೆ ಸಲಹೆನ್ನ 48