ಕಂಡು ಎಂದಿಗೆ ಧನ್ಯಳಾಗುವೆ ನಾನು
ಪಾದ ಪುಂಡರೀಕವನೂ ಪ.
ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ
ಪಾಂಡವರ ಪ್ರಿಯ ಬಂಧು ನೆಲಸಿದಂಥಾ
ಪಂಡರೀ ಕ್ಷೇತ್ರದಲಿ ಚಂದ್ರಭಾಗದಿ ಮಿಂದು
ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ 1
ಕೋಮಲದ ಚರಣಕಭಿನಮಿಸಿ ಕರಯುಗದಿಂದ
ಶ್ಯಾಮವರ್ಣನ ಪಾದಕಮಲ ಮುಟ್ಟೆ
ಆ ಮಹಾ ಆನಂದ ಅನುಭವಿಪ ಭಾಗ್ಯವನು
ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ 2
ಆಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ
ಆಪಾದ ಮೌಳಿ ಈಕ್ಷಿಸುತ ಹೃದಯದಲಿ
ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ
ಗೋಪಾಲಕೃಷ್ಣವಿಠಲನ ಎಂದು ಕಾಂಬೆ 3