ಆತ್ಮನಿವೇದನೆ
ಅಂಬುಜೇಕ್ಷÀಣ ನಂಬಿದೇ ನಿನ್ನ ಪ.
ಅಂಬುಜೇಕ್ಷಣ ನಿನ್ನ ನಂಬಿದ ಭಕ್ತರಘ
ದ್ಹಂಬನು ಕಡಿದು ನಿನ್ನಿಂಬನು ತೋರುವೆ ಅ.ಪ.
ಅನುಪಮ ಚರಿತ ಅಪ್ರಮೇಯನೆ ಕೃಷ್ಣ
ತನುಮನಧನಗಳಾ ನಿನಗರ್ಪಿಸುವೆ ಎನ್ನ
ಚಿನುಮಯ ರೂಪನೆ ಮನುಮಥ ಪಿತನೆ
ನಿನ್ನ ಸರಿಯಾರೋ ಹನುಮದೀಶ ಕೃಷ್ಣ 1
ಉತ್ತಮರುಗಳನು ನಿತ್ಯದಿ ಸೇವಿಪ
ಚಿತ್ತವೆನಗೆ ಕೊಡೋ ಉತ್ತಮೋತ್ತಮನೆ
ತೆತ್ತೀಸ ಕೋಟಿ ದೇವರ್ಕಳು ನಿನ್ನನು
ಸುತ್ತಿ ಸ್ತುತಿಪರೋ ನರ್ತನ ಗೈಯ್ಯುತ 2
ಪದುಮ ಸಂಭವ ಪಿತ ಪದುಮಿಣಿಯರಸನೆ
ಒದಗುತ ಭಕ್ತರಾಪ್ತನು ನೀನಲ್ಲೆ
ಸದನದಿ ಕಾಯುತ ಮುದವನು ಬೀರುತ ನೀ
ಚದುರ ಶ್ರೀ ಶ್ರೀನಿವಾಸ ಕದನವಿನ್ಯಾತಕೋ ರಾಮ 3