ಹರಿನಾಮ ಮರೆಯ ಬೇಡಯ್ಯ
ಪರಿ ದುರಿತಗಳನ್ನು ಅದು ನೀಗುವುದಯ್ಯಾ ಪ
ತರಳಪ್ರಲ್ಹಾದನಿಗೊಲಿದ ನಾಮವುಯಿದು
ದುರುಳ ರಕ್ಕಸರನ್ನು ತರಿದ ನಾಮವೋ 1
ನಿರುತದಿ ಭಕ್ತರಿಗೊಲಿವ ನಾಮವುಯಿದು
ಸರಸದಿ ಭಜಕರ ಪೊರೆವ ನಾಮವೋ 2
ಭಾಮೆಗಕ್ಷಯವಿತ್ತ ಪರಮನಾಮವುಯಿದು
ಪ್ರೇಮದಿ ದಾಸರಿಗೊಲಿವ ನಾಮವೋ 3
ಕಾಮಿತ ವರಗಳನೀವ ನಾಮವುಯಿದು
ನಿತ್ಯ ಭಜಿಪ ನಾಮವೋ 4
ದಶರೂಪ ಧರಿಸಿದ ದಿವ್ಯ ನಾಮವುಯಿದು
ದಶಕಂಠನನು ಕೊಂದ ಶ್ರೀನಾಮವೋ 5
ಕೇಶವ ರೂಪದಿ ಮೆರೆವ ನಾಮವುಯಿದು
ಪಾಶವ ಕಡಿಯುವ ನಿಜ ನಾಮವೋ 6
ವರ ದೂರ್ವಾಪುರದ ಶ್ರೀಹರಿಯ ನಾಮವುಯಿದು
ಮರೆಯದೆ ಭಕ್ತರ ಪೊರೆವ ನಾಮವೋ 7
ಸಿರಿ ಚನ್ನಕೇಶವನೆಂಬ ನಾಮವೋ 8