ಒಟ್ಟು 97 ಕಡೆಗಳಲ್ಲಿ , 7 ದಾಸರು , 97 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೋಗಿ ಬರುವೆನು ಎನ್ನ ಮನೆಗೆ ಜಗದೀಶಭಾಗವತಪ್ರಿಯ ಭಾಗೀರಥೀಜನಕ ಪ.ವರುಷವರುಷಕೆ ನಿನ್ನ ದರುಶನವನಿತ್ತೆನ್ನಕರುಣಿಸೈ ಶೇಷಾದ್ರಿವರ ಶ್ರೀನಿವಾಸದುರಿತಕೋಟಿಗಳ ಸಂಹರಿಸಿ ನಿನ್ನಯ ಕರುಣಾವರಪ್ರಸಾದವನೀಯೊ ಜನ ಮೆಚ್ಚುವಂತೆ1ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿನಿಯಮತಿಯೀಯೊ ನೀರಜನಾಭನೆದಯಮಾಡೊ ತವ ಪಾದಸೇವೆಯನ್ನಿತ್ತೆನಗೆಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ 2ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾಧೀನನೀನೆಂಬ ಬಿರುದುಂಟಾದಡೆಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಂದನು ಸರದಾರ ಸರದಾರಅಂಧಕರಿಪು ಸುಕುಮಾರ ಪ.ಶರಣಾಗತಜನಸುರಮಂದಾರ ದುರಿತಾರಣ್ಯಕುಠಾರಸುರನರಾದಿತ್ರೈಲೋಕೋದ್ಧಾರ ಗಿರಿಜಾಂಕಾಲಂಕಾರ 1ವಲ್ಲೀದೇವಿಮನೋಹಾರ ಒಲ್ಲದಜನಕತಿದೂರಬಲ್ಲವವೇದವೇದಾಂತದಸಾರಖುಲ್ಲದನುಜ ಸಂಹಾರ2ಸುಕ್ಷೇತ್ರಪಾವಂಜಾಖ್ಯಪುರವರ ಸುಜ್ಞಾನನಿಧಿ ಗಂಭೀರಲಕ್ಷ್ಮೀನಾರಾಯಣನಕಿಂಕರರಕ್ಷಿಸು ನಮಿತಕುಬೇರ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾರಮ್ಮ ಸರಸ್ವತಿ ಬಾ ದ್ರುಹಿಣಯುವತಿಬಾ ನಿರ್ಮಲಮತಿ ತೋರಿಭಾರತಿಪ.ಅಜನ ಪಟ್ಟದ ರಾಣಿಭುಜಗಸದೃಶವೇಣಿಭಜಕರ ಚಿಂತಾಮಣಿ ಕೀರವಾಣಿ 1ವೇದಾಂತರಂಗಿಣಿ ನಾದಸ್ವರೂಪಿಣಿಪ್ರಾದುರ್ಭವಳಾಗು ಸಾಧ್ವೀಕಲ್ಯಾಣಿ 2ಅಕ್ಷಯಸುಖಭಾಷೆ ಆಶ್ರಿತಕಜನಪೋಷೆಲಕ್ಷ್ಮೀನಾರಾಯಣನ ಸೊಸೆ ಸುವಿಲಾಸೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾರೋ ಬಾರೋ ಮನುಕುಲಗುರುಗುಹಾಸೇರಿದಾನತರ್ಗೆ ಚಾರುಸುರಭೂರುಹ ಪ.ಮಾನಾಭಿಮಾನ ನಮ್ಮದು ನಿನ್ನಾಧೀನದೀನಜನರಸುರಧೇನುಮಹಾಸೇನ1ಶಕ್ತಿ ಕುಕ್ಕುಟವಜ್ರಾಭಯ ಚತುರ್ಭುಜನೆಭಕ್ತಿಜ್ಞಾನವನೀಯೋ ಶಂಕರಾತ್ಮಜನೆ 2ಲಕ್ಷ್ಮೀನಾರಾಯಣನ ಧ್ಯಾನಾಭರಣಸುಕ್ಷೇತ್ರಪಾವಂಜಾಧ್ಯಕ್ಷ ರವಿಕಿರಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಿನ್ನಪಲಾಲಿಸಯ್ಯ ಭಕ್ತಪರಾಧ-ವನ್ನು ಕ್ಷಮಿಸಬೇಕಯ್ಯ ಪ.ಅನ್ಯಾಯ ಕಲಿಕಾಲಕ್ಕಿನ್ನೇನುಗತಿಸುಪ್ರ-ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತ ಅ.ಪ.ಮಕ್ಕಳ ಮಾತೆಯಂದದಿ ಕಾಯುವ ಮಹ-ದಕ್ಕರದಿಂದ ಮುದದಿಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತುರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನುದಿಕ್ಕಿಲ್ಲದವರ ಧಿಕ್ಕಾರ ಗೈದರೆಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ-ವರ್ಕಳಮಣಿ ನಿನಗಕ್ಕಜವಲ್ಲವುಕುಕ್ಕುಟಧರವರ ಮುಕ್ಕಣ್ಣತನಯ 1ಜಾತಿ ನೀತಿಯನು ಬಿಟ್ಟು ಡಾಂಭಿಕತನದರೀತಿಗೆ ಪ್ರೀತಿಪಟ್ಟುಸೋತು ಹಣವ ಕೊಟ್ಟು ಖ್ಯಾತರೆಂಬುವಗುಟ್ಟುಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿಯಾತುಧಾನರಗುಣಯಾತಕ್ಕರಿಯದುಭೂತೇಶ್ವರಸಂಜಾತ ಸುರನರ-ವ್ರಾತಾರ್ಚಿತ ಪುರಹೂತಸಹಾಯಕನೂತನಸಗುಣವರೂಥಪುನೀತ2ಯಾವ ಕರ್ಮದ ಫಲವೋ ಇದಕಿ-ನ್ಯಾವ ಪ್ರಾಯಶ್ಚಿತ್ತವೋಯಾವ ವಿಧವೊ ಎಂಬ ಭಾವವರಿತ ಪುರುಷಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲದೇವ ಲಕ್ಷ್ಮೀನಾರಾಯಣನಪಾದಸೇವಕನೀ ಮಹಾದೇವನ ಸುತ ಕರು-ಣಾವಲಂಬಿಗಳಕಾವನಮ್ಮಯ ಕುಲ-ದೇವ ವಲ್ಲೀಪತಿ ಪಾವಂಜಾಧಿಪ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಭಾರತಿಭರತನ ರಮಣಿಶಿರಬಾಗುವೆ ತ್ರಿಜಗಜ್ಜನನಿ ಪ.ಭಾರತ ಭಾಗವತಾರ್ಥ ಬೋಧಿನಿಶಾರದೇಂದುನಿಭವದನಿ ಅ.ಪ.ಹರಿಗುರುಗಳಲಿ ಸದ್ಭಕ್ತಿ ದೃಢಕರುಣಿಸು ಸರಸಿಜನೇತ್ರಿಗಿರೀಶಾದಿ ಸರ್ವಸುರೌಘಪ್ರಣೇತ್ರಿಶರಣು ಶರಣು ಸುಪವಿತ್ರಿ 1ಕಾಳಿ ದ್ರೌಪದಿ ಸುನಾಮೆ ನಮ್ಮಪಾಲಿಸು ಭೀಮಪ್ರೇಮಶ್ರೀ ಲಕ್ಷ್ಮೀನಾರಾಯಣನ ಭೃತ್ಯೆಕಾಲತ್ರಯ ಕೃತಕೃತ್ಯೆ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಭಾರತಿಭಾಗ್ಯವತಿ ಜಯತಿಪ.ಸೂರಿಜನೋದ್ಧರೆ ಸುಗುಣಾಲಂಕಾರಸಾರಸದಳನೇತ್ರಿ ಜಯತಿ 1ಚಿತ್ರಚರಿತ್ರೆ ಚಿತ್ಸುಖಗಾತ್ರೆಸೂತ್ರನಾಯಕನಸತಿಜಯತಿ2ಅನಘಲಕ್ಷ್ಮೀನಾರಾಯಣನ ಶ್ರೀಚರಣಾ-ವನತರ್ಗೆ ನೀನೆಗತಿಜಯತಿ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಗಳ ಪದಗಳು492ಜಯದೇವ ಜಯದೇವ ಜಯ ಸುಬ್ರಹ್ಮಣ್ಯಆರತಿ ಮಾಡುವೆ ನಿನಗೆವರೇಣ್ಯಪ.ಅರಳಿದ ಕಮಲಸನ್ನಿಭಶುಭಚರಣ-ವರಪಂಚಾನನಪೋಲ್ವ ಕಟಿಕಾಂಚ್ಯಾಭರಣಉರುಶಕ್ತಿಕುಕ್ಕುಟಾಭಯವಜ್ರಹಸ್ತಶರಣಾಗತಜನದ ರಿತವಿಧ್ವಸ್ತ 1ಬಲಮುರಿಶಂಖದಂತಿಹ ಚೆಲ್ವಗ್ರೀವಸುಲಲಿತಮಾಣಿಕ್ಯಹಾರದಿಂ ಪೊಳೆವನಲಿವ ಕರ್ಣಕುಂಡಲಗಳ ಶೋಭಜ್ವಲಿತಕಿರೀಟಮಸ್ತಕ ಸೂರ್ಯಾಭ 2ಈ ಕ್ಷಿತಿಯೊಳಗೆ ಪಾವಂಜೇತಿ ನಾಮಸುಕ್ಷೇತ್ರವಾಸ ಸುಜನಜನಪ್ರೇಮಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರರಾಕ್ಷಸಾರಣ್ಯದಹನವೀತಿಹೋತ್ರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮರೆಯಲಿನ್ನೆಂತುಪಕಾರ ಮಾರುತಿಮರೆಯಲಿನ್ನೆಂತುಪಕಾರ ಪ.ವಿಧಿಮುಂತಾದ ತ್ರಿದಶರಿಂದೆನ್ನಯಸದಮಲಪ್ರಾಣಾಧಾರ 1ಬ್ರಹ್ಮಚರ್ಯವ್ರತಧರ್ಮನಿಯಾಮಕನಿರ್ಮಲ ವಜ್ರಶರೀರ 2ದಾಸವರ್ಯ ಗುಣರಾಶಿ ತ್ವದೀಯ ವಿ-ಶ್ವಾಸವಿನ್ನೆಷ್ಟೊಗಭೀರ3ವ್ಯಾಪ್ತಮಾದಾಪದಕಾಪ್ತ ನಿನ್ನುಪಕೃತಿಸಪ್ತಸಾಗರದಿಂದಪಾರ 4ಶ್ರೀಲಕ್ಷ್ಮೀನಾರಾಯಣನು ಹನುಮನಆಲಿಂಗಿಸಿದನುದಾರ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಯಾಮಯ ಜಗವೆಲ್ಲ ಇದ-ರಾಯತ ತಿಳಿದವರಿಲ್ಲ ಪ.ಕಾಯದಿಂ ಜೀವನಿಕಾಯವ ಬಂಧಿಸೆನೋಯಿಸುವಳು ಸುಳ್ಳಲ್ಲ ಅ.ಪ.ತಿಳಿದು ತಿಳಿಯದಂತೆ ಮಾಡಿ ಹೊರ-ಒಳಗಿರುವಳು ನಲಿದಾಡಿಹಲವು ಹಂಬಲವ ಮನದೊಳು ಪುಟ್ಟಿಸೆನೆಲೆಗೆಡಿಸುವಳೊಡಗೂಡಿ 1ಯೋಷಿದ್ರೂಪವೆ ಮುಖ್ಯ ಅ-ಲ್ಪಾಸೆಗೆ ಗೈವಳು ಸಖ್ಯದೋಷದಿ ಪುಣ್ಯದವಾಸನೆತೋರ್ಪಳುಜೈಸಲಾರಿಂದಶಕ್ಯ 2ಕರ್ತಲಕ್ಷ್ಮೀನಾರಾಯಣನಭೃತ್ಯರ ಕಂಡರೆ ದೂರಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ-ರಾರ್ಥಕೆ ಕೊಡಳು ವಿಚಾರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊ ಪ.ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲುಭಂಗವ ಪಡುವುದ್ಯಾಕೆಮಂಗಲದಾತ ನರಸಿಂಗನ ನಾಮವಹಿಂಗದೆ ನೆನೆದರಿಷ್ಟಂಗಳ ಕೊಡುವ 1ಉಪವಾಸ ಮಾಡಲ್ಯಾಕೆ ಕಪಟದೊಳುಗುಪಿತದಿ ಕುಳ್ಳಲ್ಯಾಕೆಉಪಮೆರಹಿತ ಶ್ರೀಪತಿ ಕೃಷ್ಣರಾಯನಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ 2ಧ್ರುವನು ಸದ್ಗತಿ ಪಡೆದ ಕರುಣದಿಂದಪವಮಾನಿಗೆ ಒಲಿದಭುವನಈರಡಿಮಾಡಿ ಬಲಿಯನ್ನು ಸಲಹಿದಬವರದೊಳಗೆ ದಾನವರನ್ನು ಮಡುಹಿದ 3ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತುತೀರ್ಥಸ್ನಾನಗಳ್ಯಾತಕೋಕರ್ತುಮಾಧವಶತಪತ್ರನಾಭನ ಸಂ-ಕೀರ್ತನಾದಿಗಳೆ ಪರತ್ರಸಾಧನವಲ್ಲೊ 4ಭೂರಿಯಾಯಾಸವ್ಯಾಕೋ ಬರಿದೆ ಸಂ-ಸಾರವ ನಂಬಲ್ಯಾಕೋಮಾರಾರಿಸಖ ಲಕ್ಷ್ಮೀನಾರಾಯಣನನ್ನುಸೇರಿ ಭಜಿಪರ ಉದ್ಧಾರಮಾಡುವ ಶ್ರೀ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಂದೇ ಶ್ರೀ ಗೌರಿನಂದನ ಸುರನರವೃಂದವಂದಿತಚರಣ ಗಜಾನನ ಪ.ಶಂಕರೋಲ್ಲಾಸ ಪಾಶಾಂಕುಶಧರಕರಪಂಕಜಸುವಿರಾಜ ರವಿತೇಜ1ಜಂಭಾರಿಸಂನುತ ಜಾಹ್ನವೀಧರಸುತಲಂಬೋದರ ಸುಂದರ ಕೃಪಾಕರ 2ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನಪಕ್ಷೈಕಪಾವನ ಸುಧೀಷಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವರವ ಕೊಡೆ ತಾಯೆ ವರವ ಕೊಡೆ ಪ.ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆನೆರೆನಂಬಿದೆನು ನಿನ್ನ ಚರಣಕಮಲವನುಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ 1ಹೊಳೆವಂಥ ಅರಸಿನ ಹೊಳೆವ ಕರಿಯಮಣಿಸ್ಥಿರವಾಗಿ ಕಟ್ಟುವಂಥ ವರವ ಕೊಡೆತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆಯಾವಾಗಲಿರುವಂಥ ವರವ ಕೊಡೆ 2ಬಾಗಿಲ ತೋರಣ ಮದುವೆ ಮುಂಜಿ ನಾಮಕರಣಯಾವಾಗಲಾಗುವಂಥ ವರವ ಕೊಡೆಬಂಧುಬಳಗ ಹೆಚ್ಚಿ ಹೆಸರುಳ್ಳಮನೆಕಟ್ಟಿಉಂಡಿಟ್ಟಿಡುವಂಥ ವರವ ಕೊಡೆ 3ಹಾಲ ಕರೆಯುವ ಮೇಲಾದ ಸರಳೆಮ್ಮೆಸಾಲಾಗಿ ಕಟ್ಟುವಂಥ ವರವ ಕೊಡೆಕಂಡಕಂಡವರಿಗೆ ಕರೆದು ಮೃಷ್ಟಾನ್ನವತಿಳಿ ನೀರು ಕೊಡುವಂಥ ವರವ ಕೊಡೆ 4ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿಅಷ್ಟೈಶ್ವರ್ಯವು ಪುತ್ರಸಂತಾನವಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಾಣಿ ವರದೆ ಶಾರದೆನಿನ್ನ ಚರಣವ ಸೇರಿದೆ ಪ.ಎನ್ನ ನಾಲಿಗೆಯೊಳ್ನೆಲಸುಹರಿಲೀಲೆಯನ್ನು ನುಡಿಸು 1ಅತಿರೋಹಿತ ವಿಜ್ಞಾನಿವೇದವ್ಯೂ ಹಕಭಿಮಾನಿ 2ಲಕ್ಷ್ಮೀನಾರಾಯಣನ ಸೊಸೆಸರ್ವಾಧಾರ ಭಕ್ತಿವಿಲಾಸೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ-ನಾಮ ಸರ್ವಾಂತರ್ಯಾಮಿ ಪ.ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ-ಸ್ತೋಮವಂದಿತ ಭೀಮಬಲ ಗುಣ-ಧಾಮವರನಿಸ್ಸೀಮ ಮಹಿಮನೆಅ.ಪ.ಅಂತರ್ಬಹಿವ್ರ್ಯಾಪ್ತನೆ ಸತತ ರಮಾ-ಕಾಂತಗೆ ಪರಮಾಪ್ತನೆಚಿಂತಿಪ ಭಕ್ತರ ಚಿಂತಾಮಣಿ ನಿ-ಶ್ಚಿಂತನೊಂದೆ ಶಿರದಿ ಸಾಸವೆ-ಯಂತೆ ಲೋಕವನಾಂತುಕೊಂಡಿಹೆ 1ರಾಮನ ಸೇವೆಗಾಗಿ ಲಕ್ಷ್ಮಣನೆಂಬನಾಮವ ತಾಳ್ದಯೋಗಿಯಾಮಿನೀಚರರ ನಿರ್ನಾಮಗೈದ ವೀರಲ-ಲಾಮ ನಿರ್ಜಿತಕಾಮ ಸಜ್ಜನ-ಪ್ರೇಮಭೌಮನಿರಾಮಯನೆ ಜಯ2ಸಂಕರ್ಷಣ ಸುಗುಣಾ-ಭರಣ ನಿ-ಶ್ಯಂಕ ವೈರಿಭೀಷಣಶಂಕರಾದಿಸುರಸಂಕುಲನುತಪಾದ-ಪಂಕಜನೆ ತಾಟಂಕಗೋಪಾ-ಲಂಕೃತಾಂಗ ಶುಭಂಕರನೆ ಜಯ 3ಸಾರತತ್ತ್ವಬೋಧನೆ ಶರಣುಜನವಾರಿಧಿಚಂದ್ರಮನೆಘೋರಭವಾರ್ಣವತಾರಕನಮಲ ಪಾ-ದಾರವಿಂದದ ಸೌಂದರ್ಯ ನಿಜಭೂರಿನೇತ್ರಗಳಿಂದ ಕಾಣುವೆ4ಮಂಜುಳ ನಗರೇಶನೆ ಭಕ್ತಭಯ-ಭಂಜನಸುವಿಲಾಸನೆಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ-ಪುಂಜ ಭಗವದ್ಭಕ್ತಜನಮನೋ-ರಂಜನಾತ್ಮ ನಿರಂಜನನೆ ಜಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ